ರೈತರು ಇಲ್ಲದಿದ್ದರೆ ಆಹಾರವೂ ಇಲ್ಲ: ರೈತರ ಪ್ರತಿಭಟನೆಗೆ ಹವಾಮಾನ ಹೋರಾಟಗಾರ್ತಿ ಲಿಸಿಪ್ರಿಯಾ ಕಾಂಗುಜಾಮ್ ಬೆಂಬಲ

18 ದಿನಗಳಿಂದ ದೆಹಲಿ ಗಡಿಭಾಗದಲ್ಲಿ ಪ್ರತಿಭಟನೆ ಮಾಡುತ್ತಿರುವ ರೈತರಿಗೆ 9ರ ಹರೆಯದ ಹವಾಮಾನ ಹೋರಾಟಗಾರ್ತಿ ಮಣಿಪುರದ ಲಿಸಿಪ್ರಿಯಾ ಕಾಂಗುಜಾಮ್ ಬೆಂಬಲ ಸೂಚಿಸಿದ್ದಾರೆ.

ರೈತರು ಇಲ್ಲದಿದ್ದರೆ ಆಹಾರವೂ ಇಲ್ಲ: ರೈತರ ಪ್ರತಿಭಟನೆಗೆ ಹವಾಮಾನ ಹೋರಾಟಗಾರ್ತಿ ಲಿಸಿಪ್ರಿಯಾ ಕಾಂಗುಜಾಮ್ ಬೆಂಬಲ
ಲಿಸಿಪ್ರಿಯಾ ಕಾಂಗುಜಾಮ್
Updated By: guruganesh bhat

Updated on: Dec 14, 2020 | 11:22 AM

ನವದೆಹಲಿ: ಕೇಂದ್ರದ ಕೃಷಿ ಕಾನೂನು ವಿರುದ್ಧ ಕಳೆದ 18 ದಿನಗಳಿಂದ ದೆಹಲಿ ಗಡಿಭಾಗದಲ್ಲಿ ಪ್ರತಿಭಟನೆ ಮಾಡುತ್ತಿರುವ ರೈತರಿಗೆ 9ರ ಹರೆಯದ ಹವಾಮಾನ ಹೋರಾಟಗಾರ್ತಿ ಮಣಿಪುರದ ಲಿಸಿಪ್ರಿಯಾ ಕಾಂಗುಜಾಮ್ ಬೆಂಬಲ ಸೂಚಿಸಿದ್ದಾರೆ.

ವಿಶ್ವದ ಎಲ್ಲ ಹವಾಮಾನ ಹೋರಾಟಗಾರರು ನಿಮ್ಮೊಂದಿಗೆ ಇದ್ದಾರೆ ಎಂದು ಲಿಸಿಪ್ರಿಯಾ ರೈತರ ಹೋರಾಟಕ್ಕೆ ದನಿಗೂಡಿದ್ದಾರೆ. ಸಿಂಘು ಗಡಿಭಾಗದಲ್ಲಿ ಪ್ರತಿಭಟನಾನಿರತ ರೈತರೊಂದಿಗಿರುವ ಫೋಟೊ ಮತ್ತು ವಿಡಿಯೊ ಟ್ವೀಟಿಸಿದ ಲಿಸಿಪ್ರಿಯಾ, ನನ್ನ ದನಿ ಇಡೀ ಜಗತ್ತಿಗೆ ತಲುಪುತ್ತದೆ ಎಂದು ನಾನು ಭಾವಿಸುತ್ತೇನೆ. ರೈತರು ಇಲ್ಲದೇ ಇದ್ದರೆ ಆಹಾರವೂ ಇಲ್ಲ. ನ್ಯಾಯವೂ ಇಲ್ಲ, ವಿಶ್ರಾಂತಿಯೂ ಇಲ್ಲ ಎಂದಿದ್ದಾರೆ.

ರೈತರ ಪ್ರತಿಭಟನೆಯಲ್ಲಿ ಭಾಗಿಯಾಗಿರುವ ಅಜ್ಜಂದಿರೊಂದಿಗೆ, ಅಪ್ಪ, ಸಹೋದರರ ಜತೆ ಬಂದಿರುವ ಮಕ್ಕಳನ್ನು ನಾನು ಭೇಟಿ ಮಾಡಿದ್ದೇನೆ. ಪ್ರತಿಭಟನೆ ನಡೆಸುತ್ತಿರುವ ರೈತರು ಕಟ್ಟಿಗೆ ಉರಿಸುವುದನ್ನು ನಿಲ್ಲಿಸಬೇಕು. ಇದು ವಾಯುಮಾಲಿನ್ಯವನ್ನು ಹೆಚ್ಚಿಸುತ್ತದೆ . ನಮ್ಮ ರೈತರು ಹಮಾಮಾನ ಬದಲಾವಣೆಯ ಸಂತ್ರಸ್ತರು. ನೆರೆ, ಬರ ಮತ್ತು ಚಂಡಮಾರುತ, ಕೀಟಗಳ ದಾಳಿಯಿಂದ ಬೆಳೆ ಹಾಳಾಗುತ್ತಿದೆ ಎಂದಿದ್ದಾರೆ ಲಿಸಿಪ್ರಿಯಾ.

ಪ್ರತಿವರ್ಷ ಸಾವಿರಾರು ರೈತರು ಸಾವಿಗೀಡಾಗುತ್ತಿದ್ದಾರೆ. ನಮ್ಮ ನಾಯಕರು ರೈತರ ದನಿಯನ್ನು ಆಲಿಸಬೇಕು. ನಮ್ಮ ರೈತರಿಗೆ ಆದಷ್ಟು ಬೇಗ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

Delhi Chalo | ರೈತರ ಪ್ರತಿಭಟನೆಗೆ ಪಂಜಾಬ್, ಹರ್ಯಾಣದ ಗೃಹಿಣಿಯರ ಬೆಂಬಲ

 

Published On - 4:53 pm, Sun, 13 December 20