ಕರಾವಳಿ ಭಾಗದ 3 ಪ್ರಸಿದ್ಧ ದೇವಾಲಯಗಳನ್ನು ಟಾರ್ಗೆಟ್ ಮಾಡಿದ್ದ ಶಾರಿಕ್, ಕದ್ರಿ ಮಂಜುನಾಥ ದೇವಸ್ಥಾನದಲ್ಲಿ ಬಾಂಬ್ ನಿಷ್ಕ್ರಿಯ ದಳದಿಂದ ತಪಾಸಣೆ
Mangaluru Cooker Blast: ಶಂಕಿತ ಉಗ್ರ ಶಾರಿಕ್, ಕರಾವಳಿ ಭಾಗದ 3 ದೇಗುಲಗಳನ್ನು ಟಾರ್ಗೆಟ್ ಮಾಡಿದ್ದ ಎಂದು ಟಿವಿ9ಗೆ ಪೊಲೀಸ್ ಉನ್ನತ ಮೂಲಗಳಿಂದ ಮಾಹಿತಿ ಸಿಕ್ಕಿದೆ.
ಮಂಗಳೂರು: ಮಂಗಳೂರು ಆಟೋ ಬ್ಲಾಸ್ಟ್(Mangalore Blast Case) ಪ್ರಕರಣ ಸ್ಫೋಟಕ ತಿರುವು ಪಡೆದುಕೊಳ್ಳುತ್ತಿದೆ. ದಿನದಿಂದ ದಿನಕ್ಕೆ ಆತಂಕ ಹೆಚ್ಚಿಸುತ್ತಿದೆ. ಕುಕ್ಕರ್ ಬಾಂಬರ್ ಶಾರೀಕ್(Mohammad Sharik), ತಾನು ಮುಸ್ಲಿಮನಾಗಿದ್ರೂ ತನ್ನ ಕುಕ್ಕೃತ್ಯಗಳನ್ನ ಸಾಧಿಸೋಕೆ ಅಪ್ಪಟ ಹಿಂದೂ ವೇಶ ಹಾಕಿದ್ದ. ಹಿಂದೂಗಳ ರೀತಿ ವೇಷ ಹಾಕಿಕೊಂಡು ಕರಾವಳಿ ಭಾಗದ 3 ಪ್ರಸಿದ್ಧ ದೇವಾಲಯಗಳನ್ನು ಟಾರ್ಗೆಟ್ ಮಾಡಿದ್ದ ಎಂಬ ಮಾಹಿತಿ ಬಹಿರಂಗವಾಗಿದೆ. ಹೀಗಾಗಿ ದೇವಸ್ಥಾನದ ಸುತ್ತಾಮುತ್ತಾ ಪರಿಶೀಲನೆ ನಡೆಸಲಾಗುತ್ತಿದೆ.
ಶಂಕಿತ ಉಗ್ರ ಶಾರಿಕ್, ಕರಾವಳಿ ಭಾಗದ 3 ದೇಗುಲಗಳನ್ನು ಟಾರ್ಗೆಟ್ ಮಾಡಿದ್ದ ಎಂದು ಟಿವಿ9ಗೆ ಪೊಲೀಸ್ ಉನ್ನತ ಮೂಲಗಳಿಂದ ಮಾಹಿತಿ ಸಿಕ್ಕಿದೆ. ಮಂಗಳೂರಿನ ಕದ್ರಿಯ ಮಂಜುನಾಥಸ್ವಾಮಿ ದೇವಸ್ಥಾನದ ಲಕ್ಷ ದೀಪೋತ್ಸವದಲ್ಲಿ ಬಾಂಬ್ ಸ್ಫೋಟಿಸಲು ಶಾರಿಕ್ ಪ್ಲ್ಯಾನ್ ಮಾಡಿದ್ದ ಎಂಬ ಶಂಕೆ ವ್ಯಕ್ತವಾಗಿದೆ. ಕುದ್ರೋಳಿಯಲ್ಲಿರುವ ಗೋಕರ್ಣನಾಥೇಶ್ವರ ದೇಗುಲ ಹಾಗೂ ಮಂಗಳಾದೇವಿ ದೇವಾಲಯಕ್ಕೂ ಸ್ಕೆಚ್ ಹಾಕಿದ್ದ ಎಂಬ ಅನುಮಾನ ವ್ಯಕ್ತವಾಗಿದೆ. ಶಿವನ ಡಿಪಿ ಬೆನ್ನತ್ತಿದಾಗ ಶಂಕಿತ ಉಗ್ರ ಶಾರಿಕ್ ಸಂಚು ಬಯಲಾಗಿದ್ದು ಪೊಲೀಸರು ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: Breaking News: ಶಾರೀಕ್ ಬೆನ್ನಿಗೆ ನಿಂತ ಇಸ್ಲಾಮಿಕ್ ರೆಸಿಸ್ಟೆನ್ಸ್ ಕೌನ್ಸಿಲ್: ಶೀಘ್ರ ಇನ್ನೊಂದು ದಾಳಿ ಮಾಡುವ ಬೆದರಿಕೆ
ಸದ್ಯ ಕದ್ರಿ ಮಂಜುನಾಥ ದೇವಸ್ಥಾನ ಶಂಕಿತ ಉಗ್ರ ಶಾರಿಕ್ನ ಟಾರ್ಗೆಟ್ ಆಗಿದ್ದ ಹಿನ್ನೆಲೆ ಬಾಂಬ್ ಸ್ಕ್ವಾಡ್ ನಿಂದ ದೇವಸ್ಥಾನದ ಸುತ್ತಲೂ ತಪಾಸಣೆ ನಡೆಸಲಾಗುತ್ತಿದೆ. ಬಾಂಬ್ ಸ್ಕ್ವಾಡ್ನ ಅಧಿಕಾರಿ, ಸಿಬ್ಬಂದಿ ದೇವಸ್ಥಾನದಲ್ಲೇ ಮೊಕ್ಕಾಂ ಹೂಡಿದ್ದಾರೆ. ಇನ್ನು ಶಾರಿಕ್ ತನ್ನ ಡಿಪಿಯಲ್ಲಿ ಶಿವನ ಫೋಟೋ ಹಾಕಿದ್ದ. ಹಾಗೂ ಶನಿವಾರದ ದಿನವೇ ಇಲ್ಲಿಗೆ ಅತಿ ಹೆಚ್ಚು ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ಅಲ್ಲದೆ ಶಾರಿಕ್ ಬಾಂಬ್ ತಂದು ಸ್ಫೋಟಿಸಿದ ದಿನವು ಶನಿವಾರವಾಗಿದೆ. ಹೀಗಾಗಿ ಶಂಕಿತ ಉಗ್ರ ಶಾರಿಕ್ ನ ಕದ್ರಿ ಟಾರ್ಗೆಟ್ ಬಗ್ಗೆ ಹಲವು ಅನುಮಾನ ವ್ಯಕ್ತವಾಗಿದೆ.
ಇನ್ನೂ ಈ ಮೂರು ದೇವಾಲಯಗಳು ಹೊರತು ಪಡಿಸಿ ಮಂಗಳೂರಿನ ರೈಲ್ವೇ ನಿಲ್ದಾಣ, ಮಂಗಳೂರಿನ ಕೆಎಸ್ಆರ್ಟಿಸಿ ಬಸ್ ಸ್ಟಾಂಡ್, ಮಂಗಳೂರಿನ ಸಂಘನಿಕೇತನದಲ್ಲಿ ಬಾಬ್ ಅಳವಡಿಸಲು ಶಾರಿಕ್ ಪ್ಲಾನ್ ಮಾಡಿಕೊಂಡಿದ್ದ ಎನ್ನಲಾಗುತ್ತಿದೆ. ಜೊತೆಗೆ ಮಂಗಳೂರಿನ ಮಣ್ಣಗುಡ್ಡದ ಸಂಘನಿಕೇತನ ಮತ್ತು ಗಾಂಧನಗರದ ಲೊಕೇಷನ್ಗಳನ್ನು ಶಾರಿಕ್ನ ಮೊಬೈಲ್ನಲ್ಲಿ ಸರ್ಚ್ ಆಗಿದೆ. ಸ್ಪೋಟಗೊಂಡ ದಿನ ಸಂಘನಿಕೇತನದಲ್ಲಿ ಮಕ್ಕಳ ಹಬ್ಬ ಕಾರ್ಯಕ್ರಮ ಇತ್ತು. ಮಾರನೇ ದಿನ ಕೂಡ ಮಕ್ಕಳ ಹಬ್ಬ ಕಾರ್ಯಕ್ರಮ ಇತ್ತು.
ಸ್ಫೋಟ ಸಂಭವಿಸಿದ್ದರೆ ಸಾಕಷ್ಟು ಅಮಾಯಕರಿಗೆ ತೊಂದರೆ ಆಗುತ್ತಿತ್ತು
ಶಂಕಿತ ಉಗ್ರ ಶಾರಿಕ್ನಿಂದ ಹಿಂದೂ ದೇಗುಲಗಳ ಟಾರ್ಗೆಟ್ ವಿಚಾರಕ್ಕೆ ಸಂಬಂಧಿಸಿ ಕದ್ರಿ ಮಂಜುನಾಥ ದೇಗುಲ ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಪ್ರತಿಕ್ರಿಯೆ ನೀಡಿದ್ದಾರೆ. ಮಂಜುನಾಥನ ಶಕ್ತಿ ಅವನ ಕೃತ್ಯಕ್ಕೆ ತಡೆ ನೀಡಿದೆ. ಸ್ಫೋಟ ಸಂಭವಿಸಿದ್ದರೆ ಸಾಕಷ್ಟು ಅಮಾಯಕರಿಗೆ ತೊಂದರೆ ಆಗುತ್ತಿತ್ತು. ಅವನಿಗೆ ಯಾಕೆ ಈ ಮನಸ್ಥಿತಿ ಬಂತೋ ನನಗೆ ಗೊತ್ತಿಲ್ಲ. ಮಂಜುನಾಥನ ಸಾನಿಧ್ಯದಲ್ಲಿ ಅಂತಹ ಅವಘಡ ನಡೆಯಲು ಬಿಡಲ್ಲ. ಇಲ್ಲಿನ ಮಂಜುನಾಥನ ಬೆಳಕಿನಲ್ಲಿ ಕತ್ತಲು ಕವಿಯಲು ಸಾಧ್ಯವಿಲ್ಲ ಎಂದರು.
Published On - 12:33 pm, Thu, 24 November 22