ಬಲವಂತದ ಮತಾಂತರ ನಿಷೇಧ ವಿರುದ್ಧ ಸುಗ್ರೀವಾಜ್ಞೆ ಜಾರಿಯ ಬೆನ್ನಲ್ಲೇ ಮಗಳ ಮತಾಂತರ ಯತ್ನ ವಿರೋಧಿಸಿ ದೂರು

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Nov 29, 2020 | 3:48 PM

ಉತ್ತರ ಪ್ರದೇಶದ ರಾಜ್ಯಪಾಲ ಆನಂದಿಬೆನ್ ಪಟೇಲ್ ಬಲವಂತದ ಮತಾಂತರದ ವಿರುದ್ಧ ಸುಗ್ರೀವಾಜ್ಞೆಯನ್ನು ಹೊರಡಿಸಿದ ಬೆನ್ನಲ್ಲೇ ಶನಿವಾರ ರಾತ್ರಿ ಬರೇಲಿ ಜಿಲ್ಲೆಯ ಮುಸ್ಲಿಂ ವ್ಯಕ್ತಿಯ ವಿರುದ್ಧ ಮೊದಲ ಪ್ರಕರಣ ದಾಖಲು.

ಬಲವಂತದ ಮತಾಂತರ ನಿಷೇಧ ವಿರುದ್ಧ ಸುಗ್ರೀವಾಜ್ಞೆ ಜಾರಿಯ ಬೆನ್ನಲ್ಲೇ ಮಗಳ ಮತಾಂತರ ಯತ್ನ ವಿರೋಧಿಸಿ ದೂರು
ಸಿಎಂ ಯೋಗಿ ಆದಿತ್ಯನಾಥ್, ರಾಜ್ಯಪಾಲ ಆನಂದಿಬೆನ್ ಪಟೇಲ್
Follow us on

ಲಖನೌ: ಉತ್ತರ ಪ್ರದೇಶದ ರಾಜ್ಯಪಾಲರಾದ ಆನಂದಿಬೆನ್ ಪಟೇಲ್ ಬಲವಂತದ ಮತಾಂತರ ನಿಷೇಧ ಸುಗ್ರೀವಾಜ್ಞೆಯನ್ನು ಹೊರಡಿಸಿದ ಬೆನ್ನಲ್ಲೇ ಶನಿವಾರ ರಾತ್ರಿ ಬರೇಲಿ ಜಿಲ್ಲೆಯ ಮುಸ್ಲಿಂ ವ್ಯಕ್ತಿಯ ವಿರುದ್ಧ ಮೊದಲ ಪ್ರಕರಣವನ್ನು ಪೊಲೀಸರು ದಾಖಲಿಸಿದ್ದಾರೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಮುಸ್ಲಿಂ ಸಮುದಾಯದ ವ್ಯಕ್ತಿಯೊಬ್ಬ ತನ್ನ ಮಗಳ ಮೇಲೆ ಇಸ್ಲಾಂಗೆ ಮತಾಂತರಗೊಳ್ಳುವಂತೆ ಒತ್ತಡ ಹೇರುತ್ತಿದ್ದಾನೆ ಎಂದು ಷರೀಫ್‌ನಗರ ಗ್ರಾಮದ ವ್ಯಕ್ತಿಯೊಬ್ಬರು ಆರೋಪಿಸಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಬರೇಲಿಯ ದೇವ್ರಾನಿಯಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲುಗೊಂಡಿದೆ ಎಂದು ಬರೇಲಿ ವಲಯದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಎಡಿಜಿ) ಅವಿನಾಶ್ ಚಂದ್ರ ಹೇಳಿದರು.

ಮುಸ್ಲಿಂ ಪುರುಷ ತನ್ನ ಮಗಳಿಗೆ ತನ್ನ ಕಾಲೇಜು ದಿನಗಳಿಂದಲೂ ಪರಿಚಿತ. ಕಳೆದ ಕೆಲವು ತಿಂಗಳುಗಳಿಂದ ಆತ ನನ್ನ ಮಗಳಿಗೆ ಮತ್ತು ಕುಟುಂಬದವರಿಗೆ ತೊಂದರೆ ನೀಡುತ್ತಿದ್ದಾನೆ ಎಂದು ಯುವತಿಯ ಪೋಷಕರು ದೂರು ನೀಡಿರುವುದನ್ನು ಅವಿನಾಶ್ ಚಂದ್ರ ದೃಢಪಡಿಸಿದರು.

ಮಹಿಳೆ ಮತ್ತು ಆರೋಪಿಗಳು ಒಂದೇ ಹಳ್ಳಿಯವರು. ಅವರು ಮದುವೆಯಾಗಿಲ್ಲ. ಈ ಘಟನೆಯು ಪ್ರದೇಶದಲ್ಲಿ ಕೋಮು ಸೌಹಾರ್ದತೆಗೆ ಪರಿಣಾಮ ಬೀರಿದೆ ಎಂದು ಮತ್ತೋರ್ವ ಬರೇಲಿ ಪೊಲೀಸ್ ಅಧಿಕಾರಿ ಮಾಹಿತಿ ಹಂಚಿಕೊಂಡರು.

ವ್ಯಕ್ತಿಯನ್ನು ಅವಮಾನಿಸಿದ್ದಕ್ಕಾಗಿ ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್ 504 ಹಾಗೂ ಕ್ರಿಮಿನಲ್ ಬೆದರಿಕೆಗಾಗಿ ಸೆಕ್ಷನ್ 506ರ ವಿರುದ್ಧ ದಾಖಲಿಸಲಾಗಿದೆ. ಉತ್ತರಪ್ರದೇಶದಲ್ಲಿ ಕಾನೂನು ಬಾಹಿರ ಮತಾಂತರ ನಿಷೇಧ ಸುಗ್ರೀವಾಜ್ಞೆ ಶನಿವಾರದಿಂದ ಜಾರಿಗೆ ಬಂದಿದೆ.

ಹೊಸ ಕಾನೂನಿನ ನಿಬಂಧನೆಗಳ ಅಡಿಯಲ್ಲಿ, ಕಾನೂನು ಉಲ್ಲಂಘಿಸುವವರಿಗೆ 10 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಲು ಸುಗ್ರೀವಾಜ್ಞೆಯು ಅವಕಾಶ ನೀಡುತ್ತದೆ.

ಬಾಲಕಿಯರು, ಅಪ್ರಾಪ್ತ ವಯಸ್ಕರು ಅಥವಾ ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡಕ್ಕೆ ಸೇರಿದವರಾಗಿದ್ದರೆ 2 ರಿಂದ 10 ವರ್ಷಗಳವರೆಗೆ ಕನಿಷ್ಠ 25 ಸಾವಿರ ರೂ. ಸಾಮೂಹಿಕ ಮತಾಂತರದ ಸಂದರ್ಭದಲ್ಲಿ, ಮೂರರಿಂದ 10 ವರ್ಷ ಜೈಲು ಶಿಕ್ಷೆ ಮತ್ತು ಕನಿಷ್ಠ ₹ 50 ಸಾವಿರ ದಂಡ ವಿಧಿಸಬಹುದಾಗಿದೆ.

ಇದನ್ನೂ ಓದಿ: UP ಕಾನೂನು ಬಾಹಿರ ಮತಾಂತರ ನಿಷೇಧ ಸುಗ್ರೀವಾಜ್ಞೆಗೆ ಸಿಕ್ತು ರಾಜ್ಯಪಾಲರ ಅಂಕಿತ