ದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬುಧವಾರ ಬಿಜೆಪಿ ಮತ್ತು ಆರ್ಎಸ್ಎಸ್ ವಾಗ್ದಾಳಿ ನಡೆಸಿದ್ದಾರೆ. ಬಿಜೆಪಿ ಹಾಗೂ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್ಎಸ್ಎಸ್) ನವರು ನಕಲಿ ಹಿಂದೂಗಳು. ಅವರು ತಮ್ಮ ಲಾಭಕ್ಕಾಗಿ ಧರ್ಮವನ್ನು ಬಳಸಿಕೊಳ್ಳುತ್ತಾರೆ ಎಂದು ಟೀಕಿಸಿದ್ದಾರೆ. ಆಲ್ ಇಂಡಿಯಾ ಮಹಿಳಾ ಕಾಂಗ್ರೆಸ್ನ ಸಂಸ್ಥಾಪನಾ ದಿನವನ್ನು ಉದ್ದೇಶಿಸಿ ರಾಹುಲ್ ಗಾಂಧಿ ಮಾತನಾಡಿದ್ದಾರೆ. ಈ ವೇಳೆ, ಕಾಂಗ್ರೆಸ್ನ ಸಿದ್ಧಾಂತ ಬಿಜೆಪಿ ಮತ್ತು ಆರ್ಎಸ್ಎಸ್ನ ಸಿದ್ಧಾಂತಕ್ಕೆ ಸಂಪೂರ್ಣ ವಿರುದ್ಧವಾಗಿದೆ. ದೇಶವನ್ನು ಎರಡರಲ್ಲಿ ಒಂದು ಸಿದ್ಧಾಂತ ಮಾತ್ರ ಆಳಲು ಸಾಧ್ಯ ಎಂದು ಅವರು ಹೇಳಿದ್ದಾರೆ.
ಲಕ್ಷ್ಮೀ ದೇವಿಯು ನಮ್ಮ ಉದ್ದೇಶ ಈಡೇರಲು ಬೇಕಾದ ಶಕ್ತಿಯನ್ನು ಕೊಡುತ್ತಾಳೆ, ದುರ್ಗಾ ದೇವಿಯು ನಮ್ಮನ್ನು ರಕ್ಷಿಸಿಕೊಳ್ಳಲು ಶಕ್ತಿಯನ್ನು ನೀಡುತ್ತಾಳೆ. ಕಾಂಗ್ರೆಸ್ ಪಕ್ಷ ಆಡಳಿತದಲ್ಲಿ ಇದ್ದಾಗ ಈ ಸಾಮರ್ಥ್ಯವನ್ನು ಬಲಪಡಿಸಿತ್ತು ಎಂದು ಮಹಿಳೆಯರಿಗೆ ಅನುಗುಣವಾದ ಅವಕಾಶ ಕೊಟ್ಟಿರುವ ಬಗ್ಗೆ ಮಾಜಿ ಕಾಂಗ್ರೆಸ್ ಅಧ್ಯಕ್ಷ ಹೇಳಿದ್ದಾರೆ.
ಬಿಜೆಪಿ ಆಡಳಿತದಲ್ಲಿ ಈ ಶಕ್ತಿಗಳನ್ನು ಕಡೆಗಣಿಸಲಾಗುತ್ತಿದೆ ಎಂದೂ ಆರೋಪಿಸಿದ್ದಾರೆ. ಬಿಜೆಪಿಯವರು ಯಾವ ರೀತಿಯ ಹಿಂದೂಗಳು? ಇವರು ಸುಳ್ಳು ಹಿಂದೂಗಳು. ಇವರು ದರ್ಮದ ದಲ್ಲಾಳಿ ಕೆಲಸ ಮಾಡುತ್ತಾರೆ. ಅವರು ಹಿಂದೂ ಧರ್ಮವನ್ನು ಲಾಭಕ್ಕಾಗಿ ಬಳಸಿಕೊಳ್ಳುತ್ತಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಇದನ್ನೂ ಓದಿ: ನಾನು ಕಾಶ್ಮೀರಿ ಪಂಡಿತ್, ವೈಷ್ಣೋ ದೇವಿ ಭೇಟಿ ನಂತರ ಮನೆಗೆ ಬಂದಿದ್ದೇನೆ ಎಂದು ಅನಿಸುತ್ತಿದೆ: ರಾಹುಲ್ ಗಾಂಧಿ
ಇದನ್ನೂ ಓದಿ: ಕಾಂಗ್ರೆಸ್ ಅಧ್ಯಕ್ಷರಾಗಿ ರಾಹುಲ್ ಗಾಂಧಿ ನೇಮಕಕ್ಕೆ ಯುವ ಕಾಂಗ್ರೆಸ್ ಒತ್ತಾಯ