ದೆಹಲಿ: ಸುಪ್ರೀಂಕೋರ್ಟ್ ತೀರ್ಪನ್ನು ವ್ಯಂಗ್ಯವಾಡಿದ ಕುರಿತು ಆರು ವಾರಗಳ ಒಳಗೆ ಪ್ರತಿಕ್ರಿಯೆ ನೀಡುವಂತೆ ಸ್ಟ್ಯಾಂಡ್ ಅಪ್ ಕಾಮೆಡಿಯನ್ ಕುನಾಲ್ ಕಮ್ರಾ ಮತ್ತು ವ್ಯಂಗ್ಯಚಿತ್ರಕಾರ್ತಿ ರಚಿತಾ ತನೇಜಾ ಅವರಿಗೆ ನ್ಯಾಯಾಲಯ ನೊಟೀಸ್ ಜಾರಿಮಾಡಿದೆ.
ಟಿಆರ್ಪಿ ಹಗರಣದಲ್ಲಿ ರಿಪಬ್ಲಿಕ್ ಟಿವಿಯ ಸಂಪಾದಕ ಆರ್ನಬ್ ಗೋಸ್ವಾಮಿ ಅವರಿಗೆ ಜಾಮೀನು ನೀಡಿದ ಸುಪ್ರೀಂಕೋರ್ಟ್ ನಿರ್ಧಾರವನ್ನು ವ್ಯಂಗ್ಯ ಮಾಡಿ ಕುನಾಲ್ ಕಮ್ರಾ ಟ್ವೀಟ್ ಮಾಡಿದ್ದರು. ನ್ಯಾಯಮೂರ್ತಿಗಳಾದ ಅಶೋಕ್ ಭೂಷಣ್, ಆರ್.ಸುಬಾಶ್ ರೆಡ್ಡಿ ಮತ್ತು ಎಂ.ಆರ್.ಶಾ ಅವರಿದ್ದ ನ್ಯಾಯಪೀಠವು ಈ ತೀರ್ಪು ನೀಡಿತು.
ಕುನಾಲ್ರ ನಾಲ್ಕು ಟ್ವೀಟ್ಗಳ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಲು ಕಾನೂನು ವಿದ್ಯಾರ್ಥಿಗಳಿಗೆ ಅನುಮತಿ ನೀಡಿದ್ದ ಅಟಾರ್ನಿ ಜನರಲ್ ತುಷಾರ್ ಮೆಹ್ತಾ, ಈ ನಾಲ್ಕು ಟ್ವೀಟ್ಗಳು ಕೆಟ್ಟ ಅಭಿರುಚಿ ಹೊಂದಿರುವುದು ಮಾತ್ರವಲ್ಲ, ಹಾಸ್ಯ ಮತ್ತು ನ್ಯಾಯಾಂಗ ನಿಂದನೆಯ ನಡುವೆ ಇರಬೇಕಾದ ತೆಳುರೇಖೆಯನ್ನು ಉಲ್ಲಂಘಿಸಿವೆ ಎಂದಿದ್ದರು. ಕುನಾಲ್ ಕಮ್ರಾ ಮತ್ತು ರಚಿತಾ ತನೇಜಾ ಸುಪ್ರೀಂಕೋರ್ಟ್ ತೀರ್ಪಿನ ಗೌರವಕ್ಕೆ ಭಂಗ ತಂದ ಪ್ರತ್ಯೇಕ ಪ್ರಕರಣಗಳಲ್ಲಿ ವಿಚಾರಣೆ ಎದುರಿಸುತ್ತಿದ್ದಾರೆ.
ಕುನಾಲ್ ಕಮ್ರಾ ಮೇಲೆ ನ್ಯಾಯಾಂಗ ನಿಂದನೆ ಆರೋಪ: ನಾಳೆ ಸುಪ್ರೀಂಕೋರ್ಟ್ ತೀರ್ಪು
Published On - 12:56 pm, Fri, 18 December 20