‘ಎಲ್ಲ ಪರೀಕ್ಷೆಗಳಲ್ಲಿ ಸೋತ ಮಗು’: ವಿಪಕ್ಷಗಳ ಒಕ್ಕೂಟ ‘ಇಂಡಿಯಾ’ ವಿರುದ್ಧ ನಡ್ಡಾ ವಾಗ್ದಾಳಿ

|

Updated on: Jul 25, 2023 | 8:24 PM

ಇಂಡಿಯನ್ ನ್ಯಾಷನಲ್ ಕಾಂಗ್ರೆಸ್, ಈಸ್ಟ್ ಇಂಡಿಯಾ ಕಂಪನಿ, ಇಂಡಿಯನ್ ಮುಜಾಹಿದ್ದೀನ್, ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಇದೆಲ್ಲದರಲ್ಲೂ ಇಂಡಿಯಾ ಇದೆ. ಹೀಗೆ ಇಂಡಿಯಾ ಎಂಬ ಹೆಸರನ್ನು ಬಳಸುವುದರಲ್ಲಿ ಯಾವ ಅರ್ಥವೂ ಇಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದರು.

‘ಎಲ್ಲ ಪರೀಕ್ಷೆಗಳಲ್ಲಿ ಸೋತ ಮಗು’: ವಿಪಕ್ಷಗಳ ಒಕ್ಕೂಟ ಇಂಡಿಯಾ ವಿರುದ್ಧ ನಡ್ಡಾ ವಾಗ್ದಾಳಿ
ಜೆಪಿ ನಡ್ಡಾ
Follow us on

ದೆಹಲಿ ಜುಲೈ 25: ಒಂದು ಮಗು ತನ್ನ ಎಲ್ಲಾ ಪರೀಕ್ಷೆಗಳಲ್ಲಿ ಫೇಲ್ ಆಗಿತ್ತು. ಅವನನ್ನು ಸಹಪಾಠಿಗಳು ಮತ್ತು ನೆರೆಹೊರೆಯವರು ದ್ವೇಷಿಸುತ್ತಿದ್ದರು. ಆದ್ದರಿಂದ ಪೋಷಕರು ಅವನ ಗ್ರಹಿಕೆಯನ್ನು ಬದಲಾಯಿಸಲು ಅವನ ಹೆಸರನ್ನು ಬದಲಾಯಿಸಲು ಯೋಚಿಸಿದರು. ಈ ಪ್ರಕರಣವು I.N.D.I.A ಯಂತೆಯೇ ಅಲ್ಲವೇ? ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ (JP Nadda)  ಟ್ವೀಟ್ ಮಾಡಿದ್ದಾರೆ. ವಿಪಕ್ಷಗಳ ಮೈತ್ರಿ ಒಕ್ಕೂಟ ಇಂಡಿಯಾ ವಿರುದ್ಧ ಪ್ರಧಾನಿ ನರೇಂದ್ರ ಮೋದಿಯವರು(Narendra Modi) ವಾಗ್ದಾಳಿ ನಡೆಸಿದ ಬೆನ್ನಲ್ಲೇ ನಡ್ಡಾ ಈ ರೀತಿ ಟ್ವೀಟ್ ಮಾಡಿದ್ದಾರೆ.

2024ರ ಲೋಕಸಭಾ ಚುನಾವಣೆಯ ಕಾರ್ಯತಂತ್ರವನ್ನು ಚರ್ಚಿಸಲು ಕಳೆದ ವಾರ ಬೆಂಗಳೂರಿನಲ್ಲಿ ನಡೆದ 26 ಪಕ್ಷಗಳ ಸಭೆಯಲ್ಲಿ ಪ್ರತಿಪಕ್ಷಗಳು ತಮ್ಮ ಮೈತ್ರಿಕೂಟಕ್ಕೆ ಇಂಡಿಯಾ ಎಂದು ಹೆಸರಿಟ್ಟಿತ್ತು. ಇದನ್ನು ಟೀಕಿಸಿದ ಮೋದಿ ವಿಪಕ್ಷಗಳು ಇಂಡಿಯಾ ಎಂಬ ಹೆಸರಿಗಾಗಿ ತಮ್ಮನ್ನು ತಾವು ಹೊಗಳಿಕೊಳ್ಳುತ್ತಲೇ ಇರುತ್ತಾರೆ ಎಂದಿದ್ದಾರೆ.

ಇಂಡಿಯನ್ ನ್ಯಾಷನಲ್ ಕಾಂಗ್ರೆಸ್, ಈಸ್ಟ್ ಇಂಡಿಯಾ ಕಂಪನಿ, ಇಂಡಿಯನ್ ಮುಜಾಹಿದ್ದೀನ್, ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಇದೆಲ್ಲದರಲ್ಲೂ ಇಂಡಿಯಾ ಇದೆ. ಹೀಗೆ ಇಂಡಿಯಾ ಎಂಬ ಹೆಸರನ್ನು ಬಳಸುವುದರಲ್ಲಿ ಯಾವ ಅರ್ಥವೂ ಇಲ್ಲ ಎಂದು ಪ್ರಧಾನಿ ಹೇಳಿರುವುದಾಗಿ ರವಿಶಂಕರ್ ಪ್ರಸಾದ್ ಉಲ್ಲೇಖಿಸಿದ್ದಾರೆ.

ಇಂತಿರುವಾಗ ಪ್ರತಿಪಕ್ಷಗಳು ಸೋಲು, ದಣಿವು, ಹತಾಶರಾಗಿ ಮೋದಿಯನ್ನು ವಿರೋಧಿಸಬೇಕು ಎಂಬ ಒಂದೇ ಒಂದು ಅಜೆಂಡಾ ಇಟ್ಟುಕೊಂಡಿದ್ದಾರೆ. ಅವರು ವಿರೋಧಪಕ್ಷಗಳಾಗಿಯೇ ಉಳಿಯಲು ನಿರ್ಧರಿಸಿದಂತಿದೆ. 2024ರ ಚುನಾವಣೆಯಲ್ಲಿ ಜನಬೆಂಬಲದಿಂದ ಬಿಜೆಪಿ ಸುಲಭವಾಗಿ ಗೆಲುವು ಸಾಧಿಸಲಿದೆ ಎಂದು ಮೋದಿ ಹೇಳಿರುವುದಾಗಿ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಷಿ ಹೇಳಿದ್ದಾರೆ.

ಇದನ್ನೂ ಓದಿ: ಮೋದಿಯವರು ಜನರಿಗೆ ನೀಡಿದ ಭರವಸೆ ಮತ್ತು ನಂಬಿಕೆಯ ಜ್ವಾಲೆಯನ್ನು ನಂದಿಸುವುದು ಸಾಧ್ಯವಿಲ್ಲ: ಧರ್ಮೇಂದ್ರ ಪ್ರಧಾನ್

ಮಣಿಪುರ ವಿಷಯದ ಕುರಿತು ಸಂಸತ್ತಿನಲ್ಲಿ ನಡೆಯುತ್ತಿರುವ ಗದ್ದಲದ ಬಗ್ಗೆ ಮಂಗಳವಾರ ಪ್ರತಿಪಕ್ಷಗಳ ಮೇಲೆ ತೀವ್ರವಾಗಿ ವಾಗ್ದಾಳಿ ನಡೆಸಿದ ಪ್ರಧಾನಿ ಮೋದಿ, ವಿಪಕ್ಷಗಳ ನಡವಳಿಕೆಯು ಅವರು ಪ್ರತಿಪಕ್ಷದಲ್ಲೇ ಉಳಿಯಲು ನಿರ್ಧರಿಸುವುದನ್ನು ಸೂಚಿಸುತ್ತದೆ. ನಾವು ಸಾರ್ವಜನಿಕರ ಹಿತದೃಷ್ಟಿಯಿಂದ ಕೆಲಸ ಮಾಡಬೇಕಾಗಿದೆ ಮತ್ತು ಆ ನಿಟ್ಟಿನಲ್ಲಿ ಮುಂದುವರಿಯಬೇಕಿದೆ ಎಂದು ಮೋದಿ ಹೇಳಿರುವುದಾಗಿ ಜೋಶಿ ತಿಳಿಸಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ