Omicron: ಮಹಾರಾಷ್ಟ್ರದಲ್ಲಿ ಮತ್ತೆ 7 ಒಮಿಕ್ರಾನ್ ಕೇಸ್ ಪತ್ತೆ; ದೇಶದ ಒಮಿಕ್ರಾನ್ ಪ್ರಕರಣ ಸಂಖ್ಯೆ 32ಕ್ಕೆ ಏರಿಕೆ
ಭಾರತದ ಮೊದಲ ಒಮಿಕ್ರಾನ್ ಕೇಸ್ ಕರ್ನಾಟಕದಲ್ಲೇ ಪತ್ತೆಯಾಗಿತ್ತು. ಈಗ ದೇಶದಲ್ಲಿ ಒಟ್ಟು ಒಮಿಕ್ರಾನ್ ಕೇಸುಗಳ ಸಂಖ್ಯೆ 32ಕ್ಕೇರಿದೆ.
ನವದೆಹಲಿ: ಮಹಾರಾಷ್ಟ್ರದಲ್ಲಿ ಇಂದು 7 ಹೊಸ ಒಮಿಕ್ರಾನ್ ಸೋಂಕಿನ ಪ್ರಕರಣಗಳು ವರದಿಯಾಗಿವೆ. ರೋಗಿಗಳಲ್ಲಿ ಮೂವರು ಮುಂಬೈ ಮತ್ತು 4 ಪಿಂಪ್ರಿ ಚಿಂಚ್‌ವಾಡ್ ಮುನ್ಸಿಪಲ್ ಕಾರ್ಪೊರೇಶನ್ ನಿವಾಸಿಗಳಾಗಿದ್ದಾರೆ ಎಂದು ಮಹಾರಾಷ್ಟ್ರ ಆರೋಗ್ಯ ಇಲಾಖೆ ತಿಳಿಸಿದೆ. ಇಂದು 7 ಹೊಸ ಒಮಿಕ್ರಾನ್ ಕೇಸುಗಳು ದಾಖಲಾಗುವ ಮೂಲಕ ಮಹಾರಾಷ್ಟ್ರದಲ್ಲಿ ಒಮಿಕ್ರಾನ್ ಸೋಂಕಿತರ ಸಂಖ್ಯೆ 17ಕ್ಕೆ ಏರಿಕೆಯಾಗಿದೆ.
ಎಲ್ಲಾ ಮೂರು ಮುಂಬೈನ ಒಮಿಕ್ರಾನ್ ಸೋಂಕಿತ ಕೊವಿಡ್ ರೋಗಿಗಳು 48, 25 ಮತ್ತು 37 ವರ್ಷ ವಯಸ್ಸಿನ ಪುರುಷರಾಗಿದ್ದಾರೆ. ಇವರು ತಾಂಜೇನಿಯಾ, ಇಂಗ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ವಾಪಾಸಾದವರು. ಇಂದು ಪತ್ತೆಯಾದ ಏಳು ರೋಗಿಗಳಲ್ಲಿ ನಾಲ್ವರಿಗೆ ಈಗಾಗಲೇ ಕೊರೊನಾ ಲಸಿಕೆ ನೀಡಲಾಗಿದೆ. ಒಬ್ಬ ರೋಗಿಯು ಒಂದೇ ಡೋಸ್ ಲಸಿಕೆಯನ್ನು ಪಡೆದಿದ್ದರೆ ಒಬ್ಬ ರೋಗಿಗೆ ಲಸಿಕೆ ಹಾಕಲಾಗಿಲ್ಲ. ನಾಲ್ವರು ರೋಗಿಗಳಲ್ಲಿ ಯಾವುದೇ ರೋಗಲಕ್ಷಣ ಕಂಡುಬಂದಿಲ್ಲ. ಮೂರು ರೋಗಿಗಳು ಸೌಮ್ಯ ಲಕ್ಷಣಗಳನ್ನು ಹೊಂದಿದ್ದಾರೆ.
ಭಾರತದ ಮೊದಲ ಒಮಿಕ್ರಾನ್ ಕೇಸ್ ಕರ್ನಾಟಕದಲ್ಲೇ ಪತ್ತೆಯಾಗಿತ್ತು. ಈಗ ದೇಶದಲ್ಲಿ ಒಟ್ಟು ಒಮಿಕ್ರಾನ್ ಕೇಸುಗಳ ಸಂಖ್ಯೆ 32ಕ್ಕೇರಿದೆ. ಮಹಾರಾಷ್ಟ್ರದಲ್ಲಿ 17 ಪ್ರಕರಣಗಳು, ರಾಜಸ್ಥಾನದಲ್ಲಿ 9 ಪ್ರಕರಣಗಳು, ಗುಜರಾತ್ನಲ್ಲಿ 3, ಕರ್ನಾಟಕದಲ್ಲಿ 2 ಮತ್ತು ದೆಹಲಿಯಲ್ಲಿ ಒಂದು ಒಮಿಕ್ರಾನ್ ಪ್ರಕರಣಗಳು ವರದಿಯಾಗಿವೆ.
ಮಹಾರಾಷ್ಟ್ರದಲ್ಲಿ ಇಂದು 695 ಹೊಸ ಕೊರೋನಾ ಪ್ರಕರಣಗಳು ಪತ್ತೆಯಾಗಿದ್ದು, 12 ಜನ ಸಾವನ್ನಪ್ಪಿದ್ದಾರೆ. ಈ ಮೂಲಕ ಮಹಾರಾಷ್ಟ್ರದಲ್ಲಿ 6,534 ಸಕ್ರಿಯ ಕೋವಿಡ್ ಪ್ರಕರಣಗಳಿವೆ.
ಇದನ್ನೂ ಓದಿ: ಒಮಿಕ್ರಾನ್ ಎಚ್ಚರಿಕೆ: ಜನವರಿ 31ರವರೆಗೆ ಪುನಾರಂಭವಾಗಲ್ಲ ಅಂತರರಾಷ್ಟ್ರೀಯ ವಿಮಾನಗಳು
ಒಮಿಕ್ರಾನ್ ವೈರಸ್ ಲಕ್ಷಣಗಳೇನು? ಸೋಂಕು ಬಂದ್ರೆ ಚಿಕಿತ್ಸೆ ಏನು? ಇಲ್ಲಿದೆ ನೀವು ತಿಳಿದುಕೊಳ್ಳಲೇ ಬೇಕಾದ ಮಾಹಿತಿ