AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಡೋಕ್ಲಾಮ್‌ ವಿವಾದ: ಭಾರತದ ಕಳವಳ ಹೆಚ್ಚಿಸಿದ ಭೂತಾನ್ ಪ್ರಧಾನಿ ಹೇಳಿಕೆ

ಪ್ರಾದೇಶಿಕ ವಿವಾದದ ಪರಿಹಾರವನ್ನು ಕಂಡುಕೊಳ್ಳುವಲ್ಲಿ ಚೀನಾದ ಪಾಲು ಇದೆ ಎಂಬ ಭೂತಾನ್ ಪ್ರಧಾನಿಯ ಹೇಳಿಕೆಯು ಭಾರತಕ್ಕೆ ಕಳವಳವನ್ನುಂಟು ಮಾಡಿದೆ. ಈ ಪ್ರಸ್ಥಭೂಮಿಯು ಸೂಕ್ಷ್ಮ ಸಿಲಿಗುರಿ ಕಾರಿಡಾರ್‌ಗೆ ಸಮೀಪದಲ್ಲಿರುವುದರಿಂದ ಡೋಕ್ಲಾಮ್‌ನಲ್ಲಿ ಚೀನಾ ತನ್ನ ಹೆಜ್ಜೆಗುರುತನ್ನು ವಿಸ್ತರಿಸುವುದನ್ನು ಸಂಪೂರ್ಣವಾಗಿ ವಿರೋಧಿಸುತ್ತದೆ

ಡೋಕ್ಲಾಮ್‌ ವಿವಾದ: ಭಾರತದ ಕಳವಳ ಹೆಚ್ಚಿಸಿದ ಭೂತಾನ್ ಪ್ರಧಾನಿ ಹೇಳಿಕೆ
ಮೋದಿ ಜತೆ ಭೂತಾನ್ ಪಿಎಂ
Follow us
ರಶ್ಮಿ ಕಲ್ಲಕಟ್ಟ
|

Updated on:Mar 28, 2023 | 10:03 PM

ದೆಹಲಿ: ಡೋಕ್ಲಾಮ್‌ನಲ್ಲಿ (Doklam Standoff)ಭಾರತ ಮತ್ತು ಚೀನಾದ ಸೈನಿಕರು ಮುಖಾಮುಖಿಯಾದ ಆರು ವರ್ಷಗಳ ನಂತರ, ಚೀನಾ(China) ಅಕ್ರಮವಾಗಿ ಆಕ್ರಮಿಸಿಕೊಂಡಿದೆ ಎಂದು ಭಾರತ ನಂಬಿರುವ ಎತ್ತರದ ಪ್ರಸ್ಥಭೂಮಿಯ ವಿವಾದವನ್ನು ಪರಿಹರಿಸುವಲ್ಲಿ ಬೀಜಿಂಗ್ ಸಮಾನ ಹಕ್ಕು ಹೊಂದಿದೆ ಎಂದು ಭೂತಾನ್ (Bhutan) ಪ್ರಧಾನಿ ಹೇಳಿದ್ದಾರೆ. ಬೆಲ್ಜಿಯಂನ ಡೈಲಿ ಲಾ ಲಿಬ್ರೆಗೆ ನೀಡಿದ ಸಂದರ್ಶನದಲ್ಲಿ ಭೂತಾನ್ ಪ್ರಧಾನಿ ಲೋಟೆ ಶೆರಿಂಗ್ ಅವರು ಸಮಸ್ಯೆಯ ಪರಿಹಾರ ಕೇವಲ ಭೂತಾನ್‌ಗೆ ಬಿಟ್ಟದ್ದು ಅಲ್ಲ. ನಾವು ಮೂವರಿದ್ದೇವೆ. ದೊಡ್ಡ ಅಥವಾ ಚಿಕ್ಕ ದೇಶ ಎಂಬುದಿಲ್ಲ, ನಾವು ಚರ್ಚೆಗೆ ಸಿದ್ಧವಿದ್ದೇವೆ, ಇನ್ನಿಬ್ಬರು ಸಿದ್ಧರಾದರೆ ಸಾಕು ಎಂದಿದ್ದಾರೆ.

ಪ್ರಾದೇಶಿಕ ವಿವಾದದ ಪರಿಹಾರವನ್ನು ಕಂಡುಕೊಳ್ಳುವಲ್ಲಿ ಚೀನಾಕ್ಕೂ ಪಾಲು ಇದೆ ಎಂಬ ಭೂತಾನ್ ಪ್ರಧಾನಿಯ ಹೇಳಿಕೆಯು ಭಾರತಕ್ಕೆ ಕಳವಳವನ್ನುಂಟು ಮಾಡಿದೆ. ಈ ಪ್ರಸ್ಥಭೂಮಿಯು ಸೂಕ್ಷ್ಮ ಸಿಲಿಗುರಿ ಕಾರಿಡಾರ್‌ಗೆ ಸಮೀಪದಲ್ಲಿರುವುದರಿಂದ ಡೋಕ್ಲಾಮ್‌ನಲ್ಲಿ ಚೀನಾ ತನ್ನ ಹೆಜ್ಜೆಗುರುತನ್ನು ವಿಸ್ತರಿಸುವುದನ್ನು ಸಂಪೂರ್ಣವಾಗಿ ವಿರೋಧಿಸುತ್ತದೆ. ಭಾರತದ ಈಶಾನ್ಯ ರಾಜ್ಯಗಳನ್ನು ದೇಶದ ಉಳಿದ ಭಾಗಗಳಿಂದ ಪ್ರತ್ಯೇಕಿಸುವ ಕಿರಿದಾದ ಭೂಪ್ರದೇಶವಾಗಿದೆ ಇದು.

ಶೆರಿಂಗ್ ಅವರ ಹೇಳಿಕೆಯು ಅವರು 2019 ರಲ್ಲಿ ದಿ ಹಿಂದೂಗೆ ನೀಡಿದ ಹೇಳಿಕೆಗಿಂತ ಸಂಪೂರ್ಣವಾಗಿ ವ್ಯತಿರಿಕ್ತವಾಗಿದೆ, ಮೂರು ದೇಶಗಳ ನಡುವೆ ಅಸ್ತಿತ್ವದಲ್ಲಿರುವ ಟ್ರೈಜಂಕ್ಷನ್ ಪಾಯಿಂಟ್ ಬಳಿ ಯಾವುದೇ ಕಡೆ ಏಕಪಕ್ಷೀಯವಾಗಿ ಏನನ್ನೂ ಮಾಡಬಾರದು ಎಂದು ಅವರು ಹೇಳಿದ್ದರು. ದಶಕಗಳಿಂದ, ಆ ಟ್ರೈಜಂಕ್ಷನ್ ಪಾಯಿಂಟ್ ಅಂತರರಾಷ್ಟ್ರೀಯ ನಕ್ಷೆಗಳಲ್ಲಿದ್ದು ಬಟಾಂಗ್ ಲಾ ಎಂಬ ಸ್ಥಳದಲ್ಲಿದೆ. ಚೀನಾದ ಚುಂಬಿ ಕಣಿವೆಯು ಬಟಾಂಗ್ ಲಾ ಉತ್ತರಕ್ಕೆ ಇದೆ, ಭೂತಾನ್ ದಕ್ಷಿಣಕ ಮತ್ತು ಪೂರ್ವಕ್ಕೆ ಮತ್ತು ಭಾರತ (ಸಿಕ್ಕಿಂ), ಪಶ್ಚಿಮಕ್ಕೆ ಇದೆ.

ಆ ಟ್ರೈ-ಜಂಕ್ಷನ್ ಅನ್ನು ಬಟಾಂಗ್ ಲಾದಿಂದ ಸುಮಾರು 7 ಕಿಮೀ ದಕ್ಷಿಣಕ್ಕೆ ಮೌಂಟ್ ಗಿಪ್ಮೋಚಿ ಎಂಬ ಶಿಖರಕ್ಕೆ ಸ್ಥಳಾಂತರಿಸಬೇಕೆಂದು ಚೀನಾ ಬಯಸುತ್ತದೆ. ಅದು ಸಂಭವಿಸಿದಲ್ಲಿ, ಇಡೀ ಡೋಕ್ಲಾಮ್ ಪ್ರಸ್ಥಭೂಮಿ ಕಾನೂನುಬದ್ಧವಾಗಿ ಚೀನಾದ ಭಾಗವಾಗಲಿದೆ. ಈ ನಡೆಯನ್ನು ಎಂದಿಗೂ ಭಾರತ ಒಪ್ಪುವುದಿಲ್ಲ.

ಇದನ್ನೂ ಓದಿ: Saudi Arabia Bus Crash: ಸೌದಿ ಅರೇಬಿಯಾದಲ್ಲಿ ಹಜ್ ಯಾತ್ರಿಕರಿದ್ದ ಬಸ್ ಅಪಘಾತ, 20 ಮಂದಿ ಸಾವು, 29ಕ್ಕೂ ಅಧಿಕ ಜನರಿಗೆ ಗಾಯ

ಟ್ರೈ -ಜಂಕ್ಷನ್ ದಕ್ಷಿಣದ ಸ್ಥಳವನ್ನು ಬದಲಾಯಿಸಲು ಚೀನಾದ ಯಾವುದೇ ಪ್ರಯತ್ನವು ಭಾರತೀಯ ಸಶಸ್ತ್ರ ಪಡೆಗಳಿಗೆ ಸ್ವೀಕಾರಾರ್ಹವಲ್ಲ. ಪಶ್ಚಿಮ ಭೂತಾನ್‌ನ ಕೆಲವು ಭಾಗಗಳಲ್ಲಿ ನಿರ್ಮಾಣ ಚಟುವಟಿಕೆಯಂತಹ ಯಥಾಸ್ಥಿತಿಗೆ ಏಕಪಕ್ಷೀಯ ಅಡ್ಡಿಪಡಿಸುವ ಚೀನಾದ ಪ್ರಯತ್ನಗಳು ಒಂದು ಪ್ರಮುಖ ಭದ್ರತಾ ಕಾಳಜಿಯಾಗಿದೆ ಎಂದು 2017 ರಲ್ಲಿ ಡೋಕ್ಲಾಮ್ ಬಿಕ್ಕಟ್ಟು ಭುಗಿಲೆದ್ದಾಗ ಪೂರ್ವ ಸೇನಾ ಕಮಾಂಡರ್ ಆಗಿದ್ದ ಲೆಫ್ಟಿನೆಂಟ್ ಜನರಲ್ ಪ್ರವೀಣ್ ಬಕ್ಷಿ (ನಿವೃತ್ತ) ಹೇಳಿದ್ದರು.

ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:01 pm, Tue, 28 March 23

ತಮನ್ನಾ ವಿವಾದದಲ್ಲಿ ಯಶ್ ಹೆಸರು ಹೇಳಿದ ನಟಿ ಕಾರುಣ್ಯ ರಾಮ್
ತಮನ್ನಾ ವಿವಾದದಲ್ಲಿ ಯಶ್ ಹೆಸರು ಹೇಳಿದ ನಟಿ ಕಾರುಣ್ಯ ರಾಮ್
ಇ-ಖಾತಾ ಬಗ್ಗೆ ಮಹತ್ವದ ಮಾಹಿತಿ ನೀಡಿದ ಡಿಕೆ ಶಿವಕುಮಾರ್
ಇ-ಖಾತಾ ಬಗ್ಗೆ ಮಹತ್ವದ ಮಾಹಿತಿ ನೀಡಿದ ಡಿಕೆ ಶಿವಕುಮಾರ್
ಬೆಂಗಳೂರಿನಲ್ಲಿ ಫುಟ್ ಪಾತ್ ಅಂಗಡಿ ತೆರವುಗೊಳಿಸಲು ನಿರ್ಧಾರ: ಡಿಕೆಶಿ
ಬೆಂಗಳೂರಿನಲ್ಲಿ ಫುಟ್ ಪಾತ್ ಅಂಗಡಿ ತೆರವುಗೊಳಿಸಲು ನಿರ್ಧಾರ: ಡಿಕೆಶಿ
​ ಕ್ರಿಪ್ಟೋ ಕರೆನ್ಸಿ ಹೆಸರಿನಲ್ಲಿ ಸಾವಿರಾರು ಜನರಿಗೆ ವಂಚನೆ
​ ಕ್ರಿಪ್ಟೋ ಕರೆನ್ಸಿ ಹೆಸರಿನಲ್ಲಿ ಸಾವಿರಾರು ಜನರಿಗೆ ವಂಚನೆ
ಝಾನ್ಸಿಯಲ್ಲಿ ಬಿರುಗಾಳಿಯ ಹೊಡೆತಕ್ಕೆ 70ಕ್ಕೂ ಹೆಚ್ಚು ಗಿಳಿಗಳು ಬಲಿ
ಝಾನ್ಸಿಯಲ್ಲಿ ಬಿರುಗಾಳಿಯ ಹೊಡೆತಕ್ಕೆ 70ಕ್ಕೂ ಹೆಚ್ಚು ಗಿಳಿಗಳು ಬಲಿ
ಹತ್ತು ಸಾವಿರ ಜನ ಕೂತು ವೀಕ್ಷಿಸಲು ಗ್ಯಾಲರಿಗಳ ವ್ಯವಸ್ಥೆ: ಶಿವಕುಮಾರ್
ಹತ್ತು ಸಾವಿರ ಜನ ಕೂತು ವೀಕ್ಷಿಸಲು ಗ್ಯಾಲರಿಗಳ ವ್ಯವಸ್ಥೆ: ಶಿವಕುಮಾರ್
ಎಲ್ಲ ಪಕ್ಷಗಳ ಮುಖ್ಯಮಂತ್ರಿಗಳನ್ನು ಭೇಟಿಯಾದ ಪ್ರಧಾನಿ ಮೋದಿ
ಎಲ್ಲ ಪಕ್ಷಗಳ ಮುಖ್ಯಮಂತ್ರಿಗಳನ್ನು ಭೇಟಿಯಾದ ಪ್ರಧಾನಿ ಮೋದಿ
ಬೆಂಗಳೂರಿನಲ್ಲಿ ಸುರಂಗ ಮಾರ್ಗದ ಬಗ್ಗೆ ಮಹತ್ವದ ಅಪ್ಡೇಟ್​ ನೀಡಿದ ಡಿಕೆಶಿ
ಬೆಂಗಳೂರಿನಲ್ಲಿ ಸುರಂಗ ಮಾರ್ಗದ ಬಗ್ಗೆ ಮಹತ್ವದ ಅಪ್ಡೇಟ್​ ನೀಡಿದ ಡಿಕೆಶಿ
ಬಸವಣ್ಣನವರನ್ನು ಟೀಕಿಸುವ ಬಸನಗೌಡ ಯತ್ನಾಳ್ ಒಬ್ಬ ಅರೆಹುಚ್ಚ: ರೇಣುಕಾಚಾರ್ಯ
ಬಸವಣ್ಣನವರನ್ನು ಟೀಕಿಸುವ ಬಸನಗೌಡ ಯತ್ನಾಳ್ ಒಬ್ಬ ಅರೆಹುಚ್ಚ: ರೇಣುಕಾಚಾರ್ಯ
ಖರ್ಗೆ ಹಠಾವ್ ಬಿಜೆಪಿ ಬಚಾವ್ ಅನ್ನೋದು ವಿಪಕ್ಷ ನಾಯಕರ ಅಜೆಂಡಾ ಆಗಿದೆ: ಖರ್ಗೆ
ಖರ್ಗೆ ಹಠಾವ್ ಬಿಜೆಪಿ ಬಚಾವ್ ಅನ್ನೋದು ವಿಪಕ್ಷ ನಾಯಕರ ಅಜೆಂಡಾ ಆಗಿದೆ: ಖರ್ಗೆ