ಕೊರೊನಾದಿಂದ ಪಾಲಕರು ಮೃತಪಟ್ಟು ಅನಾಥರಾದ ಮಕ್ಕಳ ಹೊಣೆಯನ್ನು ಜಿಲ್ಲಾಡಳಿತಗಳಿಗೆ ವಹಿಸಿದ ಸುಪ್ರೀಂಕೋರ್ಟ್

|

Updated on: May 28, 2021 | 3:43 PM

ಕೊರೊನಾದಿಂದ ತಂದೆ, ತಾಯಿ ಕಳೆದುಕೊಂಡು ಅನಾಥ ಮಕ್ಕಳ ಅಗತ್ಯತೆಗಳನ್ನು ತಕ್ಷಣವೇ ಪೂರೈಸಲು ಜಿಲ್ಲಾಡಳಿತಗಳಿಗೆ ದೇಶದ ಪರಮೋಚ್ಛ ನ್ಯಾಯಪೀಠ ಸೂಚನೆ ನೀಡಿದೆ.

ಕೊರೊನಾದಿಂದ ಪಾಲಕರು ಮೃತಪಟ್ಟು ಅನಾಥರಾದ ಮಕ್ಕಳ ಹೊಣೆಯನ್ನು ಜಿಲ್ಲಾಡಳಿತಗಳಿಗೆ ವಹಿಸಿದ ಸುಪ್ರೀಂಕೋರ್ಟ್
ಸುಪ್ರೀಂಕೋರ್ಟ್​
Follow us on

ದೆಹಲಿ: ಕೊರೊನಾದಿಂದ ಅನಾಥರಾದ ಮಕ್ಕಳ ಪಾಲನೆ ಹೊಣೆಯನ್ನು ಜಿಲ್ಲಾಡಳಿತಗಳು ವಹಿಸಿಕೊಳ್ಳಬೇಕು ಎಂದು ಸುಪ್ರೀಂಕೋರ್ಟ್ ದೇಶದ ಎಲ್ಲಾ ಜಿಲ್ಲಾಡಳಿತಗಳಿಗೆ ಸೂಚನೆ ನೀಡಿದೆ. ಕೊರೊನಾದಿಂದ ತಂದೆ, ತಾಯಿ ಕಳೆದುಕೊಂಡು ಅನಾಥ ಮಕ್ಕಳ ಅಗತ್ಯತೆಗಳನ್ನು ತಕ್ಷಣವೇ ಪೂರೈಸಲು ಜಿಲ್ಲಾಡಳಿತಗಳಿಗೆ ಸುಪ್ರೀಂಕೋರ್ಟ್ ಸೂಚನೆ ನೀಡಿದೆ. ದೇಶಾದ್ಯಂತ ಕೊರೊನಾದಿಂದ ಅನಾಥರಾದ ಮಕ್ಕಳ ವಿವರ, ಅಂಕಿಅಂಶ ನೀಡಲು ಕೋರ್ಟ್ ಎಲ್ಲ ರಾಜ್ಯ ಸರ್ಕಾರಗಳಿಗೆ ತಿಳಿಸಿದ್ದು, ಎಲ್ಲ ರಾಜ್ಯಗಳು ಮಕ್ಕಳು ಹಸಿವಿನಿಂದ ಇರದಂತೆ ನೋಡಿಕೊಳ್ಳಬೇಕು ಎಂದು ಕೋರ್ಟ್ ನಿರ್ದೇಶನ ನೀಡಿದೆ.

ಕೊರೊನಾದಿಂದ ಅನಾಥರಾದ ಮಕ್ಕಳನ್ನು ಗುರುತಿಸಿ ಶನಿವಾರ ಸಂಜೆಯೊಳಗೆ ಅವರ ವಿವರವನ್ನು NCPCR ವೆಬ್ ಸೈಟ್ ಗೆ ಅಪ್ಲೋಡ್ ಮಾಡುವಂತೆ ಜಿಲ್ಲಾಡಳಿತಗಳಿಗೆ ಸುಪ್ರೀಂಕೋರ್ಟ್ ಸೂಚಿಸಿದೆ. ಜತೆಗೆ ಅನಾಥ ಮಕ್ಕಳ ಬಗ್ಗೆ ಸುಪ್ರೀಂ ಕೋರ್ಟ್ ಆದೇಶಕ್ಕೆ ಕಾಯದೇ ಮಕ್ಕಳನ್ನ ನೋಡಿಕೊಳ್ಳಬೇಕು ಎಂದು ಸಹ ತಿಳಿಸಿರುವ ಕೋರ್ಟ್, ಮುಂದಿನ ಮಂಗಳವಾರ ಈ ಕುರಿತು ವಿಚಾರಣೆ ಮುಂದುವರೆಸುವುದಾಗಿ ತಿಳಿಸಿದೆ.

ತಂದೆ-ತಾಯಿ ಇಬ್ಬರನ್ನೂ ಕಳೆದುಕೊಂಡ ಮಕ್ಕಳಿಗೆ ವಿಶೇಷ ಪರಿಹಾರ ನೀಡುವ ಬಗ್ಗೆ ನಿನ್ನೆಯ (ಮೇ 27) ಸಚಿವ ಸಂಪುಟ ಸಭೆಯಲ್ಲಿ ಚರ್ಚೆಯಾಗಿತ್ತು. ಕೇಂದ್ರದಿಂದ ಈ ಬಗ್ಗೆ ಹೊಸ ಮಾರ್ಗಸೂಚಿ ಬರಲಿದೆ. ಆ ಬಳಿಕ ಬಂದ ಬಳಿಕ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದರು. ಇದೀಗ ಸುಪ್ರೀಂಕೋರ್ಟ್ ಈ ಕುರಿತು ನಿರ್ದೇಶನ ನೀಡಿರುವುದರಿಂದ ಕರ್ನಾಟಕ ಸೇರಿದಂತೆ ದೇಶದ ವಿವಿಧ ರಾಜ್ಯ ಸರ್ಕಾರಗಳು ಮಕ್ಕಳನ್ನು ಕಾಪಾಡುವ ನಿಟ್ಟಿನಲ್ಲಿ ತ್ವರಿತ ಗತಿಯಲ್ಲಿ ಪ್ಯಾಕೇಜ್ ಘೋಷಿಸುವ ನಿರೀಕ್ಷೆ ಇದೆ.

ಇದನ್ನೂ ಓದಿ: 

ಕೊವಿಡ್​ ಸೋಂಕಿನಿಂದ ಪಾಲಕರನ್ನು ಕಳೆದುಕೊಂಡ ಮಕ್ಕಳಿಗೆ 3 ಲಕ್ಷ ರೂ.ಪರಿಹಾರ, ಪ್ರತಿ ತಿಂಗಳೂ 2000 ರೂ.: ಕೇರಳ ಸಿಎಂ ಘೋಷಣೆ

ಬೆಂಗಳೂರು ಗ್ರಾಮಾಂತರ ಜಿಲ್ಲೆ ಒಂದರಲ್ಲೇ ಈವರೆಗೆ 1350 ಮಕ್ಕಳಲ್ಲಿ ಕೊವಿಡ್ ಸೋಂಕು ದೃಢ

(State govt provides immediate relief fun say supreme court)

Published On - 3:28 pm, Fri, 28 May 21