AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗಡಿಯಲ್ಲಿ ಚೀನಾ ಹೆಲಿಕಾಪ್ಟರ್​ಗಳ ಹಾರಾಟ ಹೆಚ್ಚಳ, 43 ಚೀನಿ ಸೈನಿಕರ ಬಾಡಿ ಶಿಫ್ಟ್!

ದೆಹಲಿ: ಪದೇ ಪದೆ ಗಡಿಯಲ್ಲಿ ಕಿರಿಕ್ ಮಾಡೋ ಚೀನಾಗೆ ನಿನ್ನೆ ಭಾರತೀಯ ಸೈನಿಕರು ಸರಿಯಾಗೇ ಪಾಠ ಕಲಿಸಿದ್ದಾರೆ. ಗಡಿ ತಂಟೆಗೆ ಬಂದ ಹತ್ತಾರು ಚೀನಿ ಸೈನಿಕರ ತಲೆಗಳು ಉರುಳಿವೆ. ಇದನ್ನು ಕಂಡು ಅವಾಕ್ ಆಗಿರುವ ಚೀನಾ ಜೀವ ಬಿಟ್ಟ ತನ್ನ ಸೈನಿಕರ ದೇಹ ರವಾನಿಸೋದಕ್ಕೂ ಪರದಾಡಿದೆ. ಗಡಿಯಲ್ಲಿ ಚೀನಾ ಕೈಗೊಂಡ ಏರ್​ಲಿಫ್ಟ್ ಕಹಾನಿ ಇಲ್ಲಿದೆ. ಭಾರತ-ಚೀನಾ ಗಡಿಯಲ್ಲಿ ಎಲ್ಲವೂ ಸರಿಯಿಲ್ಲ. ಅದರಲ್ಲೂ ಕೆಲ ವಾರದಿಂದ ಪರಿಸ್ಥಿತಿ ತುಂಬಾ ಗಂಭೀರವಾದ ಸ್ವರೂಪ ಪಡೆಯುತ್ತಿದೆ. ಅತ್ತ ಉಗುಳಲೂ ಆಗದೆ, ನುಂಗಲೂ […]

ಗಡಿಯಲ್ಲಿ ಚೀನಾ ಹೆಲಿಕಾಪ್ಟರ್​ಗಳ ಹಾರಾಟ ಹೆಚ್ಚಳ, 43 ಚೀನಿ ಸೈನಿಕರ ಬಾಡಿ ಶಿಫ್ಟ್!
ಆಯೇಷಾ ಬಾನು
|

Updated on:Jun 17, 2020 | 2:33 PM

Share

ದೆಹಲಿ: ಪದೇ ಪದೆ ಗಡಿಯಲ್ಲಿ ಕಿರಿಕ್ ಮಾಡೋ ಚೀನಾಗೆ ನಿನ್ನೆ ಭಾರತೀಯ ಸೈನಿಕರು ಸರಿಯಾಗೇ ಪಾಠ ಕಲಿಸಿದ್ದಾರೆ. ಗಡಿ ತಂಟೆಗೆ ಬಂದ ಹತ್ತಾರು ಚೀನಿ ಸೈನಿಕರ ತಲೆಗಳು ಉರುಳಿವೆ. ಇದನ್ನು ಕಂಡು ಅವಾಕ್ ಆಗಿರುವ ಚೀನಾ ಜೀವ ಬಿಟ್ಟ ತನ್ನ ಸೈನಿಕರ ದೇಹ ರವಾನಿಸೋದಕ್ಕೂ ಪರದಾಡಿದೆ. ಗಡಿಯಲ್ಲಿ ಚೀನಾ ಕೈಗೊಂಡ ಏರ್​ಲಿಫ್ಟ್ ಕಹಾನಿ ಇಲ್ಲಿದೆ.

ಭಾರತ-ಚೀನಾ ಗಡಿಯಲ್ಲಿ ಎಲ್ಲವೂ ಸರಿಯಿಲ್ಲ. ಅದರಲ್ಲೂ ಕೆಲ ವಾರದಿಂದ ಪರಿಸ್ಥಿತಿ ತುಂಬಾ ಗಂಭೀರವಾದ ಸ್ವರೂಪ ಪಡೆಯುತ್ತಿದೆ. ಅತ್ತ ಉಗುಳಲೂ ಆಗದೆ, ನುಂಗಲೂ ಆಗದೆ ಬಿಸಿ ತುಪ್ಪವಾಗಿದ್ದ ಚೀನಾ ಸೇನೆಗೆ ಭಾರತೀಯ ವೀರ ಯೋಧರು ಸರಿಯಾಗೇ ಪಾಠ ಕಲಿಸಿದ್ದಾರೆ. ಭಾರತದ ತಂಟೆಗೆ ಬಂದು, ಕೆಣಕಿದ್ದ ಡ್ರ್ಯಾಗನ್ ಸೇನೆಗೆ ಸರಿಯಾಗಿ ಪೆಟ್ಟು ಬಿದ್ದಿದೆ. ಹೀಗೆ ಹತ್ತಾರು ಸೈನಿಕರನ್ನ ಕಳೆದುಕೊಂಡ ಚೀನಾ ತನ್ನ ಸೈನಿಕರ ದೇಹ ಹೊತ್ತೊಯ್ಯಲು ಪರದಾಡಿದೆ.

ಮೃತಪಟ್ಟವರ ಶವ ಹೊತ್ತೊಯ್ದ ಕಾಪ್ಟರ್​ಗಳು! ಲಡಾಖ್​​ನಲ್ಲಿ ಚೀನಾ-ಭಾರತ ಸೇನೆ ಮಧ್ಯೆ ಘರ್ಷಣೆ ನಡೆದ ಹಿನ್ನೆಲೆ ಗಡಿಯಲ್ಲಿ ಚೀನಾ ಕಾಪ್ಟರ್​ಗಳ ಹಾರಾಟ ಹೆಚ್ಚಳವಾಗಿದೆ. ಹಾಗಂತಾ ಚೀನಾ ಮತ್ತೆ ಭಂಡತನ ಪ್ರದರ್ಶಿಸಿಲ್ಲ. ಬದಲಾಗಿ ಘರ್ಷಣೆಯಲ್ಲಿ ಮೃತಪಟ್ಟ ತನ್ನ ಸೈನಿಕರ ಶವ ಹೊತ್ತೊಯ್ಯಲು ಹೆಲಿಕಾಪ್ಟರ್​ಗಳನ್ನು ಬಳಸಿದೆ. ಗಾಯಾಳು ಸೈನಿಕರನ್ನು ಏರ್​ಲಿಫ್ಟ್ ಮಾಡಿದ ಚೀನಾ ಭಾರತದ ತಂಟೆಗೆ ಬಂದ್ರೆ ತನಗೆ ಉಳಿಗಾಲವಿಲ್ಲ ಅನ್ನೋದನ್ನ ಅರಿತುಕೊಂಡಂತಿದೆ. ಗಾಲ್ವಾನ್ ಕಣಿವೆಯಲ್ಲಿ ಈ ಕಾರ್ಯಾಚರಣೆ ನಡೆದಿದ್ದು, ಸುಮಾರು 43 ಚೀನಿ ಸೈನಿಕರ ದೇಹವನ್ನ ಹೊತ್ತೊಯ್ಯಲಾಗಿದೆ.

ಗಾಯಗೊಂಡ ಚೀನಿ ಸೈನಿಕರ ಚಿಕಿತ್ಸೆಗೂ ಪರದಾಟ! ಹೇಳಿಕೇಳಿ ಲಡಾಕ್ ಕಣಿವೆ ಪ್ರದೇಶ ಇಲ್ಲಿ ಹೆಲಿಕಾಪ್ಟರ್​ಗಳನ್ನ ಬಿಟ್ರೆ ಬೇರೆ ಯಾವುದೇ ವೆಹಿಕಲ್​ಗಳು ಕೂಡ ತೆರಳಲಾರವು. ಹೀಗಾಗಿ ಏರ್​ಲಿಫ್ಟ್ ಮಾಡಿರೋ ಚೀನಾ ಸೇನೆಗೆ, ಗಾಯಗೊಂಡ ಸೈನಿಕರಿಗೆ ಸರಿಯಾದ ಸಮಯಕ್ಕೆ ಚಿಕಿತ್ಸೆ ಕೊಡಿಸೋದಕ್ಕೂ ಹಲವು ಗಂಟೆಗಳೇ ಬೇಕಾಯ್ತು. ಹೀಗಾಗಿ ಚೀನಾ ಸೇನೆಯಲ್ಲಿ ಮೃತಪಟ್ಟವರ ಸಂಖ್ಯೆ ಇನ್ನು ಹೆಚ್ಚಾಗುವ ಸಾಧ್ಯತೆ ಇದೆ. ಇದನ್ನ ಹೊರ ಜಗತ್ತಿಗೆ ಹೇಳಿದ್ರೆ ಎಲ್ಲಿ ತನ್ನ ಮಾನ ಹೋಗುತ್ತೋ ಅಂತಾ ಚೀನಾ, ಯಾವ ವಿಚಾರವನ್ನೂ ಬಿಟ್ಟುಕೊಡ್ತಿಲ್ಲ. ತನ್ನ ಸೈನಿಕರು ಮೃತಪಟ್ಟಿದ್ದರು ಕೂಡ ಅದನ್ನ ಮುಚ್ಚಿಡುತ್ತಿದೆ.

ಒಟ್ನಲ್ಲಿ ಕುತಂತ್ರಿ ಚೀನಾಗೆ ನಿನ್ನೆ ಭಾರತೀಯ ಯೋಧರು ಸರಿಯಾಗಿಯೇ ಬುದ್ಧಿ ಕಲಿಸಿದ್ದಾರೆ. ಆದರೆ ಹತ್ತಾರು ಸೈನಿಕರನ್ನು ಕಳೆದುಕೊಂಡರೂ ಡ್ರ್ಯಾಗನ್ ರಾಷ್ಟ್ರಕ್ಕೆ ಒಳ್ಳೆ ಬುದ್ಧಿ ಬಂದಂತೆ ಕಾಣ್ತಿಲ್ಲ. ಅಲ್ಲಿನ ಸೇನಾಧಿಕಾರಿಗಳು ಇನ್ನೂ ಭಂಡತನ ಬಿಟ್ಟಿಲ್ಲ. ಇದು ಡ್ರ್ಯಾಗನ್ ರಾಷ್ಟ್ರದ ಮಾನ ವಿಶ್ವಮಟ್ಟದಲ್ಲಿ ಹರಾಜಾಗುವಂತೆ ಮಾಡಿದೆ.

Published On - 6:37 am, Wed, 17 June 20