Kiren Rijiju: ಜಮ್ಮು ಕಾಶ್ಮೀರದಲ್ಲಿ ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಕಾರು ಅಪಘಾತ; ಯಾರಿಗೂ ಪ್ರಾಣಾಪಾಯವಿಲ್ಲ
ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ಶನಿವಾರ ಕಾನೂನು ಸಚಿವ ಕಿರಣ್ ರಿಜಿಜು ಅವರ ಕಾರಿಗೆ ಟ್ರಕ್ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ.
ಜಮ್ಮು ಮತ್ತು ಕಾಶ್ಮೀರದ (Jammu and Kashmir) ರಾಂಬನ್ ಜಿಲ್ಲೆಯ ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ಶನಿವಾರ ಕಾನೂನು ಸಚಿವ ಕಿರಣ್ ರಿಜಿಜು (Kiren Rijiju) ಅವರ ಕಾರಿಗೆ ಟ್ರಕ್ ಡಿಕ್ಕಿ ಹೊಡೆದು ಅಪಘಾತ (Accident) ಸಂಭವಿಸಿದೆ. ಈ ಅಪಘಾತದಲ್ಲಿ ಯಾರಿಗೂ ಪ್ರಾಣಾಪಾಯ ಸಂಭವಿಸಿಲ್ಲ. ಕಾರಿನಲ್ಲಿದ್ದ ಕೇಂದ್ರ ಸಚಿವ ಕಿರಣ್ ರಿಜಿಜು ಮತ್ತು ಇತರರು ಸಂಚರಿಸುತ್ತಿದ್ದರು. ಅಪಘಾತದಲ್ಲಿ ಬುಲೆಟ್‌ಪ್ರೂಫ್ ಕಾರು ಜಖಂಗೊಂಡಿದೆ. ಇಂದು ಜಮ್ಮುವಿನಿಂದ ಶ್ರೀನಗರಕ್ಕೆ ರಸ್ತೆ ಮಾರ್ಗವಾಗಿ ಹೋಗುತ್ತಿದ್ದಾಗ ಕೇಂದ್ರ ಸಚಿವ ಕಿರಣ್ ರಿಜಿಜು ಅವರ ಕಾರು ಸಣ್ಣ ಅಪಘಾತಕ್ಕೀಡಾಗಿದೆ. ಅಪಘಾತದಲ್ಲಿ ಯಾರಿಗೂ ಗಾಯಗಳಾಗಿಲ್ಲ. ಕಿರಣ್ ರಿಜಿಜು ಅವರನ್ನು ಸುರಕ್ಷಿತವಾಗಿ ಅವರ ಗಮ್ಯಸ್ಥಾನಕ್ಕೆ ಕರೆದೊಯ್ಯಲಾಗಿದೆ ಎಂದು ರಾಂಬನ್ ಪೊಲೀಸರು ಹೇಳಿರುವುದಾಗಿ ಎಎನ್ಐ ಸುದ್ದಿ ಸಂಸ್ಥೆ ಟ್ವೀಟ್ ಮಾಡಿದೆ.
Today while going from Jammu to Srinagar by road, Union Minister for Law and Justice Kiran Rijiju’s car met with a minor accident. No one was injured in the accident. Kiren Rijiju was driven safely to his destination: Ramban Police pic.twitter.com/6bQcE1X5N7
— ANI (@ANI) April 8, 2023
ಎಲ್ಲರೂ ಸುರಕ್ಷಿತರಾಗಿದ್ದಾರೆ. ಸಣ್ಣ ಅಪಘಾತವಾಗಿದ್ದು, ಎಲ್ಲವೂ ನಿಯಂತ್ರಣದಲ್ಲಿದೆ ಎಂದು ಎಡಿಜಿ ಮುಖೇಶ್ ಸಿಂಗ್ ಹೇಳಿದ್ದಾರೆ. ಘಟನೆಯ ವಿಡಿಯೋದಲ್ಲಿ ಭದ್ರತಾ ಸಿಬ್ಬಂದಿ ಸಚಿವರ ಕಪ್ಪು ಸ್ಕಾರ್ಪಿಯೊದ ಬಾಗಿಲು ತೆರೆಯಲು ಧಾವಿಸಿ ಜನರನ್ನು ಹೊರಗೆ ಕರೆತರುವುದನ್ನು ಕಾಣುತ್ತದೆ.
ಹೆಚ್ಚಿನ ಸಂಖ್ಯೆಯ ಭದ್ರತಾ ಸಿಬ್ಬಂದಿ ಅಲ್ಲಿ ಸುತ್ತುವರಿದಿದ್ದು ಸಚಿವರು ವಾಹನದಿಂದ ಹೊರಬರುವುದನ್ನು ಚಿತ್ರಗಳು ತೋರಿಸುತ್ತವೆ.
ಇಂದು ಬೆಳಗ್ಗೆ ಕಾನೂನು ಸೇವೆಗಳ ಶಿಬಿರದಲ್ಲಿ ಪಾಲ್ಗೊಳ್ಳಲು ಜಮ್ಮುವಿನಿಂದ ಉಧಮ್‌ಪುರಕ್ಕೆ ಪ್ರಯಾಣಿಸುತ್ತಿದ್ದಾಗ ಸಚಿವರು ಪ್ರಯಾಣದುದ್ದಕ್ಕೂ ಸುಂದರವಾದ ರಸ್ತೆ ಪಯಣವನ್ನು ಆನಂದಿಸಬಹುದು ಎಂದು ಟ್ವೀಟ್ ಮಾಡಿದ್ದಾರೆ.
Published On - 8:30 pm, Sat, 8 April 23