ವನ್ಯಜೀವಿ ಸಂರಕ್ಷಣೆ ಮೇಲೆ ಮೋದಿ ಸರ್ಕಾರ ಗಮನ; ಹಿಂದೆಂದಿಗಿಂತಲೂ ಹೆಚ್ಚು ಸಮೃದ್ಧ!

ಪ್ರಧಾನಿ ಮೋದಿ ಅವರು ನಾಳೆ (ಏಪ್ರಿಲ್ 9) ಇಂಟರ್​ನ್ಯಾಷನಲ್ ಬಿಗ್ ಕ್ಯಾಟ್ಸ್ ಅಲೈಯನ್ಸ್ (IBCA) ಅನ್ನು ಪ್ರಾರಂಭಿಸುತ್ತಿದ್ದಾರೆ. ಐಬಿಸಿಎ ವಿಶ್ವದ ಏಳು ಪ್ರಮುಖ ದೊಡ್ಡ ಬೆಕ್ಕುಗಳ ರಕ್ಷಣೆ ಮತ್ತು ಸಂರಕ್ಷಣೆಯ ಮೇಲೆ ಕೇಂದ್ರೀಕರಿಸುತ್ತದೆ. ಈ ಗುಂಪು ಹುಲಿ, ಸಿಂಹ, ಚಿರತೆ, ಹಿಮ ಚಿರತೆ, ಪೂಮಾ, ಜಾಗ್ವಾರ್ ಮತ್ತು ಪ್ಯಾಂಥರ್​ಗಳನ್ನು ಒಳಗೊಂಡಿದೆ.

ವನ್ಯಜೀವಿ ಸಂರಕ್ಷಣೆ ಮೇಲೆ ಮೋದಿ ಸರ್ಕಾರ ಗಮನ; ಹಿಂದೆಂದಿಗಿಂತಲೂ ಹೆಚ್ಚು ಸಮೃದ್ಧ!
ವನ್ಯಜೀವಿ ಸಂರಕ್ಷಣೆ
Follow us
ನಯನಾ ಎಸ್​ಪಿ
|

Updated on: Apr 08, 2023 | 1:17 PM

ಪ್ರಧಾನಿ ಮೋದಿ (PM Modi) ಅವರು ನಾಳೆ (ಏಪ್ರಿಲ್ 9) ಇಂಟರ್​ನ್ಯಾಷನಲ್​ ಬಿಗ್ ಕ್ಯಾಟ್ಸ್ ಅಲೈಯನ್ಸ್ (IBCA) ಕಾರ್ಯಕ್ರಮಕ್ಕೆ ಚಾಲನೆ ನೀಡುತ್ತಿದ್ದಾರೆ. ಐಬಿಸಿಎ (International Big Cats Alliance) ವಿಶ್ವದ ಏಳು ಪ್ರಮುಖ ‘ಬಿಗ್​ ಕ್ಯಾಟ್ಸ್’​ ರಕ್ಷಣೆ ಮತ್ತು ಸಂರಕ್ಷಣೆಯ ಮೇಲೆ ಕೇಂದ್ರೀಕರಿಸುತ್ತದೆ. ಈ ಗುಂಪು ಹುಲಿ, ಸಿಂಹ, ಚಿರತೆ, ಹಿಮ ಚಿರತೆ, ಪೂಮಾ, ಜಾಗ್ವಾರ್ ಮತ್ತು ಪ್ಯಾಂಥರ್​ಗಳನ್ನು ಒಳಗೊಂಡಿದೆ. ಈ ಕಾರ್ಯಕ್ರಮ ಜುಲೈ 2019 ರಲ್ಲಿ ಮೋದಿ ನೀಡಿದ ಸ್ಪಷ್ಟವಾದ ಕರೆಯನ್ನು ಅನುಸರಿಸುತ್ತದೆ ಎಂದು ಪರಿಸರ ಮತ್ತು ಅರಣ್ಯ ಸಚಿವಾಲಯ ವರದಿಗಳು ತಿಳಿಸಿವೆ. 2019 ರಲ್ಲಿ ಪ್ರಧಾನಿ ಅವರು ಏಷ್ಯಾದಲ್ಲಿ ಬಿಗ್​ ಕ್ಯಾಟ್ಸ್ ಕಳ್ಳಬೇಟೆ ಮತ್ತು ಅಕ್ರಮ ವನ್ಯಜೀವಿ ವ್ಯಾಪಾರವನ್ನು ದೃಢವಾಗಿ ನಿಗ್ರಹಿಸಲು ಜಾಗತಿಕ ನಾಯಕರ ಮೈತ್ರಿಗೆ ಕರೆ ನೀಡಿದ್ದರು.

ಪ್ರಧಾನಿಯವರ ಈ ನಡೆ ಮೋದಿ ಸರ್ಕಾರವು ಪರಿಸರ ಸಂರಕ್ಷಣೆಗೆ ಇಟ್ಟ ಬಹು ದೊಡ್ಡ ಹೆಜ್ಜೆಯಾಗಿದೆ. ಮೋದಿ ಸರ್ಕಾರ ಇಲ್ಲಿಯವರೆಗೂ ವ್ಯಾಪಕವಾದ ಪ್ರಯತ್ನಗಳನ್ನು ಕೈಗೊಂಡಿದೆ, ಇದು ಒಟ್ಟಾಗಿ ದೇಶದ ವನ್ಯಜೀವಿಗಳ ಮೇಲೆ ಸಕಾರಾತ್ಮಕ ಪರಿಣಾಮ ಬೀರಿದೆ ಎಂದು ಮೂಲಗಳು ತಿಳಿಸಿವೆ.

2014 ರಿಂದ, ಭಾರತದಲ್ಲಿ ದೊಡ್ಡ ಬೆಕ್ಕುಗಳ ಜನಸಂಖ್ಯೆಯಲ್ಲಿ ಹೆಚ್ಚಳ ಕಂಡುಬಂದಿದೆ, ಹುಲಿ ಸಂಖ್ಯೆಯು 2014 ರಲ್ಲಿ 2226 ರಿಂದ 2018 ರಲ್ಲಿ 2967 ಕ್ಕೆ 33% ರಷ್ಟು ಹೆಚ್ಚಾಗಿದೆ. ಹುಲಿ ಸಂಖ್ಯೆಯ ಇತ್ತೀಚಿನ ಅಂಕಿಅಂಶಗಳನ್ನು ಏಪ್ರಿಲ್ 9 ರಂದುಮೋದಿ ಬಿಡುಗಡೆ ಮಾಡಿದ್ದರು.

ಬಲವಾದ ಸಂರಕ್ಷಣಾ ನಿರ್ವಹಣೆ ಮತ್ತು ದೃಢವಾದ ರಕ್ಷಣೆಯು ಗುಜರಾತ್‌ನಲ್ಲಿ ಸಿಂಹದ ಸಂಖ್ಯೆಯ 29% ಹೆಚ್ಚಳಕ್ಕೆ ಕಾರಣವಾಗಿದೆ (2015 ರಲ್ಲಿ 523 ಕ್ಕೆ ಹೋಲಿಸಿದರೆ 2020 ರಲ್ಲಿ 674). ವ್ಯಾಪಕವಾಗಿರುವ ಚಿರತೆಗಳ ಸಂಖ್ಯೆಯು ಸುಮಾರು 63% ನಷ್ಟು ಹೆಚ್ಚಳವನ್ನು ಕಂಡಿದೆ (2014 ರಲ್ಲಿ 7910 ರಿಂದ 2018 ರಲ್ಲಿ 12,852 ಕ್ಕೆ ಏರಿಕೆ).

ಪ್ರಧಾನಮಂತ್ರಿಯವರ ದೂರದೃಷ್ಟಿಯಿಂದ, ಭಾರತವು 2022 ರಲ್ಲಿ ಚೀತಾ ಪ್ರಪಂಚದ ಮೊದಲ ವೈಲ್ಡ್ ಟು ವೈಲ್ಡ್ ಟ್ರಾನ್ಸ್‌ಕಾಂಟಿನೆಂಟಲ್ ಟ್ರಾನ್ಸ್‌ಲೊಕೇಶನ್ ಅನ್ನು ಯಶಸ್ವಿಯಾಗಿ ಸಾಧಿಸಿತು ಮತ್ತು ಹಿಂದೆ ಮಾದಲಾದ ತಪ್ಪಿನಿಂದ ಭಾರತದಲ್ಲಿ ಚಿರತೆ ಅಳಿವಿನ ಅಂಚಿಗೆ ಬಂದಿತ್ತು, ಆ ತಪ್ಪನ್ನು ಸರಿ ಮಾಡುವಲ್ಲಿ ಮೋದಿ ಸರ್ಕಾರ ಮೊದಲ ಹೆಜ್ಜೆಯನ್ನು ಇಟ್ಟಿದೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ: ಭಾರತದಲ್ಲಿ 80 ಕೋಟಿ ಉಚಿತ ಪಡಿತರ, ಆದರೆ ಪಾಕ್ ಆಹಾರಕ್ಕಾಗಿ ಪರದಾಡುತ್ತಿದೆ: ಯೋಗಿ ಆದಿತ್ಯನಾಥ್

ಸಂರಕ್ಷಣಾ ಪ್ರಯತ್ನಗಳ ಮೂಲಕ ವನ್ಯಜೀವಿ ಜನಸಂಖ್ಯೆಯ ಮೇಲೆ ಸಕಾರಾತ್ಮಕ ಪರಿಣಾಮ ಬೀರುವುದು ಸರ್ಕಾರದ ಪ್ರಯತ್ನಗಳ ಒಂದು ಭಾಗವಾಗಿದೆ. ಸರ್ಕಾರದ ಈ ಒಂದು ಯೋಜನೆ ಕಳ್ಳಬೇಟೆಯನ್ನು ಕೊನೆಗೊಳಿಸುವ ಕುರಿತು ಅಪಾರ ಗಮನವನ್ನು ಹೊಂದಿದೆ. ಈ ಯೋಜನೆಯ ಪ್ರತಿಫಲವಾಗಿ ಕಳೆದ ವರ್ಷ ಅಸ್ಸಾಂನಲ್ಲಿ ಯಾವುದೇ ರೀತಿಯ ಘೇಂಡಾಮೃಗಗಳ ಕಳ್ಳಬೇಟೆ ನಡೆದಿಲ್ಲ ಎಂದು ವರದಿಗಳು ತಿಳಿಸಿವೆ.

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ