ಸಂಸತ್​​ಗೆ ಮರಳಿ ಬಂದ ರಾಹುಲ್ ಗಾಂಧಿ; Comeback kid ಎಂಬ ನುಡಿಗಟ್ಟು ಬಳಸಿದ ವಿದೇಶಿ ಮಾಧ್ಯಮ

|

Updated on: Aug 09, 2023 | 8:28 PM

ಮಣಿಪುರ ವಿಷಯ ಪ್ರಸ್ತಾಪಿಸಿ ಪ್ರಧಾನಿ  ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ ರಾಹುಲ್,  ಪ್ರಧಾನಿಯವರು ಹಿಂಸಾಚಾರ ಪೀಡಿತ ರಾಜ್ಯಕ್ಕೆ ಭೇಟಿ ನೀಡಿಲ್ಲ. ಅವರು ಮಣಿಪುರವನ್ನು ಎರಡಾಗಿ ವಿಭಜಿಸಿದ್ದಾರೆ. ಅವರು ಮಣಿಪುರದಲ್ಲಿ ಭಾರತವನ್ನು ಕೊಂದಿದ್ದಾರೆ, ಮಣಿಪುರವನ್ನು ಮಾತ್ರವಲ್ಲ, ಅವರು ಭಾರತವನ್ನು ಕೊಂದಿದ್ದಾರೆ. ಅವರ ರಾಜಕೀಯವು ಮಣಿಪುರವನ್ನು ಕೊಂದಿಲ್ಲ, ಆದರೆ ಅದು ಮಣಿಪುರದಲ್ಲಿ ಭಾರತವನ್ನು ಕೊಂದಿದೆ, ಅವರು ಮಣಿಪುರದಲ್ಲಿ ಭಾರತವನ್ನು ಕೊಂದಿದ್ದಾರೆ ಎಂದು ಹೇಳಿದ್ದಾರೆ.

ಸಂಸತ್​​ಗೆ ಮರಳಿ ಬಂದ ರಾಹುಲ್ ಗಾಂಧಿ; Comeback kid ಎಂಬ ನುಡಿಗಟ್ಟು ಬಳಸಿದ ವಿದೇಶಿ ಮಾಧ್ಯಮ
ರಾಹುಲ್ ಗಾಂಧಿ
Follow us on

ದೆಹಲಿ ಆಗಸ್ಟ್ 09:  ಮೋದಿ ಸರ್​​ನೇಮ್ ಪ್ರಕರಣದಲ್ಲಿ ರಾಹುಲ್ ಗಾಂಧಿಗೆ (Rahul Gandhi) ವಿಧಿಸಿದ್ದ ಶಿಕ್ಷೆಗೆ ಸುಪ್ರೀಂಕೋರ್ಟ್ (Supreme Court) ತಡೆಯಾಜ್ಞೆ ನೀಡಿದ ನಂತರ ಕಾಂಗ್ರೆಸ್ ನಾಯಕನ ಲೋಕಸಭೆ (Lok Sabha) ಸದಸ್ಯತ್ವ ಮರುಸ್ಥಾಪನೆ ಆಗಿದೆ. ಈ ಹಿಂದೆ ಸಂಸದ ಸ್ಥಾನದಿಂದ ಅನರ್ಹಗೊಂಡಿದ್ದ ರಾಹುಲ್ ಗಾಂಧಿಗೆ ಸಂಸದ ಸ್ಥಾನ ಮರುಸ್ಥಾಪನೆ ಆಗಿದ್ದು, ಅವರು ಸಂಸತ್ ನಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ ಭಾಗವಹಿಸುತ್ತಿದ್ದಾರೆ. ಸಂಸದರಾಗಿ ರಾಹುಲ್ ಗಾಂಧಿ ಮರಳಿರುವ ಬಗ್ಗೆ ದಿ ಇಕಾನಾಮಿಸ್ಟ್ ಪತ್ರಿಕೆ ಇಂದು(ಬುಧವಾರ) ಸುದ್ದಿಯೊಂದನ್ನು ಪ್ರಕಟಿಸಿದ್ದು ಅದರಲ್ಲಿ Comeback kid ಎಂಬ ನುಡಿಗಟ್ಟನ್ನು ಬಳಸಿದೆ. Comeback kid ಎಂಬುದನ್ನು ಅನುವಾದ ಮಾಡಿ ಹೇಳುವುದಾದರೆ ಹಲವು ಸೋಲುಗಳು ಅಥವಾ ಹಿನ್ನಡೆಗಳನ್ನು ಅನುಭವಿಸಿ ಮತ್ತೆ ಮೇಲೆದ್ದು ಯಶಸ್ಸು ಸಾಧಿಸುವವನು. ದೀರ್ಘಕಾಲ ಬ್ರೇಕ್ ತೆಗೆದುಕೊಂಡು ಮತ್ತೆ ವಾಪಸ್ ಬಂದರೆ, ಅಥವಾ ಹಲವು ಸೋಲುಗಳ ನಂತರ ಪುಟಿದೆದ್ದು ಯಶಸ್ಸು ಸಾಧಿಸಿದರೆ ಅಲ್ಲಿ ಈ ನುಡಿಗಟ್ಟು ಬಳಸಲಾಗುತ್ತದೆ.

ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರ ಲೋಕಸಭೆ ಸದಸ್ಯತ್ವ ಅನರ್ಹತೆಯನ್ನು ಸೋಮವಾರ ರದ್ದುಪಡಿಸಲಾಗಿದೆ. ಇದರ ಬೆನ್ನಲ್ಲೇ ಲೋಕಸಭೆ ಸಚಿವಾಲಯ, ರಾಹುಲ್‌ ಗಾಂಧಿಯವರ ಸದಸ್ಯತ್ವ ಅನರ್ಹತೆಯನ್ನು ಹಿಂಪಡೆದಿದ್ದು, ಸದಸ್ಯತ್ವವನ್ನು ಮರುಸ್ಥಾಪಿಸಲಾಗಿದೆ ಎಂದು ತಿಳಿಸಿದೆ. ಮಾನನಷ್ಟ ಪ್ರಕರಣದಲ್ಲಿ ರಾಹುಲ್‌ ಗಾಂಧಿ ತಪ್ಪಿತಸ್ಥ ಎಂದು ಆದೇಶಿಸಿದ್ದ ಗುಜರಾತ್‌ನ ಸೂರತ್‌ ನ್ಯಾಯಾಲಯ, ಮಾರ್ಚ್‌ 23ರಂದು ರಾಹುಲ್ ಗಾಂಧಿಗೆ 2 ವರ್ಷ ಜೈಲು ಶಿಕ್ಷೆ ವಿಧಿಸಿತ್ತು. ತಕ್ಷಣವೇ ಅವರನ್ನು ಲೋಕಸಭೆ ಸದಸ್ಯತ್ವದಿಂದ ಅನರ್ಹಗೊಳಿಸಲಾಗಿತ್ತು. ಸೂರತ್‌ ನ್ಯಾಯಾಲಯದ ಆದೇಶ ಪ್ರಶ್ನಿಸಿ ರಾಹುಲ್ ಗಾಂಧಿ ಅವರು ಸುಪ್ರೀಂಕೋರ್ಟ್‌ ಮೆಟ್ಟಿಲೇರಿದ್ದರು. ಶುಕ್ರವಾರ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌, ನ್ಯಾಯಾಲಯದ ತೀರ್ಪಿಗೆ ತಡೆ ನೀಡಿತ್ತು.

ಬುಧವಾರ  ಲೋಕಸಭೆಯಲ್ಲಿ ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆಯಲ್ಲಿ  ಮಾತನಾಡಿದ ರಾಹುಲ್, ಬಿಜೆಪಿ ಇಂದು ಭಯಪಡುವ ಅಗತ್ಯವಿಲ್ಲ, ನನ್ನ ಭಾಷಣವು ಅದಾನಿ ವಿಷಯದ ಬಗ್ಗೆ ಅಲ್ಲ ಎಂದು ಹೇಳಿದ್ದಾರೆ . ಭಾರತ್ ಜೋಡೋ ಯಾತ್ರೆ ಬಗ್ಗೆ ಮಾತನಾಡಿದ ಅವರು ಯಾತ್ರೆ ಇನ್ನೂ ಮುಗಿದಿಲ್ಲ. ನೀವು ಯಾತ್ರೆಯನ್ನು (ಭಾರತ್ ಜೋಡೋ ಯಾತ್ರೆ) ಏಕೆ ಪ್ರಾರಂಭಿಸಿದ್ದೀರಿ ಎಂದು ಜನರು ನನ್ನನ್ನು ಕೇಳುತ್ತಿದ್ದರು. ನಾನು ಯಾಕೆ ಯಾತ್ರೆ ಆರಂಭಿಸಿದೆ ಎಂಬುದು ನನಗೇ ಗೊತ್ತಿಲ್ಲ. ಆದರೆ ಆ ಪ್ರಯಾಣದಲ್ಲಿ  ಜನರ  ನೋವು, ಸಂಕಟ, ಸಮಸ್ಯೆಗಳು ನನ್ನದೇ ಸಮಸ್ಯೆಗಳಾದವು. ಯಾತ್ರೆಯ ವೇಳೆ ನನ್ನಲ್ಲಿದ್ದ ಅಹಂಕಾರದ ಭಾವನೆ ಮಾಯವಾಯಿತು.

ಇದನ್ನೂ ಓದಿ: ನಿಮಗೆ ಗಾಯವಾಗಿಲ್ಲ ತಾನೇ?; ಸ್ಕೂಟರ್​​ನಿಂದ ಬಿದ್ದ ವ್ಯಕ್ತಿಯ ಬಳಿ ಹೋಗಿ ವಿಚಾರಿಸಿದ ರಾಹುಲ್ ಗಾಂಧಿ

ನಾನು (ಯಾತ್ರೆ) ಪ್ರಾರಂಭಿಸಿದಾಗ, ನಾನು ಪ್ರತಿದಿನ 10 ಕಿಮೀ ಓಡಲು ಸಾಧ್ಯವಾದರೆ 25 ಕಿಮೀ ನಡೆಯುವುದು ದೊಡ್ಡ ವಿಷಯವಲ್ಲ ಎಂಬುದು ನನ್ನ ಮನಸ್ಸಿನಲ್ಲಿತ್ತು, ಇಂದು ನಾನು ಅದನ್ನು ನೋಡಿದಾಗ -ಅದು ದುರಹಂಕಾರವಾಗಿತ್ತು ಎಂಬುದು ಅರ್ಥವಾಗಿದೆ. ಆಗ ನನ್ನ ಹೃದಯದಲ್ಲಿ ದುರಹಂಕಾರವಿತ್ತು .ಆದರೆ ಭಾರತವು ದುರಹಂಕಾರವನ್ನು ಅಳಿಸಿಬಿಡುತ್ತದೆ, ಒಂದು ಸೆಕೆಂಡಿನಲ್ಲಿ ಅದು ಅಳಿಸಿಹಾಕುತ್ತದೆ. ಯಾತ್ರೆಯ 2-3 ದಿನಗಳಲ್ಲಿ ಮೊಣಕಾಲು ನೋಯಲಾರಂಭಿಸಿತು, ಅದು ಹಳೆಯ ಗಾಯವಾಗಿತ್ತು. ಮೊದಲ ದಿನಗಳಲ್ಲಿ ತೋಳ ಇರುವೆ ಆಗಿ ಬಿಟ್ಟಿತು.. ಜೋ ಹಿಂದೂಸ್ತಾನ್ ಕೋ ಅಹಂಕಾರ್ ಸೆ ದೇಖ್ನೆ ನಿಕ್ಲಾ ಥಾ, ವೋ ಪೂರಾ ಕಾ ಪೂರಾ ಅಹಂಕಾರ್ ಗಯಾಬ್ ಹೋ ಗಯಾ.. (ಅಹಂಕಾರದಿಂದ  ದೇಶವನ್ನು ಸುತ್ತಲು ಹೋಗಿದ್ದವನ ಎಲ್ಲ ಅಹಂಕಾರ ಇಳಿದು ಹೋಯ್ತು) ಎಂದಿದ್ದಾರೆ.

ಮಣಿಪುರ ವಿಷಯ ಪ್ರಸ್ತಾಪಿಸಿ ಪ್ರಧಾನಿ  ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ ರಾಹುಲ್,  ಪ್ರಧಾನಿಯವರು ಹಿಂಸಾಚಾರ ಪೀಡಿತ ರಾಜ್ಯಕ್ಕೆ ಭೇಟಿ ನೀಡಿಲ್ಲ. ಅವರು ಮಣಿಪುರವನ್ನು ಎರಡಾಗಿ ವಿಭಜಿಸಿದ್ದಾರೆ. ಅವರು ಮಣಿಪುರದಲ್ಲಿ ಭಾರತವನ್ನು ಕೊಂದಿದ್ದಾರೆ, ಮಣಿಪುರವನ್ನು ಮಾತ್ರವಲ್ಲ, ಅವರು ಭಾರತವನ್ನು ಕೊಂದಿದ್ದಾರೆ. ಅವರ ರಾಜಕೀಯವು ಮಣಿಪುರವನ್ನು ಕೊಂದಿಲ್ಲ, ಆದರೆ ಅದು ಮಣಿಪುರದಲ್ಲಿ ಭಾರತವನ್ನು ಕೊಂದಿದೆ, ಅವರು ಮಣಿಪುರದಲ್ಲಿ ಭಾರತವನ್ನು ಕೊಂದಿದ್ದಾರೆ ಎಂದು ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ