Viral Video: ಚಂದ್ರಯಾನ 3; ಮರಳಶಿಲ್ಪದಲ್ಲಿ ‘ಜೈ ಹೋ ಇಸ್ರೋ’ ಎಂದ ಸುದರ್ಶನ ಪಟ್ನಾಯಕ ವಿದ್ಯಾರ್ಥಿಗಳು

Puri Beach: ಚಂದ್ರಯಾನ 3 ಯಶಸ್ವಿಯಾಗಲೆಂದು ದೇಶಾದ್ಯಂತ ಜನರು ಶುಭಹಾರೈಸುತ್ತಿದ್ದಾರೆ. ಮಕ್ಕಳು, ವಿದ್ಯಾರ್ಥಿಗಳು, ಪ್ರಸಿದ್ಧ ವ್ಯಕ್ತಿಗಳು, ವಿಜ್ಞಾನಿಗಳು, ಕಲಾವಿದರನೇಕರು ಸಾಮಾಜಿಕ ಜಾಲತಾಣದಲ್ಲಿ ತಮ್ಮದೇ ಆದ ರೀತಿಯಲ್ಲಿ ಈ ವಿಷಯವಾಗಿ ಅಭಿವ್ಯಕ್ತಿಸುತ್ತಿದ್ದಾರೆ. ಇದೀಗ ಒಡಿಶಾದ ಪುರಿ ಬೀಚ್​ನಲ್ಲಿ ಸುದರ್ಶನ ಪಟ್ನಾಯಕ ಅವರ ವಿದ್ಯಾರ್ಥಿಗಳು ಮರಳಶಿಲ್ಪ ರಚಿಸಿದ್ದಾರೆ. ನೋಡಿ.

Viral Video: ಚಂದ್ರಯಾನ 3; ಮರಳಶಿಲ್ಪದಲ್ಲಿ 'ಜೈ ಹೋ ಇಸ್ರೋ' ಎಂದ ಸುದರ್ಶನ ಪಟ್ನಾಯಕ ವಿದ್ಯಾರ್ಥಿಗಳು
ಒಡಿಶಾದ ಪುರಿ ಬೀಚ್​​ನಲ್ಲಿ ಕಲಾವಿದ ಸುದರ್ಶನ ಪಟ್ನಾಯಕರ ವಿದ್ಯಾರ್ಥಿಗಳು ರಚಿಸಿದ ಮರಳಶಿಲ್ಪ
Follow us
|

Updated on:Aug 23, 2023 | 1:18 PM

Chandrayaana-3: ಜಗತ್ತಿನಲ್ಲಿ ಏನೇ ಮಹತ್ತರ ಬೆಳವಣಿಗೆಗಳು, ಸಂಗತಿಗಳು ಜರುಗಿದರೂ ಮರಳುಶಿಲ್ಪ ಕಲಾವಿದ ಸುದರ್ಶನ ಪಟ್ನಾಯಕ ತಮ್ಮ ಕಲೆಯ ಮೂಲಕ ಆಗಾಗ ಸ್ಪಂದಿಸುವ ರೂಢಿ ಇಟ್ಟುಕೊಂಡಿದ್ದಾರೆ. ಒಡಿಶಾದ ಕಡಲದಂಡೆಯ ಮೇಲೆ ಅವರ ಬೃಹದ್ಗಾತ್ರದ ಮರಳಶಿಲ್ಪಗಳನ್ನು ವಿವಿಧ ಸಂದರ್ಭಗಳಲ್ಲಿ ನೋಡಿದ್ದೀರಿ. ಇದೀಗ ಚಂದ್ರಯಾನ 3 ಎಂಬ ಥೀಮಿನಡಿ ಒಡಿಶಾದ ಪುರಿ ಬೀಚ್​ನಲ್ಲಿ (Puri Beach) ಇವರ ವಿದ್ಯಾರ್ಥಿವೃಂದ ಪ್ರಸ್ತುತ ಕಲಾಕೃತಿಯನ್ನು ಮರಳಿನಲ್ಲಿ ಹೊಮ್ಮಿಸಿದೆ. ಬಣ್ಣಗಳಿಂದ ಅಲಂಕೃತವಾದ ಈ ಕಲಾಕೃತಿಯು ಬಹುವಾಗಿ ನೆಟ್ಟಿಗರ ಗಮನ ಸೆಳೆಯುತ್ತಿದೆ. ಚಂದ್ರನ ಮೇಲ್ಮೈನಲ್ಲಿರುವ ಕುಳಿಗಳ ನೈಜತೆ, ಆಕಾಶದ ಹಿನ್ನೆಲೆ ಮತ್ತು ಒಟ್ಟಾರೆ ಕಲಾಕೃತಿಯ ಸೊಬಗನ್ನು ನೋಡಿ ನೆಟ್ಟಿಗರು ಅಚ್ಚರಿಗೆ ಒಳಗಾಗುತ್ತಿದ್ದಾರೆ.

ಇದನ್ನೂ ಓದಿ : Viral Video: 2004ರ ಹಿಟ್ ಸಾಂಗ್​ ‘ಗ್ಯಾಸೋಲಿನಾ’ ಇದೀಗ ಟ್ರೆಂಡಿಂಗ್​ನಲ್ಲಿ

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಸುದರ್ಶನ ತಮ್ಮ ವಿದ್ಯಾರ್ಥಿಗಳ ಈ ಕಲಾಕೃತಿಯ ಚಿತ್ರವನ್ನು X (ಟ್ವಿಟರ್​) ನಲ್ಲಿ ಹಂಚಿಕೊಂಡಿದ್ದಾರೆ. ಆ. 22ರಂದು ಪೋಸ್ಟ್ ಮಾಡಿದ ಈ ಚಿತ್ರವನ್ನು ಈತನಕ ಸುಮಾರು 16,000 ಜನರು ನೋಡಿದ್ದಾರೆ. ಸುಮಾರು 900 ಜನರು ಲೈಕ್ ಮಾಡಿದ್ದಾರೆ. 120 ಜನರು ರೀಪೋಸ್ಟ್ ಮಾಡಿದ್ದಾರೆ. ಅನೇಕರು ಪ್ರತಿಕ್ರಿಯಿಸಿ ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸುದರ್ಶನ ಪಟ್ನಾಯಕರ ವಿದ್ಯಾರ್ಥಿಗಳು ರೂಪಿಸಿದ ಮರಳಕಲಾಕೃತಿಯನ್ನು ನೋಡಿ

ಅನೇಕರು ಜೈಹೋ ಎಂದು ಜೈಕಾರ ಹಾಕಿ ತಮ್ಮ ಸಂತೋಷ ಮತ್ತು ಪ್ರೋತ್ಸಾಹವನ್ನು ವ್ಯಕ್ತಪಡಿಸಿದ್ದಾರೆ. ನಿಮ್ಮ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಕೃತಜ್ಞತೆ ತಿಳಿಸಿ ಎಂದಿದ್ದಾರೆ ಒಬ್ಬರು. ಈ ಕಲ್ಪನೆಯೇ ಅನನ್ಯವಾಗಿದೆ, ಮತ್ತು ಅತ್ಯಂತ ನೈಜತೆಯಿಂದ ಕೂಡಿದೆ. ನೀವು ಅವರನ್ನು ಪ್ರೋತ್ಸಾಹಿಸುತ್ತಿರುವ ರೀತಿ ಅನುಪಮ ಎಂದಿದ್ದಾರೆ ಮತ್ತೊಬ್ಬರು. ಈ ಕಾಲದಲ್ಲಿ ಇಂಥ ನಿಸ್ಪೃಹ ಗುರು ಸಿಗುವುದು ಅಪರೂಪ, ನೀವು ಎಷ್ಟು ಹೆಮ್ಮೆಯಿಂದ ಇದನ್ನು ಪೋಸ್ಟ್​ ಮಾಡಿದ್ದೀರಿ, ಖುಷಿಯಾಯಿತು ಎಂದಿದ್ದಾರೆ ಮಗದೊಬ್ಬರು.

ಇದನ್ನೂ ಓದಿ : Viral Video: ಅಮೆರಿಕ; ಅಪರೂಪದ ಪಟ್ಟೆರಹಿತ ಜಿರಾಫೆಮರಿ; ಸಾರ್ವಜನಿಕರ ವೀಕ್ಷಣೆಗೆ ಅವಕಾಶ

ಕಲೆಯನ್ನು ತಲೆಮಾರಿನಿಂದ ತಲೆಮಾರಿಗೆ ದಾಟಿಸುವ ನಿಮ್ಮಂಥವರು ಈಗಿನ ಕಾಲದಲ್ಲಿ ವಿರಳ ಎಂದು ಶ್ಲಾಘಿಸಿದ್ದಾರೆ ಒಬ್ಬರು. ನಿಮ್ಮ ಕಲಾಕೃತಿಗಳ ಅಭಿಮಾನಿ ಸರ್ ನಾನು ಎಂದು ಕೆಲವರು ಹೇಳಿ ಶುಭಹಾರೈಸಿದ್ದಾರೆ.

ಇದನ್ನು ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್​ ನ್ಯೂಸ್​​ಗಾಗಿ ಕ್ಲಿಕ್ ಮಾಡಿ

Published On - 1:16 pm, Wed, 23 August 23

ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ