ದೆಹಲಿ: ಪ್ರಧಾನಿ ನರೇಂದ್ರ ಮೋದಿ ಇಂದು ಸಂಜೆ (ಸೆಪ್ಟೆಂಬರ್ 15) ಸಂಸತ್ ಟಿವಿಯನ್ನು ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು, ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರ ಜೊತೆಗೂಡಿ ಲೋಕಾರ್ಪಣೆಗೊಳಿಸಿದರು. ಭಾರತದ ಸಂಸತ್ ವ್ಯವಸ್ಥೆಯಲ್ಲಿ ಸಂಸದ್ ಟಿವಿ ಹೊಸ ಅಧ್ಯಾಯ ಬರೆಯಲಿದೆ ಎಂದು ಪ್ರಧಾನಿ ಮೋದಿ ನೂತನ ವಾಹಿನಿಯನ್ನು ಲೋಕಾರ್ಪಣೆಗೊಳಿಸಿ ವ್ಯಾಖ್ಯಾನಿಸಿದರು.
2021, ಫೆಬ್ರವರಿಯಲ್ಲಿ ಲೋಕಸಭಾ ಟಿವಿ ಮತ್ತು ರಾಜ್ಯಸಭಾ ಟಿವಿಯನ್ನು ಒಗ್ಗೂಡಿಸಿ ಸಂಸದ್ ಟಿವಿಯನ್ನು ರೂಪಿಸುವ ನಿರ್ಧಾರ ಕೈಗೊಳ್ಳಲಾಗಿತ್ತು. ಮಾರ್ಚ್, 2021ರಲ್ಲಿ ಸಂಸದ್ ಟಿವಿಗೆ ಮುಖ್ಯ ಕಾರ್ಯನಿರ್ವಹಣಾಧಿಕಾರಿಯನ್ನು ಸಹ ನೇಮಿಸಲಾಗಿತ್ತು.
ಸಂಸದ್ ಟಿವಿಯಲ್ಲಿ ಒಟ್ಟು 4 ರೀತಿಯ ಕಾರ್ಯಕ್ರಮಗಳನ್ನು ಪ್ರಸಾರ ಮಾಡಲು ಯೋಜಿಸಲಾಗಿದೆ. ಸಂಸತ್ನ ಕಾರ್ಯಕಲಾಪ ಮತ್ತು ಪ್ರಜಾಸತ್ತಾತ್ಮಕ ಸಂಸ್ಥೆಗಳ ಕುರಿತು, ಸರ್ಕಾರದ ಯೋಜನೆಗಳ ಅನುಷ್ಠಾನ, ಭಾರತದ ಇತಿಹಾಸ ಮತ್ತು ಸಂಸ್ಕೃತಿ ಮತ್ತು ಪ್ರಚಲಿತ ವಿದ್ಯಮಾನಗಳ ಬಗ್ಗೆ ಸಂಸದ್ ಟಿವಿ ಕಾರ್ಯಕ್ರಮ ಪ್ರಸಾರ ಮಾಡಲಿದೆ.
ಇದನ್ನೂ ಓದಿ:
ಗುಜರಿ ವಸ್ತುಗಳಿಂದಲೇ ನಿರ್ಮಾಣವಾಯ್ತು 14 ಅಡಿ ಎತ್ತರದ ಪ್ರಧಾನಿ ನರೇಂದ್ರ ಮೋದಿ ಪ್ರತಿಮೆ!
(Sansad TV launched by PM Narendra Modi Venkaiah Naidu and Om Birla)