Arunachal Pradesh: ಅರುಣಾಚಲ ಪ್ರದೇಶದ 11 ಸ್ಥಳಗಳ ಹೆಸರು ಬದಲಿಸಿದ ಚೀನಾ

|

Updated on: Apr 04, 2023 | 7:47 AM

ಇತ್ತೀಚಿನ ಬೆಳವಣಿಗೆಯಲ್ಲಿ, ಚೀನಾವು ಭಾರತದ ಈಶಾನ್ಯ ರಾಜ್ಯವಾದ ಅರುಣಾಚಲ ಪ್ರದೇಶದ 11 ಸ್ಥಳಗಳಿಗೆ ಮರುನಾಮಕರಣ ಮಾಡಿದೆ. ಅದನ್ನು ಝಂಗ್ನಾನ್ ಎಂದು ಕರೆದಿದೆ ಮತ್ತು ಇದು ಟಿಬೆಟ್‌ನ ದಕ್ಷಿಣ ಭಾಗ ಎಂದು ಹೇಳಿಕೊಂಡಿದೆ

Arunachal Pradesh: ಅರುಣಾಚಲ ಪ್ರದೇಶದ 11 ಸ್ಥಳಗಳ ಹೆಸರು ಬದಲಿಸಿದ ಚೀನಾ
ಅರುಣಾಚಲ ಪ್ರದೇಶ
Image Credit source: Times Of India
Follow us on

ಇತ್ತೀಚಿನ ಬೆಳವಣಿಗೆಯಲ್ಲಿ, ಚೀನಾವು ಭಾರತದ ಈಶಾನ್ಯ ರಾಜ್ಯವಾದ ಅರುಣಾಚಲ ಪ್ರದೇಶ(Arunachal Pradesh)ದ 11 ಸ್ಥಳಗಳಿಗೆ ಮರುನಾಮಕರಣ ಮಾಡಿದೆ. ಅದನ್ನು ಝಂಗ್ನಾನ್ ಎಂದು ಕರೆದಿದೆ ಮತ್ತು ಇದು ಟಿಬೆಟ್‌ನ ದಕ್ಷಿಣ ಭಾಗ ಎಂದು ಹೇಳಿಕೊಂಡಿದೆ. ಚೀನಾ ಮೂರನೇ ಬಾರಿಗೆ ಅರುಣಾಚಲ ಪ್ರದೇಶದ ಸ್ಥಳಗಳಿಗೆ ಏಕಪಕ್ಷೀಯವಾಗಿ ಹೆಸರು ಬದಲಾಯಿಸಿದೆ ಎಂದು ಚೀನಾದ ನಾಗರಿಕ ವ್ಯವಹಾರಗಳ ಸಚಿವಾಲಯ ಸೋಮವಾರ ಸರ್ಕಾರಿ ಗ್ಲೋಬಲ್ ಟೈಮ್ಸ್‌ಗೆ ಹೇಳಿಕೆಯಲ್ಲಿ ತಿಳಿಸಿದೆ.

ಈ ಹಿಂದೆ, ಬೀಜಿಂಗ್ ಏಪ್ರಿಲ್ 2017 ಮತ್ತು ಡಿಸೆಂಬರ್ 2021 ರಲ್ಲಿ ಅರುಣಾಚಲ ಪ್ರದೇಶದ ಸ್ಥಳಗಳನ್ನು ಮರುನಾಮಕರಣ ಮಾಡುವ ಏಕಪಕ್ಷೀಯ ಘೋಷಣೆಗಳನ್ನು ಮಾಡಿತು. ಅರುಣಾಚಲ ಪ್ರದೇಶವು ಭಾರತದಿಂದ ಬೇರ್ಪಡಿಸಲಾಗದ ಭಾಗವಾಗಿದೆ, ಮತ್ತು ಚೀನಾವು ತನ್ನದೆಂದು ಹೇಳಿಕೊಳ್ಳಲು ಚೀನಾವು ಯಾವುದೇ ಪಾಲನ್ನು ಹೊಂದಿಲ್ಲ ಎಂದು ಭಾರತ ಸಮರ್ಥಿಸಿಕೊಂಡಿದೆ.

LAC (ವಾಸ್ತವ ನಿಯಂತ್ರಣ ರೇಖೆ) ನಲ್ಲಿ ಉದ್ವಿಗ್ನತೆ ಹೆಚ್ಚಾದಾಗ ಭಾರತ ಮತ್ತು ಚೀನಾ ಸೇನೆಯ ಸೈನಿಕರು ಸಂಘರ್ಷದಲ್ಲಿ ತೊಡಗುತ್ತಾರೆ.
11 ಸ್ಥಳಗಳ ಅಧಿಕೃತ ಹೆಸರುಗಳನ್ನು ಸಚಿವಾಲಯವು ಭಾನುವಾರ ಬಿಡುಗಡೆ ಮಾಡಿದೆ, ಇದು ಎರಡು ಭೂ ಪ್ರದೇಶಗಳು, ಎರಡು ವಸತಿ ಪ್ರದೇಶಗಳು, ಐದು ಪರ್ವತ ಶಿಖರಗಳು ಮತ್ತು ಎರಡು ನದಿಗಳನ್ನು ಒಳಗೊಂಡಂತೆ ನಿಖರವಾದ ನಿರ್ದೇಶಾಂಕಗಳನ್ನು ನೀಡಿದೆ. ಇದು ಸ್ಥಳಗಳ ಹೆಸರುಗಳು ಮತ್ತು ಅವುಗಳ ಅಧೀನದ ಆಡಳಿತ ಜಿಲ್ಲೆಗಳ ವರ್ಗವನ್ನು ಸಹ ಪಟ್ಟಿ ಮಾಡಿದೆ.

ಮತ್ತಷ್ಟು ಓದಿ: ಡೋಕ್ಲಾಮ್‌ ವಿವಾದ: ಭಾರತದ ಕಳವಳ ಹೆಚ್ಚಿಸಿದ ಭೂತಾನ್ ಪ್ರಧಾನಿ ಹೇಳಿಕೆ

ಭಾರತವು ಇತ್ತೀಚೆಗೆ ಗಡಿ ರಾಜ್ಯವಾದ ಅರುಣಾಚಲ ಪ್ರದೇಶದಲ್ಲಿ G20 ಸರಣಿ ಕಾರ್ಯಕ್ರಮಗಳ ಭಾಗವಾಗಿ ಮಹತ್ವದ ಸಭೆಯನ್ನು ನಡೆಸಿತ್ತು. ಈ ಸಭೆಯಲ್ಲಿ ಚೀನಾ ಭಾಗವಹಿಸಿರಲಿಲ್ಲ. ವಿವಾದಿತ ಅರುಣಾಚಲ ಪ್ರದೇಶದಲ್ಲಿ ಜಿ20 ಸಭೆ ಆಯೋಜನೆ ಕುರಿತು ಪರೋಕ್ಷ ಅಸಮಾಧಾನ ಹೊಂದಿದ್ದ ಚೀನಾ ಇದೀಗ ಚೀನಾದ ಪ್ರಮಾಣೀಕೃತ ಹೆಸರುಗಳ ಮೂರನೇ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಇದರಲ್ಲಿ ಅರುಣಾಚಲ ಪ್ರದೇಶದ 11 ಸ್ಥಳಗಳ ಹೆಸರನ್ನು ಉಲ್ಲೇಖಿಸಲಾಗಿದೆ. ಈ 11 ಪ್ರದೇಶಗಳಿಗೆ ಚೈನೀಸ್, ಟಿಬೆಟಿಯನ್ ಮತ್ತು ಪಿನ್ಯಿನ್ ಅಕ್ಷರಗಳಲ್ಲಿ ಈ ಹೆಸರುಗಳನ್ನು ನೀಡಲಾಗಿದೆ.

ಸುದ್ದಿಯನ್ನು ಇಂಗ್ಲಿಷ್​ನಲ್ಲಿ ಓದಲು ಇಲ್ಲಿ ಕ್ಲಿಕ್ ಮಾಡಿ

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ