ಅನಾಥಾಶ್ರಮ ಮಕ್ಕಳ ಜೊತೆ ಈಸ್ಟರ್ ಹಬ್ಬದ ಭೋಜನ ಸವಿದು ಪ್ರಿಯಾಂಕಾ ಗಾಂಧಿಗೆ ವಿಡಿಯೋ ಕಾಲ್ ಮಾಡಿದ ರಾಹುಲ್ ಗಾಂಧಿ

|

Updated on: Apr 04, 2021 | 3:52 PM

ರಾಹುಲ್ ಗಾಂಧಿ ಮಕ್ಕಳ ಪಕ್ಕವೇ ಕುಳಿತು ರುಚಿ ರುಚಿ ಭೋಜನ ಸವಿದರು. ಈ ವೇಳೆ ತಮ್ಮ ಮೊಬೈಲ್​ನಲ್ಲಿ ಸಹೋದರಿ ಪ್ರಿಯಾಂಕಾ ಗಾಂಧಿಗೆ ವಿಡಿಯೋ ಕಾಲ್ ಮಾಡಿ ತಮ್ಮ ಪಕ್ಕದಲ್ಲೇ ಊಟ ಮಾಡುತ್ತಿದ್ದ ಮಕ್ಕಳಿಗೆ ಪ್ರಿಯಾಂಕಾ ಗಾಂಧಿಯವರ ಬಳಿ ಮಾತನಾಡಿಸಿದರು.

ಅನಾಥಾಶ್ರಮ ಮಕ್ಕಳ ಜೊತೆ ಈಸ್ಟರ್ ಹಬ್ಬದ ಭೋಜನ ಸವಿದು ಪ್ರಿಯಾಂಕಾ ಗಾಂಧಿಗೆ ವಿಡಿಯೋ ಕಾಲ್ ಮಾಡಿದ ರಾಹುಲ್ ಗಾಂಧಿ
ಕೇರಳದಲ್ಲಿ ಮಕ್ಕಳ ಜತೆ ಭೋಜನ ಸವಿಯುತ್ತಾ ಸಹೋದರಿ ಪ್ರಿಯಾಂಕಾ ಗಾಂಧಿಗೆ ವಿಡಿಯೊ ಕಾಲ್ ಮಾಡಿದ ರಾಹುಲ್ ಗಾಂಧಿ
Follow us on

ವಯನಾಡ್: ಕಾಂಗ್ರೆಸ್ ನಾಯಕ, ವಯನಾಡ್ ಕ್ಷೇತ್ರದ ಸಂಸದ ರಾಹುಲ್ ಗಾಂಧಿ ವಿಧಾನಸಭಾ ಚುನಾವಣೆಯ ನಿಮಿತ್ತ ಇಂದು ಕೇರಳದಲ್ಲಿದ್ದಾರೆ. ಅವರು ಇಂದು ಈಸ್ಟರ್ ಹಬ್ಬದ ಸಂಭ್ರಮವನ್ನು ವಯನಾಡ್​ನ ಜೀವನ ಜ್ಯೋತಿ ಅನಾಥಾಶ್ರಮದಲ್ಲಿ ಮಕ್ಕಳ ಜತೆ ಔತಣಕೂಟ ನಡೆಸಿ ಆಚರಿಸಿಕೊಂಡಿದ್ದಾರೆ. ರಾಹುಲ್ ಗಾಂಧಿ ಮಕ್ಕಳ ಪಕ್ಕವೇ ಕುಳಿತು ರುಚಿ ರುಚಿ ಭೋಜನ ಸವಿದಿದ್ದಾರೆ. ಈ ವೇಳೆ ತಮ್ಮ ಮೊಬೈಲ್​ನಲ್ಲಿ ಸಹೋದರಿ ಪ್ರಿಯಾಂಕಾ ಗಾಂಧಿಗೆ ವಿಡಿಯೋ ಕಾಲ್ ಮಾಡಿ ತಮ್ಮ ಪಕ್ಕದಲ್ಲೇ ಊಟ ಮಾಡುತ್ತಿದ್ದ ಮಕ್ಕಳಿಗೆ ಪ್ರಿಯಾಂಕಾ ಗಾಂಧಿಯವರ ಬಳಿ ಮಾತನಾಡಿಸಿದ್ದಾರೆ.

ಈ ಮುನ್ನ ದೇಶದ ಜನತೆಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಈಸ್ಟರ್ ಹಬ್ಬದ ಶುಭಕೋರಿದ್ದರು.  ತಮ್ಮ ಶುಭಕಾಮನೆಗಳನ್ನು ಟ್ವೀಟ್ ಮಾಡಿದ್ದ ಅವರು, ಭರವಸೆ ಮತ್ತು ಹೊಸ ಆರಂಭದ ಪ್ರತೀಕವಾದ ಈಸ್ಟರ್ ಹಬ್ಬದ ಶುಭಾಶಯಗಳು ಎಂದು ಬರೆದುಕೊಂಡಿದ್ದರು.

ಇದಕ್ಕೂ ಮುನ್ನ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಈಸ್ಟರ್ ಹಬ್ಬದ ಶುಭಾಶಯ ಕೋರಲು ಹೋಗಿ ಟ್ವಿಟರ್​ನಲ್ಲಿ ಟೀಕೆಗಳನ್ನು ಎದುರಿಸಿದ್ದರು. ತಮ್ಮ ಸಹೋದರ ರಾಹುಲ್ ಗಾಂಧಿ ಪ್ರತಿನಿಧಿಸುವ ವಯನಾಡ್ ಲೋಕಸಭಾ ಕ್ಷೇತ್ರ ಮತ್ತು ಕೇರಳದ ಜನತೆಗೆ ಈಸ್ಟರ್ ಶುಭಾಶಯಗಳು ಎಂಬ ವಿಡಿಯೋವೊಂದನ್ನು ಅವರು ಹಂಚಿಕೊಂಡಿದ್ದರು.ಆದರೆ, ಕೇವಲ ವಯನಾಡ್ ಮತ್ತು ಕೇರಳದ ಜನರಿಗೆ ಮಾತ್ರ ಶುಭಾಶಯ ಕೋರಿದ್ದೇಕೆ ಎಂದು ಹಲವರು ಅವರನ್ನು ಟೀಕಿಸಿದ್ದರು.

ಇದನ್ನೂ ಓದಿ: ನಾನು ಭಾರತದ ಪ್ರಧಾನಿಯಾದರೆ..? ಪ್ರಶ್ನೆಗೆ ರಾಹುಲ್ ಗಾಂಧಿ ಏನು ಉತ್ತರಿಸಿದರು..

Tamil Nadu Elections 2021: ತಮಿಳುನಾಡು ಸಿಎಂ ಪಳನಿಸ್ವಾಮಿ ಅವರು ನರೇಂದ್ರ ಮೋದಿ ಪಾದಕ್ಕೆ ನಮಸ್ಕರಿಸುವುದನ್ನು ನೋಡಲಾಗುತ್ತಿಲ್ಲ: ರಾಹುಲ್ ಗಾಂಧಿ

Published On - 3:50 pm, Sun, 4 April 21