ನಾಳೆಯಿಂದ ದೇಶಾದ್ಯಂತ ಅನ್ಲಾಕ್ 2.O ಜಾರಿ, ಮತ್ತೆ ಯಾವುದಕ್ಕೆಲ್ಲಾ ನಿರ್ಬಂಧ ಮುಂದುವರಿಕೆ?
ದೆಹಲಿ: ಕೊರೊನಾ ಕಂಟ್ರೋಲ್ಗೆ ಬರ್ತಿಲ್ಲ. ಸಾವಿನ ಸುನಾಮಿ ನಿಲ್ತಾನೇ ಇಲ್ಲ. ಮುಂದಿನ ದಾರಿ ಗೊತ್ತಾಗ್ತಿಲ್ಲ. ದೇಶದ ಜನರ ಚಿಂತೆ ಕಮ್ಮಿಯಾಗ್ತಿಲ್ಲ. ಹೆಜ್ಜೆ ಹೆಜ್ಜೆಗೂ ಆತಂಕ ಕಾಡ್ತಿದೆ. ಕ್ಷಣ ಕ್ಷಣವೂ ಸಾವು ಹಿಂಬಾಲಿಸಿದಂತಾಗ್ತಿದೆ. ಆದ್ರೆ ಕೊರೊನಾ ರಣಕೇಕೆಯ ನಡುವೆಯೂ ನಾಳೆಯಿಂದ ದೇಶಾದ್ಯಂತ ಅನ್ಲಾಕ್ 2.0 ಜಾರಿಯಾಗ್ತಿದೆ. 2ನೇ ಹಂತದಲ್ಲಿ ಕೂಡ ಸರ್ಕಾರ ಮತ್ತೆ ವಿನಾಯಿತಿಗೆ ಮಣೆ ಹಾಕಿರೋದು ಸಾರ್ವಜನಿಕರನ್ನ ಕಂಗಲಾಗಿಸಿದೆ. ಕೇಂದ್ರ ಗೃಹ ಇಲಾಖೆಯಿಂದ ಹೊಸ ಗೈಡ್ಲೈನ್ಸ್ ರಿಲೀಸ್! ಅಂದ್ಹಾಗೇ, ದೇಶದಲ್ಲಿ ನಿತ್ಯ 15 ಸಾವಿರಕ್ಕೂ ಹೆಚ್ಚು ಕೊರೊನಾ […]
ದೆಹಲಿ: ಕೊರೊನಾ ಕಂಟ್ರೋಲ್ಗೆ ಬರ್ತಿಲ್ಲ. ಸಾವಿನ ಸುನಾಮಿ ನಿಲ್ತಾನೇ ಇಲ್ಲ. ಮುಂದಿನ ದಾರಿ ಗೊತ್ತಾಗ್ತಿಲ್ಲ. ದೇಶದ ಜನರ ಚಿಂತೆ ಕಮ್ಮಿಯಾಗ್ತಿಲ್ಲ. ಹೆಜ್ಜೆ ಹೆಜ್ಜೆಗೂ ಆತಂಕ ಕಾಡ್ತಿದೆ. ಕ್ಷಣ ಕ್ಷಣವೂ ಸಾವು ಹಿಂಬಾಲಿಸಿದಂತಾಗ್ತಿದೆ. ಆದ್ರೆ ಕೊರೊನಾ ರಣಕೇಕೆಯ ನಡುವೆಯೂ ನಾಳೆಯಿಂದ ದೇಶಾದ್ಯಂತ ಅನ್ಲಾಕ್ 2.0 ಜಾರಿಯಾಗ್ತಿದೆ. 2ನೇ ಹಂತದಲ್ಲಿ ಕೂಡ ಸರ್ಕಾರ ಮತ್ತೆ ವಿನಾಯಿತಿಗೆ ಮಣೆ ಹಾಕಿರೋದು ಸಾರ್ವಜನಿಕರನ್ನ ಕಂಗಲಾಗಿಸಿದೆ.
ಕೇಂದ್ರ ಗೃಹ ಇಲಾಖೆಯಿಂದ ಹೊಸ ಗೈಡ್ಲೈನ್ಸ್ ರಿಲೀಸ್! ಅಂದ್ಹಾಗೇ, ದೇಶದಲ್ಲಿ ನಿತ್ಯ 15 ಸಾವಿರಕ್ಕೂ ಹೆಚ್ಚು ಕೊರೊನಾ ಕೇಸ್ಗಳು ಪತ್ತೆಯಾಗ್ತಿವೆ. ಲಾಕ್ಡೌನ್ಗೆ ರಿಲೀಫ್ ಕೊಟ್ಟ ಬಳಿಕ ವೈರಸ್ ರಾಕೆಟ್ ವೇಗದಲ್ಲಿ ಮುನ್ನುಗ್ಗುತ್ತಿದೆ. ಇದ್ರ ಬೆನ್ನಲ್ಲೇ ನಾಳೆಯಿಂದ ಅನ್ಲಾಕ್ 2.0 ಜಾರಿಯಾಗ್ತಿದ್ದು, ಕೇಂದ್ರ ಗೃಹ ಇಲಾಖೆ 2ನೇ ಹಂತದ ಗೈಡ್ಲೈನ್ಸ್ ರಿಲೀಸ್ ಮಾಡಿದೆ. ಕಂಟೇನ್ಮೆಂಟ್ ಜೋನ್ಗಳ ಹೊರಗೆ ಹೆಚ್ಚು ಆರ್ಥಿಕ ಚಟುವಟಿಕೆ ನಡೆಸೋಕೆ ಕೇಂದ್ರ ಸರ್ಕಾರ ಅವಕಾಶ ಮಾಡಿಕೊಟ್ಟಿದೆ. ಹಾಗಾದ್ರೆ ಅನ್ಲಾಕ್ 2.0ನ ಗೈಡ್ಲೈನ್ಸ್ ಏನು? ಯಾವುದಕ್ಕೆಲ್ಲಾ ರಿಲೀಫ್ ಸಿಗುತ್ತೆ ಅನ್ನೋದನ್ನ ಗಮನಿಸೋದಾದ್ರೆ.
ಅನ್ಲಾಕ್ 2.O ಗೈಡ್ಲೈನ್ಸ್! ಪ್ರತಿ ರಾತ್ರಿ 10 ಗಂಟೆಯಿಂದ ಬೆಳಗ್ಗೆ 5 ಗಂಟೆಯವರೆಗೆ ಕರ್ಫ್ಯೂ ಜಾರಿಯಲ್ಲಿರುತ್ತೆ. ಜುಲೈ 31ರವರೆಗೆ ಶಾಲಾ- ಕಾಲೇಜು, ಕೋಚಿಂಗ್ ಸೆಂಟರ್ ಬಂದ್ ಮುಂದುವರಿಯುತ್ತೆ. ಆನ್ಲೈನ್ ಕ್ಲಾಸ್ಗಳಿಗೆ ಕೇಂದ್ರ ಸರ್ಕಾರ ಅವಕಾಶ ನೀಡಿದೆ. ಜುಲೈ 15ರ ನಂತರ ಕೇಂದ್ರ & ರಾಜ್ಯದ ತರಬೇತಿ ಕೇಂದ್ರಗಳ ಕಾರ್ಯನಿರ್ವಹಣೆಗೆ ಅವಕಾಶ ನೀಡಲಾಗಿದೆ. ದೇಶೀಯ ವಿಮಾನ ಸಂಚಾರ, ರೈಲು ಸಂಚಾರ ಹಂತ ಹಂತವಾಗಿ ವಿಸ್ತರಣೆಯಾಗುತ್ತೆ. ಅಂತಾರಾಷ್ಟ್ರೀಯ ವಿಮಾನ ಸಂಚಾರಕ್ಕೂ ಹಂತ ಹಂತವಾಗಿ ಅವಕಾಶ ನೀಡಲಾಗುತ್ತೆ.
ಜುಲೈ 31ರವರೆಗೆ ಮೆಟ್ರೋ, ಥಿಯೇಟರ್, ಸ್ವಿಮ್ಮಿಂಗ್ ಪೂಲ್, ಜಿಮ್, ಬಾರ್ಗೆ ಅವಕಾಶವಿರಲ್ಲ. ಜೊತೆಗೆ ಹೆಚ್ಚು ಜನರು ಸೇರುವ ಸಮಾರಂಭಗಳಿಗೆ ಯಾವುದೇ ಅವಕಾಶ ನೀಡಲ್ಲ. ಜುಲೈ 31ರವರೆಗೆ ಕಂಟೇನ್ಮೆಂಟ್ ಜೋನ್ಗಳಲ್ಲಿ ಲಾಕ್‌ಡೌನ್ ಮುಂದುವರಿಕೆ ಆಗಲಿದ್ದು, ಅಗತ್ಯ ಸೇನೆಗಳ ಮಾತ್ರ ಅವಕಾಶವಿರುತ್ತದೆ. ಇನ್ನು ಇದಿಷ್ಟೇ ಅಲ್ಲದೆ ಕಾರ್ಯನಿರ್ವಹಿಸುವ ಸ್ಥಳ ಆಧರಿಸಿ ಅಂಗಡಿಯಲ್ಲಿ 5ಕ್ಕಿಂತ ಹೆಚ್ಚು ಜನರು ಇರಲು ಅವಕಾಶ ನೀಡಲಾಗಿದೆ.
ಒಟ್ನಲ್ಲಿ ಕೊರೊನಾ ಸಾವಿನ ನಗಾರಿ ಬಾರಿಸ್ತಿರೋ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಮತ್ತಷ್ಟು ವಿನಾಯಿತಿಗೆ ಮಣೆ ಹಾಕಿದೆ. ಇದು ಮುಂದಿನ ದಿನಗಳಲ್ಲಿ ವೈರಸ್ ಹರಡೋಕೆ ಹೆಚ್ಚು ಕಾರಣವಾಗಬಹುದು ಅಂತಾ ದೇಶದ ಜನರು ಕಳವಳ ವ್ಯಕ್ತಪಡಿಸಿದ್ದಾರೆ.
Published On - 7:16 am, Tue, 30 June 20