Viral Video: ‘ಯಾರು ನ್ಯೂಸ್​ ನೋಡುತ್ತಿದ್ದಾರೆಂದು ನೆನಪಿಸಬಹುದೆ?’ ಆ್ಯಂಕರ್ ಲೈವ್​ನಲ್ಲಿ ತಡವರಿಸಿದ ಆ ಕ್ಷಣಗಳು

Tongue Slip : ಲೈವ್​ ಎಂದಮೇಲೆ ಅದೆಷ್ಟು ಜಾಗ್ರತೆಯಿಂದ ಇದ್ದರೂ ಸಾಲದು. ಅಪರೂಪಕ್ಕೆ ನಾಲಗೆ ತಡಬಡಿಸಿದರೆ ಇಡೀ ಜಗತ್ತೇ ತೆರೆಯ ಮೇಲಿರುವವರನ್ನು ನೋಡಿ ನಕ್ಕುಬಿಡುತ್ತದೆ. ಇದೀಗ ಬಿಬಿಸಿಯ ನ್ಯೂಸ್​ ಆ್ಯಂಕರ್​ ಒಬ್ಬರು ತಡಬಡಿಸಿದ ವಿಡಿಯೋ ಅನ್ನು ಸ್ವತಃ ಅವರೇ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ತಮ್ಮನ್ನು ತಾವೇ ತಮಾಷೆ ಮಾಡಿಕೊಂಡಿದ್ದಾರೆ.

Viral Video: 'ಯಾರು ನ್ಯೂಸ್​ ನೋಡುತ್ತಿದ್ದಾರೆಂದು ನೆನಪಿಸಬಹುದೆ?' ಆ್ಯಂಕರ್ ಲೈವ್​ನಲ್ಲಿ ತಡವರಿಸಿದ ಆ ಕ್ಷಣಗಳು
ಬಿಬಿಸಿಯ ನ್ಯೂಸ್​ ಆ್ಯಂಕರ್ ಗ್ಯಾರೆಥ್ ಬಾರ್ಲೋ ಲೈವ್​ನಲ್ಲಿ
Follow us
ಶ್ರೀದೇವಿ ಕಳಸದ
|

Updated on: Aug 23, 2023 | 3:37 PM

News Anchor : ನೀವು ನೋಡುತ್ತಿದ್ದೀರಿ, ನೀವು ನೋಡ್ತಾ ಇದ್ದೀರಿ, ನೀವು ನೋಡ್ತಾ ಇರ್ರಿ, ನೀವು ನೋಡಿದಿರಿ… ಹೀಗೆ ಪ್ರತಿಯೊಬ್ಬ ನ್ಯೂಸ್​​​ ಆ್ಯಂಕರ್​​​ಗಳು ವೀಕ್ಷಕರನ್ನು ಉದ್ದೇಶಿಸಿ ಲೈವ್ ನ್ಯೂಸ್​ನ ಆರಂಭದಲ್ಲಿಯೋ ಅಂತ್ಯದಲ್ಲಿಯೋ ಅಥವಾ ಮಧ್ಯದಲ್ಲಿಯೋ ಹೇಳುವುದನ್ನು ಗಮನಿಸಿದ್ದೀರಿ. ಆದರೆ ಬಿಬಿಸಿ (BBC) ನ್ಯೂಸ್​ ಆ್ಯಂಕರ್ ಗ್ಯಾರೆಥ್ ಬಾರ್ಲೋ (Gareth Barlow)  ‘ನೀವು ನೋಡುತ್ತಿದ್ದೀರಿ’ ಎನ್ನುವ ಬದಲಾಗಿ ‘ನಾನು ನೋಡುತ್ತಿದ್ದೇನೆ’ ಎಂದು ಲೈವ್​ನಲ್ಲಿ ಹೇಳಿ ತಡವರಿಸಿದ್ದಾರೆ. ಈ ತಮಾಷೆಯ ವಿಡಿಯೋ ಅನ್ನು ಅವರೇ ತಮ್ಮ X (Twitter) ಖಾತೆಯಲ್ಲಿ ಪೋಸ್ಟ್ ಮಾಡಿ, ತಮ್ಮ ಕಾಲನ್ನು ತಾವೇ ಎಳೆದುಕೊಂಡಿದ್ದಾರೆ. ನೆಟ್ಟಿಗರು ಈ ವಿಡಿಯೋ ನೋಡಿ ಬಿದ್ದುಬಿದ್ದು ನಗುತ್ತಿದ್ದಾರೆ.

ಇದನ್ನೂ ಓದಿ : Viral Video: 13 ಗಂಟೆಗಳಲ್ಲಿ 73 ಕಿಮೀ ನಡೆದು ಬೆಂಗಳೂರಿನಲ್ಲಿ ‘ಭಾರತದ ನಕ್ಷೆ’ ಗುರುತಿಸಿದ ಈ ವ್ಯಕ್ತಿ

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

‘ಸುದ್ದಿಯನ್ನು ಯಾರು ನೋಡುತ್ತಿದ್ದಾರೆಂದು ದಯವಿಟ್ಟು ಯಾರಾದರೂ ನನಗೆ ನೆನಪಿಸಬಹುದೇ?’ ಎಂಬ ಒಕ್ಕಣೆ ಬರೆದು ಈ ವಿಡಿಯೋ ಪೋಸ್ಟ್ ಮಾಡಿದ್ದಾರೆ ಗ್ಯಾರೆಥ್. ಆ. 21ರಂದು ಹಂಚಿಕೊಂಡ ಈ ವಿಡಿಯೋ ಅನ್ನು ಈತನಕ  8.8 ಲಕ್ಷ ಜನರು ನೋಡಿದ್ದಾರೆ. 6,900 ಜನರು ಲೈಕ್‌ ಮಾಡಿದ್ದಾರೆ. 300ಕ್ಕೂ ಹೆಚ್ಚು ಜನರು ರೀಪೋಸ್ಟ್ ಮಾಡಿದ್ದಾರೆ. ಅನೇಕರು ಈ ವಿಡಿಯೋ ನೋಡಿ ಪ್ರತಿಕ್ರಿಯಿಸಿದ್ದಾರೆ.

ಆ್ಯಂಕರ್ ಗರೆಥ್​ ನಿಮಗೆ ನೆನಪಿಸಲು ತಿಳಿಸಿರುವ ವಿಡಿಯೋ ಇದೇ

ಇದನ್ನೂ ಓದಿ : Viral Video: ಲಂಡನ್​; ವಿದ್ಯುದ್ದೀಪವೇ ಇಲ್ಲದ ಈ ದ್ವೀಪದಲ್ಲಿ ಈ ವ್ಯಕ್ತಿ ಒಂಟಿಯಾಗಿ ವಾಸಿಸುತ್ತಿರುವುದೇಕೆ?

ನನ್ನನ್ನೂ ನೋಡುತ್ತಿದ್ದೇನೆ, ನಿಮ್ಮನ್ನೂ ನೋಡುತ್ತಿದ್ದೇನೆ ಎಂದು ತಮಾಷೆ ಮಾಡಿದ್ದಾರೆ ಒಬ್ಬರು. ನೀವು ತಾಂತ್ರಿಕವಾಗಿ ಸುದ್ದಿಯನ್ನು ನೋಡುತ್ತಿದ್ದೀರಿ. ಪ್ಯಾಕೇಜುಗಳನ್ನು ನೋಡುತ್ತಿದ್ದೀರಿ, ಔಟ್​ಪುಟ್​ಗೆ ಪ್ರತಿಕ್ರಿಯೆ ನೀಡುತ್ತಿದ್ದೀರಿ ಎಂದು ಮತ್ತೊಬ್ಬರು ಹೇಳಿದ್ದಾರೆ. ಆಹ್ ಇದು ಅದ್ಭುತ! ಮತ್ತಿದನ್ನು ನೀವೇ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು ನಿಮ್ಮ ಸಹಜ ನಡೆಗೆ ಸಾಕ್ಷಿ ಎಂದಿದ್ದಾರೆ ಮತ್ತೊಬ್ಬರು. ತಡವಿರಿಸಿದ್ದು ಮುಖದಲ್ಲಿ ವ್ಯಕ್ತವಾಗದಂತೆ ಲೈವ್​ ನಿಭಾಯಿಸಿದ್ದಾರೆ ಎಂದು ಮಗದೊಬ್ಬರು ಹೇಳಿದ್ದಾರೆ.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​​ಗಾಗಿ ಕ್ಲಿಕ್ ಮಾಡಿ

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್