ಉತ್ತರಾಖಂಡ್ ಅರಣ್ಯದಲ್ಲಿ ಭೀಕರ ಬೆಂಕಿ; ನಾಲ್ವರ ಜೀವ ಆಹುತಿ, ಘಟನೆಯ ವರದಿ ಕೇಳಿದ ಅಮಿತ್ ಶಾ
ಈ ಕಾಡ್ಗಿಚ್ಚು ಈಗಾಗಲೇ ಸುಮಾರು 37 ಲಕ್ಷ ರೂ.ಮೌಲ್ಯದ ಆಸ್ತಿಯನ್ನು ನಾಶ ಮಾಡಿದ್ದು, ರಾಜ್ಯದ ಅರಣ್ಯ ಇಲಾಖೆಯ ಸುಮಾರು 12,000 ಗಾರ್ಡ್ಗಳು, ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವ ಪ್ರಯತ್ನದಲ್ಲಿ ತೊಡಗಿದ್ದಾರೆ.
ನವದೆಹಲಿ: ಇತ್ತೀಚೆಗಷ್ಟೇ ಹಿಮನದಿ ಸ್ಫೋಟದ ದುರಂತಕ್ಕೆ ತುತ್ತಾಗಿದ್ದ ಉತ್ತರಾಖಂಡ್ಗೆ ಇದೀಗ ಬೆಂಕಿ ಆಘಾತ ಉಂಟಾಗಿದೆ. ಇಲ್ಲಿನ ಸುಮಾರು 62 ಹೆಕ್ಟೇರ್ ಅರಣ್ಯ ಪ್ರದೇಶಕ್ಕೆ ಬೆಂಕಿ ತಗುಲಿದ್ದು, ಈ ಅವಘಡದಲ್ಲಿ ನಾಲ್ವರು ಜೀವ ಕಳೆದುಕೊಂಡಿದ್ದಾರೆ.
ಈ ಕಾಡ್ಗಿಚ್ಚು ಈಗಾಗಲೇ ಸುಮಾರು 37 ಲಕ್ಷ ರೂ.ಮೌಲ್ಯದ ಆಸ್ತಿಯನ್ನು ನಾಶ ಮಾಡಿದ್ದು, ರಾಜ್ಯದ ಅರಣ್ಯ ಇಲಾಖೆಯ ಸುಮಾರು 12,000 ಗಾರ್ಡ್ಗಳು, ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವ ಪ್ರಯತ್ನದಲ್ಲಿ ತೊಡಗಿದ್ದಾರೆ. ಎನ್ಡಿಆರ್ಎಫ್ ತಂಡವನ್ನು ನಿಯೋಜಿಸುವಂತೆ ಕೇಂದ್ರ ಸರ್ಕಾರ ಸೂಚಿಸಿದೆ. ಇನ್ನು ಗೃಹ ಸಚಿವ ಅಮಿತ್ ಶಾ ಅವರು ಘಟನೆಯ ಬಗ್ಗೆ ವರದಿ ಕೇಳಿದ್ದಾರೆ. ಹಾಗೇ, ಮುಖ್ಯಮಂತ್ರಿ ತೀರಥ್ ಸಿಂಗ್ ರಾವತ್ ಅವರು ತುರ್ತು ಸಭೆ ಕರೆದಿದ್ದಾರೆ. ಉತ್ತರಾಖಂಡ್ನಲ್ಲಿ ಇತ್ತೀಚೆಗಷ್ಟೇ ಹಿಮನದಿ ಸ್ಫೋಟವಾಗಿ ವಿನಾಶ ಉಂಟಾಗಿತ್ತು.
ಇದನ್ನೂ ಓದಿ: Uttarakhand Glacier Burst incident | ಉತ್ತರಾಖಂಡ ಹಿಮಪ್ರವಾಹದಲ್ಲಿ ಮೃತರ ಸಂಖ್ಯೆ 136; ಅಧಿಕೃತ ಘೋಷಣೆ
Published On - 2:44 pm, Sun, 4 April 21