ಇಟಾನಗರ: ಕೊಲಿಜಿಯಂ(collegium) ವ್ಯವಸ್ಥೆಯನ್ನು ಮೈಂಡ್ ಗೇಮ್ ಎಂದು ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು (Kiren Rijiju) ಹೇಳಿದ್ದು ಅದರ ಬಗ್ಗೆ ನಾನು ಮಾತನಾಡುವುದಿಲ್ಲ ಎಂದಿದ್ದಾರೆ. ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ನೇಮಕ ಸೇರಿದಂತೆ ಸರ್ಕಾರದ ಮುಂದೆ ಬಾಕಿ ಉಳಿದಿರುವ ಸುಪ್ರೀಂಕೋರ್ಟ್ ಕೊಲಿಜಿಯಂನ ವಿವಿಧ ಶಿಫಾರಸುಗಳ ಕುರಿತು ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು ಕೊಲಿಜಿಯಂ ವಿಷಯ ಮೈಂಡ್‌ಗೇಮ್‌ಗೆ ಸಂಬಂಧಿಸಿದೆ. ನಾನು ಅದರ ಬಗ್ಗೆ ಮಾತನಾಡಲು ಹೋಗುವುದಿಲ್ಲ ಎಂದಿದ್ದಾರೆ. ರಿಜಿಜು ಅವರು ಅರುಣಾಚಲ ಪ್ರದೇಶಕ್ಕೆ 4G ಸೇವೆಗಳಿಗಾಗಿ 254 ಮೊಬೈಲ್ ಟವರ್‌ಗಳನ್ನು ಅರ್ಪಿಸುವ ಕಾರ್ಯಕ್ರಮದ ಹೊತ್ತಲ್ಲಿ ಈ ರೀತಿ ಮಾತನಾಡಿದ್ದಾರೆ.
Momentous occasion for the people of #ArunachalPradesh as 254 4G mobile towers were dedicated to the nation. This high-speed internet facility to 336 remote villages will transform the lives of the people. The border people are extending their gratitude to PM @narendramodi Ji. pic.twitter.com/GjYnZTpoDE
— Kiren Rijiju (@KirenRijiju) April 22, 2023
ಕಠಿಣ ಭೂಪ್ರದೇಶವನ್ನು ಹೊಂದಿರುವ ಗಡಿ ಪ್ರದೇಶಗಳಲ್ಲಿ ಮೂಲಸೌಕರ್ಯ ಸೌಲಭ್ಯಗಳ ಕೊರತೆಯು ಸ್ಥಳೀಯರಿಗೆ ಪ್ರಮುಖ ಸಮಸ್ಯೆಯಾಗಿದೆ ಎಂದು ಅವರು ಹೇಳಿದ್ದಾರೆ. ಕಿರಣ್ ರಿಜಿಜು ಮತ್ತು ತಾಪಿರ್ ಗಾವೊ ಲೋಕಸಭೆಯಲ್ಲಿ ಅರುಣಾಚಲ ಪ್ರದೇಶವನ್ನು ಪ್ರತಿನಿಧಿಸುತ್ತಾರೆ.
ಇದನ್ನೂ ಓದಿ: 2024ಕ್ಕೆ ಯಾಕೆ ಕಾಯಬೇಕು? ಮಹಾರಾಷ್ಟ್ರದ ಮುಖ್ಯಮಂತ್ರಿ ಹುದ್ದೆಗೆ ಈಗಲೇ ಸಿದ್ಧ: ಅಜಿತ್ ಪವಾರ್
ರಿಜಿಜು ಕೊಲಿಜಿಯಂ ವ್ಯವಸ್ಥೆಯ ವಿರುದ್ಧ ಸಾಕಷ್ಟು ದನಿಯೆತ್ತಿದ್ದಾರೆ .ಒಮ್ಮೆ ಅದನ್ನು ನಮ್ಮ ಸಂವಿಧಾನಕ್ಕೆ ಅನ್ಯವಾದುದು ಎಂದು ಹೇಳಿದ್ದರು.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ