Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒಮಿಕ್ರಾನ್ ವೈರಸ್ ಲಕ್ಷಣಗಳೇನು? ಸೋಂಕು ಬಂದ್ರೆ ಚಿಕಿತ್ಸೆ ಏನು? ಇಲ್ಲಿದೆ ನೀವು ತಿಳಿದುಕೊಳ್ಳಲೇ ಬೇಕಾದ ಮಾಹಿತಿ

ರೂಪಾಂತರಿ ಒಮಿಕ್ರಾನ್ ವೈದ್ಯಲೋಕವನ್ನೇ ತಲ್ಲಣಗೊಳಿಸಿದೆ. ಒಮಿಕ್ರಾನ್ ಅರ್ಥ ಮಾಡಿಕೊಳ್ಳೋಕೆ ಸಂಶೋಧನೆಗಳು ಶುರುವಾಗಿವೆ. ವಾಸ್ತವವಾಗಿ ಒಮಿಕ್ರಾನ್ ರೂಪಾಂತರವನ್ನ ಜಾಲಾಡಲು ಅಧ್ಯಯನಗಳೂ ನಡೀತಿವೆ.

ಒಮಿಕ್ರಾನ್ ವೈರಸ್ ಲಕ್ಷಣಗಳೇನು? ಸೋಂಕು ಬಂದ್ರೆ ಚಿಕಿತ್ಸೆ ಏನು? ಇಲ್ಲಿದೆ ನೀವು ತಿಳಿದುಕೊಳ್ಳಲೇ ಬೇಕಾದ ಮಾಹಿತಿ
ಒಮಿಕ್ರಾನ್
Follow us
TV9 Web
| Updated By: ಆಯೇಷಾ ಬಾನು

Updated on: Dec 08, 2021 | 2:13 PM

ಕೊರೊನಾ ರೂಪಾಂತರ ಒಮಿಕ್ರಾನ್ ಇಡೀ ದೇಶದಲ್ಲಿ ಆತಂಕ ಸೃಷ್ಟಿಸಿದೆ. ಸೋಂಕಿನ ಶರವೇಗ ಕಂಡು ಬಲಾಡ್ಯ ದೇಶಗಳು ನಡುಗಿ ಹೋಗಿವೆ. ಸದ್ಯ ಒಮಿಕ್ರಾನ್ ಬಗ್ಗೆ ಸಂಶೋಧನೆಗಳು ನಡೆಯುತ್ತಿವೆ. ಒಮಿಕ್ರಾನ್ ರೂಪಾಂತರ ವಿಶ್ವಕ್ಕೆ‌ ಭೀತಿ ಸೃಷ್ಟಿಸಿದೆ. ಒಮಿಕ್ರಾನ್ ವೈರಸ್ ಲಕ್ಷಣಗಳೇನು? ಸೋಂಕು ಬಂದ್ರೆ ಚಿಕಿತ್ಸೆ ಏನು ಅನ್ನೋದನ್ನ ಇಲ್ಲಿ ತಿಳಿಯಿರಿ.

ಒಮಿಕ್ರಾನ್ ನಿಗೂಢ ಹಿಜ್ಜೆ ಪತ್ತೆಗೆ ಸರಣಿ ಸಂಶೋಧನೆ ರೂಪಾಂತರಿ ಒಮಿಕ್ರಾನ್ ವೈದ್ಯಲೋಕವನ್ನೇ ತಲ್ಲಣಗೊಳಿಸಿದೆ. ಒಮಿಕ್ರಾನ್ ಅರ್ಥ ಮಾಡಿಕೊಳ್ಳೋಕೆ ಸಂಶೋಧನೆಗಳು ಶುರುವಾಗಿವೆ. ವಾಸ್ತವವಾಗಿ ಒಮಿಕ್ರಾನ್ ರೂಪಾಂತರವನ್ನ ಜಾಲಾಡಲು ಅಧ್ಯಯನಗಳೂ ನಡೀತಿವೆ. ಅಷ್ಟಕ್ಕೂ, ಒಮಿಕ್ರಾನ್ ವೈರಸ್ ಅಂದ್ರೆ ಏನು? ಸೋಂಕಿನ‌ ಪರಿಣಾಮಗಳು ಹೇಗಿರಲಿವೆ. ಇದಕ್ಕೆ‌ ಟ್ರೀಟ್ ಮೆಂಟ್ ಏನು ಅನ್ನೋದನ್ನು ಇಲ್ಲಿ ತಿಳಿಯಿರಿ

ಒಮಿಕ್ರಾನ್ ‘ಹುಟ್ಟು’ ಕೊರೊನಾ ವೈರಸ್ನ ಮೂಲವಾಗಿರೋ ಒಮಿಕ್ರಾನ್ ವೈರಸ್, ಭಿನ್ನವಾಗಿದ್ದು ಇದನ್ನ B.1.1.529 ಅಂತಲೂ ಕರೆಯುತ್ತಾರೆ. ಮೊದಲು ದಕ್ಷಿಣ ಆಫ್ರಿಕಾದಲ್ಲಿ ಈ ಸೋಂಕು ನವೆಂಬರ್ 24, 2021 ರಂದು ಪತ್ತೆಯಾಗಿತ್ತು.

ಒಮಿಕ್ರಾನ್ ಮನುಷ್ಯನ ದೇಹ ಹೊಕ್ಕಿದ್ರೆ ಏನಾಗುತ್ತೆ? ಒಮಿಕ್ರಾನ್ ರೂಪಾಂತರ ವೈರಸ್ ಮೂರು ರೀತಿಯಾಗಿ ಮನುಷ್ಯನ ದೇಹಕ್ಕೆ‌ ಎಫೆಕ್ಟ್ ಮಾಡುತ್ತೆ ಅಂತಾ ಹೇಳಲಾಗ್ತಿದೆ. ಸಾಮಾನ್ಯ ರೋಗ ಲಕ್ಷಣಗಳು, ಕಡಿಮೆ ಸಾಮಾನ್ಯ ಲಕ್ಷಣಗಳು ಮತ್ತು ಗಂಭೀರ ರೋಗ ಲಕ್ಷಣಗಳ ಮೂಲಕ, ಸೋಂಕಿತನ ಮೇಲೆ ಪರಿಣಾಮ ಬೀರೋ ಸಾಧ್ಯತೆ ಇದೆಯಂತೆ.

‘ಒಮಿಕ್ರಾನ್’ನ ಸಾಮಾನ್ಯ ಲಕ್ಷಣ ಒಮಿಕ್ರಾನ್ ಸೋಂಕಿನ ಸಾಮಾನ್ಯ ಲಕ್ಷಣಗಳಲ್ಲಿ ಜ್ವರ, ಕೆಮ್ಮು, ಸುಸ್ತಾಗುವುದು ಹಾಗೂ ವಾಸನೆಯನ್ನ ಕಳೆದುಕೊಳ್ಳೋ ಸಾಧ್ಯತೆ ಇದೆಯಂತೆ. ಗಂಟಲು ನೋವು, ತಲೆ ನೋವು,. ಅತಿಸಾರ, ಚರ್ಮದ ಮೇಲೆ ಊತ ಬರುವುದು ಹಾಗೂ ಕಣ್ಣು ಕೆಂಪು ಬಣ್ಣಕ್ಕೆ ತಿರುಗುವುದು. ಒಮಿಕ್ರಾನ್ನ ಗಂಭೀರ ಲಕ್ಷಣಗಳು ಏನಂದ್ರೆ, ಉಸಿರಾಟದ ತೊಂದರೆ, ನಡೆದಾಡಲು ಕಷ್ಟವಾಗುವ ಅನುಭವ ಹಾಗೂ ಎದೆನೋವು ಕಾಣಿಸಿಕೊಳ್ಳುತ್ತಂತೆ.

ಒಮಿಕ್ರಾನ್ ಸೋಂಕಿತರಿಗೆ ಟ್ರೀಟ್ಮೆಂಟ್ ಹೇಗೆ? ಒಮಿಕ್ರಾನ್ ಸೋಂಕು ಅಪಾಯಕಾರಿಯಾಗುವುದನ್ನು ತಡೆಯುವುದು. ಮುನ್ನೆಚ್ಚರಿಕೆಯಾಗಿ ಲಸಿಕೆಯನ್ನ ಪಡೆಯುವುದು ಸೂಕ್ತ. ಇನ್ನು ಸಾಮಾನ್ಯ ಮತ್ತು ಕಡಿಮೆ ಸಾಮಾನ್ಯ ಲಕ್ಷಣಗಳಿದ್ರೆ ಮನೆಯಲ್ಲೇ ಚಿಕಿತ್ಸೆ ಪಡೆಯೋದು. ಹಾಗೂ ಗಂಭೀರ ಲಕ್ಷಣಗಳು ಕಾಣಿಸಿಕೊಂಡ್ರೆ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯೋದು ಸೂಕ್ತ.

ಒಮಿಕ್ರಾನ್ ವೈರಸ್ ಬಗ್ಗೆ ಅಧ್ಯಯನಗಳು ಶುರುವಾಗಿವೆ. ಒಮಿಕ್ರಾನ್ ವರ್ತನೆ ಬಗ್ಗೆ ಅಂಕಿಅಂಶಗಳು ಹೆಚ್ಚು ಸಿಕ್ಕಾಗ ಮಾತ್ರ ಅಧ್ಯಯನಕ್ಕೆ‌ ಹೆಚ್ಚು ಸಹಕಾರಿಯಾಗಲಿದೆ. ವಿಶ್ವ ಆರೋಗ್ಯ ಸಂಸ್ಥೆ ಕೂಡ ಒಮಿಕ್ರಾನ್ ವೈರಸ್ ಬಗ್ಗೆ ಅಧ್ಯಯನಕ್ಕಿಳಿದಿದೆ. ಪ್ರಾಥಮಿಕವಾಗಿ ಇದೊಂದು ವೇಗವಾಗಿ ಹರಡುವ ಲಕ್ಷಣ ಹೊಂದಿದೆ ಎಂಬ ವರದಿ ನೀಡಿದೆ. ಜೊತೆಗೆ ಲಸಿಕೆ ಪ್ರತಿರೋಧಕ ಶಕ್ತಿಯನ್ನ ಕಣ್ತಪ್ಪಿಸಿ ಸೋಂಕು ತಗುಲೋ ಗುಣ ಹೊಂದಿದೆ. ಹೀಗಾಗಿಯೇ, ಒಮಿಕ್ರಾನ್ ಸೋಂಕು ಡೇಂಜರ್ ಆಗಿದೆ. ತಜ್ಞರು ಇನ್ನಷ್ಟು ಅಧ್ಯಯನದ ಬಳಿಕ ವೈಸರ್ ಬಗ್ಗೆ ಇನ್ನಷ್ಟು ಮಾಹಿತಿಗಳು ಸಿಗಲಿವೆ.

ವರದಿ: ಹರೀಶ್‌, ಟಿವಿನೈನ್ ನವದೆಹಲಿ

ಇದನ್ನೂ ಓದಿ: ಒಮಿಕ್ರಾನ್ ಡೆಲ್ಟಾ ರೂಪಾಂತರಕ್ಕಿಂತ ಹೆಚ್ಚು ತೀವ್ರವಾಗಿಲ್ಲ, ಈಗಿರುವ ಕೊವಿಡ್ ಲಸಿಕೆಗಳು ಇದಕ್ಕೆ ಸಾಕು: ವಿಶ್ವ ಆರೋಗ್ಯ ಸಂಸ್ಥೆ