ಒಮಿಕ್ರಾನ್ ಎಚ್ಚರಿಕೆ: ಜನವರಿ 31ರವರೆಗೆ ಪುನಾರಂಭವಾಗಲ್ಲ ಅಂತರರಾಷ್ಟ್ರೀಯ ವಿಮಾನಗಳು

ಒಮಿಕ್ರಾನ್ ಎಚ್ಚರಿಕೆ: ಜನವರಿ 31ರವರೆಗೆ ಪುನಾರಂಭವಾಗಲ್ಲ ಅಂತರರಾಷ್ಟ್ರೀಯ ವಿಮಾನಗಳು
ಪ್ರಾತಿನಿಧಿಕ ಚಿತ್ರ

ಹಲವಾರು ರಾಷ್ಟ್ರಗಳಲ್ಲಿ ಹೊಸ 'ಒಮಿಕ್ರಾನ್' ರೂಪಾಂತರಿ ಏಕಾಏಕಿ ಹೊರಹೊಮ್ಮಿದ್ದು ದೇಶವು ಈಗ ಅಂತಾರಾಷ್ಟ್ರೀಯ ವಿಮಾನಗಳ ಪುನರಾರಂಭದ ಯೋಜನೆಗಳಿಗೆ ಬ್ರೇಕ್ ಹಾಕಿದೆ. 

TV9kannada Web Team

| Edited By: Rashmi Kallakatta

Dec 09, 2021 | 7:45 PM

ದೆಹಲಿ: ಕೊರೊನಾವೈರಸ್ (coronavirus) ಹೊಸ ರೂಪಾಂತರಿ ಒಮಿಕ್ರಾನ್ ರೂಪಾಂತರದ (Omicron variant)  ಎಚ್ಚರಿಕೆಯ ಮಧ್ಯೆ ಸರ್ಕಾರವು ನಿಗದಿತ ಅಂತರರಾಷ್ಟ್ರೀಯ ವಾಣಿಜ್ಯ ವಿಮಾನಗಳ ಮೇಲಿನ ನಿರ್ಬಂಧವನ್ನು ಜನವರಿ 31 ರವರೆಗೆ ವಿಸ್ತರಿಸಿದೆ. ಅಂತಾರಾಷ್ಟ್ರೀಯ ವಿಮಾನಯಾನ (international flights) ಡಿಸೆಂಬರ್ 15 ರಿಂದ ಪುನಾರಂಭಗೊಳ್ಳಲಿದೆ ಎಂದು ಈ ಹಿಂದೆ ಹೇಳಲಾಗಿತ್ತು. ಆದಾಗ್ಯೂ, ಹಲವಾರು ರಾಷ್ಟ್ರಗಳಲ್ಲಿ ಹೊಸ ‘ಒಮಿಕ್ರಾನ್’ ರೂಪಾಂತರಿ ಏಕಾಏಕಿ ಹೊರಹೊಮ್ಮಿದ್ದು ದೇಶವು ಈಗ ಅಂತಾರಾಷ್ಟ್ರೀಯ ವಿಮಾನಗಳ ಪುನರಾರಂಭದ ಯೋಜನೆಗಳಿಗೆ ಬ್ರೇಕ್ ಹಾಕಿದೆ.  ಅಂತರಾಷ್ಟ್ರೀಯ ವಿಮಾನಗಳ ಮೇಲಿನ ನಿರ್ಬಂಧ ವಿಸ್ತರಿಸಿರುವ  ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (DGCA) ಈ  ಬಗ್ಗೆ ಹೊರಡಿಸಿದ ಸುತ್ತೋಲೆಯಲ್ಲಿ ಈ ನಿರ್ಬಂಧವು ಅಂತರರಾಷ್ಟ್ರೀಯ ಎಲ್ಲಾ ಸರಕು ಕಾರ್ಯಾಚರಣೆಗಳಿಗೆ ಮತ್ತು ನಿರ್ದಿಷ್ಟವಾಗಿ ಅನುಮೋದಿಸಲಾದ ಹಾರಾಟಕ್ಕೆ ಅನ್ವಯಿಸುವುದಿಲ್ಲ ಎಂದು ಹೇಳಿದೆ. ಕೇಸ್-ಟು-ಕೇಸ್ ಆಧಾರದ ಮೇಲೆ ಆಯ್ದ ಮಾರ್ಗಗಳಲ್ಲಿ ಅಂತರರಾಷ್ಟ್ರೀಯ ವಿಮಾನಗಳನ್ನು ಅನುಮತಿಸಬಹುದು ಎಂದು ಅದು ಹೇಳಿದೆ. ಒಮಿಕ್ರಾನ್ ರೂಪಾಂತರವು ಪ್ರಪಂಚದಾದ್ಯಂತ ಅಂತರಾಷ್ಟ್ರೀಯ ಪ್ರಯಾಣದ ಬಗ್ಗೆ ಕಾಳಜಿಯ ಹೊಸ ಅಲೆಯನ್ನು ಹುಟ್ಟುಹಾಕಿದೆ. ಇದು ಹಲವಾರು ರಾಷ್ಟ್ರಗಳಿಂದ ಹೊಸ ಪ್ರಯಾಣ ಕ್ರಮಗಳನ್ನು ಹೇರಲು ಕಾರಣವಾಗಿದೆ.

ದೆಹಲಿ ವಿಮಾನ ನಿಲ್ದಾಣದ ಅಧಿಕಾರಿಗಳು “ಅಪಾಯದಲ್ಲಿರುವ” ದೇಶಗಳಿಂದ ಆಗಮಿಸುವ ಮತ್ತು ಅವರ ಕಡ್ಡಾಯ ಕೊವಿಡ್ ಪರೀಕ್ಷೆಯನ್ನು ಮುಂಚಿತವಾಗಿ ಕಾಯ್ದಿರಿಸಿದ ಪ್ರಯಾಣಿಕರಿಗಾಗಿ 20 ಮೀಸಲಾದ ಕೌಂಟರ್‌ಗಳನ್ನು ಸ್ಥಾಪಿಸಿದ್ದಾರೆ. ಹೊಸ ಪ್ರಯಾಣ ಮಾರ್ಗಸೂಚಿಗಳ ಅನುಷ್ಠಾನದ ನಂತರ ಟರ್ಮಿನಲ್‌ನಲ್ಲಿ ಜನಸಂದಣಿ ಇದೆ ಎಂದು ಹಲವಾರು ಪ್ರಯಾಣಿಕರು ದೂರಿದ ನಂತರ ಇದು ಸಂಭವಿಸಿದೆ.

ಒಮಿಕ್ರಾನ್ ಎಚ್ಚರಿಕೆಯ ನಡುವೆ ಕಳೆದ ವಾರ ಹೊರಡಿಸಲಾದ ಆರೋಗ್ಯ ಸಚಿವಾಲಯದ ಮಾರ್ಗಸೂಚಿಗಳ ಪ್ರಕಾರ, “ಅಪಾಯದಲ್ಲಿರುವ” ದೇಶಗಳಿಂದ ಬರುವ ಎಲ್ಲಾ ಪ್ರಯಾಣಿಕರು ಕಡ್ಡಾಯವಾಗಿ ಪಿಸಿಆರ್ ಪರೀಕ್ಷೆಗೆ ಒಳಗಾಗಬೇಕು. ಇತರ ದೇಶಗಳಿಂದ ಬರುವ ಶೇಕಡಾ ಐದು ಪ್ರಯಾಣಿಕರು ಸಹ ಪರೀಕ್ಷೆಗೊಳಗಾಗಬೇಕಾಗುತ್ತದೆ. ಕೊರೊನಾವೈರಸ್ ಕಾರಣದಿಂದಮಾರ್ಚ್ 2020 ರಲ್ಲಿ ವಾಣಿಜ್ಯ ಅಂತರರಾಷ್ಟ್ರೀಯ ವಿಮಾನಯಾನಗಳನ್ನು ಸ್ಥಗಿತಗೊಳಿಸಲಾಯಿತು ಮತ್ತು 20 ತಿಂಗಳ ವಿರಾಮದ ನಂತರ ಡಿಸೆಂಬರ್ 15 ರಿಂದ ಪುನರಾರಂಭಿಸುವುದಾಗಿ ಸರ್ಕಾರ ನವೆಂಬರ್ 26 ರಂದು ಘೋಷಿಸಿತು.

ಇದನ್ನೂ ಓದಿ:  ಒಮಿಕ್ರಾನ್ ಪ್ರತಿರಕ್ಷಣಾ ಪ್ರತಿಕ್ರಿಯೆಯನ್ನು ಹೆಚ್ಚು ಮಂದಗೊಳಿಸುತ್ತದೆ: ಅಧ್ಯಯನ ವರದಿ

Follow us on

Related Stories

Most Read Stories

Click on your DTH Provider to Add TV9 Kannada