ಸಾಂಘ್ಲಿಯಲ್ಲಿ ಪ್ರವಾಹ ಪೀಡಿತ (Flood) ಪ್ರದೇಶಗಳ ವೀಕ್ಷಣೆಗೆ ತೆರಳುತ್ತಿದ್ದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ (Uddhav Thackeray) ಬೆಂಗಾವಲು ವಾಹನದಲ್ಲಿದ್ದ ಪೊಲೀಸರು ಮತ್ತು ಬಿಜೆಪಿ ಕಾರ್ಯಕರ್ತರ ಮಧ್ಯೆ ಸಂಘರ್ಷ ಏರ್ಪಟ್ಟಿತ್ತು. ಉದ್ಧವ್ ಠಾಕ್ರೆಯವರಿಗೆ ಏನನ್ನೋ ಹೇಳುವ ಸಲುವಾಗಿ ಬಿಜೆಪಿ ಕಾರ್ಯಕರ್ತರು(BJP Workers), ಹರ್ಬತ್ ರಸ್ತೆ ಬಳಿ ಮುಖ್ಯಮಂತ್ರಿ ಬೆಂಗಾವಲು ವಾಹನವನ್ನು ತಡೆದರು. ಈ ವೇಳೆ ಪೊಲೀಸರು ಕಾರ್ಯಕರ್ತರನ್ನು ನಿಯಂತ್ರಿಸಲು ಪ್ರಯತ್ನಿಸಿದಾಗ ಸಂಘರ್ಷ ಏರ್ಪಟ್ಟಿದೆ. ಬಳಿಕ ಪೊಲೀಸರು ಮುಖ್ಯಮಂತ್ರಿ ಮತ್ತು ಉಳಿದ ಬೆಂಗಾವಲು ವಾಹನಗಳಿಗೆ ಮುಂದೆ ಹೋಗಲು ಅನುವು ಮಾಡಿಕೊಟ್ಟಿದ್ದಾರೆ.
ಪ್ರವಾಹ ಪೀಡಿತ ಪ್ರದೇಶ ವೀಕ್ಷಣೆ
ಇಂದು ಸಿಎಂ ಉದ್ಧವ್ ಠಾಕ್ರೆ ಸಾಂಘ್ಲಿ ಜಿಲ್ಲೆಯ ಪ್ರವಾಹ ಪೀಡಿತ ಪ್ರದೇಶಗಳಾದ ಭಿಲ್ವಾಡಿ, ಕಸ್ಬೆ-ದಿಗ್ರಾಜ್, ಅಂಕಾಲ್ಖೋಪ್ ಮತ್ತಿತರ ಕಡೆ ಪರಿಸ್ಥಿತಿ ವೀಕ್ಷಣೆ ಮಾಡಿದ್ದಾರೆ. ಹಾಗೇ, ಪ್ರವಾಹ ನಿರ್ವಹಣೆ, ಜನರ ಸುರಕ್ಷತೆಗಾಗಿ ಅಲ್ಲಿನ ಆಡಳಿತಗಳು ತೆಗೆದುಕೊಂಡ ಕ್ರಮವನ್ನೂ ಪರಿಶೀಲನೆ ಮಾಡಿದ್ದಾರೆ.
#WATCH | Maharashtra: A clash breaks out between Police & BJP workers in Sangli. Traders & BJP workers tried to stop CM Thackeray’s convoy at Harbat Road to make a statement to him following which the clash took place.
The CM is visiting the flood-affected areas of Sangli today. pic.twitter.com/nHzZmxtd0R
— ANI (@ANI) August 2, 2021
ಸಾಂಘ್ಲಿಗೆ ತೆರಳಿದ ಉಪಮುಖ್ಯಮಂತ್ರಿ !
ಇಂದು ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಕೂಡ ಸಾಂಘ್ಲಿ ಜಿಲ್ಲೆಗೆ ಭೇಟಿ ಕೊಟ್ಟು, ಅಲ್ಲಿ ಮಳೆ, ಪ್ರವಾಹದಿಂದ ಉಂಟಾದ ಹಾನಿಯನ್ನು ಪರಿಶೀಲನೆ ಮಾಡಿದ್ದಾರೆ. ಅಷ್ಟೇ ಅಲ್ಲ, ರಕ್ಷಣಾ ಬೋಟ್ನಲ್ಲಿ ತೆರಳಿ ಪ್ರವಾಹದಿಂದ ಹಾನಿಗೊಳಗಾದ ಪ್ರದೇಶಗಳನ್ನು ವೀಕ್ಷಿಸಿದ್ದಾರೆ. ಹಾಗೇ, ಸಂತ್ರಸ್ತರ ಬಳಿ ಮಾತುಕತೆ ನಡೆಸಿ, ಸಮಾಧಾನ ಹೇಳಿದ್ದಾರೆ.
ಚಿಕ್ಕಮಗಳೂರು: ಕೊರೊನಾ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆ; ಜಿಲ್ಲೆಗೆ ಪ್ರವಾಸಿಗರು ಬರದಂತೆ ಮನವಿ
Published On - 6:35 pm, Mon, 2 August 21