ನವದೆಹಲಿ: ಭಾರತದ ಗಡಿ ಭಾಗಗಳಲ್ಲಿ ಚೀನಾ ಸೈನಿಕರ ಉದ್ಧಟತನದ ವರ್ತನೆ ಕುರಿತು ಸಂಸತ್ತಿನಲ್ಲಿ ಚರ್ಚೆ ನಡೆಸಬೇಕು ಎಂದು ಕಾಂಗ್ರೆಸ್ ನಾಯಕರು ಪ್ರತಿಭಟನೆ ನಡೆಸುತ್ತಿರುವ ಹಿಂದೆ ಚೀನಾಗೆ ನೆರವು ನೀಡುವ ದುರುದ್ದೇಶವಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ (Prahlada Joshi) ಕಾಂಗ್ರೆಸ್ (Congress) ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಕೇಂದ್ರ ರಕ್ಷಣಾ ಸಚಿವರು ಮತ್ತು ಭಾರತದ ಸೇನೆಯು ಚೀನಾ ವಿಷಯದಲ್ಲಿ ನಮ್ಮ ನಿಲುವು ಮತ್ತು ಸ್ಥಿತಿಯನ್ನು ಸ್ಪಷ್ಟಪಡಿಸಿದ್ದರೂ, ಕಾಂಗ್ರೆಸ್ ಪಕ್ಷದ ನಾಯಕರು ಮಾತ್ರ ಇದನ್ನು ಒಪ್ಪದೇ ಸಂಸತ್ತಿನಲ್ಲಿ ಇದರ ಬಗ್ಗೆ ಸುಧೀರ್ಘ ಚರ್ಚೆ ನಡೆಸಲು ಬಯಸುತ್ತಿದ್ದಾರೆ.
ಇದನ್ನೂ ಓದಿ: ವಿಧಾನಸಭೆಯಲ್ಲಿ ಹುಬ್ಬಳ್ಳಿ ದರ್ಗಾ ತೆರವು ವಿಚಾರ ಪ್ರಸ್ತಾಪ: ನನ್ನದು 19 ಗುಂಟೆ ಜಾಗ ಹೋಗಿದೆ ಎಂದ ಸಿಎಂ ಬೊಮ್ಮಾಯಿ
ನಮ್ಮ ಸೈನಿಕರನ್ನು ಕಾಂಗ್ರೆಸ್ ನಾಯಕರು ನಂಬುವುದಿಲ್ಲ ಎಂಬುದಕ್ಕೆ ಇದು ಸಾಕ್ಷಿ. ಕಾಂಗ್ರೆಸ್ ನಾಯಕರ ಬೇಜವಾಬ್ದಾರಿ ಹೇಳಿಕೆಗಳು ನಮ್ಮ ಭಾರತದ ಸೈನಿಕರ ನೈತಿಕ ಸ್ಥೈರ್ಯದ ಮೇಲೆ ಪರಿಣಾಮ ಬೀರುತ್ತವೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: ಚೀನಾದ ರೀತಿಯೇ ನಾವು ಕರ್ನಾಟಕಕ್ಕೆ ಪ್ರವೇಶಿಸುತ್ತೇವೆ, ನಮಗೆ ಯಾರ ಒಪ್ಪಿಗೆ ಬೇಕಾಗಿಲ್ಲ: ಶಿವಸೇನೆ ನಾಯಕ ಸಂಜಯ್ ರಾವತ್
ನಮ್ಮ ಸೇನೆಯ ಕಾರ್ಯತಂತ್ರವನ್ನು ಸಂಸತ್ತಿನಲ್ಲಿ ಚರ್ಚಿಸಲು ಕಾಂಗ್ರೆಸ್ ಒತ್ತಾಯಿಸುತ್ತಿದೆ ಮತ್ತು ಈ ಮೂಲಕ ಕಾಂಗ್ರೆಸ್ ನಾಯಕರು ನಮ್ಮ ಶತ್ರುಗಳಿಗೆ ಸಹಾಯ ಮಾಡಲು ಬಯಸುತ್ತಿದ್ದಾರೆ ಎಂದ ಅವರು, ಚೀನಾ ದೇಶದ ಮೇಲೆ ಕಾಂಗ್ರೆಸ್ ಪಕ್ಷದ ಪ್ರೀತಿ ಮತ್ತು ಅದರ “ಹಿಂದಿ-ಚೀನಿ ಭಾಯಿ ಭಾಯಿ” ನೀತಿಯಿಂದಾದ ನಷ್ಟದಿಂದ ಭಾರತವು ಇಂದಿಗೂ ಬಳಲುತ್ತಿದೆ. ತಮ್ಮ ದೋಷಗಳನ್ನು ಮರೆಮಾಚಲು ಕಾಂಗ್ರೆಸ್ ಪಕ್ಷದ ನಾಯಕರು ಆಧಾರ ರಹಿತ ಆರೋಪ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:23 pm, Wed, 21 December 22