ಭವಿಷ್ಯದಲ್ಲಿ ಭಾರತದ ಅಗತ್ಯಕ್ಕೆ ತಕ್ಕಂತೆ ವಿದ್ಯುತ್ ಪೂರೈಸಲು ಕಲ್ಲಿದ್ದಲು ಮಹತ್ವದ ಪಾತ್ರ ವಹಿಸಲಿದೆ :ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅಭಿಮತ

| Updated By: ಸಾಧು ಶ್ರೀನಾಥ್​

Updated on: Nov 09, 2022 | 8:06 PM

2030 ರ ವೇಳೆಗೆ 1.3 - 1.5 BT ಯ ನಿರೀಕ್ಷಿತ ಬೇಡಿಕೆಯೊಂದಿಗೆ ಭಾರತದ ಇಂಧನ ಭದ್ರತೆಗೆ ಕಲ್ಲಿದ್ದಲು ಅನಿವಾರ್ಯ. ಹೀಗಾಗಿ ಕಲ್ಲಿದ್ದಲು ಉತ್ಪಾದನೆಯತ್ತ ಪ್ರಧಾನಿ ನರೇಂದ್ರ ಮೋದಿ ಅವರ ಮಾರ್ಗದರ್ಶನದಲ್ಲಿ ಹೆಚ್ಚು ಒತ್ತು ನೀಡಲಾಗ್ತಿದೆ- ಸಚಿವ ಪ್ರಲ್ಹಾದ್ ಜೋಶಿ

ಭವಿಷ್ಯದಲ್ಲಿ ಭಾರತದ ಅಗತ್ಯಕ್ಕೆ ತಕ್ಕಂತೆ ವಿದ್ಯುತ್ ಪೂರೈಸಲು ಕಲ್ಲಿದ್ದಲು ಮಹತ್ವದ ಪಾತ್ರ ವಹಿಸಲಿದೆ :ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅಭಿಮತ
ಭವಿಷ್ಯದಲ್ಲಿ ಭಾರತದ ಅಗತ್ಯಕ್ಕೆ ತಕ್ಕಂತೆ ವಿದ್ಯುತ್ ಪೂರೈಸಲು ಕಲ್ಲಿದ್ದಲು ಮಹತ್ವದ ಪಾತ್ರ ವಹಿಸಲಿದೆ :ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅಭಿಮತ
Follow us on

2030 ರ ವೇಳೆಗೆ ದೇಶಕ್ಕೆ ಬೇಕಾಗುವ ವಿದ್ಯುತ್ (energy) ಉತ್ಪಾದಿಸಲು ಕಲ್ಲಿದ್ದಲು (Coal) ಉತ್ಪಾದನೆ ಹೆಚ್ಚಳ ಅನಿವಾರ್ಯ ಎಂದು ಕೇಂದ್ರ ಕಲ್ಲಿದ್ದಲು ಗಣಿ ಸಚಿವ ಪ್ರಲ್ಹಾದ್ ಜೋಶಿ (pralhad joshi) ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅವರು ಇಂದೋರ್ (indore) ನಲ್ಲಿಂದು ಕಲ್ಲಿದ್ದಲು ಸಚಿವಾಲಯದ ಸಮಾಲೋಚನಾ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.

ಕಲ್ಲಿದ್ದಲು ಗಣಿಗಾರಿಕೆ ವಿಚಾರದಲ್ಲಿ ಭಾರತ ಆತ್ಮನಿರ್ಭರ್ ನತ್ತ ಸಾಗುತ್ತಿದೆ. ಕಲ್ಲಿದ್ದಲು ಗ್ಯಾಸಿಫಿಕೇಶನ್ ಪ್ರಾಜೆಕ್ಟ್ ಹಮ್ಮಿಕೊಳ್ಳಲಾಗಿದೆ‌. ಖಾಸಗಿ ವಲಯಕ್ಕೂ ಕಲ್ಲಿದ್ದಲು ಉತ್ಪಾದನೆಗೆ ಅವಕಾಶ ಕಲ್ಲಿಸಿಕೊಡಲಾಗಿತ್ತು, 6 ನೇ ಹಂತದ 144 ಕಲ್ಲಿದ್ದಲು ಬ್ಲಾಕ್ಸ್ ಗಳನ್ನ ಹರಾಜು ನಡೆಸಿದ್ದೇವೆ. ಇದರಿಂದ ಕಲ್ಲಿದ್ದಲು ಉತ್ಪಾದನೆ ಹೆಚ್ಚಲಿದೆ ಎಂದು ಪ್ರಲ್ಹಾದ್ ಜೋಶಿ ಹೇಳಿದರು.

ವಿದ್ಯುತ್ ಉತ್ಪಾದನೆಗೆ ಕಲ್ಲಿದ್ದಲು ಅನಿವಾರ್ಯ:

2030 ರ ವೇಳೆಗೆ 1.3 – 1.5 BT ಯ ನಿರೀಕ್ಷಿತ ಬೇಡಿಕೆಯೊಂದಿಗೆ ಭಾರತದ ಇಂಧನ ಭದ್ರತೆಗೆ ಕಲ್ಲಿದ್ದಲು ಅನಿವಾರ್ಯವಾಗಿದೆ. ಹೀಗಾಗಿ ಕಲ್ಲಿದ್ದಲು ಉತ್ಪಾದನೆಯತ್ತ ಪ್ರಧಾನಿ ನರೇಂದ್ರ ಮೋದಿ ಅವರ ಮಾರ್ಗದರ್ಶನದಲ್ಲಿ ಹೆಚ್ಚು ಒತ್ತು ನೀಡಲಾಗ್ತಿದೆ ಎಂದು ಕಲ್ಲಿದ್ದಲು ಸಚಿವ ಪ್ರಲ್ಹಾದ್ ಜೋಶಿ ಇದೇ ವೇಳೆ ಅಭಿಪ್ರಾಯ ವ್ಯಕ್ತಪಡಿಸಿದರು.

ಅಲ್ಲದೇ ನಿಶ್ಯಕ್ತ ಕೆಲವು ಗಣಿಗಳನ್ನು ಮುಚ್ಚಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಪ್ರಲ್ಹಾದ್ ಜೋಶಿ ಇದೇ ವೇಳೆ ತಿಳಿಸಿದ್ದಾರೆ. ಟ್ರಾನ್ಸಿಶನ್ ಪ್ರಿನ್ಸಿಪಲ್ಸ್ ಆಧಾರಿತ ಪ್ಯಾನ್-ಇಂಡಿಯಾ ಮೈನ್ ಕ್ಲೋಸರ್ ಫ್ರೇಮ್‌ವರ್ಕ್ ಅನ್ನು ಅಳವಡಿಸಿಕೊಳ್ಳಲು ಒತ್ತು ನೀಡಲಾಗಿದೆ ಎಂದು ಪ್ರಲ್ಹಾದ್ ಜೋಶಿ ತಿಳಿಸಿದರು.

ಸಭೆಯಲ್ಲಿ 4 ಪ್ರಮುಖ ಅಂಶಗಳ ಬಗ್ಗೆ ಚರ್ಚಿಸಲಾಯಿತು. ಟ್ರಾನ್ಸಿಶನ್ ಅನ್ನು ಅಂತಿಮಗೊಳಿಸಲು ಪ್ರಯತ್ನ, ಪರಿಸರ ಸ್ನೇಹಿ ಸುಧಾರಿತ ತಂತ್ರಜ್ಞಾನ ಬಳಕೆ ಹಾಗೂ ಕಲ್ಲಿದ್ದಲು ಗಣಿಕಗಾರಿಕೆ ಅವಲಂಬಿತರಿಗೆ ಜೀವನೋಪಾಯದ ರಕ್ಷಣೆ ಕುರಿತು ಚರ್ಚೆ ನಡೆಸಲಾಯಿತು.

ಈ ಬಗ್ಗೆ ಟ್ವಿಟ್ಟರ್​​ನಲ್ಲಿ ಸಚಿವ ಪ್ರಲ್ಹಾದ್ ಜೋಶಿ ಪೋಸ್ಟ್​​​ ಮಾಡಿದ್ದಾರೆ:
Coal is indispensable for India’s energy security with anticipated demand of 1.3-1.5 BT by 2030. In cases of exhaustion or viability issues, some mines may have to be closed. Emphasised on adopting a pan-India Mine Closure Framework based on Just Transition Principles. @PMOIndia

Published On - 8:05 pm, Wed, 9 November 22