ದೆಹಲಿಯಲ್ಲಿ ಚಳಿಚಳಿ: 3.4 ಡಿಗ್ರಿ ಸೆಲ್ಸಿಯಸ್​ಗೆ ಕುಸಿದ ಉಷ್ಣಾಂಶ, ನಡುಗಿದ ಜನ

| Updated By: ganapathi bhat

Updated on: Apr 06, 2022 | 11:31 PM

ದೆಹಲಿಯಲ್ಲಿ ನಿನ್ನೆ 3.9 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿತ್ತು. ಇಂದು ಮತ್ತೆ 0.5ನಷ್ಟು ತಾಪಮಾನ ಕಡಿಮೆಯಾಗಿದೆ. ಜನರು ಚಳಿಯಲ್ಲಿ ನಡುಗುವಂತಾಗಿದೆ.

ದೆಹಲಿಯಲ್ಲಿ ಚಳಿಚಳಿ: 3.4 ಡಿಗ್ರಿ ಸೆಲ್ಸಿಯಸ್​ಗೆ ಕುಸಿದ ಉಷ್ಣಾಂಶ, ನಡುಗಿದ ಜನ
ಸಾಂದರ್ಭಿಕ ಚಿತ್ರ
Follow us on

ದೆಹಲಿ: ರಾಷ್ಟ್ರ ರಾಜಧಾನಿ ದೆಹಲಿ, ಭಾನುವಾರ ಈ ವರ್ಷದ ಅತ್ಯಂತ ತೀವ್ರ ಚಳಿಯನ್ನು ಅನುಭವಿಸಿತು. ಇಂದು ಬೆಳಿಗ್ಗೆ ಉಷ್ಣಾಂಶವು ಈ ವರ್ಷದ ಅತ್ಯಂತ ಕನಿಷ್ಠ ಅಂದರೆ 3.4 ಡಿಗ್ರಿ ಸೆಲ್ಸಿಯಸ್​ಗೆ ಕುಸಿದಿತ್ತು.

ದೆಹಲಿಯಲ್ಲಿ ನಿನ್ನೆ 3.9 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿತ್ತು. ಇಂದು ಮತ್ತೆ 0.5ನಷ್ಟು ತಾಪಮಾನ ಕಡಿಮೆಯಾಗಿದೆ. ಜನರು ಚಳಿಯಲ್ಲಿ ನಡುಗುವಂತಾಗಿದೆ. ದೆಹಲಿಯ ಲೋಧಿ ರೋಡ್​ ಬಳಿ ಶೀತಗಾಳಿ ಬೀಸಿದ ಪರಿಣಾಮ ತಾಪಮಾನ 3.3 ಡಿಗ್ರಿ ಸೆಲ್ಸಿಯಸ್​ಗೂ ಕನಿಷ್ಠ ಮಟ್ಟಕ್ಕೆ ಇಳಿದಿದೆ. ಪಶ್ಚಿಮ ಹಿಮಾಲಯ ಭಾಗದಿಂದ ಬೀಸಿದ ಗಾಳಿಯಿಂದ ಚಳಿ ಮತ್ತಷ್ಟು ಹೆಚ್ಚಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ದೆಹಲಿಯಲ್ಲಿ ಗುರುವಾರ 15.2 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿತ್ತು. ಶುಕ್ರವಾರ ಗರಿಷ್ಠ 19.8 ಡಿಗ್ರಿ ಸೆಲ್ಸಿಯಸ್ ಮತ್ತು ಶನಿವಾರ 21.8 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿತ್ತು. ಜಫಾರ್​ಪುರ್ ಕಳೆದ ಶುಕ್ರವಾರ ಕನಿಷ್ಠ 2.7 ಡಿಗ್ರಿ ಸೆಲ್ಸಿಯಸ್ ತಾಪಮಾನ ಕಂಡಿತ್ತು. ಮುಂದಿನ ಐದಾರು ದಿನಗಳ ಕಾಲ, ದೆಹಲಿಯ ಕನಿಷ್ಠ ತಾಪಮಾನವು 5 ಡಿಗ್ರಿ ಸೆಲ್ಸಿಯಸ್​ನಷ್ಟು ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ರಾಜಸ್ಥಾನದ ಮೌಂಟ್ ಅಬು ಪ್ರದೇಶದಲ್ಲೂ ಶೀತಗಾಳಿಯ ಪರಿಣಾಮ ಮೈನಸ್ 1 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಕಳೆದ ಎರಡು ದಿನಗಳಿಂದ ಚಳಿ ಅನುಭವಿಸುತ್ತಿರುವ ಪ್ರವಾಸಿಗರು, ಮನಾಲಿಯಂಥಾ ಸ್ಥಳಗಳಲ್ಲಿ ನೋಡಬಹುದಾದ ಮಂಜುಗಡ್ಡೆಯನ್ನು ನಾವು ಇಲ್ಲಿ ಕಾಣುತ್ತಿದ್ದೇವೆ ಎಂದು ಹೇಳಿದ್ದಾರೆ.

ಉತ್ತರ ಪ್ರದೇಶದ ಪ್ರಯಾಗ್​ರಾಜ್​ನಲ್ಲೂ ಜನರು ಅತಿಯಾದ ಚಳಿ ಅನುಭವಿಸುತ್ತಿದ್ದಾರೆ. ನಸುಕಿನಲ್ಲಿ ಕೆಲಸಕ್ಕೆ ತೊಡಗುವವರು ರಸ್ತೆ ಬದಿಗಳಲ್ಲಿ ಬೆಂಕಿಹಾಕಿ ಮೈಕಾಯಿಸಿಕೊಳ್ಳುತ್ತಿರುವ ದೃಶ್ಯಗಳನ್ನು ANI ಪ್ರಕಟಿಸಿದೆ.

ಚುಮು ಚುಮು ಚಳಿ, ಫಳಫಳ ಮಂಜು: ಸ್ವೆಟರ್ ತೊಟ್ಟ ಉತ್ತರ ಭಾರತ!

Published On - 4:15 pm, Sun, 20 December 20