‘ಭಾರತದಲ್ಲಿ ಹಬ್ಬದ ವೇಳೆ ಸ್ಫೋಟ ಸಂಚು ರೂಪಿಸಿದ್ದ ಉಗ್ರರಿಗೆ ಕರಾಚಿಯಲ್ಲಿ ತರಬೇತಿ ನೀಡಲಾಗಿತ್ತು’

ಬಂಧಿತರನ್ನು ಮಹಾರಾಷ್ಟ್ರದ ಜಾನ್ ಮೊಹಮ್ಮದ್ ಶೇಖ್ (47), ದೆಹಲಿಯ ಒಸಾಮಾ (22), ಉತ್ತರ ಪ್ರದೇಶದ ರಾಯ್ ಬರೇಲಿಯ ಮೂಲ್‌ಚಂದ್ (47), ಅಲಹಾಬಾದ್‌ನ ಜೀಶನ್ ಕಮಾರ್ (28), ಬೆಹರೈಚ್‌ನ ಮೊಹಮದ್ ಅಬು ಬಕರ್ (23) ಲಕ್ನೋದ ಮೊಹಮದ್ ಅಮೀರ್ ಜಾವೇದ್ (31) ಎಂದು ಗುರುತಿಸಲಾಗಿದೆ.

‘ಭಾರತದಲ್ಲಿ ಹಬ್ಬದ ವೇಳೆ ಸ್ಫೋಟ ಸಂಚು ರೂಪಿಸಿದ್ದ ಉಗ್ರರಿಗೆ ಕರಾಚಿಯಲ್ಲಿ ತರಬೇತಿ ನೀಡಲಾಗಿತ್ತು’
ಶಂಕಿತ ಉಗ್ರರು

ದೆಹಲಿ: ಪಾಕಿಸ್ತಾನದಲ್ಲಿ ತರಬೇತಿ ಪಡೆದಿರುವ ಇಬ್ಬರು  ಸೇರಿದಂತೆ ಒಟ್ಟು ಆರು ಮಂದಿ ಶಂಕಿತ ಉಗ್ರರನ್ನು ಮಂಗಳವಾರ ದೆಹಲಿ ಪೊಲೀಸರು ಬಂಧಿಸಿದ್ದರು. ಬಂಧಿತ ಶಂಕಿತ ಉಗ್ರರ ಪೈಕಿ ಇಬ್ಬರಿಗೆ ಕರಾಚಿಯ ಹೊರವಲಯದಲ್ಲಿರುವ ಫಾರ್ಮ್‌ಹೌಸ್‌ನಲ್ಲಿ ಪಾಕಿಸ್ತಾನ ಸೇನಾ ಸಿಬ್ಬಂದಿಯಿಂದ ತರಬೇತಿ ನೀಡಲಾಗಿತ್ತು. ಅವರಿಗೆ “ಗರಿಷ್ಠ ಹಾನಿ ಮಾಡುವುದು ಹೇಗೆ” ಎಂದು ಕಲಿಸಲಾಯಿತು. ಅವರನ್ನು ಇನ್ನೆರಡು ದೇಶಗಳ ಮೂಲಕ ಪಾಕಿಸ್ತಾನಕ್ಕೆ ಪ್ರಯಾಣಿಸುವಂತೆ ಹೇಳಲಾಯಿತು ಎಂದು ಸಿಎನ್ಎನ್-ನ್ಯೂಸ್ 18 ವರದಿ ಮಾಡಿದೆ.

ಈ ಗುಂಪನ್ನು ಮೊದಲು ಒಮಾನ್‌ನ ಬಂದರು ರಾಜಧಾನಿಯಾದ ಮಸ್ಕತ್‌ಗೆ ಮಾನ್ಯ ವೀಸಾದಲ್ಲಿ ಕಳುಹಿಸಿ 10 ದಿನಗಳ ಕಾಲ ಕ್ವಾರಂಟೈನ್‌ನಲ್ಲಿ ಇರಿಸಲಾಗಿತ್ತು. ಇದರ ನಂತರ ಅವರನ್ನು ಸಮುದ್ರದ ಮೂಲಕ ಇರಾನ್‌ಗೆ ಕಳುಹಿಸಲಾಯಿತು. ಇರಾನ್‌ನಿಂದ ಅವರು ಕರಾಚಿಗೆ ಬೋಟ್​​ನಲ್ಲಿ ಹೋಗಿದ್ದರು.

ಕರಾಚಿಯನ್ನು ತಲುಪಿದ ನಂತರ, ಅವರು ನಗರದ ಹೊರವಲಯದ ತೋಟದ ಮನೆಯಲ್ಲಿ ಉಳಿದುಕೊಂಡರು. ಪಾಕಿಸ್ತಾನದ ಸೈನ್ಯದ ಮೂರು ಜನರು ಅವರಿಗೆ ಬಾಂಬ್ ತಯಾರಿಕೆ ಮತ್ತು ನಕ್ಷೆಗಳನ್ನು ತಿಳಿದುಕೊಳ್ಳುವುದು ಹೇಗೆ ಎಂಬುದರ ಬಗ್ಗೆ ತರಬೇತಿ ನೀಡಿದರು. ಹೆಚ್ಚಿನ ಸಾಂದ್ರತೆಯ ಜನಸಂಖ್ಯೆಯ ಪ್ರದೇಶಗಳನ್ನು ಗುರಿಯಾಗಿಸಿಕೊಂಡು ಗರಿಷ್ಠ ಹಾನಿ ಹೇಗೆ ಮಾಡುವುದು ಎಂಬುದರ ಕುರಿತು ಅವರು ಚರ್ಚಿಸಿದರು.

ದೆಹಲಿ ಪೋಲಿಸ್ ಸ್ಪೆಷಲ್ ಸೆಲ್, ಉತ್ತರ ಪ್ರದೇಶ ಎಟಿಎಸ್ ಜೊತೆಗೆ ಈ ಭಯೋತ್ಪಾದಕ ಘಟಕವನ್ನು ಭೇದಿಸಿತ್ತು. ಭೂಗತ ಡಾನ್ ದಾವೂದ್ ಇಬ್ರಾಹಿಂ ಸಹೋದರ ಅನೀಸ್ ತಂಡದಲ್ಲಿದ್ದು, ಹವಾಲಾ ಜಾಲದ ಮೂಲಕ ಹಣ ನೀಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಂಧಿತರನ್ನು ಮಹಾರಾಷ್ಟ್ರದ ಜಾನ್ ಮೊಹಮ್ಮದ್ ಶೇಖ್ (47), ದೆಹಲಿಯ ಒಸಾಮಾ (22), ಉತ್ತರ ಪ್ರದೇಶದ ರಾಯ್ ಬರೇಲಿಯ ಮೂಲ್‌ಚಂದ್ (47), ಅಲಹಾಬಾದ್‌ನ ಜೀಶನ್ ಕಮಾರ್ (28), ಬೆಹರೈಚ್‌ನ ಮೊಹಮದ್ ಅಬು ಬಕರ್ (23) ಲಕ್ನೋದ ಮೊಹಮದ್ ಅಮೀರ್ ಜಾವೇದ್ (31) ಎಂದು ಗುರುತಿಸಲಾಗಿದೆ.

ಉತ್ತರ ಪ್ರದೇಶ, ಮಹಾರಾಷ್ಟ್ರ, ದೆಹಲಿ ಮತ್ತು ರಾಜಸ್ಥಾನದ ವಿವಿಧ ಸ್ಥಳಗಳಲ್ಲಿ ದಾಳಿ ನಡೆಸಿದಾಗ ಇವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಂಧನಕ್ಕೊಳಗಾದವರು ಮುಂಬರುವ ಹಬ್ಬದ ಸೀಸನ್‌ಗೆ ಮುಂಚಿತವಾಗಿ ನಗರಗಳನ್ನು ಗಮನಿಸುತ್ತಿದ್ದರು. ನವರಾತಿ ಮತ್ತು ರಾಮ್ ಲೀಲಾ ಕೂಟಗಳು ಅವರ ಗುರಿ ಆಗಿತ್ತು ಎಂದಿದ್ದಾರೆ ಪೊಲೀಸರು.

ಬಂಧನಕ್ಕೊಳಗಾದ ಆರು ಮಂದಿಯಲ್ಲಿ ಇಬ್ಬರು (ಒಸಾಮ ಮತ್ತು ಜೀಶನ್) ಪಾಕಿಸ್ತಾನದಲ್ಲಿ ತರಬೇತಿ ಪಡೆದರು ಮತ್ತು ಅವರು ಈ ವರ್ಷ ಭಾರತಕ್ಕೆ ಪ್ರವೇಶಿಸಿದರು. ಈ ವ್ಯಕ್ತಿಗಳ ಬಗ್ಗೆ ಮಾಹಿತಿ ಪಡೆದಾಗ ನಾವು ವಿಶೇಷ ತಂಡವನ್ನು ರಚಿಸಿದ್ದೇವೆ. ಮೊದಲು ಮಹಾರಾಷ್ಟ್ರದಲ್ಲಿ ಬಂಧಿಸಲಾಯಿತು, ನಂತರ ದೆಹಲಿಯಿಂದ ಇಬ್ಬರು, ಅಲ್ಲಿಂದ ಮೂವರನ್ನು ಬಂಧಿಸಲು ನಾವು ಉತ್ತರ ಪ್ರದೇಶ ಎಟಿಎಸ್ ಜೊತೆ ಕೈಜೋಡಿಸಿದ್ದೇವೆ “ಎಂದು ಪತ್ರಿಕಾಗೋಷ್ಠಿಯಲ್ಲಿ ದೆಹಲಿ ವಿಶೇಷ ಸಿಪಿ (ವಿಶೇಷ ಸೆಲ್) ನೀರಜ್ ಠಾಕೂರ್ ಹೇಳಿದರು.

ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳು, ಸ್ಫೋಟಕಗಳು ಮತ್ತು ವಿಶೇಷ ಪಿಸ್ತೂಲ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಇದನ್ನೂ ಓದಿ:   ದೆಹಲಿಯಲ್ಲಿ ದೀಪಾವಳಿ ವೇಳೆ ಪಟಾಕಿ ಸಂಗ್ರಹ, ಮಾರಾಟ ಮತ್ತು ಬಳಕೆಗೆ ನಿಷೇಧ ಹೇರಿದ ಕೇಜ್ರಿವಾಲ್ ಸರ್ಕಾರ

ಇದನ್ನೂ ಓದಿ: ಉತ್ತರ ಪ್ರದೇಶ ಚುನಾವಣೆಗೆ ಮುನ್ನ ದಾಳಿ ಸಂಚು ಹೂಡಿದ್ದ 6 ಶಂಕಿತ ಉಗ್ರರನ್ನು ಬಂಧಿಸಿದ ದೆಹಲಿ ಪೊಲೀಸ್, ಇಬ್ಬರಿಗೆ ಪಾಕ್ ನಂಟು

(Six terrorists doing recce of cities ahead of upcoming festive season taught how to cause maximum damage)

Click on your DTH Provider to Add TV9 Kannada