ಪುರುಷ ಸಿಬ್ಬಂದಿಗಳಿಗೆ ಕೂದಲು ಕಮ್ಮಿಯಿದ್ದರೆ ತಲೆಕೂದಲು ಪೂರ್ತಿ ಬೋಳಿಸಿ; ಏರ್ ಇಂಡಿಯಾ ಕ್ಯಾಬಿನ್ ಸಿಬ್ಬಂದಿಗಳಿಗೆ ಹೊಸ ನಿಯಮ

ವಿಮಾನಯಾನ ಸಂಸ್ಥೆ ತನ್ನ ಕ್ಯಾಬಿನ್ ಸಿಬ್ಬಂದಿಯಲ್ಲಿ ತಕ್ಷಣವೇ ಮಾರ್ಗಸೂಚಿಗಳನ್ನು ಅನುಸರಿಸುವಂತೆ ಕೇಳಿಕೊಂಡಿದೆ. ಆದಾಗ್ಯೂ, ನೂರಾರು ಕ್ಯಾಬಿನ್ ಸಿಬ್ಬಂದಿಗಳು ಹೊಸ ನಿಯಮಗಳಿಗೆ ಹೊಂದಿಕೊಳ್ಳಲು ಸಮಯ ತೆಗೆದುಕೊಳ್ಳಲಿದ್ದಾರೆ.

ಪುರುಷ ಸಿಬ್ಬಂದಿಗಳಿಗೆ ಕೂದಲು ಕಮ್ಮಿಯಿದ್ದರೆ ತಲೆಕೂದಲು ಪೂರ್ತಿ ಬೋಳಿಸಿ; ಏರ್ ಇಂಡಿಯಾ ಕ್ಯಾಬಿನ್ ಸಿಬ್ಬಂದಿಗಳಿಗೆ ಹೊಸ ನಿಯಮ
ಏರ್ ಇಂಡಿಯಾ ಸಿಬ್ಬಂದಿ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:Nov 24, 2022 | 8:21 PM

ದೆಹಲಿ: ಟಾಟಾ ಒಡೆತನದ ಏರ್ ಇಂಡಿಯಾ (Air India) ತನ್ನ ಕ್ಯಾಬಿನ್ ಸಿಬ್ಬಂದಿಗಳಿಗೆ ಅಂದಗೊಳಿಸುವ ನಿಯಮಗಳನ್ನು (grooming rules) ನವೀಕರಿಸಿದೆ. ಪರಿಷ್ಕರಿಸಿದ ಮಾರ್ಗಸೂಚಿಗಳ ಪ್ರಕಾರ ತಲೆ ಕೂದಲು ಭಾರೀ ಕಡಿಮೆಯಾಗಿದ್ದರೆ ಅಂಥವರು ಕ್ಲೀನ್ ಶೇವ್ ಅಥವಾ ಪೂರ್ತಿ ತಲೆ ಬೋಳಿಸಬೇಕು ಎಂದು ಹೆಸರು ಹೇಳಲು ಬಯಸದ ಏರ್ ಇಂಡಿಯಾ ಮೂಲಗಳು ಹೇಳಿರುವುದಾಗಿ ಎಎನ್ಐ ಸುದ್ದಿಸಂಸ್ಥೆ ವರದಿ ಮಾಡಿದೆ. ವಿಮಾನಯಾನ ಸಂಸ್ಥೆ ತನ್ನ ಕ್ಯಾಬಿನ್ ಸಿಬ್ಬಂದಿಯಲ್ಲಿ ತಕ್ಷಣವೇ ಮಾರ್ಗಸೂಚಿಗಳನ್ನು ಅನುಸರಿಸುವಂತೆ ಕೇಳಿಕೊಂಡಿದೆ. ಆದಾಗ್ಯೂ, ನೂರಾರು ಕ್ಯಾಬಿನ್ ಸಿಬ್ಬಂದಿಗಳು ಹೊಸ ನಿಯಮಗಳಿಗೆ ಹೊಂದಿಕೊಳ್ಳಲು ಸಮಯ ತೆಗೆದುಕೊಳ್ಳಲಿದ್ದಾರೆ ಎಂದು ಏರ್ ಇಂಡಿಯಾ ಮೂಲಗಳನ್ನು ಉಲ್ಲೇಖಿಸಿ ವರದಿ ಹೇಳಿದೆ. ಪುರುಷರು ಬೋಳು ತಲೆ ಲುಕ್​​ನಲ್ಲಿರಬಹುದು. ತಲೆಯಲ್ಲಿ ಮುಂಭಾಗದ ಕೂದಲು ಹೋಗಿದ್ದರೆ, ಕೂದಲು ಉದುರಿ ನೆತ್ತಿ ಕಾಣುತ್ತಿದ್ದರೆ ಅಂಥಾ ಸಿಬ್ಬಂದಿ ಸಂಪೂರ್ಣವಾಗಿ ಬೋಳು ಲುಕ್ ಮಾಡಬೇಕು. ಕ್ಲೀನ್ ಲುಕ್‌ಗಾಗಿ ತಲೆಯನ್ನು ಪ್ರತಿದಿನ ಬೋಳಿಸಬೇಕು. ಕ್ರ್ಯೂ ಕಟ್ ಅನ್ನು ಅನುಮತಿಸಲಾಗುವುದಿಲ್ಲ ಎಂದು ಕ್ಯಾಬಿನ್ ಸಿಬ್ಬಂದಿಗಳ ಕೈಪಿಡಿಯಲ್ಲಿ ಹೇಳಲಾಗಿದೆ. ಮಹಿಳಾ ಸಿಬ್ಬಂದಿಗಳಿಗೆ ಪರಿಷ್ಕರಿಸಿದ ನಿಯಮದಲ್ಲಿ ಮುತ್ತಿನ ಕಿವಿಯೋಲೆ ಧರಿಸುವಂತಿಲ್ಲ, 0.5 ಸೆಂ.ಮೀ ಗಾತ್ರದ  ಬಿಂದಿ (ಅವರು ಬಯಸುವುದಾದರೆ ಮಾತ್ರ), ಡಿಸೈನ್ ಮತ್ತು ಕಲ್ಲುಗಳಿಲ್ಲದ ಒಂದು ಬಳೆ,   ತುಂಬಾ ಮೇಲೆ ಅಥವಾ ತುಂಬಾ ಕೆಳಗೆ ಬನ್ (ತುರುಬು ಬನ್) ಹಾಕುವಂತಿಲ್ಲ.

ಮಹಿಳಾ ಕ್ಯಾಬಿನ್ ಸಿಬ್ಬಂದಿಗಳು ಡಿಸೈನ್ ಅಥವಾ ಅಲಂಕಾರಿಕ ಅಲ್ಲದ ಚಿನ್ನ ಅಥವಾ ವಜ್ರದ ವೃತ್ತಾಕಾರದ  ಕಿವಿಯೋಲೆ ಮಾತ್ರ ಧರಿಸಬಹುದು. 0.5 ಸೆಂ.ಮೀ ಗಾತ್ರದ ಒಳಗಿನ ಸಣ್ಣ ಬಿಂದಿ, ಉಂಗುರ 1 ಸೆಂ.ಮೀ ಗಿಂತ ಹೆಚ್ಚು ಅಗಲವಿರಬಾರದು. ಒಂದು  ಕೈಯಲ್ಲಿ ಒಂದು ಉಂಗುರ ಮಾತ್ರ ಧರಿಸಬಹುದು.ಡಿಸೈನ್ ಇಲ್ಲದ ಒಂದೇ ಒಂದು ಬಳೆ; ತುರುಬು ಸುತ್ತುವುದುದು ನಿರ್ದಿಷ್ಟವಾಗಿರಬೇಕು. ಕೇವಲ ನಾಲ್ಕು ಕಪ್ಪು ಬಾಬಿ ಪಿನ್‌ಗಳನ್ನು ಬಳಸಬೇಕು. ಐಶ್ಯಾಡೋ, ಲಿಪ್‌ಸ್ಟಿಕ್, ನೇಲ್ ಪೇಂಟ್ ಮತ್ತು ಹೇರ್ ಶೇಡ್ ಕಾರ್ಡ್‌ಗಳನ್ನು ಕಟ್ಟುನಿಟ್ಟಾಗಿ ಅನುಸರಿಸಬೇಕು (ವೈಯಕ್ತಿಕ ಶೇಡ್ ಅನುಮತಿಸಲಾಗುವುದಿಲ್ಲ), ಸೀರೆ ಮತ್ತು ಇಂಡೋ-ವೆಸ್ಟರ್ನ್ ವೇರ್ ಎರಡರ ಜೊತೆಗೆ ವಿಮಾನದ ಕರ್ತವ್ಯಗಳಿಗೆ ಕಡ್ಡಾಯವಾಗಿರುವ ಚರ್ಮದ ಟೋನ್‌ಗೆ ಹೊಂದಿಕೆಯಾಗುವ ಉದ್ದದ ಸಾಕ್ಸ್ ಧರಿಸುವುದು ಕಡ್ಡಾಯ.

ಬಿಳಿ ಕೂದಲು ಇರುವ ಪುರುಷ ಮತ್ತು ಮಹಿಳಾ ಸಿಬ್ಬಂದಿ ಇಬ್ಬರೂ ಸಹ ಅವುಗಳನ್ನು ನೈಸರ್ಗಿಕವಾಗಿ ಕಾಣುವಂತೆ ನಿಯಮಿತವಾಗಿ ಕಲರ್ ಮಾಡಬೇಕಾಗುತ್ತದೆ. ಫ್ಯಾಶನ್ ಬಣ್ಣ ಮತ್ತು ಮದರಂಗಿ (henna) ಅನುಮತಿಸಲಾಗುವುದಿಲ್ಲ. ಮಣಿಕಟ್ಟು, ಕುತ್ತಿಗೆ, ಪಾದದ ಮೇಲೆ ಕಪ್ಪು ಅಥವಾ ಧಾರ್ಮಿಕ ದಾರವನ್ನು ಅನುಮತಿಸಲಾಗುವುದಿಲ್ಲ. ಸಾಮಾಜಿಕ ಮಾಧ್ಯಮದಲ್ಲಿ ಇನ್ ಫ್ಲೂಯೆನ್ಸರ್ ಆಗಿರುವ ಸಿಬ್ಬಂದಿಯು ಕರ್ತವ್ಯದಿಂದ ಹೊರಗಿರುವಾಗ ಸಮವಸ್ತ್ರ ಮತ್ತು ಅದರ ಪರಿಕರಗಳನ್ನು ಧರಿಸಬಾರದು ಎಂದು ಮಾರ್ಗಸೂಚಿಗಳು ಹೇಳುತ್ತವೆ. ಈ ಹಿಂದೆ ನೀಡಲಾದ ಅಂದಗೊಳಿಸುವ ಮಾರ್ಗಸೂಚಿಗಳು ನೀತಿ ಸಂಹಿತೆ (ಸಿಬ್ಬಂದಿಗಳು ಸಾರ್ವಜನಿಕ ಪ್ರದೇಶದಲ್ಲಿ ಪ್ಲಾಸ್ಟಿಕ್ ಚೀಲಗಳು ಅಥವಾ ಶಾಪಿಂಗ್ ಬ್ಯಾಗ್‌ಗಳನ್ನು ಒಯ್ಯುವಂತಿಲ್ಲ), ಶಿಷ್ಟಾಚಾರ, ವೈಯಕ್ತಿಕ ನೈರ್ಮಲ್ಯ, ಸಮವಸ್ತ್ರವನ್ನು ಸಾಗಿಸುವ ವಿಧಾನ ಇತ್ಯಾದಿ ಅಂಶಗಳನ್ನು ಒಳಗೊಂಡಿದೆ.

ಬದಲಾವಣೆಗಳನ್ನು ಇನ್ನೂ ಸಿಬ್ಬಂದಿ ಸಂಪೂರ್ಣವಾಗಿ ಅಳವಡಿಸಿಕೊಂಡಿಲ್ಲ ಎಂದು ಏರ್​​ಲೈನ್ ​​ಮೂಲಗಳು ತಿಳಿಸಿವೆ. “ದಶಕಗಳಿಂದಲೂ, ಅಂದಗೊಳಿಸುವ ರೂಢಿಗಳ ಸೂಕ್ಷ್ಮ ವಿವರಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗಿಲ್ಲ. ಕೂದಲಿನ ಬಣ್ಣ, ಅಥವಾ ತಲೆ ಬೋಳಿಸುವುದು, ಟೈ-ಪಿನ್‌ಗಳನ್ನು ಧರಿಸುವುದು ಮುಂತಾದ ವಿವರಗಳನ್ನು ಎಂದಿಗೂ ಜಾರಿಗೊಳಿಸಲಾಗಿಲ್ಲ. ಹೊಸ ಫ್ಲೈಟ್ ಅಟೆಂಡೆಂಟ್‌ಗಳೊಂದಿಗೆ ಮೊದಲು ಜಾರಿಗೊಳಿಸಲಾಗುವುದು ಎಂದು ಮೂಲಗಳು ಹೇಳಿವೆ.

“ಕ್ಯಾಬಿನ್ ಕ್ರ್ಯೂ ಹ್ಯಾಂಡ್‌ಬುಕ್” ಎಂಬ ಹೆಸರಿನಲ್ಲಿ ಪ್ರಕಟಿಸಲಾದ ಮಾರ್ಗಸೂಚಿಗಳ ಪ್ರಕಾರ ಗುಂಪಿನಲ್ಲಿದ್ದಾಗ ಅಸಭ್ಯವಾಗಿ ಓಡಾಡುವುದನ್ನು ತಪ್ಪಿಸಬೇಕು ಮತ್ತು ಸಮವಸ್ತ್ರದಲ್ಲಿರುವಾಗ ಅಲಂಕಾರವನ್ನು ಯಾವಾಗಲೂ ಕಾಪಾಡಿಕೊಳ್ಳಬೇಕು. ಶಾಂತವಾದ ಸಂಭಾಷಣೆಯನ್ನು ಯಾವಾಗಲೂ ಪ್ರಶಂಸಿಸಲಾಗುತ್ತದೆ ಎಂದು ಹೇಳಿದೆ.

ಟಾಟಾ ಸನ್ಸ್ ಕಳೆದ ವರ್ಷ ಅಕ್ಟೋಬರ್‌ನಲ್ಲಿ ಏರ್ ಇಂಡಿಯಾದ ರಾಷ್ಟ್ರೀಕರಣದ ನಂತರ ಸುಮಾರು 70 ವರ್ಷಗಳ ನಂತರ ಅದರ ನಿಯಂತ್ರಣವನ್ನು ಮರಳಿ ಪಡೆದುಕೊಂಡಿತು. ಏರ್ ಇಂಡಿಯಾ ತನ್ನ ದೇಶೀಯ ಮತ್ತು ಅಂತರಾಷ್ಟ್ರೀಯ ಸೇವೆಗಳನ್ನು ಹೆಚ್ಚಿಸಲು ಈ ವರ್ಷದ ಡಿಸೆಂಬರ್‌ನಿಂದ ಐದು ವಿಶಾಲವಾದ ಬೋಯಿಂಗ್ ವಿಮಾನಗಳು ಸೇರಿದಂತೆ 30 ಹೊಸ ವಿಮಾನಗಳನ್ನು ಹಂತಹಂತವಾಗಿ ಸೇರಿಸಲಿದೆ.

Published On - 8:18 pm, Thu, 24 November 22

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್