ಪಶ್ಚಿಮ ಬಂಗಾಳ: ದೇಶದಲ್ಲೇ ಅತಿ ಹೆಚ್ಚು ಕಲ್ಲಿದ್ದಲು ಉತ್ಪಾದಿಸುವ, ಭೂ ಮೇಲ್ಮೈಯಿಂದ 225 ಮೀಟರ್ ಆಳದಲ್ಲಿರುವ ಪಶ್ಚಿಮ ಬಂಗಾಳ ರಾಜ್ಯದ (West Bengal) ಪಶ್ಚಿಮ್ ಬರ್ದಮಾನ್ ಜಿಲ್ಲೆಯ ದುರ್ಗಾಪುರ್ ಸಬ್ ಡಿವಿಷನ್ ನಲ್ಲಿರುವ ಝಾಂಜ್ರಾ ಕಲ್ಲಿದ್ದಲು ಗಣಿಗೆ (Jhanjra underground Coal Mine) ಇಂದು ಕೇಂದ್ರ ಕಲ್ಲಿದ್ದಲು ಸಚಿವ ಪ್ರಲ್ಹಾದ್ ಜೋಶಿ (Coal Minister Pralhad Joshi) ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಗಣಿ ಒಳಗೆ 225 ಮೀಟರ್ ಆಳಕ್ಕೆ ತೆರಳಿ ಕಲ್ಲಿದ್ದಲು ಉತ್ಪಾದನೆ ಪರಿಶೀಲನೆ ನಡೆಸಿದ ಜೋಶಿಯವರು, ಅಂಡರ್ ಗ್ರೌಂಡ್ ನಲ್ಲಿ 1.5 ಕಿ.ಮೀ ಪ್ರಯಾಣಿಸಿದರು.
ಈ ವೇಳೆ ಮಾತನಾಡಿದ ಸಚಿವ ಪ್ರಲ್ಹಾದ್ ಜೋಶಿಯವರು, ಈಸ್ಟರ್ನ್‌ಕೋಲ್‌ನ ಝಂಜ್ರಾ ಭೂಗತ ಗಣಿಯೊಳಗೆ 225 ಮೀಟರ್ ಆಳಕ್ಕೆ ತೆರಳಿ ಅಂಡರ್ ಗ್ರೌಂಡ್ ನಲ್ಲಿ ಒಂದುವರೆ ಕಿ.ಮೀ ಪ್ರಯಾಣಿಸಿದ್ದು ಹೊಸ ಅನುಭವ ನೀಡಿದೆ ಎಂದರು. ವರ್ಷಕ್ಕೆ 3.5 ಮಿಲಿಯನ್ ಟನ್ ಸಾಮರ್ಥ್ಯ ಹೊಂದಿರುವ ಝಂಜ್ರಾ ಕಲ್ಲಿದ್ದಲು ಗಣಿ, ಭಾರತದ ಅತಿ ಹೆಚ್ಚು ಕಲ್ಲಿದ್ದಲು ಉತ್ಪಾದಿಸುವ ಯಾಂತ್ರಿಕೃತ ಭೂಗತ ಗಣಿಯಾಗಿದೆ.
ಇಷ್ಟೊಂದು ಆಳಕ್ಕೆ ಹೋಗಿ ಪ್ರತಿ ನಿತ್ಯ ಕಷ್ಟಕರ ಪರಿಸ್ಥಿತಿಗಳನ್ನ ಎದುರಿಸಿ ಕಲ್ಲಿದ್ದಲು ಉತ್ಪಾದನೆಗೆ ಶ್ರಮಿಸುತ್ತಿರುವ ಕಾರ್ಮಿಕರಿಗೆ ಪ್ರಲ್ಹಾದ್ ಜೋಶಿಯವರು ಇದೇ ವೇಳೆ ಅಭಿನಂದನೆ ಸಲ್ಲಿಸಿದರು. ಇಲ್ಲಿನ ಕಾರ್ಮಿಕರು ಯೋಧರ ರೀತಿಯಲ್ಲಿ ಕೆಲಸ ಮಾಡ್ತಿದ್ದಾರೆ ಎಂದು ಕೇಂದ್ರ ಸಚಿವರು ಇದೇ ವೇಳೆ ಶ್ಲಾಘನೆ ವ್ಯಕ್ತಪಡಿಸಿದರು.
ದೇಶದಲ್ಲಿ ಕಲ್ಲಿದ್ದಲು ಉತ್ಪಾದನೆ ಹೆಚ್ಚಿಸುವ ಗುರಿಯೊಂದಿಗೆ ಕಲ್ಲಿದ್ದಲು ಗಣಿ ಪ್ರದೇಶಗಳಿಗೆ ಭೇಟಿ ನೀಡ್ತಿರುವ ಪ್ರಲ್ಹಾದ್ ಜೋಶಿಯವರು, ಹಲವು ಯೋಜನೆಗಳನ್ನ ಹಾಕಿಕೊಂಡಿದ್ದಾರೆ. ಕಲ್ಲಿದ್ದಲು ಉತ್ಪಾದನೆಯನ್ನು ಮತ್ತಷ್ಟು ಹೆಚ್ಚಿಸಲು ಉತ್ಪಾದನಾ ಸಾಮರ್ಥ್ಯವನ್ನು ವರ್ಷಕ್ಕೆ 2MT ಗಿಂತ ಅಧಿಕ ಪ್ರಮಾಣಕ್ಕೆ ಹೆಚ್ಚಿಸಲಾಗಿದೆ.
Visited the Jhanjra underground mine of @easterncoal, which has a depth of 225 mtr below the surface. At 3.5 million tonnes per year capacity, this is the highest coal producing mechanised underground mine of India. pic.twitter.com/hXvWRHbxz8
— Pralhad Joshi (@JoshiPralhad) November 24, 2022
ಕಡಿಮೆ ಎತ್ತರದ 2 ನಿರಂತರ ಗಣಿಗಳನ್ನ ಪರಿಚಯಿಸುವ ಜೊತೆಗೆ 5 MTY ಸಾಮರ್ಥ್ಯದ ಕಲ್ಲಿದ್ದಲು ನಿರ್ವಹಣೆ ಸ್ಥಾವರ ಹಾಗೂ ರೈಲ್ವೇ ಕಾರಿಡಾರ್ ನಿರ್ಮಾಣ ಹಂತದಲ್ಲಿದೆ ಎಂದು ಕೇಂದ್ರ ಕಲ್ಲಿದ್ದಲು ಸಚಿವ ಪ್ರಲ್ಹಾದ್ ಜೋಶಿ ಇದೇ ವೇಳೆ ತಿಳಿಸಿದ್ದಾರೆ. ಪ್ರಗತಿ ಪಥದಲ್ಲಿ ಸಾಗುತ್ತಿರುವ ಕೇಂದ್ರ ಸಚಿವ ಈ ನಡೆ ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದೆ.
Also Read: ನ. 27 ರಂದು ಪ್ರಲ್ಹಾದ ಜೋಶಿ ಜನ್ಮದಿನ -ಫ್ಲೆಕ್ಸ್, ಬ್ಯಾನರ್, ಹೋರ್ಡಿಂಗ್ಸ್, ಸಂಭ್ರಮಾಚರಣೆ ಬೇಡ ಎಂದು ಜೋಶಿ ಮನವಿ
Published On - 7:14 pm, Thu, 24 November 22