ದೆಹಲಿ: ಕರ್ನಾಟಕದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ ಮಾಡಿದ ಬಳಿಕ ಬಸವರಾಜ ಬೊಮ್ಮಾಯಿ ಮೊದಲ ಸಲ ದೆಹಲಿ ಭೇಟಿ ನೀಡಿದ್ದಾರೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರನ್ನು ಭೇಟಿ ಮಾಡಿದ್ದಾರೆ. ಸಿಎಂ ಬೊಮ್ಮಾಯಿ ಭೇಟಿಯ ಬಳಿಕ ಪ್ರಧಾನಿ ಮೋದಿ ಟ್ವೀಟ್ ಮೂಲಕ ಅಭಿನಂದನೆ ತಿಳಿಸಿದ್ದಾರೆ.
ಕರ್ನಾಟಕ ಮುನ್ನಡೆಸುವುದಕ್ಕಾಗಿ ಅಭಿನಂದನೆ ಸಲ್ಲಿಸುತ್ತೇನೆ. ರಾಜ್ಯದ ಅಭಿವೃದ್ಧಿಗೆ ಸಂಪೂರ್ಣ ಸಹಕಾರ ನೀಡುವ ಭರವಸೆ ನೀಡಿದ್ದೇನೆ ಎಂದು ಬಸವರಾಜ ಬೊಮ್ಮಾಯಿ ಭೇಟಿಯ ಬಗ್ಗೆ ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ. ಕರ್ನಾಟಕದ ಅಭಿವೃದ್ಧಿಯ ಹೊಸಪಯಣಕ್ಕೆ ಶುಭಾಶಯ ಕೋರಿದ್ದೇನೆ. ಕರ್ನಾಟಕಕ್ಕೆ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದ್ದೇನೆ ಎಂದು ಮೋದಿ ತಿಳಿಸಿದ್ದಾರೆ.
ದೆಹಲಿಯ ಲೋಕಕಲ್ಯಾಣ ಮಾರ್ಗದಲ್ಲಿರುವ ಪ್ರಧಾನಿ ನಿವಾಸದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ನರೇಂದ್ರ ಮೋದಿ ಭೇಟಿಯಾಗಿದ್ದರು. ಪ್ರಧಾನಿ ನಿವಾಸದಲ್ಲಿ ಭೇಟಿಯಾಗಿ ಸಿಎಂ ಬೊಮ್ಮಾಯಿ ಧನ್ಯವಾದ ತಿಳಿಸಿದ್ದರು. ಪ್ರಧಾನಿ ಭೇಟಿ ಬಳಿಕ ಸಚಿವ ಜೋಶಿ ನಿವಾಸಕ್ಕೆ ಬೊಮ್ಮಾಯಿ ಆಗಮಿಸಿದ್ದರು. ಅಕ್ಬರ್ ರಸ್ತೆಯಲ್ಲಿರುವ ಸಚಿವ ಪ್ರಹ್ಲಾದ್ ಜೋಶಿ ನಿವಾಸಕ್ಕೆ ಬೊಮ್ಮಾಯಿ ತೆರಳಿದ್ದರು.
Met CM of Karnataka Shri @BSBommai ji today. Conveyed best wishes as he begins a new journey for Karnataka’s progress. Assured full support for the development of Karnataka. pic.twitter.com/C0pgJERPdx
— Narendra Modi (@narendramodi) July 30, 2021
ಇದೇ ವೇಳೆ, ಸಿಎಂ ಬಸವರಾಜ ಬೊಮ್ಮಾಯಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಭೇಟಿಯಾಗಿದ್ದಾರೆ. ದೆಹಲಿಯ ಜೆ.ಪಿ.ನಡ್ಡಾ ನಿವಾಸದಲ್ಲಿ ಅವರನ್ನು ಭೇಟಿಯಾಗಿದ್ದಾರೆ. ಈ ಮೊದಲು, ರಾತ್ರಿ ಸಿಎಂ ಬೊಮ್ಮಾಯಿ ಭೇಟಿಗೆ ನಡ್ಡಾ ಸಮಯ ನೀಡಿದ್ದರು. ಬಳಿಕ ಸಂಜೆ 5.30 ಕ್ಕೆ ಭೇಟಿಗೆ ಸಮಯ ನೀಡಲಾಗಿತ್ತು. ಹೀಗಾಗಿ ಈಗ ಬಸವರಾಜ ಬೊಮ್ಮಾಯಿ ನಡ್ಡಾ ಭೇಟಿಯಾಗಿ ಚರ್ಚೆ ನಡೆಸುತ್ತಿದ್ದಾರೆ. ಸಂಪುಟ ರಚನೆಯ ಬಗ್ಗೆ ಸಮಾಲೋಚನೆ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ದೆಹಲಿ ಪ್ರವಾಸದಲ್ಲಿರುವ ಸಿಎಂ ಬೊಮ್ಮಾಯಿಗೆ ಹೈಕಮಾಂಡ್ನಿಂದ ಸಿಹಿ ಸುದ್ದಿ: ಇಂದು ರಾತ್ರಿ ಸಚಿವರ ಪಟ್ಟಿ ಅಂತಿಮ?
(CM Basavaraj Bommai meets PM Narendra Modi at his residence PM Assures full support to Karnataka)
Published On - 7:00 pm, Fri, 30 July 21