ಕೊವಿಡ್ ಸೋಂಕಿನಿಂದ ಪಾಲಕರನ್ನು ಕಳೆದುಕೊಂಡ ಮಕ್ಕಳಿಗೆ 3 ಲಕ್ಷ ರೂ.ಪರಿಹಾರ, ಪ್ರತಿ ತಿಂಗಳೂ 2000 ರೂ.: ಕೇರಳ ಸಿಎಂ ಘೋಷಣೆ
ರಾಜ್ಯದಲ್ಲಿ ಕೊವಿಡ್ 19 ಸೋಂಕಿನಿಂದ ಪಾಲಕರನ್ನು ಕಳೆದುಕೊಂಡು ಅನಾಥರಾದ ಮಕ್ಕಳಿಗೆ ಒಂದು ಬಾರಿಗೆ 3 ಲಕ್ಷ ರೂ.ಪರಿಹಾರ ನೀಡಲಾಗುವುದು. ಹಾಗೇ 18ವರ್ಷ ತುಂಬುವವರೆಗೆ ಪ್ರತಿ ತಿಂಗಳೂ 2000 ರೂ. ಕೊಡಲಾಗುವುದು. ಹಾಗೇ ಅವರ ಪದವಿಯವರೆಗಿನ ಶಿಕ್ಷಣದ ವೆಚ್ಚವನ್ನೂ ಸರ್ಕಾರವೇ ಭರಿಸಲಿದೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದ್ದಾರೆ. ಕೊವಿಡ್ 19 ಎರಡನೇ ಅಲೆಯಲ್ಲಿ ಅದೆಷ್ಟೋ ಮಕ್ಕಳ ಪಾಲಕರು ಸೋಂಕಿಗೆ ಬಲಿಯಾಗಿದ್ದಾರೆ. ಸದ್ಯ ಆ ಮಕ್ಕಳೆಲ್ಲ ತಮ್ಮ ಕುಟುಂಬದವರೊಂದಿಗೆ ವಾಸವಾಗಿದ್ದಾರೆ. ಹೀಗೆ ಅನಾಥರಾದ ಮಕ್ಕಳ ಬಗ್ಗೆ ಕಾಳಜಿ […]
ರಾಜ್ಯದಲ್ಲಿ ಕೊವಿಡ್ 19 ಸೋಂಕಿನಿಂದ ಪಾಲಕರನ್ನು ಕಳೆದುಕೊಂಡು ಅನಾಥರಾದ ಮಕ್ಕಳಿಗೆ ಒಂದು ಬಾರಿಗೆ 3 ಲಕ್ಷ ರೂ.ಪರಿಹಾರ ನೀಡಲಾಗುವುದು. ಹಾಗೇ 18ವರ್ಷ ತುಂಬುವವರೆಗೆ ಪ್ರತಿ ತಿಂಗಳೂ 2000 ರೂ. ಕೊಡಲಾಗುವುದು. ಹಾಗೇ ಅವರ ಪದವಿಯವರೆಗಿನ ಶಿಕ್ಷಣದ ವೆಚ್ಚವನ್ನೂ ಸರ್ಕಾರವೇ ಭರಿಸಲಿದೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದ್ದಾರೆ.
ಕೊವಿಡ್ 19 ಎರಡನೇ ಅಲೆಯಲ್ಲಿ ಅದೆಷ್ಟೋ ಮಕ್ಕಳ ಪಾಲಕರು ಸೋಂಕಿಗೆ ಬಲಿಯಾಗಿದ್ದಾರೆ. ಸದ್ಯ ಆ ಮಕ್ಕಳೆಲ್ಲ ತಮ್ಮ ಕುಟುಂಬದವರೊಂದಿಗೆ ವಾಸವಾಗಿದ್ದಾರೆ. ಹೀಗೆ ಅನಾಥರಾದ ಮಕ್ಕಳ ಬಗ್ಗೆ ಕಾಳಜಿ ವಹಿಸಿ ಎಂದು ಕೇಂದ್ರ ಸರ್ಕಾರವೂ ರಾಜ್ಯ ಸರ್ಕಾರಗಳಿಗೆ ಸೂಚಿಸಿದೆ. ಕೇವಲ ಕೇರಳ ಮಾತ್ರವಲ್ಲದೆ ಹಲವು ರಾಜ್ಯಗಳು ಈ ನಿಟ್ಟಿನಲ್ಲಿ ಒಳ್ಳೆ ಹೆಜ್ಜೆ ಇಟ್ಟಿವೆ. ಕೊವಿಡ್ ನಿಂದ ಪಾಲಕರು ಮೃತಪಟ್ಟು ಅನಾಥರಾದ ಮಕ್ಕಳ ಶಿಕ್ಷಣದ ವೆಚ್ಚವನ್ನು ನಾವು ಭರಿಸುತ್ತೇವೆ. ಅವರ ಕಾಳಜಿ ನಮ್ಮ ಹೊಣೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಇತ್ತೀಚೆಗಷ್ಟೇ ಘೋಷಿಸಿದ್ದಾರೆ.
ಹಾಗೇ ಒಡಿಶಾ ಮತ್ತು ಮಣಿಪುರ ಸರ್ಕಾರಗಳೂ ಸಹ ಇಂಥ ಮಕ್ಕಳ ಬಗ್ಗೆ ಕಾಳಜಿವಹಿಸುವುದಾಗಿ ಘೋಷಿಸಿವೆ. ಇನ್ನು ಇಲ್ಲಿಯವರೆಗೆ 577 ಮಕ್ಕಳು ಕೊವಿಡ್ ಸೋಂಕಿನಿಂದ ಪಾಲಕರನ್ನು ಕಳೆದುಕೊಂಡು ಅನಾಥರಾಗಿದ್ದಾರೆ ಎಂದು ನಿನ್ನೆಯಷ್ಟೇ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಸ್ಮೃತಿ ಇರಾನಿ ತಿಳಿಸಿದ್ದಾರೆ.
ಇದನ್ನೂ ಓದಿ: ‘ಬಿಗ್ ಬಾಸ್ ಸೀಸನ್ 5’ ಕಮಲ್ ಹಾಸನ್ ಪಡೆಯುತ್ತಿರೋ ಸಂಭಾವನೆ ಎಷ್ಟು?