ಅನಾಥಾಶ್ರಮ ಮಕ್ಕಳ ಜೊತೆ ಈಸ್ಟರ್ ಹಬ್ಬದ ಭೋಜನ ಸವಿದು ಪ್ರಿಯಾಂಕಾ ಗಾಂಧಿಗೆ ವಿಡಿಯೋ ಕಾಲ್ ಮಾಡಿದ ರಾಹುಲ್ ಗಾಂಧಿ
ರಾಹುಲ್ ಗಾಂಧಿ ಮಕ್ಕಳ ಪಕ್ಕವೇ ಕುಳಿತು ರುಚಿ ರುಚಿ ಭೋಜನ ಸವಿದರು. ಈ ವೇಳೆ ತಮ್ಮ ಮೊಬೈಲ್ನಲ್ಲಿ ಸಹೋದರಿ ಪ್ರಿಯಾಂಕಾ ಗಾಂಧಿಗೆ ವಿಡಿಯೋ ಕಾಲ್ ಮಾಡಿ ತಮ್ಮ ಪಕ್ಕದಲ್ಲೇ ಊಟ ಮಾಡುತ್ತಿದ್ದ ಮಕ್ಕಳಿಗೆ ಪ್ರಿಯಾಂಕಾ ಗಾಂಧಿಯವರ ಬಳಿ ಮಾತನಾಡಿಸಿದರು.
ವಯನಾಡ್: ಕಾಂಗ್ರೆಸ್ ನಾಯಕ, ವಯನಾಡ್ ಕ್ಷೇತ್ರದ ಸಂಸದ ರಾಹುಲ್ ಗಾಂಧಿ ವಿಧಾನಸಭಾ ಚುನಾವಣೆಯ ನಿಮಿತ್ತ ಇಂದು ಕೇರಳದಲ್ಲಿದ್ದಾರೆ. ಅವರು ಇಂದು ಈಸ್ಟರ್ ಹಬ್ಬದ ಸಂಭ್ರಮವನ್ನು ವಯನಾಡ್ನ ಜೀವನ ಜ್ಯೋತಿ ಅನಾಥಾಶ್ರಮದಲ್ಲಿ ಮಕ್ಕಳ ಜತೆ ಔತಣಕೂಟ ನಡೆಸಿ ಆಚರಿಸಿಕೊಂಡಿದ್ದಾರೆ. ರಾಹುಲ್ ಗಾಂಧಿ ಮಕ್ಕಳ ಪಕ್ಕವೇ ಕುಳಿತು ರುಚಿ ರುಚಿ ಭೋಜನ ಸವಿದಿದ್ದಾರೆ. ಈ ವೇಳೆ ತಮ್ಮ ಮೊಬೈಲ್ನಲ್ಲಿ ಸಹೋದರಿ ಪ್ರಿಯಾಂಕಾ ಗಾಂಧಿಗೆ ವಿಡಿಯೋ ಕಾಲ್ ಮಾಡಿ ತಮ್ಮ ಪಕ್ಕದಲ್ಲೇ ಊಟ ಮಾಡುತ್ತಿದ್ದ ಮಕ್ಕಳಿಗೆ ಪ್ರಿಯಾಂಕಾ ಗಾಂಧಿಯವರ ಬಳಿ ಮಾತನಾಡಿಸಿದ್ದಾರೆ.
ಈ ಮುನ್ನ ದೇಶದ ಜನತೆಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಈಸ್ಟರ್ ಹಬ್ಬದ ಶುಭಕೋರಿದ್ದರು. ತಮ್ಮ ಶುಭಕಾಮನೆಗಳನ್ನು ಟ್ವೀಟ್ ಮಾಡಿದ್ದ ಅವರು, ಭರವಸೆ ಮತ್ತು ಹೊಸ ಆರಂಭದ ಪ್ರತೀಕವಾದ ಈಸ್ಟರ್ ಹಬ್ಬದ ಶುಭಾಶಯಗಳು ಎಂದು ಬರೆದುಕೊಂಡಿದ್ದರು.
#WATCH | Congress leader Rahul Gandhi had #Easter lunch with children at Jeevan Jyothi Orphanage in Kalpetta area of Kerala’s Wayanad today. During lunch, some children talked to party leader Priyanka Gandhi Vadra on Rahul’s phone. pic.twitter.com/g5Px4PgWU6
— ANI (@ANI) April 4, 2021
Celebrating hope and new beginnings- Happy Easter! pic.twitter.com/bDS9qaySAG
— Rahul Gandhi (@RahulGandhi) April 4, 2021
ಇದಕ್ಕೂ ಮುನ್ನ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಈಸ್ಟರ್ ಹಬ್ಬದ ಶುಭಾಶಯ ಕೋರಲು ಹೋಗಿ ಟ್ವಿಟರ್ನಲ್ಲಿ ಟೀಕೆಗಳನ್ನು ಎದುರಿಸಿದ್ದರು. ತಮ್ಮ ಸಹೋದರ ರಾಹುಲ್ ಗಾಂಧಿ ಪ್ರತಿನಿಧಿಸುವ ವಯನಾಡ್ ಲೋಕಸಭಾ ಕ್ಷೇತ್ರ ಮತ್ತು ಕೇರಳದ ಜನತೆಗೆ ಈಸ್ಟರ್ ಶುಭಾಶಯಗಳು ಎಂಬ ವಿಡಿಯೋವೊಂದನ್ನು ಅವರು ಹಂಚಿಕೊಂಡಿದ್ದರು.ಆದರೆ, ಕೇವಲ ವಯನಾಡ್ ಮತ್ತು ಕೇರಳದ ಜನರಿಗೆ ಮಾತ್ರ ಶುಭಾಶಯ ಕೋರಿದ್ದೇಕೆ ಎಂದು ಹಲವರು ಅವರನ್ನು ಟೀಕಿಸಿದ್ದರು.
Smt. @Priyankagandhi‘s Easter message to the people of Wayanad & Kerala. pic.twitter.com/MxfStr8YnC
— Congress (@INCIndia) April 4, 2021
ಇದನ್ನೂ ಓದಿ: ನಾನು ಭಾರತದ ಪ್ರಧಾನಿಯಾದರೆ..? ಪ್ರಶ್ನೆಗೆ ರಾಹುಲ್ ಗಾಂಧಿ ಏನು ಉತ್ತರಿಸಿದರು..
Published On - 3:50 pm, Sun, 4 April 21