Sign In

By signing in or creating an account, you agree with Associated Broadcasting Company's Terms & Conditions and Privacy Policy.

Uttarakhand Glacier Burst incident | ಉತ್ತರಾಖಂಡ ಹಿಮಪ್ರವಾಹದಲ್ಲಿ ಮೃತರ ಸಂಖ್ಯೆ 136; ಅಧಿಕೃತ ಘೋಷಣೆ

Uttarakhand Glacier Burst incident | ಭೂಮಿಯ ಮೇಲ್ಮಣ್ಣಿನ ಸವಕಳಿ, ನೀರಿನ ಒತ್ತಡ, ಹಿಮಪಾತ ಮತ್ತು ನೀರ್ಗಲ್ಲಿನ ಅಡಿಯ ಭೂಮಿ ಕಂಪಿಸಿದಾಗ ಹಿಮಕುಸಿತ ಸಂಭವಿಸುತ್ತದೆ. ಹಿಮನದಿಯಲ್ಲಿಯಲ್ಲಿ ಹೆಚ್ಚಿನ ಭಾಗ ಕುಸಿದಾಗ, ಅಲ್ಲಿನ ನೀರು ಒಮ್ಮೆಲೆ ಸ್ಥಳಾಂತರಗೊಂಡಾಗಲೂ ಈ ರೀತಿ ಸಂಭವಿಸುತ್ತದೆ.

Uttarakhand Glacier Burst incident | ಉತ್ತರಾಖಂಡ ಹಿಮಪ್ರವಾಹದಲ್ಲಿ ಮೃತರ ಸಂಖ್ಯೆ 136; ಅಧಿಕೃತ ಘೋಷಣೆ
Uttarakhand glacier disaster ರಕ್ಷಣಾ ಕಾರ್ಯಾಚರಣೆ ಚಿತ್ರ
Follow us
guruganesh bhat
| Updated By: ಸಾಧು ಶ್ರೀನಾಥ್​

Updated on: Feb 23, 2021 | 11:53 AM

ಡೆಹ್ರಾಡೂನ್: ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ ಹಿಮ ಕುಸಿತ ದುರಂತದಲ್ಲಿ 136 ದುರ್ದೈವಿಗಳು ಮೃತಪಟ್ಟಿದ್ದಾರೆ ಎಂದು ಅಧಿಕೃತವಾಗಿ ಘೋಷಿಸಲಾಗಿದೆ. ಈಮೊದಲು, 174 ಮಂದಿ ನಾಪತ್ತೆಯಾಗಿದ್ದಾರೆ ಎಂದು ಚಮೋಲಿ ಪೊಲೀಸರು ಹೇಳಿದ್ದರು.ಹಿಮಾಲಯದದಲ್ಲಿ ಹಿಮ ನದಿ ಸ್ಫೋಟಗೊಂಡ ಪರಿಣಾಮ ಹಿಮಪಾತವಾಗಿ ಧೌಲಿಗಂಗಾ, ಅಲಕಾನಂದ ನದಿಯಲ್ಲಿ ಪ್ರವಾಹವುಂಟಾಗಿತ್ತು. ಈ ಪ್ರವಾಹದಲ್ಲಿ ಜಲವಿದ್ಯುತ್ ಯೋಜನೆ ಮತ್ತು 5 ಸೇತುವೆಗಳು ಕೊಚ್ಚಿಹೋಗಿದ್ದವು. ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ, ಸೇನಾಪಡೆ, ಅರೆ ಸೇನಾಪಡೆ ಮತ್ತು ಪೊಲೀಸರು ರಕ್ಷಣಾ ಕಾರ್ಯದಲ್ಲಿ ತೊಡಗಿದ್ದರು.

ಚಮೋಲಿ ಜಿಲ್ಲೆಯ ಜೋಷಿಮಠದಲ್ಲಿರುವ ತಪೋವನ್ ಸುರಂಗ ಮಾರ್ಗದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ ಎಂದು ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎನ್​ಡಿಆರ್​ಎಫ್) ಹೇಳಿರುವುದಾಗಿ ಎಎನ್​ಐ ಸುದ್ದಿಸಂಸ್ಥೆ ವರದಿ ಮಾಡಿತ್ತು. ಸುರಂಗದಿಂದ ಮೃತದೇಹಗಳನ್ನು ಹೊರಕ್ಕೆ ತರುವುದು ಕಷ್ಟವಾಗುತ್ತಿದೆ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ ಕಮಾಂಡೆಂಟ್ ಪಿ.ಕೆ.ತಿವಾರಿ ಹೇಳಿದ್ದರು.

ಇಂಡೊ-ಟಿಬೆಟನ್ ಗಡಿ ಪೊಲೀಸರ ಪಡೆ ರೈನಿ ಎಂಬಲ್ಲಿ ಭಾನುವಾರ 6 ಮೃತದೇಹಗಳನ್ನು ಹೊರತೆಗೆದಿತ್ತು. ಅಲ್ಲಿರುವ ರಾಷ್ಟ್ರೀಯ ಉಷ್ಣ ವಿದ್ಯುತ್ ಸ್ಥಾವರದ ತಪೋವನ್- ವಿಷ್ಣುಗಡ್ ಹೈಡಲ್ ಯೋಜನೆಗೆ ಹೆಚ್ಚು ಹಾನಿಯಾಗಿದೆ. ಅಲ್ಲಿದ್ದ ಅಣೆಕಟ್ಟು ಸಂಪೂರ್ಣ ಕೊಚ್ಚಿಹೋಗಿದೆ.

ಚಮೋಲಿ ಜಿಲ್ಲೆಯ ಋಷಿಗಂಗಾ ವಿದ್ಯುತ್ ಸ್ಥಾವರ ಬಳಿ ಹಿಮಕುಸಿತವುಂಟಾದ ಬೆನ್ನಲ್ಲೇ ಧೌಲಿಗಂಗಾದಲ್ಲಿ ಪ್ರವಾಹ ಸ್ಥಿತಿಯುಂಟಾಗಿದೆ. ಪ್ರವಾಹದಲ್ಲಿ 150 ಮಂದಿ ಕಣ್ಮರೆಯಾಗಿದ್ದಾರೆ ಎಂದು ಬಲ್ಲಮೂಲಗಳು ವರದಿ ಮಾಡಿದ್ದು, ಹತ್ತಿರದ ಪ್ರದೇಶದಲ್ಲಿರುವ ಜನರನ್ನು ಸುರಕ್ಷಿತ ಸ್ಥಳಗಳಿಗೆ ಕರೆದೊಯ್ಯಲಾಗಿತ್ತು.

ಪ್ರವಾಹದಿಂದಾಗಿ ಅಣೆಕಟ್ಟಿನ ಬದಿಯಲ್ಲಿರುವ ಹಲವಾರು ಮನೆಗಳು ಮುಳುಗಿದ್ದು ಇಂಡೊ ಟಿಬೆಟನ್ ಬಾರ್ಡರ್​ ಪೊಲೀಸ್​ (ಐಟಿಬಿಪಿ) ಸಿಬ್ಬಂದಿಯನ್ನು ರಕ್ಷಣಾ ಕಾರ್ಯಕ್ಕೆ ನಿಯೋಜಿಸಲಾಗಿದೆ. ಚಮೋಲಿ ಪೊಲೀಸರ ಪ್ರಕಾರ ತಪೋವನ್ ಪ್ರದೇಶದಲ್ಲಿ ಹಿಮಕುಸಿತವುಂಟಾದ ಕಾರಣ ಋಷಿಗಂಗಾ ವಿದ್ಯುತ್ ಸ್ಥಾವರಕ್ಕೆ ಹಾನಿಯಾಗಿತ್ತು. ಹಿಮಕುಸಿತವುಂಟಾದ ಕೂಡಲೇ ಅಲಕಾನಂದ ನದಿಯಲ್ಲಿ ನೀರಿನ ಮಟ್ಟ ಏರಿಕೆಯಾಗಿದ್ದು ಹತ್ತಿರದ ಪ್ರದೇಶದ ಜನರನ್ನು ಬೇರೆಡೆಗೆ ಸ್ಥಳಾಂತರಿಸಿದ್ದೇವೆ ಎಂದು ಪೊಲೀಸರು ಹೇಳಿದ್ದಾರೆ.

ಹಿಮನದಿಯಲ್ಲಿ ಹಿಮಕುಸಿತವುಂಟಾಗಲು ಕಾರಣವೇನು? ಹಿಮನದಿಯಲ್ಲಿ ನೀರು ಹೆಪ್ಪುಗಟ್ಟಿ ನೀರ್ಗಲ್ಲಿನ ಸ್ಥಿತಿಯಲ್ಲಿರುವ ಮಂಜುಗಡ್ಡೆ ಒಮ್ಮೆಲೆ ಕರಗಿ ನೀರಾಗಿ ಹರಿಯತೊಡಗುತ್ತದೆ. ಭಾರೀ ಪ್ರಮಾಣದ ಮಂಜುಗಡ್ಡೆ ಒಮ್ಮೆಲೆ ಕರಗಿದಾಗ ಹಿಮಕುಸಿತದ ಸ್ಥಿತಿ ಉಂಟಾಗುತ್ತದೆ. ಇಂಥ ನದಿಗಳು ಅಣೆಕಟ್ಟು ಸಂಧಿಸುವ ಸ್ಥಳದಲ್ಲಿ ಸಮಸ್ಯೆಯಾದರೆ ಹಠಾತ್ ಪ್ರವಾಹ ಉಂಟಾಗುತ್ತದೆ.

ಹಿಮಕುಸಿತದಿಂದ ಪ್ರವಾಹ ಭೂಮಿಯ ಮೇಲ್ಮಣ್ಣಿನ ಸವಕಳಿ, ನೀರಿನ ಒತ್ತಡ, ಹಿಮಪಾತ ಮತ್ತು ನೀರ್ಗಲ್ಲಿನ ಅಡಿಯ ಭೂಮಿ ಕಂಪಿಸಿದಾಗ ಹಿಮಕುಸಿತ ಸಂಭವಿಸುತ್ತದೆ. ಹಿಮನದಿಯಲ್ಲಿಯಲ್ಲಿ ಹೆಚ್ಚಿನ ಭಾಗ ಕುಸಿದಾಗ, ಅಲ್ಲಿನ ನೀರು ಒಮ್ಮೆಲೆ ಸ್ಥಳಾಂತರಗೊಂಡಾಗಲೂ ಈ ರೀತಿ ಸಂಭವಿಸುತ್ತದೆ. ಹಿಮನದಿಗಳು ಅಪಾರ ಪ್ರಮಾಣದ ನೀರನ್ನು ಮಂಜುಗಡ್ಡೆಯ ರೂಪದಲ್ಲಿ ಹೊಂದಿರುತ್ತದೆ. ಈ ಮಂಜುಗಡ್ಡೆಗಳು ಒಮ್ಮೆಲೆ ಕರಗಿದರೆ ಅಧಿಕ ಪ್ರಮಾಣದ ನೀರು ನದಿಮೂಲಕ ಹರಿಯತೊಡಗಿ ಪ್ರವಾಹ ಸ್ಥಿತಿಯುಂಟಾಗುತ್ತದೆ.

ಸಹಾಯವಾಣಿ ಪ್ರವಾಹಕ್ಕೆ ಸಿಲುಕಿರುವ ಜನರು ಸಹಾಯಕ್ಕಾಗಿ ವಿಪತ್ತು ನಿರ್ವಹಣಾ ಕೇಂದ್ರವನ್ನು ಸಂಪರ್ಕಿಸುವಂತೆ ಉತ್ತರಾಖಂಡ್ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ಸೂಚಿಸಿದ್ದಾರೆ. ವಿಪತ್ತು ನಿರ್ವಹಣಾ ಕೇಂದ್ರದ ಸಂಪರ್ಕ ಸಂಖ್ಯೆಗಳು: 1070 ಮತ್ತು 95574 44486.

ಇನ್ನಷ್ಟು ಮಾಹಿತಿಗೆ https://tv9kannada.com/tag/glacier-burst ಲಿಂಕ್ ಕ್ಲಿಕ್ ಮಾಡಿ.

ಇದನ್ನೂ ಓದಿ: Uttarakhand glacier burst: ದುರಂತದಲ್ಲಿ 3 ಮರಿ ಕಳೆದುಕೊಂಡ ಶ್ವಾನ, 7 ದಿನಗಳಿಂದ ಕಣ್ಣೀರಿಡುತ್ತಾ ಹುಡುಕುತಿದೆ.. Photos

Uttarakhand Glacier Burst ಕರಗುತ್ತಿದೆ ಹಿಮಾಲಯ; ತಾಪಮಾನ ಏರಿಕೆಗೆ ಏನು ಕಾರಣ?

50 ಸಾವಿರ ರೂಪಾಯಿ ನೀಡಿದರು: ದರ್ಶನ್ ಸಹಾಯದ ಬಗ್ಗೆ ಶೈಲಶ್ರೀ ಮಾತು
50 ಸಾವಿರ ರೂಪಾಯಿ ನೀಡಿದರು: ದರ್ಶನ್ ಸಹಾಯದ ಬಗ್ಗೆ ಶೈಲಶ್ರೀ ಮಾತು
‘ಕುಲದಲ್ಲಿ ಕೀಳ್ಯಾವುದೋ’ ಚಿತ್ರದ ಹಾಡು ಬಿಡುಗಡೆ ಮಾಡಿದ ಆನೆ; ವಿಡಿಯೋ ಸೂಪರ್
‘ಕುಲದಲ್ಲಿ ಕೀಳ್ಯಾವುದೋ’ ಚಿತ್ರದ ಹಾಡು ಬಿಡುಗಡೆ ಮಾಡಿದ ಆನೆ; ವಿಡಿಯೋ ಸೂಪರ್
4 ಪಂದ್ಯಗಳಲ್ಲೂ ಮಾಲೀಕರಿಗೆ ನಿರಾಶೆ ಮೂಡಿಸಿದ ಪಂತ್
4 ಪಂದ್ಯಗಳಲ್ಲೂ ಮಾಲೀಕರಿಗೆ ನಿರಾಶೆ ಮೂಡಿಸಿದ ಪಂತ್
ಜಿಗಣಿಯಲ್ಲಿ ಮನೆಯೊಳಗೆ ನುಗ್ಗಿ ಬಿಂದಾಸಾಗಿ ಮಲಗಿದ ಚಿರತೆ; ಕಂಗಾಲಾದ ಮನೆಮಂದಿ
ಜಿಗಣಿಯಲ್ಲಿ ಮನೆಯೊಳಗೆ ನುಗ್ಗಿ ಬಿಂದಾಸಾಗಿ ಮಲಗಿದ ಚಿರತೆ; ಕಂಗಾಲಾದ ಮನೆಮಂದಿ
ಶಾಸಕರ ಹೆಸರು ಎಫ್​ಐಅರ್​ನಲ್ಲಿ ಬಂದ ನಂತರವೇ ವಿನಯ್ ಅಂತ್ಯ ಸಂಸ್ಕಾರ: ಪ್ರತಾಪ
ಶಾಸಕರ ಹೆಸರು ಎಫ್​ಐಅರ್​ನಲ್ಲಿ ಬಂದ ನಂತರವೇ ವಿನಯ್ ಅಂತ್ಯ ಸಂಸ್ಕಾರ: ಪ್ರತಾಪ
ಥೈಲ್ಯಾಂಡ್ ಪ್ರವಾಸ ಮುಗಿಸಿ, ಶ್ರೀಲಂಕಾಗೆ ತೆರಳಿದ ಪ್ರಧಾನಿ ಮೋದಿ
ಥೈಲ್ಯಾಂಡ್ ಪ್ರವಾಸ ಮುಗಿಸಿ, ಶ್ರೀಲಂಕಾಗೆ ತೆರಳಿದ ಪ್ರಧಾನಿ ಮೋದಿ
ಶಾಸಕರಾದ ಪೊನ್ನಣ್ಣ, ಮಂಥರ್​ಗೌಡ ಹೆಸರು ನಾಪತ್ತೆಯಾಗಿವೆ: ವಿನಯ್ ಸಹೋದರ
ಶಾಸಕರಾದ ಪೊನ್ನಣ್ಣ, ಮಂಥರ್​ಗೌಡ ಹೆಸರು ನಾಪತ್ತೆಯಾಗಿವೆ: ವಿನಯ್ ಸಹೋದರ
ಬ್ಯಾಂಕಾಕ್‌ನ ಬಿಮ್‌ಸ್ಟೆಕ್ ಶೃಂಗಸಭೆಯಲ್ಲಿ ಮೋದಿ- ನೇಪಾಳದ ಪ್ರಧಾನಿ ಭೇಟಿ
ಬ್ಯಾಂಕಾಕ್‌ನ ಬಿಮ್‌ಸ್ಟೆಕ್ ಶೃಂಗಸಭೆಯಲ್ಲಿ ಮೋದಿ- ನೇಪಾಳದ ಪ್ರಧಾನಿ ಭೇಟಿ
ವಿನಯ್​ರೊಂದಿಗೆ ನಾನು ಒಮ್ಮೆಯೂ ಮಾತಾಡಿಲ್ಲ, ಕಿರುಕುಳ ಎಲ್ಲಿಂದ ಬಂತು?: ಶಾಸಕ
ವಿನಯ್​ರೊಂದಿಗೆ ನಾನು ಒಮ್ಮೆಯೂ ಮಾತಾಡಿಲ್ಲ, ಕಿರುಕುಳ ಎಲ್ಲಿಂದ ಬಂತು?: ಶಾಸಕ
ವಿನಯ್ ಸಾವಿಗೆ ಕಾರಣರಾದ ಎಸ್​ಪಿಯನ್ನು ಕೂಡಲೇ ಸಸ್ಪೆಂಡ್ ಮಾಡಬೇಕು: ಅಶೋಕ
ವಿನಯ್ ಸಾವಿಗೆ ಕಾರಣರಾದ ಎಸ್​ಪಿಯನ್ನು ಕೂಡಲೇ ಸಸ್ಪೆಂಡ್ ಮಾಡಬೇಕು: ಅಶೋಕ