ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣವನ್ನು NIAಗೆ ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ಆದೇಶ

ಮಂಗಳೂರಿನ ಕಂಕನಾಡಿ ಬಳಿ ಆಟೋದಲ್ಲಿ ಸಂಭವಿಸಿದ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದ ತನಿಖೆಯನ್ನು ಎಎನ್​ಐಗೆ ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣವನ್ನು NIAಗೆ ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ಆದೇಶ
ಎಚ್ಚರಿಕೆಯಿಂದ ಇರುವಂತೆ ರಾಜ್ಯ ಪೊಲೀಸರಿಗೆ ಐಬಿ ಸೂಚನೆ
TV9kannada Web Team

| Edited By: Ramesh B Jawalagera

Nov 24, 2022 | 7:36 PM

ಬೆಂಗಳೂರು/ಮಂಗಳೂರು: ಮಂಗಳೂರಿನ ಕಂಕನಾಡಿ ಬಳಿ ಆಟೋದಲ್ಲಿ ಸಂಭವಿಸಿದ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣ(Mangaluru Blast)  ತೀವ್ರ ಸ್ವರೂಪ ಪಡೆದುಕೊಂಡಿದ್ದು, ಆರೋಪಿ ಶಂಕಿತ ಉಗ್ರ ಶಾರೀಕ್ ಬಗ್ಗೆ ಆಘಾತಕಾರಿ ಅಂಶಗಳು ಬೆಳಕಿಗೆ ಬರುತ್ತಿವೆ. ಈ ಹಿನ್ನೆಲೆಯಲ್ಲಿ ಇದೀಗ ಈ ಪ್ರಕರಣವನ್ನು ರಾಜ್ಯ ಸರ್ಕಾರ, ಎನ್​ಐಎ(National Investigation Agency) ತನಿಖೆಗೆ ವರ್ಗಾವಣೆಗೊಳಿಸಿ ಆದೇಶ ಹೊರಡಿಸಿದೆ.

ಶಾರೀಕ್ ಬೆನ್ನಿಗೆ ನಿಂತ ಇಸ್ಲಾಮಿಕ್ ರೆಸಿಸ್ಟೆನ್ಸ್ ಕೌನ್ಸಿಲ್: ಶೀಘ್ರ ಇನ್ನೊಂದು ದಾಳಿ ಮಾಡುವ ಬೆದರಿಕೆ

ಸದ್ಯ ಶಂಕಿತ ಉಗ್ರ ಶಾರೀಕ್ ವಿರುದ್ಧ ​ಯುಎಪಿಎ ಕಾಯ್ದೆ ಅನ್ವಯ ಎನ್ಐಎ ತನಿಖೆ ನಡೆಸಲು ರಾಜ್ಯ ಸರ್ಕಾರ ಶಿಫಾರಸು ಮಾಡಿದೆ.

ಇತ್ತೀಚೆಗೆ ಮಂಗಳೂರಿನ ಕಂಕನಾಡಿಯಲ್ಲಿ ಆಟೊದಲ್ಲಿ ಕುಕ್ಕರ್ ಬಾಂಬ್ ಸ್ಫೋಟಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಬಂಧಿಸಿರುವ ಶಂಕಿತ ಉಗ್ರ ಶಾರೀಕ್​ನನ್ನು ಬೆಂಬಲಿಸಿ ಇಸ್ಲಾಮಿಕ್​​​ ರೆಸಿಸ್ಟೆನ್ಸ್​ ಕೌನ್ಸಿಲ್​​ (Islamic Resistence Concil – IRC) ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿದ್ದು, ಮತ್ತೊಂದು ದಾಳಿಯ ಬೆದರಿಕೆ ಹಾಕಿದೆ.

ಒಂದೊಂದೆ ಸ್ಫೋಟಕ ಮಾಹಿತಿ ಬಯಲು

ಮಂಗಳೂರಿನಲ್ಲಿ ನವೆಂಬರ್ 19ರಂದು ಸ್ಫೋಟಗೊಂಡ ಶಾರಿಕ್​ನ ಕುಕ್ಕರ್ ಬಾಂಬ್ ಎಲ್ಲೆಡೆ ಭೀತಿ ಹುಟ್ಟಿಸಿದೆ. ಆದ್ರೆ, ವಿಷ್ಯ ಅದಲ್ಲ. ಒಂದು ವೇಳೆ ಆವತ್ತು ಆಟೋದಲ್ಲಿ ಬಾಂಬ್ ಬ್ಲಾಸ್ಟ್ ಆಗದೇ ಇದ್ದಿದ್ರೆ, ಇಡಿ ಮಂಗಳೂರಿಗೆ ಮಂಗಳೂರೇ ಚಿಂದಿ ಚಿಂದಿಯಾಗ್ತಿತ್ತು ಅನ್ನೋ ಭಯಾನಕ ಸಂಗತಿ ಖಾಕಿ ತನಿಖೆಯಲ್ಲಿ ಬಯಲಾಗಿದೆ.

ಕರಾವಳಿ ಭಾಗದ 3 ಪ್ರಸಿದ್ಧ ದೇವಾಲಯಗಳನ್ನು ಟಾರ್ಗೆಟ್​ ಮಾಡಿದ್ದ ಶಾರಿಕ್, ಕದ್ರಿ ಮಂಜುನಾಥ ದೇವಸ್ಥಾನದಲ್ಲಿ ಬಾಂಬ್​ ನಿಷ್ಕ್ರಿಯ ದಳದಿಂದ ತಪಾಸಣೆ

ಮಂಗಳೂರಿನ ಪ್ರಸಿದ್ಧ ದೇಗುಲಗಳು, ಬಸ್ ನಿಲ್ದಾಣ ಹಾಗೂ ಆರ್​​ಎಸ್​ಎಸ್​ ಕಚೇರಿ ಶರೀಕ್​ನ ಟಾರ್ಗೆಟ್ ಆಗಿತ್ತು ಎನ್ನುವ ಆಘಾತಕಾರಿ ಅಂಶಗಳು ಪೊಲೀಸ್ ತನಿಖೆ ವೇಳೆ ಹೊರಬಂದಿವೆ. ಇದರಿಂದ ಇಡೀ ಮಂಗಳೂರು ಮಾತ್ರವಲ್ಲ ಕರ್ನಾಟಕವೇ ಬೆಚ್ಚಿಬಿದ್ದಿದೆ.

ಆಟೋದಲ್ಲಿ ಕುಕ್ಕರ್ ಬಾಂಬ್ ಸಿಡಿಸಿದ ಶಾರೀಕ್ ಮಂಗಳೂರಿನಲ್ಲಿ ಅದೆಂಥಾ ವಿಧ್ವಂಸಕ ಕೃತ್ಯ ನಡೆಸೋದಕ್ಕೆ ಸ್ಕೆಚ್ ಹಾಕಿದ್ದ ಅನ್ನೋ ಬೆಚ್ಚಿ ಬೀಳಿಸೋ ಸಂಗತಿ ಬಯಲಾಗಿದೆ. ಶಾರಿಕ್ ಬಾಂಬ್ ಬ್ಲಾಸ್ಟ್​ಗೂ ಮೊದಲು ಮಾಡಿದ ಪ್ಲ್ಯಾನ್​ಗಳು.. ಆತನೇ ಬಿಟ್ಟು ಕೊಟ್ಟ ಹಿಂಟ್​ಗಳಿಂದ. ಉಗ್ರನ ಟಾರ್ಗೆಟ್ ಪ್ಲೇಸ್​ಗಳು ಯಾವುದೆಲ್ಲ ಆಗಿತ್ತು ಅಂತಾ ಖಾಕಿ ತನಿಖೆಯಲ್ಲಿ ಬಯಲಾಗಿದೆ.

ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada