ಕರ್ನಾಟಕ ನಮಗೆ ಪಾಠ ಮಾಡುವ ಅಗತ್ಯವಿಲ್ಲ: ಬೊಮ್ಮಾಯಿ ಸರ್ಕಾರದ ವಿರುದ್ಧ ಮಹಾ ಸಿಎಂ ಏಕನಾಥ್ ಶಿಂಧೆ ವಾಗ್ದಾಳಿ

ಕರ್ನಾಟಕ ಹಾಗೂ ಮಹಾರಾಷ್ಟ್ರ ಗಡಿ ವಿವಾದ ಮತ್ತೆ ಮುನ್ನೆಲೆಗೆ ಬಂದಿದ್ದು, ಈ ವಿಚಾರವಾಗಿ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಕರ್ನಾಟಕ ಸರ್ಕಾರದ ವಿರುದ್ಧ ನೇರ ವಾಗ್ದಾಳಿ ನಡೆಸಿದ್ದಾರೆ.

ಕರ್ನಾಟಕ ನಮಗೆ ಪಾಠ ಮಾಡುವ ಅಗತ್ಯವಿಲ್ಲ: ಬೊಮ್ಮಾಯಿ ಸರ್ಕಾರದ ವಿರುದ್ಧ ಮಹಾ ಸಿಎಂ ಏಕನಾಥ್ ಶಿಂಧೆ ವಾಗ್ದಾಳಿ
Bommai And eknath shinde
TV9kannada Web Team

| Edited By: Ramesh B Jawalagera

Nov 24, 2022 | 8:35 PM

ಮುಂಬೈ: ಗಡಿ ವಿಚಾರಕ್ಕೆ(border dispute) ಸಂಬಂಧಿಸಿದಂತೆ ಕರ್ನಾಟಕ(Karnataka) ಹಾಗೂ ಮಹಾರಾಷ್ಟ್ರ(Maharashtra) ಮಧ್ಯೆ ಮತ್ತೆ ಜಟಾಪಟಿ ಶುರುವಾಗಿದ್ದು, ಕರ್ನಾಟಕ ಸರ್ಕಾರ ನಮಗೆ ಪಾಠ ಮಾಡುವ ಅಗತ್ಯವಿಲ್ಲ. ನಾವು ಏನೇ ಮಾಡುವುದಾದ್ರೂ ಕದ್ದುಮುಚ್ಚಿ ಮಾಡುವುದಿಲ್ಲ ಎಂದು ಮಹಾರಾಷ್ಟ್ರ ಏಕನಾಥ್ ಶಿಂಧೆ(eknath shinde) ವಾಗ್ದಾಳಿ ನಡೆಸಿದ್ದಾರೆ.

ನಾವು ಏನೇ ಮಾಡುವುದಾದ್ರೂ ಕದ್ದುಮುಚ್ಚಿ ಮಾಡುವುದಿಲ್ಲ. 2012ರಲ್ಲಿ ಕರ್ನಾಟಕದಲ್ಲಿ ಯಾರ ಸರ್ಕಾರ ಅಧಿಕಾರದಲ್ಲಿತ್ತು? ಕಳೆದ ಎರಡೂವರೆ ವರ್ಷ ಕರ್ನಾಟಕ ಸರ್ಕಾರ ಏನು ಮಾಡ್ತಿತ್ತು? ಹೀಗಾಗಿ ಕರ್ನಾಟಕ ಸರ್ಕಾರ ನಮಗೆ ಪಾಠ ಮಾಡುವ ಅಗತ್ಯವಿಲ್ಲ. ಗಡಿಯಲ್ಲಿರುವ ಮರಾಠಿಗರಿಗೆ ನ್ಯಾಯ ಕೊಡಿಸುತ್ತೇವೆ ಎಂದು ಹೇಳಿದರು.

ಗಡಿ ವಿವಾದ ಬಗೆಹರಿಸುವ ಜವಾಬ್ದಾರಿ ನಮ್ಮದು. ಮಹಾರಾಷ್ಟ್ರದ 40 ತಾಲೂಕಿನ ಎಲ್ಲಾ ಜಾಗ ಸುರಕ್ಷಿತವಾಗಿರಲಿದೆ. ಬೆಳಗಾವಿ ಮಹಾರಾಷ್ಟ್ರ ಗಡಿ ಸಿಮಾಲೋಂಗನ ವಿಚಾರದಲ್ಲಿ ಜೈಲಿನಲ್ಲಿದೆ. ಕರ್ನಾಟಕ ಸರ್ಕಾರ ನಮಗೆ ಹೇಳಿ ಕೋಡುವ ಅಗತ್ಯಇಲ್ಲ. ಬಂದ್​ ಆಗಿರುವ ಯೋಜನೆಯನ್ನು ನಾವು ಪುನಃ ಮಾಡಿದ್ದೇವೆ. ಗಡಿಯಲ್ಲಿನ ಮರಾಠಿ ಮನುಷ್ಯರಿಗೆ ನ್ಯಾಯ ಕೊಡಿಸುವ ಕಾರ್ಯ ನಾವು ಮಾಡುತ್ತೇವೆ. ನಮಗೆ ಪಾಠ ಮಾಡುವ ಅಗತ್ಯ ಕರ್ನಾಟಕ್ಕೆ ಇಲ್ಲ ಎಂದು ಸಿಎಂ ಬೊಮ್ಮಾಯಿಗೆ ತಿರುಗೇಟು ನೀಡಿದರು.

ಮಹಾರಾಷ್ಟ್ರದ ಒಂದು ಇಂಚು ಜಾಗವು ಕರ್ನಾಟಕ್ಕೆ ನಾವು ಕೊಡಲ್ಲ. ಮಹಾರಾಷ್ಟ್ರದ 40 ತಾಲೂಕಿನ ಎಲ್ಲಾ ಜಾಗವು ಸುರಕ್ಷಿತವಾಗಿರಲಿದೆ. ಕರ್ನಾಟಕ ಮಹಾರಾಷ್ಟ್ರದ ಗಡಿ ವಿವಾದ ಬಗೆಹರಿಸಿವ ಜವಾಬ್ದಾರಿ ನಮ್ಮದು ಎಂದು ಗುಡುಗಿದರು.

ಇನ್ನು ಇದೇ ವಿಚಾರವಾಗಿ ಮಹಾರಾಷ್ಟ್ರ ಡಿಸಿಎಂ ದೇವೇಂದ್ರ ಫಡ್ನವಿಸ್ ಪ್ರತಿಕ್ರಿಯಿಸಿದ್ದು, ನಮ್ಮ ಗಡಿ ಭಾಗ ನಮಗೆ ಸಿಗಬೇಕು ಎನ್ನುವ ಅಪೇಕ್ಷೆ ಇದೆ. ಬೆಳಗಾವಿ, ಕಾರವಾರ, ನಿಪ್ಪಾಣಿ ಪಟ್ಟಣದ ಬಗ್ಗೆ ದಾವೆ ಇದೆ. ಈ ಮೂರು ಊರುಗಳ ಮೇಲೆ ಮಹಾರಾಷ್ಟ್ರದ ದಾವೆ ಇದೆ. ಸುಪ್ರೀಂಕೋರ್ಟ್​​ನಲ್ಲಿ ಗಡಿ ವಿವಾದ ಬಗ್ಗೆ ವಿಚಾರಣೆ ನಡೆಯುತ್ತಿದೆ. ಸಂವಿಧಾನದ ಚೌಕಟ್ಟಿನಲ್ಲಿ ನಮ್ಮ ಬೇಡಿಕೆಯನ್ನು ಇಟ್ಟಿದ್ದೇವೆ. ಇದು ಪಕ್ಷದ ವಾದವಲ್ಲ, ಕೇವಲ ಮಹಾರಾಷ್ಟ್ರದ ವಾದವಾಗಿದೆ. ಗಡಿ ವಿವಾದದ ಸುಪ್ರೀಂನಲ್ಲಿನ ದಾವೆ ಬಿಜೆಪಿಯ ವಾದ ಅಲ್ಲ. ಈ ದಾವೆ ಬಹಳ ಹಳೇ ದಾವೆಯಾಗಿದೆ ಎಂದರು.

ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada