Parliament Winter Session ರೈತರ ಬಗ್ಗೆ ಮೋದಿ ಸರ್ಕಾರಕ್ಕೆ ಸಂವೇದನೆ ಇಲ್ಲ ಎಂದ ಸೋನಿಯಾ ಗಾಂಧಿ; ಸಂಸದರ ಅಮಾನತು ಖಂಡಿಸಿ ಮುಂದುವರಿದ ವಿಪಕ್ಷಗಳ ಪ್ರತಿಭಟನೆ

ಸಂಸತ್​​ನ ಸಂಕೀರ್ಣದಲ್ಲಿರುವ ಗಾಂಧಿ ಪ್ರತಿಮೆ ಎದುರು ಅಮಾನತುಗೊಂಡ ಸಂಸದರು ಧರಣಿ ಮುಂದುವರಿಸಿದ್ದಾರೆ. ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಕೂಡ ಪ್ರತಿಭಟನಾ ನಿರತ ಸಂಸದರೊಂದಿಗೆ  ಸೇರಿಕೊಂಡರು.

Parliament Winter Session ರೈತರ ಬಗ್ಗೆ ಮೋದಿ ಸರ್ಕಾರಕ್ಕೆ ಸಂವೇದನೆ ಇಲ್ಲ ಎಂದ ಸೋನಿಯಾ ಗಾಂಧಿ; ಸಂಸದರ ಅಮಾನತು ಖಂಡಿಸಿ ಮುಂದುವರಿದ ವಿಪಕ್ಷಗಳ ಪ್ರತಿಭಟನೆ
ಅಮಾನತುಗೊಂಡ ಸಂಸದರ ಪ್ರತಿಭಟನೆ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on: Dec 08, 2021 | 2:22 PM

ದೆಹಲಿ: ಕಾಂಗ್ರೆಸ್ ಸಂಸದೀಯ ಪಕ್ಷದ ಸಭೆಯಲ್ಲಿ(Congress Parliamentary Party meet) ಸೋನಿಯಾ ಗಾಂಧಿ (Sonia Gandhi) ಬುಧವಾರ ರೈತರು, ಗಡಿ ಭದ್ರತೆ ಮತ್ತು ಅಮಾನತುಗೊಂಡ ಸಂಸದರ ಸಮಸ್ಯೆಗಳನ್ನು ಪ್ರಸ್ತಾಪಿಸಿದರು. ಮೋದಿ ಸರ್ಕಾರಕ್ಕೆ ರೈತರು ಮತ್ತು ಸಾಮಾನ್ಯ ಜನರ ಬಗ್ಗೆ ಸಂವೇದನೆ ಇಲ್ಲ ಎಂದು ಸೋನಿಯಾ ಹೇಳಿರುವುದಾಗಿ ಎಎನ್‌ಐ ವರದಿ ಮಾಡಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆಯು ಪ್ರತಿ ಕುಟುಂಬದ ಮಾಸಿಕ ಬಜೆಟ್ ಅನ್ನು ಸುಡುತ್ತಿದೆ ಎಂದು ಅವರು ಹೇಳಿದರು.  ಹನ್ನೆರಡು ಸದಸ್ಯರ ಅಮಾನತು ಹಿಂಪಡೆಯಲು ಪ್ರತಿಪಕ್ಷದ ಒಗ್ಗಟ್ಟಿನ ಮನವಿ ಮತ್ತು ಕ್ಷಮೆಯಾಚಿಸಬೇಕು ಎಂಬ ಸರ್ಕಾರದ ಬೇಡಿಕೆಗೆ ಬಗ್ಗದ ವಿಪಕ್ಷಗಳು ರಾಜ್ಯಸಭೆ ಕಲಾಪಕ್ಕೆ (Rajya Sabha) ಅಡ್ಡಿಪಡಿಸಿದವು. ಬುಧವಾರ ಸಂಸದರ ಅಮಾನತು ಪ್ರಶ್ನಿಸಿ ಪ್ರತಿಪಕ್ಷಗಳು ನಡೆಸಿದ ಪ್ರತಿಭಟನೆಯಿಂದಾಗಿ ಸದನ ಪ್ರಾರಂಭವಾದ ಸ್ವಲ್ಪ ಸಮಯದ ನಂತರ ಸದನವನ್ನು 12 ಕ್ಕೆ ಮುಂದೂಡಲಾಯಿತು. ಅದೇ  ವೇಳೆ  ಸಂಸತ್​​ನ ಸಂಕೀರ್ಣದಲ್ಲಿರುವ ಗಾಂಧಿ ಪ್ರತಿಮೆ ಎದುರು ಅಮಾನತುಗೊಂಡ ಸಂಸದರು ಧರಣಿ ಮುಂದುವರಿಸಿದ್ದಾರೆ. ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಕೂಡ ಪ್ರತಿಭಟನಾ ನಿರತ ಸಂಸದರೊಂದಿಗೆ  ಸೇರಿಕೊಂಡರು. ಕಾಂಗ್ರೆಸ್ ಪಕ್ಷದ ಮುಖ್ಯ ವಿಪ್ ಜೈರಾಮ್ ರಮೇಶ್ ಅವರು ರಾಜ್ಯಸಭೆಯಿಂದ ತಮ್ಮ ಅಮಾನತು ಹಿಂಪಡೆಯಲು ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿರುವ ಸಂಸದರೊಂದಿಗೆ ಧರಣಿ ಕುಳಿತಿದ್ದಾರೆ. 

ಇದೇ ವೇಳೆ, ನಮ್ಮ ಸಂಸದರ ಅಮಾನತು ಹಿಂಪಡೆಯುವ ಕುರಿತು ಸದನದಲ್ಲಿ ನಿರಂತರವಾಗಿ ತಮ್ಮ ಅಭಿಪ್ರಾಯಗಳನ್ನು ಮಂಡಿಸುತ್ತಿದ್ದೇವೆ ಎಂದು ಮೇಲ್ಮನೆ ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಪುನರುಚ್ಚರಿಸಿದರು. “ನಾವು ತಪ್ಪೆಸಗಿಲ್ಲ ಎಂದು ನಾವು ಸಭಾಪತಿಗೆ ಹಲವಾರು ಬಾರಿ ಮನವಿ ಮಾಡಿದ್ದೇವೆ ಮತ್ತು ಇನ್ನೂ ನಮಗೆ ಶಿಕ್ಷೆಯಾಗಿದೆ. ಅಮಾನತುಗೊಳಿಸಿರುವುದು ನಿಯಮಗಳಿಗೆ ವಿರುದ್ಧವಾಗಿದೆ ಎಂದು ನಾನು ಹೇಳಿದ್ದೇನೆ” ಎಂದು ಖರ್ಗೆ ಹೇಳಿದರು.

ಕೊವಿಡ್ ಲಸಿಕೆ ಅಭಿಯಾನಕ್ಕೆ ಸೋನಿಯಾ ಗಾಂಧಿ ಕರೆ 60 ರಷ್ಟು ಜನಸಂಖ್ಯೆಯನ್ನು ಕೊವಿಡ್ -19 ಲಸಿಕೆಗಳ ಎರಡೂ ಡೋಸ್‌ಗಳೊಂದಿಗೆ ಒಳಗೊಳ್ಳಲು ಪ್ರಯತ್ನಗಳನ್ನು ತೀವ್ರಗೊಳಿಸಬೇಕು ಎಂದು ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಸಿಪಿಪಿ ಸಭೆಯಲ್ಲಿ ಹೇಳಿದರು. ಬುಧವಾರ ನಡೆದ ಕಾಂಗ್ರೆಸ್ ಸಂಸದೀಯ ಸಭೆಯಲ್ಲಿ ಪಕ್ಷದ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ, “ಕೃಷಿ ಕಾನೂನುಗಳ ವಿರುದ್ಧ ವರ್ಷಪೂರ್ತಿ ನಡೆಸಿದ ಆಂದೋಲನದಲ್ಲಿ ತಮ್ಮ ಪ್ರಾಣ ತ್ಯಾಗ ಮಾಡಿದ 700 ರೈತರನ್ನು ಗೌರವಿಸೋಣ. ಮೋದಿ ಸರ್ಕಾರವು ರೈತರು ಮತ್ತು ಸಾಮಾನ್ಯ ಜನರ ಬಗ್ಗೆ ಸಂವೇದನೆ ರಹಿತವಾಗಿದೆ. ಅಗತ್ಯ ವಸ್ತುಗಳ ಬೆಲೆಯಲ್ಲಿ ಪ್ರತಿ ಕುಟುಂಬದ ಮಾಸಿಕ ಬಜೆಟ್ ಸುಡುತ್ತಿದೆ ಎಂದಿದ್ದಾರೆ.

ನ್ಯಾಯಮೂರ್ತಿಗಳ ವೇತನ ಮಸೂದೆ ಕುರಿತು ಲೋಕಸಭೆಯಲ್ಲಿ ಚರ್ಚೆ ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಅವರು ಬುಧವಾರ ಲೋಕಸಭೆಯಲ್ಲಿ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ನ್ಯಾಯಾಧೀಶರ (ವೇತನ ಮತ್ತು ಸೇವಾ ಷರತ್ತುಗಳು) ತಿದ್ದುಪಡಿ ಮಸೂದೆ, 2021 ಕುರಿತು ಹೇಳಿಕೆ ನೀಡುವ ನಿರೀಕ್ಷೆಯಿದೆ. ಮಂಗಳವಾರ ಮಸೂದೆಯ ಮೇಲಿನ ಚರ್ಚೆಯನ್ನು ಆರಂಭಿಸಿದ ಕಾಂಗ್ರೆಸ್ ಸಂಸದ ಶಶಿ ತರೂರ್, “ಉಗ್ರವಾದಿ ಬಹುಮತ”ದ ಅಲೆಯನ್ನು ತಡೆಯುವಲ್ಲಿ ನ್ಯಾಯಾಂಗ ವಿಫಲವಾಗಿದೆ ಎಂದು ಹೇಳಿದರು.

ಲೋಕಸಭೆ,ರಾಜ್ಯಸಭೆಯಲ್ಲಿ ಕಾಂಗ್ರೆಸ್ ಸಂಸದರಿಂದ ಮುಂದೂಡಿಕೆ ನೋಟಿಸ್ ಕಾಂಗ್ರೆಸ್ ಸಂಸದ ದೀಪೇಂದರ್ ಸಿಂಗ್ ಹೂಡಾ ಬುಧವಾರ ರಾಜ್ಯಸಭೆಯಲ್ಲಿ ರೈತರ ಸಮಸ್ಯೆಗಳಾದ ಎಂಎಸ್‌ಪಿ ಮೇಲಿನ ಕಾನೂನು ಖಾತರಿ, ಕೃಷಿ ಕಾನೂನುಗಳ ವಿರುದ್ಧ ವರ್ಷವಿಡೀ ನಡೆದ ಪ್ರತಿಭಟನೆಯಲ್ಲಿ ಸಾವನ್ನಪ್ಪಿದ ರೈತರ ಕುಟುಂಬಗಳಿಗೆ ಪರಿಹಾರ ಪಾವತಿ,ರೈತರ ವಿರುದ್ಧದ ಪ್ರಕರಣಗಳನ್ನು ಹಿಂಪಡೆಯಬೇಕು ಮುಂತಾದ ರೈತರ ಸಮಸ್ಯೆಗಳನ್ನು ಚರ್ಚಿಸಲು ಮುಂದೂಡಿಕೆ ಸೂಚನೆ ನೀಡಿದರುಎಂದು ಎಎನ್‌ಐ ವರದಿ ಮಾಡಿದೆ.

ಲೋಕಸಭೆಯಲ್ಲಿ, ಕಾಂಗ್ರೆಸ್ ಸಂಸದ ಮನೀಶ್ ತಿವಾರಿ ಅವರು ಗಡಿ ವಿವಾದಗಳ ಮೂರು-ಹಂತದ ಪರಿಹಾರದ ಕುರಿತು ಚೀನಾ-ಭೂತಾನ್ ಎಂಒಯು ಕುರಿತು ಚರ್ಚಿಸಲು ಮುಂದೂಡಿಕೆ ಸೂಚನೆ ನೀಡಿದರು, ಇದು “ದೋಕ್ಲಾಮ್‌ನ ಕಾರ್ಯತಂತ್ರದ ಪ್ರಮುಖ ಪ್ರದೇಶವನ್ನು ಚೀನಾಕ್ಕೆ ವರ್ಗಾಯಿಸಲು ಕಾರಣವಾಗಬಹುದು ಎಂದು ಹೇಳಿದ್ದಾರೆ.

ಇದನ್ನೂ ಓದಿ:  Uttar Pradesh election 2022 ಕಾಂಗ್ರೆಸ್‌ನಿಂದ ಮಹಿಳಾ ಚುನಾವಣಾ ಪ್ರಣಾಳಿಕೆ ಬಿಡುಗಡೆ; ಪದವೀಧರ ಮಹಿಳೆಯರಿಗೆ ಎಲೆಕ್ಟ್ರಿಕ್ ಸ್ಕೂಟರ್ ವಾಗ್ದಾನ

ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ