Noida: ತಾರಕಕ್ಕೇರಿದ ಜಗಳ, ಸೇಹಿತರಿಂದಲೇ ಕೊಲೆಯಾದ ವಿದ್ಯಾರ್ಥಿ

|

Updated on: Feb 29, 2024 | 10:46 AM

ಸ್ನೇಹಿತರ ನಡುವೆ ನಡೆದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ಸ್ನೇಹಿತರೆಲ್ಲಾ ಸೇರಿ ವಿದ್ಯಾರ್ಥಿಯೊಬ್ಬನನ್ನು ಕೊಲೆ ಮಾಡಿರುವ ಘಟನೆ ನೋಯ್ಡಾದಲ್ಲಿ ನಡೆದಿದೆ

Noida: ತಾರಕಕ್ಕೇರಿದ ಜಗಳ, ಸೇಹಿತರಿಂದಲೇ ಕೊಲೆಯಾದ ವಿದ್ಯಾರ್ಥಿ
ಮೃತ ವಿದ್ಯಾರ್ಥಿ
Image Credit source: NDTV
Follow us on

ಜಗಳ ತಾರಕಕ್ಕೇರಿ ಸ್ನೇಹಿತರೇ ವಿದ್ಯಾರ್ಥಿಯನ್ನು ಹತ್ಯೆ ಮಾಡಿ ಬಳಿಕ ಶವವನ್ನು ಹೊಲದಲ್ಲಿ ಹೂತುಹಾಕಿರುವ ಘಟನೆ ನೋಯ್ಡಾದಲ್ಲಿ ನಡೆದಿದೆ. ಕಾಲೇಜು ವಿದ್ಯಾರ್ಥಿ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದ, ಪೋಷಕರು ಪೊಲೀಸರಿಗೆ ದೂರು ನೀಡಿದ್ದರು. ಈ ಕೊಲೆಯಲ್ಲಿ ನಾಲ್ಕು ಮಂದಿ ಪಾತ್ರವಿದೆ ಎಂಬುದು ತಿಳಿದುಬಂದಿದೆ. ನೋಯ್ಡಾ ಮೂಲದ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಮತ್ತು ಉದ್ಯಮಿಯ ಪುತ್ರ ಯಶ್ ಮಿತ್ತಲ್ ಸೋಮವಾರದಿಂದ ತನ್ನ ಹಾಸ್ಟೆಲ್‌ನಿಂದ ನಾಪತ್ತೆಯಾಗಿದ್ದ.

ಆತನ ತಂದೆ ದೀಪಕ್ ಮಿತ್ತಲ್​ಗೆ ಅವರ ಮಗನ ಬಿಡುಗಡೆ ಮಾಡಬೇಕೆಂದರೆ 6 ಕೋಟಿ ನೀಡುವಂತೆ ಮೆಸೇಜ್​ ಬಂದಿತ್ತು ಹಾಗಾಗಿ ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ಕ್ಯಾಂಪಸ್‌ನ ಸಿಸಿಟಿವಿ ದೃಶ್ಯಾವಳಿಗಳನ್ನು ಸ್ಕ್ಯಾನ್ ಮಾಡಿದಾಗ, ಫೋನ್‌ನಲ್ಲಿ ಮಾತನಾಡುವಾಗ ಯಶ್ ಸೋಮವಾರ ವಿಶ್ವವಿದ್ಯಾಲಯದಿಂದ ಹೊರಹೋಗುವುದು ಕಂಡುಬಂದಿದೆ.

ಫೋನ್​ ಕರೆಯ ದಾಖಲೆಗಳನ್ನು ಪರಿಶೀಲಿಸಲಾಯಿತು, ಅದರಲ್ಲಿ ರಚಿತ್ ಎಂಬುವವನ ನಂಬರ್ ಇತ್ತು, ಆತನನ್ನು ವಿಚಾರಣೆಗೆ ಒಳಪಡಿಸಿದಾಗ ಯಶ್​, ರಚಿತ್, ಶಿವಂ ಹಾಗೂ ಸುಶಾಂತ್​ ಹಾಗೂ ಶಿವಮ್ ಅವರೊಂದಿಗೆ ಆಗಾಗ ಸುತ್ತಾಡುತ್ತಿದ್ದ ಎಂಬುದು ಗೊತ್ತಾಗಿತ್ತು.

ಆನೇಕಲ್​: ನಡುರಸ್ತೆಯಲ್ಲೇ ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನ ಕೊಲೆ

ಫೆಬ್ರವರಿ 26 ರಂದು, ಅವರು ಪಾರ್ಟಿಗಾಗಿ ಉತ್ತರ ಪ್ರದೇಶದ ಅಮ್ರೋಹಾ (ಸುಮಾರು 100 ಕಿಮೀ ದೂರ) ಗಜ್ರೌಲಾ ಎಂಬಲ್ಲಿನ ಹೊಲಕ್ಕೆ ಯಶ್ ಅವರನ್ನು ಕರೆದೊಯ್ದರು. ಪಾರ್ಟಿಯ ಸಮಯದಲ್ಲಿ, ಗಲಾಟೆ ನಡೆಯಿತು. ಅವರು ಯಶ್ ಅವರನ್ನು ಕೊಂದು ಶವವನ್ನು ಹೂತು ಹಾಕಿದರು.

ರಚಿತ್ ಸ್ಥಳವನ್ನು ಗುರುತಿಸಿದ ನಂತರ ನಾವು ಶವವನ್ನು ಹೊರತೆಗೆದಿದ್ದೇವೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಸಾದ್ ಮಿಯಾ ಖಾನ್ ಹೇಳಿದ್ದಾರೆ. ಪೊಲೀಸರು ದಾದ್ರಿಯಲ್ಲಿ ಇತರ ಆರೋಪಿಗಳನ್ನು ಪತ್ತೆ ಮಾಡಿದರು. ಆರೋಪಿಗಳು ತಪ್ಪಿಸಿಕೊಳ್ಳಲು ಪ್ರಯತ್ನಿಸಿದರು, ಆದರೆ ಎನ್‌ಕೌಂಟರ್ ನಂತರ ಪೊಲೀಸರಿಗೆ ಸಿಕ್ಕಿಬಿದ್ದರು.

ನಾವು ಪ್ರದೇಶದಲ್ಲಿ ಕೂಂಬಿಂಗ್ ನಂತರ ಮೂವರು ಆರೋಪಿಗಳನ್ನು ಬಂಧಿಸಿದ್ದೇವೆ. ಮತ್ತೊಬ್ಬ ಆರೋಪಿ ಶುಭಂ ಪರಾರಿಯಾಗಿದ್ದಾನೆ ಎಂದು ತಿಳಿಸಿದ್ದಾರೆ. ಯಶ್ ಅವರ ಕುಟುಂಬವನ್ನು ದಾರಿತಪ್ಪಿಸಲು ಸುಲಿಗೆ ಸಂದೇಶಗಳನ್ನು ಕಳುಹಿಸಲಾಗಿದೆ ಎಂದು ಆರೋಪಿಗಳು ತಿಳಿಸಿದ್ದಾರೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ