ಇಸ್ರೋ ವಿಜ್ಞಾನಿಗಳಿಗೆ 17 ತಿಂಗಳಿನಿಂದ ಸಂಬಳ ಬಂದಿಲ್ಲ ಎಂದ ದಿಗ್ವಿಜಯ ಸಿಂಗ್; ಬಿಜೆಪಿ ನಾಯಕರಿಂದ ವಾಗ್ದಾಳಿ

|

Updated on: Aug 23, 2023 | 2:00 PM

ಚಂದ್ರಯಾನದ ಯಶಸ್ವಿ ಚಂದ್ರನ ಲ್ಯಾಂಡಿಂಗ್‌ಗಾಗಿ ಇಸ್ರೋ ವಿಜ್ಞಾನಿಗಳು ಪ್ರಯತ್ನ ನಡೆಸುತ್ತಿರುವುದು ನಮಗೆ ಹೆಮ್ಮೆಯ ವಿಷಯವಾಗಿದೆ. ಅವರ ಯಶಸ್ಸಿಗಾಗಿ ನಾವು ದೇವರಲ್ಲಿ ಪ್ರಾರ್ಥಿಸುತ್ತೇವೆ. ಆದರೆ ಇದನ್ನು ಮಾಡಿದ ವಿಜ್ಞಾನಿಗಳಿಗೆ 17 ತಿಂಗಳಿನಿಂದ ಸಂಬಳ ಬಂದಿಲ್ಲ ಎಂದು ಪತ್ರಿಕೆಗಳಲ್ಲಿ ವರದಿಯಾಗಿದೆ. ಪ್ರಧಾನಿಯವರು ಇದನ್ನು ಗಮನಿಸಬೇಕು ಎಂದು ಎಎನ್‌ಐಗೆ ಜತೆ ಮಾತನಾಡಿದ ಸಿಂಗ್ ಹೇಳಿದ್ದಾರೆ.

ಇಸ್ರೋ ವಿಜ್ಞಾನಿಗಳಿಗೆ 17 ತಿಂಗಳಿನಿಂದ ಸಂಬಳ ಬಂದಿಲ್ಲ ಎಂದ ದಿಗ್ವಿಜಯ ಸಿಂಗ್; ಬಿಜೆಪಿ ನಾಯಕರಿಂದ ವಾಗ್ದಾಳಿ
ದಿಗ್ವಿಜಯ್ ಸಿಂಗ್
Follow us on

ದೆಹಲಿ ಆಗಸ್ಟ್ 23: ಭಾರತ ಸರ್ಕಾರದ ಪತ್ರಿಕಾ ಮಾಹಿತಿ ಬ್ಯೂರೋದ ಸತ್ಯ ಪರಿಶೀಲನಾ ವಿಭಾಗವು ಇದೇ ರೀತಿಯ ಹೇಳಿಕೆಯನ್ನು ತಳ್ಳಿಹಾಕಿದ್ದರೂ ಕಾಂಗ್ರೆಸ್ ನಾಯಕ ದಿಗ್ವಿಜಯ ಸಿಂಗ್ (Digvijaya Singh) , ಇಸ್ರೋ(ISRO) ವಿಜ್ಞಾನಿಗಳು 17 ತಿಂಗಳಿನಿಂದ ತಮ್ಮ ಸಂಬಳವನ್ನು ಪಡೆದಿಲ್ಲ ಎಂದು ಬುಧವಾರ ಹೇಳಿದ್ದಾರೆ. ಚಂದ್ರಯಾನ 3 (Chandrayaan 3) ಚಂದ್ರನ ಮೇಲ್ಮೈಯಲ್ಲಿ ಇಳಿಯಲು ಸಿದ್ದತೆ ನಡೆಸುತ್ತಿದ್ದಂತೆ ಹಿರಿಯ ಕಾಂಗ್ರೆಸ್ ನಾಯಕ, ಇಸ್ರೋ ವಿಜ್ಞಾನಿಗಳ ಸಂಬಳ ವಿತರಣೆಯನ್ನು ಪ್ರಧಾನಿ ಗಮನಿಸಬೇಕು ಎಂದು ಹೇಳಿದ್ದಾರೆ.

ಚಂದ್ರಯಾನದ ಯಶಸ್ವಿ ಚಂದ್ರನ ಲ್ಯಾಂಡಿಂಗ್‌ಗಾಗಿ ಇಸ್ರೋ ವಿಜ್ಞಾನಿಗಳು ಪ್ರಯತ್ನ ನಡೆಸುತ್ತಿರುವುದು ನಮಗೆ ಹೆಮ್ಮೆಯ ವಿಷಯವಾಗಿದೆ. ಅವರ ಯಶಸ್ಸಿಗಾಗಿ ನಾವು ದೇವರಲ್ಲಿ ಪ್ರಾರ್ಥಿಸುತ್ತೇವೆ. ಆದರೆ ಇದನ್ನು ಮಾಡಿದ ವಿಜ್ಞಾನಿಗಳಿಗೆ 17 ತಿಂಗಳಿನಿಂದ ಸಂಬಳ ಬಂದಿಲ್ಲ ಎಂದು ಪತ್ರಿಕೆಗಳಲ್ಲಿ ವರದಿಯಾಗಿದೆ. ಪ್ರಧಾನಿಯವರು ಇದನ್ನು ಗಮನಿಸಬೇಕು ಎಂದು ಎಎನ್‌ಐಗೆ ಜತೆ ಮಾತನಾಡಿದ ಸಿಂಗ್ ಹೇಳಿದ್ದಾರೆ.

ಸಿಂಗ್ ಹೇಳಿಕೆಗೆ ಪ್ರತಿಕ್ರಿಯಿಸಿದ ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ ಇಸ್ರೋ ಭಾರತವನ್ನು ಹೆಮ್ಮೆಪಡಿಸಲು ಸಿದ್ಧವಾಗಿರುವ ದಿನದಂದು ಅಸಹ್ಯಕರ ದಿಗ್ವಿಜಯ್ ಸಿಂಗ್ ನಕಲಿ ಸುದ್ದಿಗಳನ್ನು ಹರಡುತ್ತಿದ್ದಾರೆ. ಕಾಂಗ್ರೆಸ್ ಪ್ರಧಾನಿ ಮೋದಿಯನ್ನು ದ್ವೇಷಿಸುತ್ತದೆ, ಆದರೆ ಅದು ಪ್ರಬಲವಾದ ಪುನರುತ್ಥಾನದ ಭಾರತವನ್ನು ಇನ್ನಷ್ಟು ದ್ವೇಷಿಸುತ್ತದೆ, ಏಕೆಂದರೆ ಆತ್ಮವಿಶ್ವಾಸದ ಭಾರತ ಎಂದಿಗೂ ಕಾಂಗ್ರೆಸ್‌ಗೆ ಮತ ಹಾಕುವುದಿಲ್ಲ. “ಭಾರತವು ಚಂದ್ರಯಾನ-3 ಅನ್ನು ಆಚರಿಸುತ್ತಿರುವಾಗ, ಕಾಂಗ್ರೆಸ್ ಕೆಣಕುತ್ತದೆ ಎಂದು ಅವರು ಟ್ವೀಟ್ ಮಾಡಿದ್ದಾರೆ.

ವಾಣಿಜ್ಯೋದ್ಯಮಿ ಮತ್ತು ರಾಜಕೀಯ ವಿಶ್ಲೇಷಕ ತೆಹ್ಸೀನ್ ಪೂನವಾಲ್ಲಾ ಅವರು ಇತ್ತೀಚೆಗೆ ಪಾಡ್‌ಕ್ಯಾಸ್ಟ್‌ನಲ್ಲಿ ಇದೇ ರೀತಿಯ ಹೇಳಿಕೆ ನೀಡಿದ್ದರು.

‘ದಿ ರಣವೀರ್ ಶೋ ಪಾಡ್‌ಕ್ಯಾಸ್ಟ್’ ಸಂಚಿಕೆಯಲ್ಲಿ, ಪೂನಾವಾಲಾ “ಕಳೆದ ಮೂರು ತಿಂಗಳಿಂದ ಇಸ್ರೋ ವಿಜ್ಞಾನಿಗಳಿಗೆ ಸಂಬಳ ನೀಡಿಲ್ಲ. ಅದು ನ್ಯಾಯವೇ? ಇದು ಈ ಸರ್ಕಾರದೊಂದಿಗಿನ ನನ್ನ ಸಮಸ್ಯೆ. ಇಸ್ರೋ ಬಗ್ಗೆ ನಮಗೆ ತುಂಬಾ ಹೆಮ್ಮೆ ಇದೆ. ಅದೊಂದು ದೊಡ್ಡ ಸಂಸ್ಥೆ. ಮೂರು ತಿಂಗಳ ಸಂಬಳವನ್ನು ಪಾವತಿಸಲಾಗಿಲ್ಲ, ಮತ್ತು ಈ ಬಗ್ಗೆ ಸತ್ಯವನ್ನು ಪರೀಕ್ಷಿಸಲು ಹಿಂಜರಿಯಬೇಡಿ ಎಂದಿದ್ದರು.

ಇದನ್ನೂ ಓದಿ: Viral Video: ಚಂದ್ರಯಾನ 3; ಮರಳಶಿಲ್ಪದಲ್ಲಿ ‘ಜೈ ಹೋ ಇಸ್ರೋ’ ಎಂದ ಸುದರ್ಶನ ಪಟ್ನಾಯಕ ವಿದ್ಯಾರ್ಥಿಗಳು

ಈ ಬಗ್ಗೆ ಫ್ಯಾಕ್ಟ್ ಚೆಕ್ ಮಾಡಿದ ಪಿಐಬಿ ISRO ವಿಜ್ಞಾನಿಗಳು ತಮ್ಮ ಸಂಬಳವನ್ನು ಪ್ರತಿ ತಿಂಗಳ ಕೊನೆಯ ದಿನದಂದು ಸ್ವೀಕರಿಸುತ್ತಾರೆ, ಸಂಬಳ ಸಿಕ್ಕಿಲ್ಲ ಎನ್ನುವುದು ಸುಳ್ಳು ಸುದ್ದಿ ಎಂದಿತ್ತು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 1:59 pm, Wed, 23 August 23