ಜೈಪುರ: ಭಾರತದಲ್ಲಿ ಬಾಲ್ಯ ವಿವಾಹವನ್ನು ನಿಷೇಧಿಸಿ 92 ವರ್ಷಗಳು ಕಳೆದಿವೆ. ಆದರೆ, ದೇಶದಲ್ಲಿ ವಿಶೇಷವಾಗಿ ಹರಿಯಾಣ ಮತ್ತು ರಾಜಸ್ಥಾನದಂತಹ ರಾಜ್ಯಗಳಲ್ಲಿ ಈ ಸಂಪ್ರದಾಯ ಇನ್ನೂ ಆಚರಣೆಯಲ್ಲಿದೆ. ಭಾರತದ ಕಾನೂನಿನ ಪ್ರಕಾರ ಮದುವೆಯಾಗಲು ಹುಡುಗಿಯ ಕಾನೂನುಬದ್ಧ ವಯಸ್ಸು 18 ಮತ್ತು ಹುಡುಗನಿಗೆ 21 ವರ್ಷ. ಆದರೆ, ಈ ಎರಡು ರಾಜ್ಯಗಳಲ್ಲಿ ಮುಗ್ಧ ಮಕ್ಕಳನ್ನು ಅವರ ಕುಟುಂಬಗಳು ಮದುವೆಗೆ ಒತ್ತಾಯಿಸುತ್ತಿರುವ ಸಂಪ್ರದಾಯ ಇನ್ನೂ ನಡೆದುಕೊಂಡು ಬರುತ್ತಿದೆ. ರಾಜಸ್ಥಾನದ ಭಿಲ್ವಾರಾದಲ್ಲಿ ಬಾಲ್ಯ ವಿವಾಹಗಳು ನಡೆಯುತ್ತಿವೆ ಎಂದು ತೋರಿಸುವ ವಿಡಿಯೋಗಳು ಮತ್ತು ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ.
ಆಜ್ ತಕ್ ಮಾಡಿರುವ ವರದಿ ಪ್ರಕಾರ, ಕಳೆದ ಕೆಲವು ದಿನಗಳಲ್ಲಿ ರಾಜಸ್ಥಾನದಿಂದ ಮೂರು ಬಾಲ್ಯ ವಿವಾಹ ಪ್ರಕರಣಗಳು ವರದಿಯಾಗಿವೆ. ಡಿಸೆಂಬರ್ 7ರಂದು ರಾಜಸ್ಥಾನದ ಭಿಲ್ವಾರಾ ಪ್ರದೇಶದ ಕೋಡಿ ಶ್ಯಾಮ್ ದೇವಸ್ಥಾನದಲ್ಲಿ ಎರಡು ಬಾಲ್ಯ ವಿವಾಹಗಳು ನಡೆದಿದ್ದು, ಇನ್ನೊಂದನ್ನು ಜಿಲ್ಲಾಡಳಿತವು ನಿಲ್ಲಿಸಿದೆ. ಆ ನಾಲ್ವರು ಮಕ್ಕಳೂ 10ರಿಂದ 12 ವರ್ಷ ವಯಸ್ಸಿನವರು.
#भीलवाड़ा ज़िले से बाल विवाह का वीडियो सामने आया. जिसमें नन्हे-मुन्ने दुल्हा-दुल्हन एक दूसरे से भगवान के ढोक देते समय झगड़ कर मस्ती कर रहे है.#RajasthanNews #bhilwara pic.twitter.com/9oDEEqLeOo
— सूर्यरेखा (@suryarekha_in) December 8, 2021
ವೈರಲ್ ಆಗಿರುವ ವಿಡಿಯೋದಲ್ಲಿ ಮಕ್ಕಳು ಮದುವೆಯ ಸಾಂಪ್ರದಾಯಿಕ ಉಡುಪುಗಳನ್ನು ಧರಿಸಿರುವುದನ್ನು ಕಾಣಬಹುದು. ಅವರ ಮದುವೆಯ ಆಚರಣೆಗಳು ನಡೆಯುವಾಗ ಮಹಿಳೆಯರು ಸುತ್ತುವರೆದಿದ್ದಾರೆ. ತಮ್ಮ ಸುತ್ತಲೂ ಏನಾಗುತ್ತಿದೆ ಎಂದು ತಿಳಿಯದೆ, ಮಕ್ಕಳು ನಗುತ್ತಾ, ತಾವು ಮದುವೆಯಾಗುವ ಹುಡುಗ/ ಹುಡುಗಿಯೊಂದಿಗೆ ಜಗಳವಾಡುತ್ತಾ ಇರುವುದನ್ನು ವಿಡಿಯೋದಲ್ಲಿ ನೋಡಬಹುದು. ಆ ಮಕ್ಕಳು ಇದು ಒಂದು ಆಟ ಎಂದು ಭಾವಿಸಿದ್ದಾರೆ.
@stc_india pic.twitter.com/qn4MUKZIqr
— सूर्यरेखा (@suryarekha_in) December 8, 2021
ಬಾಲ್ಯವಿವಾಹಗಳು ಕಾನೂನುಬಾಹಿರವಾಗಿದ್ದರೂ, 2019ಕ್ಕೆ ಹೋಲಿಸಿದರೆ 2020ರಲ್ಲಿ ಭಾರತದಲ್ಲಿ ಬಾಲ್ಯ ವಿವಾಹದ ಪ್ರಕರಣಗಳಲ್ಲಿ ಸುಮಾರು ಶೇ. 50ರಷ್ಟು ಏರಿಕೆಯಾಗಿದೆ. 2018ರಲ್ಲಿ UNICEF ನಡೆಸಿದ ಸಮೀಕ್ಷೆಯು ಶೇ. 7ರಷ್ಟು ಹೆಣ್ಣು ಮಕ್ಕಳು 15 ವರ್ಷದೊಳಗೆ ಮದುವೆಯಾಗುತ್ತಾರೆ ಮತ್ತು ಶೇ. 27ರಷ್ಟು ಹೆಣ್ಣು ಮಕ್ಕಳು 18 ವರ್ಷಕ್ಕಿಂತ ಮೊದಲು ಮದುವೆಯಾಗುತ್ತಾರೆ ಎಂದು ತಿಳಿಸಿದೆ.
ಇದನ್ನೂ ಓದಿ: Viral News: ಶಿವನಿಗೆ ನೈವೇದ್ಯವಾಗಿ 10 ಕೆಜಿ ಐಸ್ ಕ್ರೀಂ ನೀಡಿದ ಭಕ್ತ; ಪ್ರಸಾದಕ್ಕಾಗಿ ಸಾಲುಗಟ್ಟಿ ನಿಂತ ಜನರು
Shocking News: ಯುವತಿಯಿಂದಲೇ ಸಮಾಧಿ ತೋಡಿಸಿ, ಆಕೆಯನ್ನು ಕೊಂದು ಹೂತು ಹಾಕಿದ ಕಿರಾತಕರು!