AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾನು ಭಾರತದ ಪ್ರಧಾನಿಯಾದರೆ..? ಪ್ರಶ್ನೆಗೆ ರಾಹುಲ್ ಗಾಂಧಿ ಏನು ಉತ್ತರಿಸಿದರು..

‘ಒಂದುವೇಳೆ ನೀವು ಭಾರತದ ಪ್ರಧಾನಿಯಾದರೆ?’ ಎಂದು ವೆಬಿನಾರ್ ಒಂದರಲ್ಲಿ ರಾಹುಲ್ ಗಾಂಧಿ ಅವರನ್ನು ಅಮೆರಿಕದ ಮಾಜಿ ರಾಯಭಾರಿ, ಪ್ರಸ್ತುತ ಹಾರ್ವರ್ಡ್ ಕೆನಡಿ ಸ್ಕೂಲ್​ನಲ್ಲಿ ಪ್ರಾಧ್ಯಾಪಕರಾಗಿರುವ ನಿಕೋಲಾಸ್ ಬರ್ನ್ಸ್ ಪ್ರಶ್ನಿಸಿದರು.

ನಾನು ಭಾರತದ ಪ್ರಧಾನಿಯಾದರೆ..? ಪ್ರಶ್ನೆಗೆ ರಾಹುಲ್ ಗಾಂಧಿ ಏನು ಉತ್ತರಿಸಿದರು..
ಸಂಸದ ರಾಹುಲ್ ಗಾಂಧಿ
guruganesh bhat
|

Updated on:Apr 03, 2021 | 5:58 PM

Share

ದೆಹಲಿ: ನಾವೆಲ್ಲರೂ ಚಿಕ್ಕವರಿದ್ದಾಗ ಶಾಲೆಗಳಲ್ಲಿ ನಾನು ಪ್ರಧಾನಿಯಾದರೆ.. ನಾನು ಮುಖ್ಯಮಂತ್ರಿ ಆದರೆ ಎಂಬ ಪ್ರಬಂಧಗಳನ್ನು ಬರೆದಿರುತ್ತೇವೆ. ಇದೇ ಪ್ರಶ್ನೆ ಕಾಂಗ್ರೆಸ್​ನ ಯುವನಾಯಕ, ಸಂಸದ ರಾಹುಲ್ ಗಾಂಧಿ ಅವರಿಗೂ ಎದುರಾಯಿತು. ‘ಒಂದುವೇಳೆ ನೀವು ಭಾರತದ ಪ್ರಧಾನಿಯಾದರೆ?’ ಎಂದು ವೆಬಿನಾರ್ ಒಂದರಲ್ಲಿ ರಾಹುಲ್ ಗಾಂಧಿ ಅವರನ್ನು ಅಮೆರಿಕದ ಮಾಜಿ ರಾಯಭಾರಿ, ಪ್ರಸ್ತುತ ಹಾರ್ವರ್ಡ್ ಕೆನಡಿ ಸ್ಕೂಲ್​ನಲ್ಲಿ ಪ್ರಾಧ್ಯಾಪಕರಾಗಿರುವ ನಿಕೋಲಾಸ್ ಬರ್ನ್ಸ್ ಪ್ರಶ್ನಿಸಿದರು. ಈ ಕುತೂಹಲಕಾರಿ ಪ್ರಶ್ನೆಗೆ ಉತ್ತರಿಸಿದ ಕಾಂಗ್ರೆಸ್ ಯುವನಾಯಕ ರಾಹುಲ್ ಗಾಂಧಿ, ‘ನಾನು  ಭಾರತದ ಪ್ರಧಾನಿ ಆದರೆ ಅಭಿವೃದ್ಧಿ ಕೇಂದ್ರಿತ ಯೋಜನೆಗಳಿಗಿಂತ ಉದ್ಯೋಗ ಕೇಂದ್ರಿತ ಯೋಜನೆಗಳತ್ತ ಹೆಚ್ಚು ಗಮನ ಹರಿಸುತ್ತೇನೆ’ ಎಂದು ಉತ್ತರಿಸಿದರು. ‘ನಾವು ಅಭಿವೃದ್ಧಿ ಹೊಂದಬೇಕು. ಆದರೆ ಎಲ್ಲ ವಲಯಗಳಲ್ಲೂ ಉದ್ಯೋಗ ಸೃಷ್ಟಿ ಉತ್ಪಾದನೆ ಮತ್ತು ಗುಣಮಟ್ಟದ ಹೆಚ್ಚಳಗಳತ್ತ ಗಮನಹರಿಸಬೇಕಿದೆ. ಹೀಗಾಗಿ ನಾನು ಭಾರತದ ಪ್ರಧಾನಿಯಾದರೆ ಮೊದಲು ಉದ್ಯೋಗ ಸೃಷ್ಟಿಯತ್ತ ಗಮನಹರಿಸುವೆ ಎಂದು ಅವರು ತಿಳಿಸಿದರು.

ರಷ್ಯಾ ಮತ್ತು ಚೀನಾಗಳು ಪ್ರಜಾಪ್ರಭುತ್ವ ಸಿದ್ಧಾಂತದ ಬಗ್ಗೆ ಕಠಿಣ ನಿಲುವು ತಳೆದಿರುವ ಬಗೆಗಿನ ವೆಬಿನಾರ್​ನಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭಾಗವಹಿಸಿದ್ದರು. ವಿಶ್ವದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯ ಭವಿಷ್ಯದ ಕಲ್ಪನೆಗಳನ್ನು ವಿವರಿಸುವ ವೇಳೆ ಭಾರತದಲ್ಲಿ ನಡೆಯುತ್ತಿರುವ ವಿದ್ಯಮಾನಗಳ  ಬಗ್ಗೆ ಅಮೆರಿಕ ಮತ್ತು ಅಮೆರಿಕದಲ್ಲಿನ ಸಂಸ್ಥೆಗಳು ಮೌನ ತಾಳಿವೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.

ಅಮೆರಿಕದ ಸಂವಿಧಾನವು ಸ್ವಾತಂತ್ರ್ಯದ ಗಾಢ ಪರಿಕಲ್ಪನೆಯನ್ನು ಸಾರುತ್ತದೆ. ಆದರೆ ಎಷ್ಟೇ ಉದಾತ್ತ ಕಲ್ಪನೆಯನ್ನು ಹೇಳಿದರೂ ಸಹ, ಅದನ್ನು ಅನುಷ್ಠಾನಕ್ಕೆ ತರುವಲ್ಲಿ ಮತ್ತು ಸಮರ್ಥಿಸಿಕೊಳ್ಳಬೇಕು. ಹೀಗೆ ತನ್ನ ಸಂವಿಧಾನದಲ್ಲಿ ಹೇಳಲಾದ ಕಲ್ಪನೆಗಳನ್ನು ಸಮರ್ಥಿಸಿಕೊಳ್ಳುವುದು ಅಮೆರಿಕದ ಎದುರಿನ ಬಹುದೊಡ್ಡ ಪ್ರಶ್ನೆ ಎಂದು ರಾಹುಲ್ ಗಾಂಧಿ ವೆಬಿನಾರ್ ಸಂವಾದದಲ್ಲಿ ವಿವರಿಸಿದರು.

ಚುನಾವಣೆಗಳಲ್ಲಿ ಸ್ಪರ್ಧಿಸಲು ಸಮಾಜದ ವಿವಿಧ ಸಂಸ್ಥೆಗಳ ಬೆಂಬಲ ಅಗತ್ಯವಿದೆ. ನನ್ನನ್ನು ಅಥವಾ ಯಾವುದೇ ಅಭ್ಯರ್ಥಿಯನ್ನು ರಕ್ಷಿಸುವ ಕಾನೂನು, ಆರ್ಥಿಕ ಬೆಂಬಲ, ಮುಕ್ತ ವ್ಯವಸ್ಥೆಯ ಮಾಧ್ಯಮಗಳ ಬೆಂಬಲ ಚುನಾವಣೆಗಳು ನಡೆಯಲು ಅಗತ್ಯವಿದೆ. ಆದರೆ 2014ರ ನಂತರ ಸಾರ್ವಜನಿಕ ಸಂಸ್ಥೆಗಳನ್ನು ಆಡಳಿತಾರೂಢ ಸರ್ಕಾರ ತನ್ನ ತೆಕ್ಕೆಯಲ್ಲಿ ಇಟ್ಟುಕೊಂಡಿದೆ. ದೇಶದಲ್ಲಿ ಆಡಳಿತಾರೂಢ ಬಿಜೆಪಿಯ ನಡೆಗಳು ಕುರಿತು ಸಾರ್ವಜನಿಕರಲ್ಲಿ ಅಸಮಧಾನ ಹುಟ್ಟುಹಾಕುತ್ತಿವೆ. ಇಂತಹ ಎಲ್ಲ ಜನರನ್ನೂ ಒಗ್ಗೂಡಿಸುವುದು ಮುಖ್ಯ ಎಂದು ರಾಹುಲ್ ಗಾಂಧಿ ವ್ಯಾಖ್ಯಾನಿಸಿದರು.

ಇದನ್ನೂ ಓದಿ: Tamil Nadu Elections 2021: ತಮಿಳುನಾಡು ಸಿಎಂ ಪಳನಿಸ್ವಾಮಿ ಅವರು ನರೇಂದ್ರ ಮೋದಿ ಪಾದಕ್ಕೆ ನಮಸ್ಕರಿಸುವುದನ್ನು ನೋಡಲಾಗುತ್ತಿಲ್ಲ: ರಾಹುಲ್ ಗಾಂಧಿ

ಆರ್​ಎಸ್ಎಸ್​ನ್ನು ಸಂಘ ಪರಿವಾರ್ ಎಂದು ಹೇಳಬಾರದು, ಅವರಿಗೆ ಕುಟುಂಬದ ಮೌಲ್ಯಗಳು ಗೊತ್ತಿಲ್ಲ: ರಾಹುಲ್ ಗಾಂಧಿ

(What Congress leader Rahul Gandhi replies a question What would you do as Indian Prime Minister)

Published On - 1:12 pm, Sat, 3 April 21

ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಶಾಲೆಗೆ ಬರುವ ಮಕ್ಕಳನ್ನ ಗಾರೆ ಕೆಲಸಕ್ಕಚ್ಚಿದ ಮೇಸ್ಟ್ರು, ವಿಡಿಯೋ ವೈರಲ್
ಶಾಲೆಗೆ ಬರುವ ಮಕ್ಕಳನ್ನ ಗಾರೆ ಕೆಲಸಕ್ಕಚ್ಚಿದ ಮೇಸ್ಟ್ರು, ವಿಡಿಯೋ ವೈರಲ್
ಬಾಲಕನನ್ನು ಫುಟ್ಬಾಲ್​​ನಂತೆ ಒದ್ದ ಜಿಮ್ ಟ್ರೈನರ್​​ನ ಮತ್ತಷ್ಟು ಕೃತ್ಯಗಳು
ಬಾಲಕನನ್ನು ಫುಟ್ಬಾಲ್​​ನಂತೆ ಒದ್ದ ಜಿಮ್ ಟ್ರೈನರ್​​ನ ಮತ್ತಷ್ಟು ಕೃತ್ಯಗಳು
ವಕ್ಫ್ ಆಸ್ತಿಗಾಗಿ ಸಂಘರ್ಷ: 11 ಎಕರೆ ಜಮೀನಿಗಾಗಿ ಕುಟುಂಬಗಳ‌ ಮಧ್ಯೆ ಬಡಿದಾಟ
ವಕ್ಫ್ ಆಸ್ತಿಗಾಗಿ ಸಂಘರ್ಷ: 11 ಎಕರೆ ಜಮೀನಿಗಾಗಿ ಕುಟುಂಬಗಳ‌ ಮಧ್ಯೆ ಬಡಿದಾಟ
ದೇವಿ ದರ್ಶನ ಬಳಿಕ ಡಿಸಿಎಂ ಸ್ಫೋಟಕ ಹೇಳಿಕೆ: ಸಂಚಲನ ಮೂಡಿಸಿದ ಡಿಕೆಶಿ ಸಂದೇಶ
ದೇವಿ ದರ್ಶನ ಬಳಿಕ ಡಿಸಿಎಂ ಸ್ಫೋಟಕ ಹೇಳಿಕೆ: ಸಂಚಲನ ಮೂಡಿಸಿದ ಡಿಕೆಶಿ ಸಂದೇಶ
ಕುರ್ಚಿ ಕದನದ ನಡುವೆ ಅಂಕೋಲದಲ್ಲಿ ಶಕ್ತಿ ದೇವತೆ ಮೊರೆ ಹೋದ ಡಿಕೆಶಿ
ಕುರ್ಚಿ ಕದನದ ನಡುವೆ ಅಂಕೋಲದಲ್ಲಿ ಶಕ್ತಿ ದೇವತೆ ಮೊರೆ ಹೋದ ಡಿಕೆಶಿ
ಹಾವೇರಿ: ದೇವರ ಮೂರ್ತಿ ಭಗ್ನಗೊಳಿಸಿದ ಕಿಡಿಗೇಡಿಗಳು; ವಿಡಿಯೋ ನೋಡಿ
ಹಾವೇರಿ: ದೇವರ ಮೂರ್ತಿ ಭಗ್ನಗೊಳಿಸಿದ ಕಿಡಿಗೇಡಿಗಳು; ವಿಡಿಯೋ ನೋಡಿ
49 ಎಸೆತಗಳಲ್ಲಿ ಸ್ಫೋಟಕ ಶತಕ ಸಿಡಿಸಿದ ಇಶಾನ್ ಕಿಶನ್
49 ಎಸೆತಗಳಲ್ಲಿ ಸ್ಫೋಟಕ ಶತಕ ಸಿಡಿಸಿದ ಇಶಾನ್ ಕಿಶನ್
ಊಟಿಯಂತಾದ ಕೋಲಾರ, ರಸ್ತೆ ಕಾಣದೇ ವಾಹನ ಸವಾರರು ಪರದಾಟ
ಊಟಿಯಂತಾದ ಕೋಲಾರ, ರಸ್ತೆ ಕಾಣದೇ ವಾಹನ ಸವಾರರು ಪರದಾಟ