ಭೋಪಾಲ್​ ಸೆಂಟ್ರಲ್ ಜೈಲಿನ ಉಗ್ರರಿರುವ ಹೈ ಸೆಕ್ಯುರಿಟಿ ಸೆಲ್ ಬಳಿ ಚೀನಾ ಡ್ರೋನ್ ಪತ್ತೆ

|

Updated on: Jan 09, 2025 | 10:33 AM

ಭೋಪಾಲ್​ನ ಕೇಂದ್ರ ಕಾರಾಗೃಹದ 70 ಉಗ್ರರಿರುವ ಹೈಸೆಕ್ಯುರಿಟಿ ಸೆಲ್ ಬಳಿ ಚೀನಾ ಡ್ರೋನ್ ಪತ್ತೆಯಾಗಿದೆ. ಘಟನೆಯಿಂದ ಗಾಬರಿಗೊಂಡ ಗಾರ್ಡ್ ಹಿರಿಯ ಮತ್ತು ಇತರ ಜೈಲು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು. ಬಳಿಕ ಡ್ರೋನ್ ಅನ್ನು ಪರೀಕ್ಷೆಗಾಗಿ ಜೈಲು ಅಧೀಕ್ಷಕರ ಕಚೇರಿಗೆ ತರಲಾಯಿತು.ಭೋಪಾಲ್ ಸೆಂಟ್ರಲ್ ಜೈಲು ದೇಶದ ಅತ್ಯಂತ ಸೂಕ್ಷ್ಮ ಜೈಲುಗಳಲ್ಲಿ ಒಂದಾಗಿದೆ.

ಭೋಪಾಲ್​ ಸೆಂಟ್ರಲ್ ಜೈಲಿನ ಉಗ್ರರಿರುವ ಹೈ ಸೆಕ್ಯುರಿಟಿ ಸೆಲ್ ಬಳಿ ಚೀನಾ ಡ್ರೋನ್ ಪತ್ತೆ
ಡ್ರೋನ್
Follow us on

ಭೋಪಾಲ್​ನ ಕೇಂದ್ರ ಕಾರಾಗೃಹದ ಹೈ ಸೆಕ್ಯುರಿಟಿ ಸೆಲ್ ಬಳಿ ಅನುಮಾನಾಸ್ಪದ ಡ್ರೋನ್ ಪತ್ತೆಯಾಗಿದೆ. ಚೀನಾ ನಿರ್ಮಿತ ಡ್ರೋನ್ ಭದ್ರತಾ ಸೆಲ್‌ಗಳ ಬಳಿ ಬಿದ್ದಿರುವುದು ಕಂಡುಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಗಸ್ತು ಸಿಬ್ಬಂದಿಯೊಬ್ಬರು ಡ್ರೋನ್ ಅನ್ನು ಹೆಚ್ಚಿನ ಅಪಾಯದ ಸೆಲ್‌ಗಳ ಹೊರಗೆ ನೆಲದ ಮೇಲೆ ಬಿದ್ದಿರುವುದನ್ನು ಪತ್ತೆ ಮಾಡಿದ್ದಾರೆ.

ಆ್ಯಂಡಾ ಸೆಲ್ ಎಂದೂ ಕರೆಯುತ್ತಾರೆ, ಇದು ಭಯಾನಕ ಗ್ಯಾಂಗ್​ಸ್ಟರ್ ಮತ್ತು ಭಯೋತ್ಪಾದಕರನ್ನು ಹೊಂದಿರುವ ಸೆಲ್ ಆಗಿದೆ.
ಘಟನೆಯಿಂದ ಗಾಬರಿಗೊಂಡ ಗಾರ್ಡ್ ಹಿರಿಯ ಮತ್ತು ಇತರ ಜೈಲು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು. ಬಳಿಕ ಡ್ರೋನ್ ಅನ್ನು ಪರೀಕ್ಷೆಗಾಗಿ ಜೈಲು ಅಧೀಕ್ಷಕರ ಕಚೇರಿಗೆ ತರಲಾಯಿತು.

ಆರಂಭಿಕ ತನಿಖೆಯಲ್ಲಿ ಡ್ರೋನ್ ಎರಡು ಲೆನ್ಸ್‌ಗಳನ್ನು ಹೊಂದಿರುವ ಹಗುರವಾದ ಚೈನೀಸ್ ಮಾಡೆಲ್ ಎಂದು ತಿಳಿದುಬಂದಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಪ್ರಸ್ತುತ, ಭೋಪಾಲ್‌ನ ತಾಂತ್ರಿಕ ತಜ್ಞರು ಅದರ ಮೂಲವನ್ನು ಪತ್ತೆಹಚ್ಚಲು ಡ್ರೋನ್ ಅನ್ನು ವಿಶ್ಲೇಷಿಸುತ್ತಿದ್ದಾರೆ.

ಮತ್ತಷ್ಟು ಓದಿ: ರಷ್ಯಾದಲ್ಲಿ 9/11 ಮಾದರಿಯ ದಾಳಿ, ಡ್ರೋನ್​ಗಳ ಮೂಲಕ ರಷ್ಯಾದ ಬೃಹತ್ ಕಟ್ಟಡಗಳನ್ನು ಉರುಳಿಸಿದ ಉಕ್ರೇನ್​

ಭೋಪಾಲ್ ಸೆಂಟ್ರಲ್ ಜೈಲು ದೇಶದ ಅತ್ಯಂತ ಸೂಕ್ಷ್ಮ ಜೈಲುಗಳಲ್ಲಿ ಒಂದಾಗಿದೆ. 70 ಉಗ್ರರನ್ನು ಇಲ್ಲಿ ಇರಿಸಲಾಗಿದೆ. SIMI, Hizb ut-Tahrir (HUT), PFI, ISIS ಮತ್ತು ಜಮಾತ್-ಉಲ್-ಮುಜಾಹಿದೀನ್ ಬಾಂಗ್ಲಾದೇಶ (JMB) ನಂತಹ ಸಂಘಟನೆಗಳ 70 ಭಯೋತ್ಪಾದಕರನ್ನು ಜೈಲಿನ ಹೈ-ಸೆಕ್ಯುರಿಟಿ ಸೆಲ್‌ಗಳಲ್ಲಿ ಇರಿಸಲಾಗಿದೆ.

 

ರಾಷ್ಟ್ರೀಯ  ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ