ವಿಪರೀತ ಚಳಿ, ದೆಹಲಿಯ ಶಾಲೆಗಳೆಲ್ಲವೂ ಜನವರಿ 12ರವರೆಗೆ ಬಂದ್

ದೆಹಲಿಯಲ್ಲಿ ಚಳಿ ಹೆಚ್ಚಾದ ಹಿನ್ನೆಲೆಯಲ್ಲಿ ಜನವರಿ 12ರವರೆಗೆ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ನರ್ಸರಿಯಿಂದ 5ನೇ ತರಗತಿಯ ವಿದ್ಯಾರ್ಥಿಗಳಿಗೆ ಮುಂದಿನ 5 ದಿನಗಳ ಕಾಲ ರಜೆ ನೀಡಲಾಗಿದೆ ಎಂದು ಶಿಕ್ಷಣ ಸಚಿವರಾದ ಅತಿಶಿ ತಿಳಿಸಿದ್ದಾರೆ. ಚಲಿತ ಶೀತ ಹವಾಮಾನದ ಕಾರಣದಿಂದ ದೆಹಲಿಯ ಶಾಲೆಗಳು ಮುಂದಿನ ಐದು ದಿನಗಳವರೆಗೆ ಮುಚ್ಚಿರುತ್ತವೆ, ಇದು ನರ್ಸರಿಯಿಂದ 5 ನೇ ತರಗತಿಯವರೆಗಿನ ವಿದ್ಯಾರ್ಥಿಗಳಿಗೆ ಮಾತ್ರ ಎಂದು ಬರೆಯಲಾಗಿದೆ.

ವಿಪರೀತ ಚಳಿ, ದೆಹಲಿಯ ಶಾಲೆಗಳೆಲ್ಲವೂ ಜನವರಿ 12ರವರೆಗೆ ಬಂದ್
ವಿದ್ಯಾರ್ಥಿಗಳು
Image Credit source: Delhi Capital

Updated on: Jan 07, 2024 | 12:10 PM

ದೆಹಲಿಯಲ್ಲಿ ಚಳಿ ಹೆಚ್ಚಾದ ಹಿನ್ನೆಲೆಯಲ್ಲಿ ಜನವರಿ 12ರವರೆಗೆ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ನರ್ಸರಿಯಿಂದ 5ನೇ ತರಗತಿಯ ವಿದ್ಯಾರ್ಥಿಗಳಿಗೆ ಮುಂದಿನ 5 ದಿನಗಳ ಕಾಲ ರಜೆ ನೀಡಲಾಗಿದೆ ಎಂದು ಶಿಕ್ಷಣ ಸಚಿವರಾದ ಅತಿಶಿ ತಿಳಿಸಿದ್ದಾರೆ.
ಚಲಿತ ಶೀತ ಹವಾಮಾನದ ಕಾರಣದಿಂದ ದೆಹಲಿಯ ಶಾಲೆಗಳು ಮುಂದಿನ ಐದು ದಿನಗಳವರೆಗೆ ಮುಚ್ಚಿರುತ್ತವೆ, ಇದು ನರ್ಸರಿಯಿಂದ 5 ನೇ ತರಗತಿಯವರೆಗಿನ ವಿದ್ಯಾರ್ಥಿಗಳಿಗೆ ಮಾತ್ರ ಎಂದು ಬರೆಯಲಾಗಿದೆ.

ದೆಹಲಿಯಲ್ಲಿ ಜನವರಿ 1 ರಿಂದ ಚವಳಿಗಾಲದ ರಜೆಯನ್ನು ಘೋಷಿಸಲಾಗಿತ್ತು, ನಾಳೆಯಿಂದ ಶಾಲೆಗಳು ಪುನಃ ಆರಂಭಗೊಳ್ಳಬೇಕಿತ್ತು, ಆದರೆ ಈ ರಜೆಯನ್ನು 12ರವರೆಗೆ ವಿಸ್ತರಿಸಲಾಗಿದೆ ಎಂದು ತಿಳಿಸಲಾಗಿದೆ. ಕಳೆದ ಕೆಲವು ದಿನಗಳಿಂದ, ದೆಹಲಿ ಮತ್ತು ಅದರ ನೆರೆಹೊರೆಯ ರಾಜ್ಯಗಳಲ್ಲಿ ಶೀತ ಹೆಚ್ಚಳವಾಗಿದೆ. ಮಂಜು ಕವಿದ ವಾತಾವರಣವಿರಲಿದ್ದು, ಸೂರ್ಯನ ಶಾಖ ಭೂಮಿಗೆ ತಾಕದ ಪರಿಣಾಮ ಚಳಿಯ ತೀವ್ರತೆ ವಿಪರೀತವಾಗಿದೆ.

ಮುಂದಿನ ಎರಡು ದಿನಗಳಲ್ಲಿ ಪಂಜಾಬ್, ಹರಿಯಾಣ, ಚಂಡೀಗಢ, ದೆಹಲಿ ಮತ್ತು ರಾಜಸ್ಥಾನದಲ್ಲಿ ಶೀತ ದಿನದಿಂದ ತೀವ್ರ ಚಳಿಯ ವಾತಾವರಣ ಮುಂದುವರೆಯಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಮತ್ತಷ್ಟು ಓದಿ: Karnataka Weather: ಒಂದೆಡೆ ಚಳಿ, ಬೆಂಗಳೂರು ಸೇರಿದಂತೆ ಹಲವೆಡೆ ಜನವರಿ 8ರವರೆಗೆ ಮಳೆ ಸಾಧ್ಯತೆ

ಶನಿವಾರ ದೆಹಲಿಯಲ್ಲಿ ಗರಿಷ್ಠ ತಾಪಮಾನ 15.2 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ, ಭಾನುವಾರ ಬೆಳಿಗ್ಗೆ ಕನಿಷ್ಠ ತಾಪಮಾನವು 8.2 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.

ಗೌತಮ್ ಬುದ್ಧ ನಗರ ಜಿಲ್ಲಾಡಳಿತವು ನೋಯ್ಡಾ ಮತ್ತು ಗ್ರೇಟರ್ ನೋಯ್ಡಾದ ಎಲ್ಲಾ ಶಾಲೆಗಳಿಗೆ 8 ಜನವರಿ 14 ರವರೆಗೆ ರಜೆ ಇರುತ್ತದೆ ಎಂದು ಘೋಷಿಸಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
Follow Us