ಅದಾನಿ ಕುರಿತ ರಾಹುಲ್ ಗಾಂಧಿಯ ಟೀಕೆಯ ಟ್ವೀಟ್​​ಗೆ ಕುಟುಕಿದ ಅನಿಲ್ ಆಂಟನಿ

ನಾನು ಕುಟುಂಬದ ಬದಲು ಭಾರತ ಮತ್ತು ನಮ್ಮ ಜನರಿಗಾಗಿ ಕೆಲಸ ಮಾಡಲು ಆದ್ಯತೆ ನೀಡಿದ್ದರಿಂದ ಪಕ್ಷ ತೊರೆಯಬೇಕಾಯಿತು. ರಾಹುಲ್ ಗಾಂಧಿ ರಾಷ್ಟ್ರೀಯ ನಾಯಕನಂತೆ ಅಲ್ಲ, ಆನ್‌ಲೈನ್ / ಸಾಮಾಜಿಕ ಮಾಧ್ಯಮ ಸೆಲ್ ಟ್ರೋಲ್‌ನಂತೆ ಮಾತನಾಡುವುದನ್ನು ನೋಡುವುದು ದುಃಖಕರವಾಗಿದೆ ಎಂದ ಅನಿಲ್ ಆಂಟನಿ

ಅದಾನಿ ಕುರಿತ ರಾಹುಲ್ ಗಾಂಧಿಯ ಟೀಕೆಯ ಟ್ವೀಟ್​​ಗೆ ಕುಟುಕಿದ ಅನಿಲ್ ಆಂಟನಿ
ಅನಿಲ್ ಆಂಟನಿ
Follow us
ರಶ್ಮಿ ಕಲ್ಲಕಟ್ಟ
|

Updated on:Apr 08, 2023 | 4:48 PM

ರಾಷ್ಟ್ರೀಯ ಪಕ್ಷವೊಂದರ ಮಾಜಿ ಅಧ್ಯಕ್ಷ, ಕಾಂಗ್ರೆಸ್ ಪಕ್ಷದ ಪ್ರಧಾನಿ ಅಭ್ಯರ್ಥಿ ಎಂದು ಕರೆಯಲ್ಪಡುವ ರಾಹುಲ್ ಗಾಂಧಿ (Rahul Gandhi) ರಾಷ್ಟ್ರೀಯ ನಾಯಕನಂತೆ ಅಲ್ಲ, ಆನ್‌ಲೈನ್ / ಸಾಮಾಜಿಕ ಮಾಧ್ಯಮ ಸೆಲ್ ಟ್ರೋಲ್‌ನಂತೆ ಮಾತನಾಡುವುದನ್ನು ನೋಡುವುದು ದುಃಖಕರವಾಗಿದೆ. ದೇಶ ಕಟ್ಟುವ ಕೆಲಸಕ್ಕಾಗಿ ದಶಕಗಳಿಂದ ಕೊಡುಗೆ ನೀಡಿದ ಈ ದಿಗ್ಗಜರೊಂದಿಗೆ ನನ್ನ ಹೆಸರನ್ನೂ ನೋಡಿ ಪುನೀತನಾದೆ. ನಾನು ಕುಟುಂಬದ ಬದಲು ಭಾರತ ಮತ್ತು ನಮ್ಮ ಜನರಿಗಾಗಿ ಕೆಲಸ ಮಾಡಲು ಆದ್ಯತೆ ನೀಡಿದ್ದರಿಂದ ಪಕ್ಷ ತೊರೆಯಬೇಕಾಯಿತು ಎಂದು ಈಗಷ್ಟೇ ಬಿಜೆಪಿ ಸೇರಿರುವ ಅನಿಲ್ ಆಂಟನಿ (Anil Antony) ಟ್ವೀಟ್ ಮಾಡಿದ್ದಾರೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರಿಗೆ ಟ್ವೀಟ್​​ ಗೆ ಪ್ರತಿಕ್ರಿಯೆಯಾಗಿ ಅನಿಲ್ ಈ ಟ್ವೀಟ್ ಮಾಡಿದ್ದಾರೆ. ಗೌತಮ್ ಅದಾನಿ ಅವರ ಶೆಲ್ ಕಂಪನಿಗಳಲ್ಲಿರುವ20 ಸಾವಿರ ಕೋಟಿ ರೂ. ಯಾರದ್ದು ಎಂಬ ತಮ್ಮ ಪ್ರಶ್ನೆಯನ್ನು ಪುನರುಚ್ಚರಿಸಿದ ರಾಹುಲ್ ಗಾಂಧಿ, ಈ ಬಾರಿ ಸೃಜನಾತ್ಮಕ ರೀತಿಯಲ್ಲಿ ಕಾಂಗ್ರೆಸ್ ತೊರೆದ ನಾಯಕರ ಹೆಸರನ್ನು ಉಲ್ಲೇಖಿಸುವ ಚಿತ್ರವನ್ನು ಹಂಚಿಕೊಂಡಿದ್ದಾರೆ. ಅವರು ಸತ್ಯವನ್ನು ಮರೆಮಾಚಬೇಕು, ಅದಕ್ಕಾಗಿಯೇ ಅವರು ಪ್ರತಿದಿನ ದಾರಿ ತಪ್ಪಿಸುತ್ತಿರುತ್ತಾರೆ ಎಂದು ರಾಹುಲ್ ಟ್ವೀಟ್ ದಾಳಿ ನಡೆಸಿದ್ದಾರೆ.

ಚಿತ್ರದಲ್ಲಿ ರಾಹುಲ್ ಗಾಂಧಿ ಅದಾನಿ ಎಂಬ ಹೆಸರಿನ ಸ್ಪೆಲಿಂಗ್ ಹೈಲೈಟ್ ಮಾಡಿ, ಸಿಂಧಿಯಾ, ಗುಲಾಮ್, ಕಿರಣ್, ಹಿಮಂತ ಮತ್ತು ಅನಿಲ್ ಹೆಸರನ್ನು ಸೃಜನಾತ್ಮಕವಾಗಿ ಮಾಡಿದ ಗ್ರಾಫಿಕ್‌ನಲ್ಲಿ ಉಲ್ಲೇಖಿಸಿದ್ದಾರೆ.  ಹೆಸರುಗಳು ಜ್ಯೋತಿರಾದಿತ್ಯ ಸಿಂಧಿಯಾ, ಗುಲಾಂ ನಬಿ ಆಜಾದ್, ಹಿರಿಯ ಕಾಂಗ್ರೆಸ್ ನಾಯಕ ಎಕೆ ಆಂಟನಿ ಅವರ ಪುತ್ರ ಅನಿಲ್ ಆಂಟನಿ ಮತ್ತು ಮಾಜಿ ಕಾಂಗ್ರೆಸ್ ನಾಯಕ ಕಿರಣ್ ರೆಡ್ಡಿ ಎಂದು ತೋರುತ್ತದೆ.

ಅನಿಲ್ ಆಂಟನಿ ಬಿಜೆಪಿ ಪಕ್ಷಕ್ಕೆ ಸೇರುವ ಒಂದು ದಿನ ಮೊದಲು ಕಿರಣ್ ರೆಡ್ಡಿ ಶುಕ್ರವಾರ ಬಿಜೆಪಿಗೆ ಸೇರ್ಪಡೆಗೊಂಡರು. ಮೇ ತಿಂಗಳಲ್ಲಿ ನಡೆಯಲಿರುವ ಕರ್ನಾಟಕ ವಿಧಾನಸಭೆ ಚುನಾವಣೆ ಮತ್ತು 2024ರಲ್ಲಿ ನಡೆಯಲಿರುವ ಸಾರ್ವತ್ರಿಕ ಚುನಾವಣೆಗೆ ಮುನ್ನ ದಕ್ಷಿಣ ಭಾರತದಈ ಪ್ರಮುಖರ ಸೇರ್ಪಡೆಯು ಕಾಂಗ್ರೆಸ್‌ಗೆ ಹೊಡೆತವಾಗಿದೆ.

ಇದನ್ನೂ ಓದಿ: Narendra Modi: ಕೋರ್ಟ್​ಗೆ ಹೋದ ಭ್ರಷ್ಟ ಪಕ್ಷಗಳಿಗೆ ತಕ್ಕ ಶಾಸ್ತಿಯಾಗಿದೆ; ಪ್ರಧಾನಿ ಮೋದಿ ವಾಗ್ದಾಳಿ

ಈಗ ಕೇಂದ್ರ ಸಚಿವರಾಗಿರುವ ಜ್ಯೋತಿರಾದಿತ್ಯ ಸಿಂಧಿಯಾ 2020 ರಲ್ಲಿ ಪಕ್ಷವನ್ನು ತೊರೆದು ಬಿಜೆಪಿ ಸೇರಿದ್ದರು.

ಮತ್ತಷ್ಟು ರಾಜಕೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:12 pm, Sat, 8 April 23

ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?