ಅಮಿತ್ ಶಾ ಮನೆ ಎದುರು ಪ್ರತಿಭಟನೆಗೆ ಮುಂದಾದ ಆಪ್ ನಾಯಕರು ಪೊಲೀಸರ ವಶಕ್ಕೆ
ದೆಹಲಿ ನಗರಾಡಳಿತ ಸಂಸ್ಥೆಯಲ್ಲಿ 2,457 ಕೋಟಿ ರೂಪಾಯಿ ಅವ್ಯವಹಾರ ನಡೆದಿದೆ ಎಂಬುದು ಆಪ್ ಆರೋಪ. ಈ ಪ್ರಕರಣದಲ್ಲಿ ಸಿಬಿಐ ತನಿಕೆ ನಡೆಯಬೇಕು ಎಂದು ಒತ್ತಾಯಿಸಲು ದೊಡ್ಡಮಟ್ಟದಲ್ಲಿ ಪ್ರತಿಭಟನೆ ನಡೆಸಲು ಆಪ್ ನಿರ್ಧರಿಸಿತ್ತು.

ನವದೆಹಲಿ: ಬಿಜೆಪಿ ನಿಯಂತ್ರಣದಲ್ಲಿರುವ ದೆಹಲಿ ನಗರಾಡಳಿತ ಸಂಸ್ಥೆಯಲ್ಲಿ ದೊಡ್ಡ ಮಟ್ಟದಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿ ಆಪ್ ನಾಯಕರು ಇಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಲೆಫ್ಟಿನಂಟ್ ಗವರ್ನರ್ ಅನಿಲ್ ಬಾಲಾಜಿ ನಿವಾಸದ ಎದುರು ಪ್ರತಿಭಟನೆಗೆ ಮುಂದಾಗಿದ್ದರು. ಈ ವೇಳೆ ರಾಘವ್ ಚಡ್ಡಾ, ಆತಿಶಿ ಸೇರಿ ಹಲವಾರು ಆಪ್ ನಾಯಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ದೆಹಲಿ ನಗರಾಡಳಿತ ಸಂಸ್ಥೆಯಲ್ಲಿ ₹2,457 ಕೋಟಿ ಅವ್ಯವಹಾರ ನಡೆದಿದೆ ಎಂಬುದು ಆಪ್ ಆರೋಪ. ಈ ಪ್ರಕರಣದಲ್ಲಿ ಸಿಬಿಐ ತನಿಖೆ ನಡೆಯಬೇಕು ಎಂದು ಒತ್ತಾಯಿಸಿ ಅಮಿತ್ ಶಾ ಹಾಗೂ ಅನಿಲ್ ಬಾಲಾಜಿ ಮನೆ ಎದುರು ಭಾರೀ ಪ್ರತಿಭಟನೆ ನಡೆಸಲು ಆಪ್ ನಿರ್ಧರಿಸಿತ್ತು. ಇದಕ್ಕೆ ಪೊಲೀಸರ ಬಳಿ ಒಪ್ಪಿಗೆ ಕೇಳಿದಾಗ, ಕೊರೊನಾ ನೆಪ ಹೇಳಿ ಅವರು ಅನುಮತಿ ನಿರಾಕರಿಸಿದ್ದರು. ಅಲ್ಲದೆ, ಅಮಿತ್ ಶಾ ಮನೆ ಎದುರು ಪ್ರತಿಭಟನೆ ಮಾಡಲು ಅವಕಾಶ ಇಲ್ಲ ಎಂದು ಹೇಳಿದ್ದರು. ಆದಾಗ್ಯೂ ಆಪ್ ನಾಯಕರು ಇಂದು ಪ್ರತಿಭಟನೆಗೆ ಮುಂದಾದಾಗ ಪೊಲೀಸರು ಅವರನ್ನು ವಶಕ್ಕೆ ಪಡೆದಿದ್ದಾರೆ.
AAP Leader @AtishiAAP manhandled by Delhi Police for peaceful protest outside LG’s residence.
AAP demands investigation in the massive corruption of ₹2500 crore by BJP ruled MCDpic.twitter.com/DbrGZnwDGo
— AAP (@AamAadmiParty) December 13, 2020
ದೆಹಲಿಯಲ್ಲಿ ಆಡಳಿತದಲ್ಲಿರುವ ಆಪ್ ಪಕ್ಷ ನಿರಂತರವಾಗಿ ಬಿಜೆಪಿ ಮೇಲೆ ಆರೋಪ ಮಾಡುತ್ತಲೇ ಬರುತ್ತಿದೆ. ಆಪ್ ನಾಯಕ ಹಾಗೂ ದೆಹಲಿ ಉಪಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಮನೆಯ ಮೇಲೆ ಇತ್ತೀಚೆಗೆ ದುಷ್ಕರ್ಮಿಗಳು ದಾಳಿ ನಡೆಸಿದ್ದರು. ಇದರ ಹಿಂದೆ ಬಿಜೆಪಿ ಕೈವಾಡವಿದೆ ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಆರೋಪಿಸಿದ್ದರು. ಜೊತೆಗೆ ಇದಕ್ಕೆ ದೆಹಲಿ ಪೊಲೀಸರ ಕುಮ್ಮಕ್ಕು ಕೂಡ ಇದೆ ಎನ್ನುವ ಶಂಕೆ ವ್ಯಕ್ತಪಡಿಸಿದ್ದರು. ಇದಾದ ಬೆನ್ನಲ್ಲೇ ಈಗ ಮತ್ತೊಂದು ಘಟನೆ ನಡೆದಿದೆ.
ದೆಹಲಿ ಉಪಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಮನೆ ಮೇಲೆ ದಾಳಿ; ಬಿಜೆಪಿ ಕೈವಾಡ ಎಂದ ಆಪ್!