ರಾಹುಲ್​​ಗೆ ಮತ್ತೊಂದು ಸಂಕಷ್ಟ; ತನ್ನ ಹೆಸರನ್ನು ಅದಾನಿ ಜತೆ ತಳಕು ಹಾಕಿದ್ದಕ್ಕೆ ನ್ಯಾಯಾಲಯದ ಮೆಟ್ಟಿಲೇರಲು ಹಿಮಂತ ಬಿಸ್ವ ಶರ್ಮಾ ನಿರ್ಧಾರ

2015ರಲ್ಲಿ ಬಿಜೆಪಿಗೆ ಸೇರ್ಪಡೆಗೊಂಡ ಅಸ್ಸಾಂ ಮುಖ್ಯಮಂತ್ರಿ ಶರ್ಮಾ ರಾಹುಲ್ ಗಾಂಧಿಗೆ ತಿರುಗೇಟು ನೀಡಿದ್ದು ಬೋಫೋರ್ಸ್ ಮತ್ತು ನ್ಯಾಷನಲ್ ಹೆರಾಲ್ಡ್ ಹಗರಣಗಳಿಂದ ಅಪರಾಧದ ಆದಾಯವನ್ನು ಎಲ್ಲಿ ಮರೆಮಾಡಿದ್ದೀರಿ ಎಂದು ನಿಮ್ಮನ್ನು ಎಂದಿಗೂ ಕೇಳದಿರುವುದು ನಮ್ಮ ಮರ್ಯಾದೆ ಎಂದಿದ್ದಾರೆ.

ರಾಹುಲ್​​ಗೆ ಮತ್ತೊಂದು ಸಂಕಷ್ಟ; ತನ್ನ ಹೆಸರನ್ನು ಅದಾನಿ ಜತೆ ತಳಕು ಹಾಕಿದ್ದಕ್ಕೆ ನ್ಯಾಯಾಲಯದ ಮೆಟ್ಟಿಲೇರಲು ಹಿಮಂತ ಬಿಸ್ವ ಶರ್ಮಾ ನಿರ್ಧಾರ
ಹಿಮಂತ ಬಿಸ್ವ ಶರ್ಮಾ
Follow us
ರಶ್ಮಿ ಕಲ್ಲಕಟ್ಟ
|

Updated on:Apr 08, 2023 | 7:43 PM

ಗೌತಮ್ ಅದಾನಿ (Gautam Adani) ಹೆಸರುಗಳನ್ನು ಉಲ್ಲೇಖಿಸಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಮಾಡಿದ ಟ್ವೀಟ್‌ಗೆ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ (Himanta Biswa Sarma) ತೀಕ್ಷ್ಣ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸಿದ್ದಾರೆ.ಬೋಫೋರ್ಸ್ ಹಗರಣ ಮತ್ತು ನ್ಯಾಷನಲ್ ಹೆರಾಲ್ಡ್ ಹಗರಣದ ಪ್ರಕರಣಗಳಲ್ಲಿ ಅವರನ್ನು ಪ್ರಶ್ನಿಸದಿರುವುದು ನಮ್ಮ ಸಭ್ಯತೆ ಎಂದಿದ್ದಾರೆ. ರಾಹುಲ್ ಗಾಂಧಿ ಶನಿವಾರ ಅದಾನಿ ಗ್ರೂಪ್ ವಿರುದ್ಧದ ಆರೋಪಗಳನ್ನು ಮತ್ತಷ್ಟು ತೀವ್ರಗೊಳಿಸಿದ್ದಾರೆ. ಅವರು ಸತ್ಯವನ್ನು ಮರೆಮಾಡುತ್ತಾರೆ, ಅದಕ್ಕಾಗಿಯೇ ಅವರು ಪ್ರತಿದಿನ ದಾರಿ ತಪ್ಪಿಸುತ್ತಾರೆ ಎಂದು ರಾಹುಲ್ ಟ್ವೀಟ್ ಮಾಡಿದ್ದಾರೆ. ಅದಾನಿ ಕಂಪನಿಗಳಲ್ಲಿ ₹20,000 ಕೋಟಿ ಬೇನಾಮಿ ಹಣ ಯಾರ ಬಳಿ ಇದೆ ಎಂಬ ಪ್ರಶ್ನೆ ಹಾಗೆಯೇ ಉಳಿದಿದೆ. ಅದಾನಿ ಹೆಸರಿನ ಪ್ರತಿ ಅಕ್ಷರಕ್ಕೆ ಕಾಂಗ್ರೆಸ್ ತೊರೆದ ನಾಯಕರ ಹೆಸರನ್ನು ಜೋಡಿಸಿರುವ ಗ್ರಾಫಿಕ್ಸ್ ನ್ನು ಕೂಡಾ ರಾಹುಲ್ ಟ್ವೀಟಿಸಿದ್ದಾರೆ.

2015ರಲ್ಲಿ ಬಿಜೆಪಿಗೆ ಸೇರ್ಪಡೆಗೊಂಡ ಅಸ್ಸಾಂ ಮುಖ್ಯಮಂತ್ರಿ ಶರ್ಮಾ ರಾಹುಲ್ ಗಾಂಧಿಗೆ ತಿರುಗೇಟು ನೀಡಿದ್ದು, ಬೋಫೋರ್ಸ್ ಮತ್ತು ನ್ಯಾಷನಲ್ ಹೆರಾಲ್ಡ್ ಹಗರಣಗಳಿಂದ ಅಪರಾಧದ ಆದಾಯವನ್ನು ಎಲ್ಲಿ ಮರೆಮಾಡಿದ್ದೀರಿ ಎಂದು ನಿಮ್ಮನ್ನು ಎಂದಿಗೂ ಕೇಳದಿರುವುದು ನಮ್ಮ ಮರ್ಯಾದೆ ಎಂದಿದ್ದಾರೆ.

ನೀವು ಒಟ್ಟಾವಿಯೊ ಕ್ವಟ್ರೋಚಿಗೆ ಭಾರತೀಯ ನ್ಯಾಯದ ಹಿಡಿತದಿಂದ ಹಲವಾರು ಬಾರಿ ತಪ್ಪಿಸಿಕೊಳ್ಳಲು ಹೇಗೆ ಅವಕಾಶ ಮಾಡಿಕೊಟ್ಟಿದ್ದೀರಿ. ಏನೇ ಆಗಲಿ ನಾವು ನ್ಯಾಯಾಲಯದಲ್ಲಿ ಭೇಟಿಯಾಗುತ್ತೇವೆ ಎಂದು ಶರ್ಮಾ ಟ್ವೀಟ್ ಮಾಡಿದ್ದಾರೆ.

ಬಿಲಿಯನೇರ್ ಗೌತಮ್ ಅದಾನಿ ಅವರೊಂದಿಗೆ ಪ್ರಧಾನಿ ನರೇಂದ್ರ ಮೋದಿಯವರ ನಿಕಟ ಸಂಪರ್ಕದ ಆರೋಪ ಹೊರಿಸಿ ಬಿಜೆಪಿಯನ್ನು ಮೂಲೆಗುಂಪು ಮಾಡಲು ಕಾಂಗ್ರೆಸ್ ಪ್ರಯತ್ನಿಸುತ್ತಿದೆ.

ಇದನ್ನೂ ಓದಿ: ಅದಾನಿ ಕುರಿತ ರಾಹುಲ್ ಗಾಂಧಿಯ ಟೀಕೆಯ ಟ್ವೀಟ್​​ಗೆ ಕುಟುಕಿದ ಅನಿಲ್ ಆಂಟನಿ

ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯಲ್ಲಿ ಶಿಕ್ಷೆಗೆ ಗುರಿಯಾದ ನಂತರ ಲೋಕಸಭಾ ಸದಸ್ಯರಾಗಿ ರಾಹುಲ್ ಗಾಂಧಿ ಅವರನ್ನು ಅನರ್ಹಗೊಳಿಸಿದ ನಂತರ, ಶೆಲ್ ಕಂಪನಿಗಳ ಮೂಲಕ ಅದಾನಿ ಗ್ರೂಪ್‌ನಲ್ಲಿ ₹ 20,000 ಕೋಟಿ ಹೂಡಿಕೆ ಮಾಡಿದವರು ಯಾರು ಮತ್ತು (ಗೌತಮ್) ಅದಾನಿಯೊಂದಿಗೆ ಪ್ರಧಾನಿಯ ಸಂಬಂಧವೇನು ಎಂದು ಕೇಳುವುದನ್ನು ಮುಂದುವರಿಸುವುದಾಗಿ ಕಾಂಗ್ರೆಸ್ ನಾಯಕ ಹೇಳಿದರು. ದಯವಿಟ್ಟು ಅರ್ಥಮಾಡಿಕೊಳ್ಳಿ ನನ್ನನ್ನು ಅನರ್ಹಗೊಳಿಸಲಾಗಿದೆ ಏಕೆಂದರೆ ಅದಾನಿ ಕುರಿತ ನನ್ನ ಮುಂದಿನ ಭಾಷಣದ ಬಗ್ಗೆ ಪ್ರಧಾನಿ ಹೆದರುತ್ತಾರೆ. ಅವರಿಗೆ ನನ್ನ ಮಾತು ಬೇಡ. ಅದಾನಿ ಮತ್ತು ಮೋದಿ ನಡುವೆ ಆಳವಾದ ಸಂಬಂಧವಿದೆ ಎಂದು ರಾಹುಲ್ ಗಾಂಧಿ ಸುದ್ದಿಗೋಷ್ಠಿಯಲ್ಲಿ ಹೇಳಿದ್ದರು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:43 pm, Sat, 8 April 23