‘ಇಂಡೋ-ಚೀನಾ’ ಗಡಿಯಲ್ಲಿ ಬಿಗ್ ಇಂಪ್ಯಾಕ್ಟ್, ಗಡಿಯಿಂದ ಹೊರನಡೆದ ಚೀನಿ ಸೈನಿಕರ ದಂಡು!
ದೆಹಲಿ: ಪದೇ ಪದೆ ಗಡಿಯಲ್ಲಿ ಕ್ಯಾತೆ ತೆಗೆಯೋದು, ಕಿರಿಕಿರಿ ಮಾಡಿ ತಾನೇ ಬಲಿಷ್ಠ ಅಂತಾ ಪೋಸ್ ಬೇರೆ ಕೊಡೋದು. ಈ ರೋಗ ಚೀನಾಗೆ ಇನ್ನೂ ವಾಸಿಯಾಗಿಲ್ಲ. ವಿಶ್ವಕ್ಕೇ ಕೊರೊನಾ ಅನ್ನೋ ಮಾರಣಾಂತಿಕ ಸೋಂಕು ಹಬ್ಬಿಸಿ, ಲಕ್ಷಾಂತರ ಜನರ ಸಾವಿಗೆ ಕಾರಣವಾಗಿರುವ ಚೀನಿಯರು, ಗಡಿ ಕ್ಯಾತೆಯ ಕಿರಿಕ್ ಅನ್ನೂ ಬಿಡುತ್ತಿಲ್ಲ. ಹೀಗೆ ಭಾರತದ ಗಡಿ ಬಳಿ ನುಸುಳಿ ಬೇಕಾಬಿಟ್ಟಿ ವರ್ತಿಸಿ ಸೈಲೆಂಟ್ ಆಗಿದ್ದಾರೆ. ಅಷ್ಟೇ ಅಲ್ಲ ಚೀನಿ ಸೈನಿಕರು ಸದ್ಯ ಗಡಿ ಬಿಟ್ಟು ಎಸ್ಕೇಪ್ ಆಗಿದ್ದಾರೆ. ಚೀನಾ.. ಈ […]
ದೆಹಲಿ: ಪದೇ ಪದೆ ಗಡಿಯಲ್ಲಿ ಕ್ಯಾತೆ ತೆಗೆಯೋದು, ಕಿರಿಕಿರಿ ಮಾಡಿ ತಾನೇ ಬಲಿಷ್ಠ ಅಂತಾ ಪೋಸ್ ಬೇರೆ ಕೊಡೋದು. ಈ ರೋಗ ಚೀನಾಗೆ ಇನ್ನೂ ವಾಸಿಯಾಗಿಲ್ಲ. ವಿಶ್ವಕ್ಕೇ ಕೊರೊನಾ ಅನ್ನೋ ಮಾರಣಾಂತಿಕ ಸೋಂಕು ಹಬ್ಬಿಸಿ, ಲಕ್ಷಾಂತರ ಜನರ ಸಾವಿಗೆ ಕಾರಣವಾಗಿರುವ ಚೀನಿಯರು, ಗಡಿ ಕ್ಯಾತೆಯ ಕಿರಿಕ್ ಅನ್ನೂ ಬಿಡುತ್ತಿಲ್ಲ. ಹೀಗೆ ಭಾರತದ ಗಡಿ ಬಳಿ ನುಸುಳಿ ಬೇಕಾಬಿಟ್ಟಿ ವರ್ತಿಸಿ ಸೈಲೆಂಟ್ ಆಗಿದ್ದಾರೆ. ಅಷ್ಟೇ ಅಲ್ಲ ಚೀನಿ ಸೈನಿಕರು ಸದ್ಯ ಗಡಿ ಬಿಟ್ಟು ಎಸ್ಕೇಪ್ ಆಗಿದ್ದಾರೆ.
ಚೀನಾ.. ಈ ಹೆಸರು ಕೇಳಿದ್ರೆ ಸಾಕು ನೆರೆ-ಹೊರೆಯ ದೇಶಗಳು ಹಲ್ಲು ಮಸೆಯುತ್ತವೆ. ನೀನಾ ಚೀನಾ ಅಂತಾ ಗುಟುರು ಹಾಕ್ತವೆ. ಯಾಕಂದ್ರೆ ಚೀನಿಯರು ಮಾಡೋ ಕಿರಿಕ್ ಹಾಗೂ ತೆಗೆಯೋ ಕ್ಯಾತೆ ಅಂಥಾದ್ದು. ಅದೆಂಥ ಶಾಂತ ಮನಸ್ಸಿನ ರಾಷ್ಟ್ರವಾದರೂ, ಚೀನಾ ಮಾಡೋ ಕಿರಿಕಿರಿಗೆ ರಕ್ತ ಕುದಿಯದೇ ಇರಲ್ಲ. ಬೆಂಕಿ ಕಾರದೆ ಸೈಲೆಂಟ್ ಆಗಿಯೂ ಇರಕ್ಕೆ ಆಗಲ್ಲ. ಅದರಲ್ಲೂ ಭಾರತದ ವಿರುದ್ಧ ಪದೇಪದೆ ವಿಷಕಾರೋ ಚೀನಿಯರಿಗೆ ಸದ್ಯದ ಮಟ್ಟಿಗೆ ಒಂದಷ್ಟು ಬುದ್ಧಿ ಬಂದಂತೆ ಕಾಣ್ತಿದೆ. ಇದೇ ಕಾರಣಕ್ಕೆ ಗಡಿಯಲ್ಲಿ ಸ್ವಲ್ಪ ಶಾಂತ ವಾತಾವರಣ ನಿರ್ಮಾಣವಾಗಿದೆ.
ಕಣಿವೆಯಿಂದ 2.5 ಕಿ.ಮೀ. ಹಿಂದಕ್ಕೆ ಚೀನಿ ಮಿಲಿಟರಿ ಜೂಟ್! ಯೆಸ್, ಕೆಲದಿನಗಳ ಹಿಂದಷ್ಟೇ ಚೀನಾ ಹಾಗೂ ಭಾರತದ ಉನ್ನತಮಟ್ಟದ ಅಧಿಕಾರಿಗಳ ಜೊತೆ ಬಹುಮುಖ್ಯ ಚರ್ಚೆ ನಡೆದಿತ್ತು. ಗಡಿಯಲ್ಲಿ ವಿವಾದ ಹಾಗೂ ಅಶಾಂತ ವಾತಾವರಣ ನಿರ್ಮಾಣವಾಗಿರುವ ಬೆನ್ನಲ್ಲೇ ಈ ಮಾತುಕತೆ ಭಾರಿ ಕುತೂಹಲ ಕೆರಳಿಸಿತ್ತು. ಆದ್ರೆ ಈ ಮಾತುಕತೆಯಿಂದ ಅಂದುಕೊಂಡಷ್ಟು ಪ್ರಯೋಜನ ಆಗಲಿಲ್ಲ. ಸಭೆ ಕೇವಲ ಚರ್ಚೆಗೆ ಸೀಮಿತವಾಗಿತ್ತು. ಆದ್ರೆ ಅಧಿಕಾರಿಗಳ ನಡುವೆ ಮಾತುಕತೆ ನಡೆದ ಕೆಲವೇ ದಿನದಲ್ಲಿ ಚೀನಾ ಸೇನೆ ಗಾಲ್ವಾನ್ ಕಣಿವೆಯಿಂದ ಸುಮಾರು ಎರಡೂವರೆ ಕಿಲೋಮೀಟರ್ ಹಿಂದೆ ಸರಿದಿದೆ. ಇದೇರೀತಿ ಪ್ಯಾಟ್ರೋಲಿಂಗ್ ಪಾಯಿಂಟ್ 15 ಹಾಗೂ ಹಾಟ್ ಸ್ಪ್ರಿಂಗ್ ಏರಿಯಾದಿಂದಲೂ ಡ್ರ್ಯಾಗನ್ ಸೇನೆ ಕಾಲ್ಕಿತ್ತಿದೆ.
ಭಾರತೀಯ ಸೇನೆಯಿಂದಲೂ ಮಹತ್ವದ ಕ್ರಮ! ಹೌದು, ಚೀನಾ ಭಾರತದ ಗಡಿ ಸಮೀಪದಿಂದ ಹೊರಗೆ ಹೋಗುತ್ತಿದ್ದಂತೆ ಚೀನಾ ಕೂಡ ಮಹತ್ವದ ಕ್ರಮವನ್ನ ಕೈಗೊಂಡಿದೆ. ಇದು ಗಡಿಯಲ್ಲಿ ಮತ್ತಷ್ಟು ಶಾಂತಿ ನೆಲೆಸುವಂತೆ ಮಾಡಿದೆ. ಚೀನಿ ಸೇನೆ ಹಿಂದಕ್ಕೆ ಸರಿದಂತೆ ಭಾರತೀಯ ಸೈನಿಕರು ಕೂಡ ಲಾಡಕ್ನ ಕೆಲವು ಪ್ರದೇಶಗಳಿಂದ ವಾಪಸ್ ಬಂದಿದ್ದಾರೆ. ಈ ಮೂಲಕ ಉಭಯ ದೇಶಗಳು ಯುದ್ಧ ವಾತಾವರಣದಿಂದ ಲಡಾಕ್ ಅನ್ನ ಮುಕ್ತಗೊಳಿಸಿದ್ದಾರೆ.
ಒಟ್ನಲ್ಲಿ ಅದೇನೆ ಇರಲಿ, ಚೀನಾ ಮಾತ್ರ ತನ್ನ ನರಿ ಬುದ್ಧಿ ಬಿಡೋದಿಲ್ಲ. ಒಬ್ಬರು, ಮತ್ತೊಬ್ಬರ ಮಧ್ಯೆ ಫಿಟಿಂಗ್ ಇಟ್ಟು ಆಟ ಆಡೋದು ಡ್ರ್ಯಾಗನ್ಗೆ ಖಯಾಲಿಯಾಗಿದೆ. ಹೀಗೆ ಗಡಿ ಕಿರಿಕ್ ಚೀನಾ ಡಬಲ್ ಗೇಮ್ ಮನಸ್ಥಿತಿಯನ್ನ ಬಟಾಬಯಲು ಮಾಡಿದ್ದು, ವಿಶ್ವದ ಮುಂದೆ ಚೀನಾ ಸೇನೆಯ ಮಾನ ಹರಾಜಾಗುವಂತೆ ಮಾಡಿದೆ.
Published On - 7:19 am, Wed, 10 June 20