ದೆಹಲಿ, ಡಿ.12: ಈ ವರ್ಷ ದೇಶದಲ್ಲಿ ಅತ್ಯಧಿಕ ಕಲ್ಲಿದ್ದಲು ಉತ್ಪಾದಿಸುವ ಮೂಲಕ, ವಿದ್ಯುತ್ ವಲಯಕ್ಕೆ ಅತ್ಯಧಿಕ ಕಲ್ಲಿದ್ದಲು ಪೂರೈಕೆ ಮಾಡಲಾಗಿದೆ ಎಂದು ಕೇಂದ್ರ ಕಲ್ಲಿದ್ದಲು, ಗಣಿ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ಅವರು ರಾಜ್ಯಸಭೆಯಲ್ಲಿ (Rajya Sabha) ಲಿಖಿತ ಉತ್ತರದಲ್ಲಿ ಮಾಹಿತಿಯನ್ನು ನೀಡಿದರು. ಕಲ್ಲಿದ್ದಲು ಉತ್ಪಾದನೆ ಮತ್ತು ವಿದ್ಯುತ್ ವಲಯಕ್ಕೆ ಪೂರೈಕೆಯಲ್ಲಿ ಸ್ವಾವಲಂಬನೆಗಾಗಿ ಕೈಗೊಂಡ ಕ್ರಮಗಳ ಬಗ್ಗೆ ಕೇಂದ್ರ ಸಚಿವರು ರಾಜ್ಯ ಸಭೆಯಲ್ಲಿ ಮಾಹಿತಿ ನೀಡಿದ್ದಾರೆ.
ದೇಶದಲ್ಲಿ ಸಾಕಷ್ಟು ಕಲ್ಲಿದ್ದಲು ಲಭ್ಯತೆ ಇದೆ. 2022-23ನೇ ಸಾಲಿನಲ್ಲಿ ದೇಶವು ಅತ್ಯಧಿಕ ಕಲ್ಲಿದ್ದಲು ಉತ್ಪಾದನೆಗೆ ಸಾಕ್ಷಿಯಾಗಿದೆ. 2022-23ರಲ್ಲಿ ಅಖಿಲ ಭಾರತ ಕಲ್ಲಿದ್ದಲು ಉತ್ಪಾದನೆ 893.19 ಮೆಟ್ರಿಕ್ ಟನ್ ಆಗಿದ್ದು, 2021-22ರಲ್ಲಿ 778.21 ಮೆಟ್ರಿಕ್ ಟನ್ ಆಗಿತ್ತು. ಇದಲ್ಲದೆ, ಪ್ರಸಕ್ತ ಹಣಕಾಸು ವರ್ಷದಲ್ಲಿ ನವೆಂಬರ್ 2023 ರವರೆಗೆ, ದೇಶವು ಸುಮಾರು 591.40 ಮೆಟ್ರಿಕ್ ಟನ್ ಕಲ್ಲಿದ್ದಲನ್ನು ಉತ್ಪಾದಿಸಿದೆ, ಕಳೆದ ವರ್ಷದ ಇದೇ ಅವಧಿಯಲ್ಲಿ ಸುಮಾರು 524.72 ಮೆಟ್ರಿಕ್ ಟನ್ ಗೆ ಹೋಲಿಸಿದರೆ ಸುಮಾರು 13% ಬೆಳವಣಿಗೆಯಾಗಿದೆ. ವಿದ್ಯುತ್ ಸ್ಥಾವರಗಳಿಗೆ ಕಲ್ಲಿದ್ದಲು ಉತ್ಪಾದನೆ ಮತ್ತು ಪೂರೈಕೆಯಲ್ಲಿ ದೇಶವನ್ನು ಸ್ವಾವಲಂಬಿಯನ್ನಾಗಿ ಮಾಡಲು ಸರ್ಕಾರ ಅನೇಕ ಕ್ರಮಗಳನ್ನು ಕೈಗೊಂಡಿದೆ ಎಂದು ಜೋಶಿಯವರು ಲಿಖಿತ ರೂಪದಲ್ಲಿ ಉತ್ತರ ನೀಡಿದ್ದಾರೆ.
ಇದನ್ನೂ ಓದಿ: ಜಮ್ಮು ಕಾಶ್ಮೀರಕ್ಕೆ ಕಳಂಕವಾಗಿದ್ದ ಆರ್ಟಿಕಲ್ 370 ಇನ್ನಿಲ್ಲ, ದೇಶದಲ್ಲಿ ಎಲ್ಲ ರಾಜ್ಯಗಳಿಗೂ ಒಂದೇ ಕಾನೂನು – ಸಚಿವ ಜೋಶಿ ಸಂತಸ
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಉದರ ಮೇಲೆ ಕ್ಲಿಕ್ ಮಾಡಿ
Published On - 12:37 pm, Tue, 12 December 23