Sign In

By signing in or creating an account, you agree with Associated Broadcasting Company's Terms & Conditions and Privacy Policy.

PM Modi Mysuru Visit: ಇಂದು ಮೈಸೂರಿಗೆ ಪ್ರಧಾನಿ ಮೋದಿ ಭೇಟಿ, ಸಂಚಾರ ಮಾರ್ಗಗಳಲ್ಲಿ ಬದಲಾವಣೆ, ಬದಲಿ ಮಾರ್ಗ ಹೀಗಿದೆ

ನಾಳೆಯಿಂದ (ಏಪ್ರಿಲ್ 9) ಮೂರು ದಿನಗಳ ಕಾಲ ಮೈಸೂರಿನಲ್ಲಿ ನಡೆಯುವ ಹುಲಿ ಸಂರಕ್ಷಣೆ ಸಂಬಂಧಿತ ಕಾರ್ಯಕ್ರಮಕ್ಕೆ ಚಾಲನೆ ನೀಡುವ ನಿಟ್ಟಿನಲ್ಲಿ ಇಂದು ಪ್ರಧಾನಿ ನರೇಂದ್ರ ಮೋದಿ ಜಿಲ್ಲೆಗೆ ಆಗಮಿಸಲಿದ್ದಾರೆ. ಅದರಂತೆ ಸಂಚಾರ ಮಾರ್ಗಗಳಲ್ಲಿ ಒಂದಷ್ಟು ಬದಲಾವಣೆಗಳನ್ನು ಮಾಡಲಾಗಿದೆ.

PM Modi Mysuru Visit: ಇಂದು ಮೈಸೂರಿಗೆ ಪ್ರಧಾನಿ ಮೋದಿ ಭೇಟಿ, ಸಂಚಾರ ಮಾರ್ಗಗಳಲ್ಲಿ ಬದಲಾವಣೆ, ಬದಲಿ ಮಾರ್ಗ ಹೀಗಿದೆ
ಪ್ರಧಾನಿ ನರೇಂದ್ರ ಮೋದಿ ಮೈಸೂರಿಗೆ ಭೇಟಿ ಹಿನ್ನೆಲೆ ಸಂಚಾರ ಮಾರ್ಗದಲ್ಲಿ ಬದಲಾವಣೆ
Follow us
Rakesh Nayak Manchi
|

Updated on:Apr 08, 2023 | 2:52 PM

ಮೈಸೂರು: ನಾಳೆಯಿಂದ (ಏಪ್ರಿಲ್ 9) ಮೂರು ದಿನಗಳ ಕಾಲ ನಡೆಯುವ ಹುಲಿ ಸಂರಕ್ಷಣೆ ಸಂಬಂಧಿತ ಕಾರ್ಯಕ್ರಮಕ್ಕೆ ಚಾಲನೆ ನೀಡಲು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಇಂದು ಮೈಸೂರು ಜಿಲ್ಲೆಗೆ ಆಗಮಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ವಾಹನ ಸಂಚಾರದ ಮಾರ್ಗದಲ್ಲಿ ಒಂದಷ್ಟು ಬದಲಾವಣೆಗಳನ್ನು (Change in traffic route) ಮಾಡಲಾಗಿದೆ. ಇಂದು ಮಧ್ಯಾಹ್ನ 03 ಗಂಟೆಯಿಂದ ರಾತ್ರಿ 10 ಗಂಟೆವರೆಗೆ, ಬೆಳಗ್ಗೆ 3 ಗಂಟೆಯಿಂದ ಬೆಳಗ್ಗೆ 7 ಗಂಟೆಯವರೆಗೆ ಮತ್ತು ಬೆಳಗ್ಗೆ 06 ಗಂಟೆಯಿಂದ ಮಧ್ಯಾಹ್ನ 01 ಗಂಟೆಯವರೆಗೂ ಬದಲಾವಣೆ ಕೆಲವೊಂದು ರಸ್ತೆಗಳಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ. ವಾಹನ ಸವಾರರಿಗೆ ಪರ್ಯಾಯ ಮಾರ್ಗ ಕಲ್ಪಿಸಲಾಗಿದೆ.

ಇಂದು ಮಧ್ಯಾಹ್ನ 03 ಗಂಟೆಯಿಂದ ರಾತ್ರಿ 10 ಗಂಟೆವರೆಗೆ ನಂಜನಗೂಡು ರಿಂಗ್ ರಸ್ತೆ ಜಂಕ್ಷನ್‌ನಿಂದ ಎಲೆತೋಟ ಜಂಕ್ಷನ್, ರಾಜಹಂಸ ಜಂಕ್ಷನ್ ಗನ್ ಹೌಸ್ ಜಂಕ್ಷನ್‌ವರೆಗೆ ಎಲ್ಲ ಮಾದರಿಯ ವಾಹನಗಳ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ. ನಂಜನಗೂಡು ರಸ್ತೆ ಮೂಲಕ ಸಂಚರಿಸುವ ವಾಹನಗಳು ಕಡಕೊಳ ದಡದಹಳ್ಳಿ ರಮಾಬಾಯಿನಗರ ಶ್ರೀರಾಂಪುರ ರಿಂಗ್ ರಸ್ತೆ ಮೂಲಕ ಅವಕಾಶ ಮಾಡಿಕೊಡಲಾಗಿದ್ದು, ಟಿ.ನರಸೀಪುರ ರಸ್ತೆಯಲ್ಲಿ ಸಂಚರಿಸುವ ವಾಹನಗಳು ಸಂಗೊಳ್ಳಿ ರಾಯಣ್ಣ ವೃತ್ತದ ಬಳಿ ಬಲ ತಿರುವು ಪಡೆದು ವಾಯುವಿಹಾರ ಮಾರ್ಗದಲ್ಲಿ ಸಂಚರಿಸಲು ಅವಕಾಶ ಕಲ್ಪಿಸಲಾಗಿದೆ.

ಇದನ್ನೂ ಓದಿ: ವನ್ಯಜೀವಿ ಸಂರಕ್ಷಣೆ ಮೇಲೆ ಮೋದಿ ಸರ್ಕಾರ ಗಮನ; ಹಿಂದೆಂದಿಗಿಂತಲೂ ಹೆಚ್ಚು ಸಮೃದ್ಧ!

ಏಪ್ರಿಲ್ 9ರ ಬೆಳಗ್ಗೆ 3 ಗಂಟೆಯಿಂದ ಬೆಳಗ್ಗೆ 7 ಗಂಟೆಯವರೆಗೆ ರಾಜಹಂಸ ಜಂಕ್ಷನ್‌ನಿಂದ ಮಹಾರಾಣಾ ಪ್ರತಾಪಸಿಂಹ ವೃತ್ತದವರೆಗೆ ಎಲ್ಲ ಮಾದರಿಯ ವಾಹನಗಳ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ. ಬೆಳಗ್ಗೆ 06 ಗಂಟೆಯಿಂದ ಮಧ್ಯಾಹ್ನ 01 ಗಂಟೆಯವರೆಗೆ ಹುಣಸೂರು ರಸ್ತೆ ಅಟಲ್ ಬಿಹಾರಿ ವಾಜಪೇಯಿ ವೃತ್ತದಿಂದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದವರೆಗೆ, ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದಿಂದ ರಾಮಸ್ವಾಮಿ ವೃತ್ತದವರೆಗೆ, ಕೆ.ಆರ್.ಬಿ ರಸ್ತೆ ಡಿ.ಸಿ ಕಛೇರಿ ಆರ್ಚ್ ಗೇಟ್ ಜಂಕ್ಷನ್ ನಿಂದ ಏಕಲವ್ಯ ವೃತ್ತದವರೆಗೆ ಹಾಗೂ ರಾಧಾಕೃಷ್ಣ ಮಾರ್ಗ ಕೌಟಿಲ್ಯ ವೃತ್ತದಿಂದ ಮುಡಾ ಜಂಕ್ಷನ್‌ವರೆಗೆ ಎಲ್ಲ ಮಾದರಿಯ ವಾಹನಗಳ ಸಂಚಾರ ನಿರ್ಬಂಧ ವಿಧಿಸಲಾಗಿದೆ.

ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ರಾಜ್ಯಕ್ಕೆ ಆಗಮಿಸುತ್ತಿದ್ದು, ಏಪ್ರಿಲ್​ 8 ಮತ್ತು 9ರಂದು ಮೈಸೂರು ಪ್ರವಾಸ ಮಾಡಲಿದ್ದಾರೆ. ಹುಲಿ ಸಂರಕ್ಷಣಾ ಯೋಜನೆ 50ನೇ ವರ್ಷಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಇಂದು ರಾತ್ರಿ 8.40ಕ್ಕೆ ಪ್ರಧಾನಿ ಮೋದಿ ಮೈಸೂರು ಆಗಮಿಸಿ  ಪ್ರತಿಷ್ಠಿತ ರಾಡಿಸನ್ ಬ್ಲೂ ಹೋಟೆಲ್‌ನಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಈ ಹಿನ್ನೆಲೆ ಪ್ರಧಾನಿ ಮೋದಿ ಸ್ವಾಗತಕ್ಕೆ ಭರ್ಜರಿ ಸಿದ್ದತೆ ಮಾಡಿಕೊಳ್ಳಲಾಗಿದೆ. ನಾಳೆ ಬೆಳಗ್ಗೆ 6.20ಕ್ಕೆ ಹೋಟೆಲ್​ನಿಂದ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ತೆರಳಿ ಅಲ್ಲಿಂದ ಬಂಡೀಪುರಕ್ಕೆ ತೆರಳಲಿದ್ದಾರೆ.

ಬಂಡೀಪುರದಲ್ಲಿ ಅರಣ್ಯ ಹುತಾತ್ಮರ ಸ್ಮಾರಕಕ್ಕೆ ನಮನ ಸಲ್ಲಿಸಿ ಅದೇ ಸ್ಥಳದಲ್ಲಿ ಅಂಚೆ ಲಕೋಟಿ ಬಿಡುಗಡೆ ಗೊಳಿಸಿ ಬಳಿಕ ಬಂಡೀಪುರದ ಕಾಡಿನಲ್ಲಿ ಎರಡು ಗಂಟೆಗೂ ಹೆಚ್ಚು ಕಾಲ ಸಫಾರಿ ಮಾಡಲಿದ್ದಾರೆ. ಈ ಹಿನ್ನೆಲೆಯಲ್ಲಿ ಬಂಡೀಪುರದ ಎಲ್ಲಾ ಅರಣ್ಯ ಸಿಬ್ಬಂದಿಗಳಿಗೂ ಮುನ್ನೆಚ್ಚರಿಕೆ ಕ್ರಮವಾಗಿ ಆರ್. ಟಿ. ಪಿ.ಸಿ.ಆರ್. ತಪಾಸಣೆ ನಡೆಸಲಾಗಿದೆ. ನಂತರ ದೇಶದ 12 ಹುಲಿಯೋಜನೆ ನಿರ್ದೇಶಕರ ಜೊತೆ ಪ್ರಧಾನಿ ಮೋದಿ ಸಂವಾದ ನಡೆಸಲಿದ್ದಾರೆ‌. ಈ ಹಿನ್ನೆಲೆ ಬಂಡೀಪುರ ಹಾಗೂ ಮಧುಮಲೈ ಮಾರ್ಗವಾಗಿ ಸಂಚರಿಸುವ ಎಲ್ಲ ವಾಹನಗಳ ತಪಾಸಣೆಯೂ ಸಹ ನಡೆಯುತ್ತಿದೆ

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:42 pm, Sat, 8 April 23

ಸೋಪು-ಶಾಂಪೂ ಬಳಸಬಾರದೆಂಬ ನಿಯಮದ ಯಥೇಚ್ಛ ಉಲ್ಲಂಘನೆ
ಸೋಪು-ಶಾಂಪೂ ಬಳಸಬಾರದೆಂಬ ನಿಯಮದ ಯಥೇಚ್ಛ ಉಲ್ಲಂಘನೆ
ಮಾರಿಷಸ್​​ನಲ್ಲಿ ಭೋಜ್​ಪುರಿ ಹಾಡಿನ ಸ್ವಾಗತಕ್ಕೆ ಪ್ರಧಾನಿ ಮೋದಿ ಫಿದಾ!
ಮಾರಿಷಸ್​​ನಲ್ಲಿ ಭೋಜ್​ಪುರಿ ಹಾಡಿನ ಸ್ವಾಗತಕ್ಕೆ ಪ್ರಧಾನಿ ಮೋದಿ ಫಿದಾ!
ಹೋರಾಟಕ್ಕೆ ತಾರ್ಕಿಕ ಅಂತ್ಯ ಕಾಣಿಸದ ಹೊರತು ವಿಶ್ರಮಿಸುವುದಿಲ್ಲ: ಕರವೇ
ಹೋರಾಟಕ್ಕೆ ತಾರ್ಕಿಕ ಅಂತ್ಯ ಕಾಣಿಸದ ಹೊರತು ವಿಶ್ರಮಿಸುವುದಿಲ್ಲ: ಕರವೇ
ಮಾರಿಷಸ್ ತಲುಪಿದ ಪ್ರಧಾನಿ ಮೋದಿ: ಪ್ರಮುಖ ಒಪ್ಪಂದಗಳಿಗೆ ಸಹಿ ನಿರೀಕ್ಷೆ
ಮಾರಿಷಸ್ ತಲುಪಿದ ಪ್ರಧಾನಿ ಮೋದಿ: ಪ್ರಮುಖ ಒಪ್ಪಂದಗಳಿಗೆ ಸಹಿ ನಿರೀಕ್ಷೆ
‘ಅಪ್ಪು’ ಚಿತ್ರಕ್ಕೆ ರಮ್ಯಾ ನಾಯಕಿ ಆಗಬೇಕಿತ್ತು; ಅಚ್ಚರಿಯ ಮಾಹಿತಿ ರಿವೀಲ್
‘ಅಪ್ಪು’ ಚಿತ್ರಕ್ಕೆ ರಮ್ಯಾ ನಾಯಕಿ ಆಗಬೇಕಿತ್ತು; ಅಚ್ಚರಿಯ ಮಾಹಿತಿ ರಿವೀಲ್
ಬಂಡೀಪುರ ರಾಷ್ಟ್ರೀಯ ಉದ್ಯಾನವನದಲ್ಲಿನ ನೀರಿನ ಸಮಸ್ಯೆಗೆ ಬಿತ್ತು ಬ್ರೇಕ್​
ಬಂಡೀಪುರ ರಾಷ್ಟ್ರೀಯ ಉದ್ಯಾನವನದಲ್ಲಿನ ನೀರಿನ ಸಮಸ್ಯೆಗೆ ಬಿತ್ತು ಬ್ರೇಕ್​
15 ಭರ್ಜರಿ ಸಿಕ್ಸ್​: ವಿಶ್ವ ದಾಖಲೆಯ ಸೆಂಚುರಿ ಸಿಡಿಸಿದ ಎಬಿ ಡಿವಿಲಿಯರ್ಸ್
15 ಭರ್ಜರಿ ಸಿಕ್ಸ್​: ವಿಶ್ವ ದಾಖಲೆಯ ಸೆಂಚುರಿ ಸಿಡಿಸಿದ ಎಬಿ ಡಿವಿಲಿಯರ್ಸ್
ವಿದ್ಯಾರ್ಥಿಗಳು ತಾಂಬೂಲ ಚವಣ ಮಾಡುವುದ್ದು ನಿಷಿದ್ಧ ಯಾಕೆ ? ವಿಡಿಯೋ ನೋಡಿ
ವಿದ್ಯಾರ್ಥಿಗಳು ತಾಂಬೂಲ ಚವಣ ಮಾಡುವುದ್ದು ನಿಷಿದ್ಧ ಯಾಕೆ ? ವಿಡಿಯೋ ನೋಡಿ
Daily horoscope: ಮಂಗಳವಾರ, ಈ ದಿನ 12 ರಾಶಿಗಳ ಫಲಾಫಲಗಳನ್ನು ತಿಳಿಯಿರಿ
Daily horoscope: ಮಂಗಳವಾರ, ಈ ದಿನ 12 ರಾಶಿಗಳ ಫಲಾಫಲಗಳನ್ನು ತಿಳಿಯಿರಿ
ಡಿಆರ್​ಐ ಅಧಿಕಾರಿಗಳ ಕಸ್ಟಡಿ ಅಂತ್ಯ: ರನ್ಯಾ ರಾವ್ ಮತ್ತೆ ಜೈಲಿಗೆ
ಡಿಆರ್​ಐ ಅಧಿಕಾರಿಗಳ ಕಸ್ಟಡಿ ಅಂತ್ಯ: ರನ್ಯಾ ರಾವ್ ಮತ್ತೆ ಜೈಲಿಗೆ