Sign In

By signing in or creating an account, you agree with Associated Broadcasting Company's Terms & Conditions and Privacy Policy.

ಧಾರವಾಡ: ಬಿಜೆಪಿ, ಕಾಂಗ್ರೆಸ್​ ಬೆಂಬಲಿಗರ ಫೇಸ್ ಬುಕ್ ವಾರ್; ಏನಿದು ಅಂತೀರಾ ಈ ಸ್ಟೋರಿ ನೋಡಿ

ಚುನಾವಣೆ ಬಂತು ಅಂದರೆ ಪ್ರಬಲ ಸ್ಪರ್ಧಿಗಳ ಮಧ್ಯೆ ಹಾಗೂ ಪಕ್ಷಗಳ ಮಧ್ಯೆ ಜಿದ್ದಾಜಿದ್ದಿ ಇದ್ದೇ ಇರುತ್ತೆ.ಆಯಾ ಪಕ್ಷದ ಕಾರ್ಯಕರ್ತರು ತಮ್ಮ ನಾಯಕರನ್ನುಸಮರ್ಥಿಸಿಕೊಳ್ಳುವುದಕ್ಕೆ ಎದುರಾಳಿಗಳಿಗೆ ತಿರುಗೇಟು ನೀಡುತ್ತಲೇ ಇರುತ್ತಾರೆ. ಅದರಲ್ಲಿಯೂ ಇಂದಿನ ಸೋಶಿಯಲ್ ಮೀಡಿಯಾ ಯುಗದಲ್ಲಂತೂ ಕೇವಲ ಪೋಸ್ಟ್​ಗಳ ಮೂಲಕವೇ ಒಬ್ಬರ ಮೇಲೋಬ್ಬರು ಕೆಸರೆರಚುತ್ತಲೇ ಇರುತ್ತಾರೆ. ಅಂತಹುದೇ ಒಂದು ಫೇಸ್ಬುಕ್ ವಾರ್ ಈಗ ಧಾರವಾಡದಲ್ಲಿ ಶುರುವಾಗಿದೆ.

ಧಾರವಾಡ: ಬಿಜೆಪಿ, ಕಾಂಗ್ರೆಸ್​ ಬೆಂಬಲಿಗರ ಫೇಸ್ ಬುಕ್ ವಾರ್; ಏನಿದು ಅಂತೀರಾ ಈ ಸ್ಟೋರಿ ನೋಡಿ
ಸಾಂದರ್ಭಿಕ ಚಿತ್ರ
Follow us
ಕಿರಣ್ ಹನುಮಂತ್​ ಮಾದಾರ್
|

Updated on: Apr 08, 2023 | 3:31 PM

ಧಾರವಾಡ: ಜಿಲ್ಲೆಯಲ್ಲಿ ಒಟ್ಟು ಏಳು ವಿಧಾನಸಭಾ ಕ್ಷೇತ್ರಗಳಿದ್ದು, ಈ ಏಳರ ಪೈಕಿ ಧಾರವಾಡ ವಿಧಾನಸಭಾ ಕ್ಷೇತ್ರ ಈ ಸಲ ಭಾರೀ ತುರುಸಿನ ಸ್ಪರ್ಧೆಗೆ ಕಾರಣವಾಗಲಿದೆ. ಏಕೆಂದರೆ ಯೋಗೇಶ್​ಗೌಡ ಕೊಲೆ ಕೇಸಿನ ಸಿಬಿಐ ತನಿಖೆಯಲ್ಲಿ ಸಿಕ್ಕು, ಜಿಲ್ಲಾ ಪ್ರವೇಶದ ನಿರ್ಬಂಧದಲ್ಲಿರುವ ಮಾಜಿ ಸಚಿವ ವಿನಯ ಕುಲಕರ್ಣಿಗೆ ಈ ಸಲ ಕಾಂಗ್ರೆಸ್ ಟಿಕೆಟ್ ಸಿಕ್ಕಿದೆ. ಮತ್ತೊಂದೆಡೆ ಹಾಲಿ ಶಾಸಕ ಅಮೃತ ದೇಸಾಯಿ ಸ್ಪರ್ಧಿಸುವುದು ಖಚಿತ ಎನ್ನಲಾಗುತ್ತಿದೆ. ಹೀಗಾಗಿ ಈ ಇಬ್ಬರೂ ನಾಯಕರ ಬೆಂಬಲಿಗರು ಈಗಾಗಲೇ ಫೇಸ್ಬುಕ್ನಲ್ಲಿ ದೊಡ್ಡ ಮಟ್ಟದ ವಾರ್ ಶುರು ಮಾಡಿದ್ದಾರೆ.

ಹೌದು ಇವರು ಅವರ ಮೇಲೆ, ಅವರು ಇವರ ಮೇಲೆ ಇಲ್ಲ ಸಲ್ಲದ ಆರೋಪಗಳನ್ನು ಹೊರೆಸುವುದು ಮಾತ್ರವಲ್ಲದೇ ಕೆಲವೊಂದು ಪೋಸ್ಟ್​ಗಳಲ್ಲಿ ವೈಯಕ್ತಿಕ ನಿಂದನೆಯೂ ಶುರುವಾಗಿದೆ. ಇದೆಲ್ಲ ಹೀಗೇಕೆ ಎಂದು ಕೇಳಿದರೆ ‘ಕಾಂಗ್ರೆಸ್ಸಿನವರು ಕ್ಷೇತ್ರದಲ್ಲಿ ಏನು ಕೆಲಸ ಮಾಡಿಲ್ಲ. ಅವರು ಮಾಡಿದ್ದೇ ಬೇರೆ. ಅದನ್ನೆಲ್ಲ ಜನರಿಗೆ ತಿಳಿಸಬೇಕು ಅಲ್ವಾ? ಅದಕ್ಕೆ ನಾವು ಪೋಸ್ಟ್ ಹಾಕುತ್ತಿದ್ದೇವೆ. ಇನ್ನು ಅವರು ನಮ್ಮ ನಾಯಕರ ಮೇಲೆ ಇಲ್ಲಸಲ್ಲದ ನಿಂದನೆ ಮಾಡುತ್ತಿದ್ದಾರೆ. ಅದನ್ನು ನೋಡಿಕೊಂಡು ಸುಮ್ಮನೆ ಇರೋದಕ್ಕೆ ಆಗೋದಿಲ್ಲ. ಅದಕ್ಕೆ ನಮ್ಮ ಕಾರ್ಯಕರ್ತರು ಅವರ ವಿರುದ್ಧ ಪೋಸ್ಟ್​ಗಳ ಮೂಲಕವೇ ತಿರುಗೇಟು ನೀಡುತ್ತಿದ್ದಾರೆ ಎನ್ನುವ ಸಮರ್ಥನೆಯನ್ನು ಬಿಜೆಪಿಗರು ನೀಡುತ್ತಿದ್ದಾರೆ.

ಇದನ್ನೂ ಓದಿ:Kanakapura Assembly Constituency: ಅಸೆಂಬ್ಲಿ ಚುನಾವಣೆ ಸಮ್ಮುಖದಲ್ಲಿ ಬಂಡೆಗಳ ನಾಡು ಕನಕಪುರ ಕ್ಷೇತ್ರ ರಾಜಕೀಯವಾಗಿ ಹೇಗಿದೆ?

ಇನ್ನು ವಿನಯ ಕುಲಕರ್ಣಿ ಮತ್ತು ಅಮೃತ ದೇಸಾಯಿಯ ವೈಯಕ್ತಿಕ ವಿಚಾರಗಳು ಸಹ ಇಲ್ಲಿ ಕಾರ್ಯಕರ್ತರ ಪೋಸ್ಟ್​ಗಳಲ್ಲಿ ಹರಿದಾಡುತ್ತಿವೆ. ಕೆಲವರಂತೂ ಮುಖ್ಯ ಪೋಸ್ಟ್ ಬಿಟ್ಟು, ಕಾಮೆಂಟ್ಗಳಲ್ಲಿಯೇ ಸಮರಕ್ಕೆ ಇಳಿದು ಬಿಡುತ್ತಿದ್ದಾರೆ. ಆದರೆ ಈ ಫೇಸ್ ಬುಕ್ ವಾರ್​ನಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಯಿಂದ ಯಾವೊಬ್ಬ ಪದಾಧಿಕಾರಿಯೂ ಇಲ್ಲ. ಬದಲಿಗೆ ಎರಡೂ ಕಡೆಯಲ್ಲಿರುವ ತಳಮಟ್ಟದ ಕಾರ್ಯಕರ್ತರೇ ಈ ವಾರ್​ನಲ್ಲಿ ಜೋರಾಗಿದ್ದಾರೆ.

ಇನ್ನು ಕಳೆದ ಒಂದು ವಾರದಿಂದ ವಿನಯ ಕುಲಕರ್ಣಿಗೆ ಟಿಕೆಟ್ ಸಿಗದೇ ಇದ್ದಾಗ ಅಮೃತ ದೇಸಾಯಿ ಹಿಂದೊಮ್ಮೆ ಹೇಳಿದ್ದ ‘ಬಂದರೆ ಬಾರೋ ಎನ್ನುವ ಭಾಷಣದ ವಿಡಿಯೋ ಇಟ್ಟುಕೊಂಡು ಬಿಜೆಪಿಗರು ದೊಡ್ಡ ಟ್ರೋಲ್ ಮಾಡಿದ್ದರು. ಆದರೆ ಈಗ ವಿನಯ್​ಗೆ ಟಿಕೆಟ್ ಸಿಕ್ಕಿದೆ. ಹೀಗಾಗಿ ಈಗ ಏನಂತಿರಿ ಎಂದು ಕಾಂಗ್ರೆಸ್ಸಿಗರು ಪ್ರಶ್ನೆ ಹಾಕುತ್ತಿದ್ದಾರೆ. ಈಗ ನಮ್ಮ ನಾಯಕರಿಗೆ ಟಿಕೆಟ್ ಸಿಕ್ಕಿದ್ದು, ಅಸಲಿ ಆಟ ಇನ್ನು ಮುಂದೆ ಇದೆ ನೋಡಿ ಎನ್ನುವ ಸವಾಲು ಹಾಕಿದ್ದಾರೆ.

ಇದನ್ನೂ ಓದಿ:ನಂದಿನಿ ರಾಷ್ಟ್ರ ಮಟ್ಟದ ಬ್ರ್ಯಾಂಡ್​, ಕಾಂಗ್ರೆಸ್​ನಿಂದ ಅಮುಲ್ ವಿಚಾರದಲ್ಲಿ ರಾಜಕೀಯ; ಸಿಎಂ ಬೊಮ್ಮಾಯಿ

ಒಟ್ಟಾರೆಯಾಗಿ ಧಾರವಾಡ ಜಿಲ್ಲೆಯಲ್ಲಿ ಫೇಸ್ ಬುಕ್ ವಾರ್ ಜೋರಾಗಿಯೇ ನಡೆದಿದ್ದರೂ ಎರಡೂ ಕಡೆಯ ನಾಯಕರು ತಮ್ಮ ಕಾರ್ಯಕರ್ತರಿಗೆ ಮೀತಿಯಲ್ಲಿರುವಂತೆ ಹೇಳುತ್ತಿಲ್ಲ. ಇತ್ತ ಚುನಾವಣಾ ಆಯೋಗವೂ ಸಹ ಈ ಪೋಸ್ಟ್​ಗಳನ್ನ ಗಮನಿಸುತ್ತಿಲ್ಲ. ಇದು ಹೀಗೆಯೇ ಮುಂದುವರೆದಲ್ಲಿ ಇನ್ನೆಲ್ಲಿಗೋ ಬಂದು ನಿಲ್ಲುವುದರಲ್ಲಿ ಅನುಮಾನವಿಲ್ಲ.

ವರದಿ: ನರಸಿಂಹಮೂರ್ತಿ ಪ್ಯಾಟಿ ಟಿವಿ9ಧಾರವಾಡ

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಲಾಲು ಯಾದವ್ ಸರ್ಕಾರ ಜಂಗಲ್ ರಾಜ್ ಎಂದೇ ನೆನಪುಳಿಯುತ್ತದೆ; ಅಮಿತ್ ಶಾ
ಲಾಲು ಯಾದವ್ ಸರ್ಕಾರ ಜಂಗಲ್ ರಾಜ್ ಎಂದೇ ನೆನಪುಳಿಯುತ್ತದೆ; ಅಮಿತ್ ಶಾ
ಉಪ್ಪಿ, ಶಿವಣ್ಣ, ರಾಜ್ ಶೆಟ್ಟಿ ನಟನೆ ‘45’ ಸಿನಿಮಾ ಟೀಸರ್ ಲಾಂಚ್ ಲೈವ್ ನೋಡಿ
ಉಪ್ಪಿ, ಶಿವಣ್ಣ, ರಾಜ್ ಶೆಟ್ಟಿ ನಟನೆ ‘45’ ಸಿನಿಮಾ ಟೀಸರ್ ಲಾಂಚ್ ಲೈವ್ ನೋಡಿ
ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ
ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ
ಬೌಂಡರಿ ಬಳಿ ಅತ್ಯದ್ಭುತ ಕ್ಯಾಚ್ ಹಿಡಿದ ಜ್ಯಾಕ್ ಫ್ರೇಸರ್
ಬೌಂಡರಿ ಬಳಿ ಅತ್ಯದ್ಭುತ ಕ್ಯಾಚ್ ಹಿಡಿದ ಜ್ಯಾಕ್ ಫ್ರೇಸರ್
ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಅನಿಕೇತ್ ವರ್ಮಾ
ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಅನಿಕೇತ್ ವರ್ಮಾ
ಮೋದಿ ಭೇಟಿಗೂ ಕೆಲವೇ ಗಂಟೆ ಮೊದಲು ಛತ್ತೀಸ್‌ಗಢದಲ್ಲಿ 50 ನಕ್ಸಲರ ಶರಣಾಗತಿ
ಮೋದಿ ಭೇಟಿಗೂ ಕೆಲವೇ ಗಂಟೆ ಮೊದಲು ಛತ್ತೀಸ್‌ಗಢದಲ್ಲಿ 50 ನಕ್ಸಲರ ಶರಣಾಗತಿ
ನಾಗ್ಪುರದಲ್ಲಿ ರೋಡ್ ಶೋ ನಡೆಸಿದ ಮೋದಿ; ಜೈ ಶ್ರೀರಾಮ್ ಘೋಷಣೆ ಕೂಗಿದ ಜನರು
ನಾಗ್ಪುರದಲ್ಲಿ ರೋಡ್ ಶೋ ನಡೆಸಿದ ಮೋದಿ; ಜೈ ಶ್ರೀರಾಮ್ ಘೋಷಣೆ ಕೂಗಿದ ಜನರು
ಟ್ರಕ್​ ಕದ್ದವನ ಅತಿಯಾದ ವೇಗವೇ ಸಿಕ್ಕಿಬೀಳಲು ಕಾರಣವಾಯ್ತು
ಟ್ರಕ್​ ಕದ್ದವನ ಅತಿಯಾದ ವೇಗವೇ ಸಿಕ್ಕಿಬೀಳಲು ಕಾರಣವಾಯ್ತು
ಭಟ್ಕಳದಲ್ಲಿ ಬಾಂಬ್ ಸ್ಕ್ವಾಡ್​​ ಹಾಗೂ ಶ್ವಾನದಳದಿಂದ ಪರಿಶೀಲನೆ
ಭಟ್ಕಳದಲ್ಲಿ ಬಾಂಬ್ ಸ್ಕ್ವಾಡ್​​ ಹಾಗೂ ಶ್ವಾನದಳದಿಂದ ಪರಿಶೀಲನೆ
ವಿಜಯದಶಮಿಗೆ ಹೊಸ ಪಕ್ಷ ಕಟ್ಟುವ ಸುಳಿವು ನೀಡಿದ ಬಸನಗೌಡ ಪಾಟೀಲ್​ ಯತ್ನಾಳ್​
ವಿಜಯದಶಮಿಗೆ ಹೊಸ ಪಕ್ಷ ಕಟ್ಟುವ ಸುಳಿವು ನೀಡಿದ ಬಸನಗೌಡ ಪಾಟೀಲ್​ ಯತ್ನಾಳ್​